ಅಂತರಜಾಲಾಡಿ
ಮೆದುಳಿಗೆ ಕೆಲಸ ಕೊಡಿ
ನೀವು ಒಬ್ಬ ಅಧ್ಯಾಪಕರೇ? ಅಥವಾ ಶಾಲೆಗೆ ಹೋಗುವ ಮಕ್ಕಳಿರುವ ಪೋಷಕರೇ? ಮಕ್ಕಳಿಗೆ ವಿಜ್ಞಾನ ಮತ್ತು ಇತರೆ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ಚಟುವಟಿಕೆಗಳನ್ನು ಮಾಡಿಸಬೇಕೆ? ಹಾಗಿದ್ದರೆ ಅದಕ್ಕೆ ಹಲವು ಉಪಾಯಗಳಿವೆ. ಅಂಗಡಿಗಳಲ್ಲಿ ಸಿಗುವ ದುಬಾರಿ ಕಿಟ್‌ಗಳನ್ನು ಕೊಂಡುಕೊಳ್ಳುವುದು ಎಲ್ಲರಿಂದ ಸಾಧ್ಯವಿಲ್ಲ. ಚಟುವಟಿಕೆಗಳನ್ನು ಗಣಕಗಳಲ್ಲಿ ಮಿಥ್ಯಾವಾಸ್ತವ ಮೂಲಕ ಮಾಡಿಸಬಹುದಲ್ಲವೇ? ಉದಾಹರಣೆಗೆ ಸಾಮಾನ್ಯ ಯಂತ್ರ, ಗೇರ್, ಸನ್ನೆ, ಇತ್ಯಾದಿ ಕೆಲಸ ಮಾಡುವ ವಿಧಾನ. ಇದನ್ನು ಪ್ರತಿಸ್ಪಂದನಾತ್ಮಕವಾಗಿ ಬಹುಮಾಧ್ಯಮದ ಮೂಲಕ ಗಣಕಾಧಾರಿತ ಶಿಕ್ಷಣವನ್ನು ಬಳಸಿ ವಿವರಿಸಬಹುದು. ಇಂತಹ ತಂತ್ರಾಂಶಗಳನ್ನು ಕೊಂಡುಕೊಳ್ಳಬಹುದು. ಅಥವಾ ಅಂತಹ ಚಟುವಟಿಕೆಗಳನ್ನು ಅಂತರಜಾಲದಲ್ಲೇ ನೇರವಾಗಿ ಮಾಡಲು ಅನುವು ಮಾಡಿಕೊಡುವ ಜಾಲತಾಣಗಳನ್ನು ಬಳಸಬಹುದು. ಅಂತಹ ಒಂದು ಜಾಲತಾಣ www.edheads.org.
ಡೌನ್‌ಲೋಡ್
ಆಟಕ್ಕೆ ಶಕ್ತಿ ನೀಡಿ
ಗಣಕದಲ್ಲಿ ಕೆಲವೊಂದು ಆಟಗಳನ್ನು ಆಡುವಾಗ ಈ ಗಣಕದ ವೇಗ ಸಾಲುತ್ತಿಲ್ಲ. ಇದಕ್ಕೊಂದಿಷ್ಟು ಹೆಚ್ಚಿಗೆ ಶಕ್ತಿ ಇದ್ದರೆ ಒಳ್ಳೆಯದಿತ್ತು ಎಂದು ಕೆಲವೊಮ್ಮೆ ಅನ್ನಿಸಿದೆಯೇ? ಹಾಗಿದ್ದರೆ ನಿಮಗೆ ಬೇಕು Game Booster ತಂತ್ರಾಂಶ. ಇದು ಉಚಿತ. ಸಾಮಾನ್ಯವಾಗಿ ಈಗಿನ ಹೊಸ ತಲೆಮಾರಿನ ಆಟಗಳು ಹಾರ್ಡ್‌ಡಿಸ್ಕ್‌ನಲ್ಲಿ ತುಂಬ ಜಾಗ ಆಕ್ರಮಿಸುತ್ತವೆ. ಅವುಗಳನ್ನು ಇನ್‌ಸ್ಟಾಲ್ ಮಾಡಲು ನೀವು ಜಾಗ ಮಾಡಿರುತ್ತೀರಿ. ಆದರೆ ಏನಾಗಿರುತ್ತದೆಯೆಂದರೆ ಈ ಆಟದ ಫೈಲುಗಳು ಹಲವು ಕಡೆ ಹರಿದು ಹಂಚಿ ಹೋಗಿರುತ್ತವೆ. ಇವುಗಳನ್ನು ಒಂದೇ ಕಡೆ ತಂದರೆ ಆಟ ಸ್ವಲ್ಪ ವೇಗವಾಗಿ ಕೆಲಸ ಮಾಡುತ್ತದೆ. ಗಣಕದಲ್ಲಿ ಸಾಮಾನ್ಯವಾಗಿ ಅದರ ಮೆಮೊರಿಯಲ್ಲಿ ಹಲವು ತಂತ್ರಾಂಶಗಳು ಕುಳಿತಿರುತ್ತವೆ ಮತ್ತು ಪ್ರಕ್ರಿಯೆಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುತ್ತವೆ. ಇವುಗಳಲ್ಲೆ ಕೆಲವನ್ನು ತಾತ್ಕಾಲಿಕವಾಗಿ ನಿಲ್ಲಿಸಬಹುದು. ಈ Game Booster ತಂತ್ರಾಂಶ ಈ ಎಲ್ಲ ಕೆಲಸಗಳನ್ನು ಮಾಡಿ ಆಟ ವೇಗವಾಗಿ ನಡೆಯುವಂತೆ ಮಾಡುತ್ತದೆ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - http://bit.ly/bg5xtP
e - ಸುದ್ದಿ
ಗೂಗ್ಲ್ ಬಝ್
ಗೂಗ್ಲ್‌ನವರು ಏನು ಮಾಡಿದರೂ ಅದು ಸುದ್ದಿಯಾಗುತ್ತದೆ. ಇತ್ತೀಚೆಗೆ ಅವರು ಬಝ್ ಹೆಸರಿನ ಹೊಸ ಸವಲತ್ತೊಂದನ್ನು ಜನರಿಗೆ ಒದಗಿಸಿದ್ದಾರೆ. ಇದು ಬಹುಮಟ್ಟಿಗೆ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ನೀಡಿರುವ ಮೈಕ್ರೋಬ್ಲಾಗಿಂಗ್ ತರಹ ಕೆಲಸ ಮಾಡುತ್ತದೆ. ೧೪೦ ಅಕ್ಷರಗಳ ಮಿತಿಯಲ್ಲಿ ಬ್ಲಾಗಿಂಗ್ ಮಾಡಲು ಅನುವು ಮಾಡಿಕೊಡುವ ಟ್ವಿಟ್ಟರ್ ಮೈಕ್ರೋಬ್ಲಾಗಿಂಗ್ ಜಾಲತಾಣ ತುಂಬ ಜನಪ್ರಿಯ. ಫೇಸ್‌ಬುಕ್‌ನಲ್ಲು ಇದೇ ರೀತಿ ನಾನೀಗ ಏನು ಮಾಡುತ್ತಿದ್ದೇನೆ ಎಂಬುದನ್ನು ಟ್ವಿಟ್ಟರ್ ಮಾದರಿಯಲ್ಲಿ ದಾಖಲಿಸುವ ಸವಲತ್ತನ್ನು ನೀಡಿದ್ದಾರೆ. ಆದರೆ ಇದಕ್ಕೆ ೧೪೦ ಅಕ್ಷರಗಳ ಮಿತಿಯಿಲ್ಲ. ಈಗ ಗೂಗ್ಲ್ ಬಝ್ ಅದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ. ಜಿಮೈಲ್‌ನ ವಿಳಾಸ ಪಸ್ತಕದಲ್ಲಿರುವ ಎಲ್ಲರನ್ನು ತಾನಾಗಿಯೇ ನಿಮ್ಮ ಅನುಯಾಯಿ ಮತ್ತು ನೀವು ಅನುಸರಿಸುತ್ತಿರುವವರ ಪಟ್ಟಿಗೆ ಸೇರಿಸುವ ಕಿಡಿಗೇಡಿತನವನ್ನು ಈ ಬಝ್ ಮಾಡುತ್ತಿದೆ ಎಂದು ಅಂತರಜಾಲ ತುಂಬೆಲ್ಲ ಜನರು ಬೈದ ನಂತರ ಗೂಗ್ಲ್‌ನವರು ಅದನ್ನು ಸ್ವಲ್ಪ ಸುಧಾರಿಸಿದ್ದಾರೆ. ಆದರೂ ಇದು ಟ್ವಿಟ್ಟರಿನ ಜನಪ್ರಿಯತೆಯನ್ನು ಕಡಿಮೆ ಮಾಡುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಬೇಕು. ಗೂಗ್ಲ್‌ನವರ ವೇವ್ ಎಂಬ ಸೌಕರ್ಯ ವಿಫಲವಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
e- ಪದ
ನರ್ಡ್ (nerd) -ತಾಂತ್ರಿಕವಾಗಿ ಅತಿ ಬುದ್ಧಿವಂತ ಆದರೆ ಸಾಮಾಜಿಕವಾಗಿ ಅವಿವೇಕಿ. ಸಾಮಾನ್ಯವಾಗಿ ಇವರನ್ನು ಕೆದರಿದ ಕೂದಲು, ದಪ್ಪ ಕನ್ನಡಕ, ಸುತ್ತಮುತ್ತ ಗಣಕಗಳನ್ನು ಹರಡಿಕೊಂಡಿರುವಂತೆ ಚಿತ್ರಿಸುತ್ತಾರೆ. ಇವರುಗಳಿಗೆ ತಂತ್ರಜ್ಞಾನವನ್ನುಳಿದು ಇನ್ನಿತರೆ ಯಾವುದೇ ವಿಷಯಗಳಲ್ಲಿ ಆಸಕ್ತಿ ಇರುವುದಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇವರು ಭೇಟಿ ನೀಡುವುದೇ ಇಲ್ಲ ಎನ್ನಬಹುದು.
e - ಸಲಹೆ
ಸೂರಜ್ ಪಾಟೀಲರ ಪ್ರಶ್ನೆ: ನನಗೆ ಎಂಪಿ೩ ಹಾಡುಗಳ ಫೈಲುಗಳಿಂದ ಧ್ವನಿಯನ್ನು ತೆಗೆದು ಕೇವಲ ಸಂಗೀತ ಮಾತ್ರ ಉಳಿಯುವಂತೆ ಮಾಡುವ ತಂತ್ರಾಂಶ ಬೇಕು. ಅಂತರಜಾಲದಲ್ಲಿ ಎಲ್ಲಿ ಹುಡುಕಬೇಕು ನನಗೆ ಗೊತ್ತಾಗಲಿಲ್ಲ. ಅಂತಹ ತಂತ್ರಾಂಶ ಸಿಗುತ್ತದೆಯೇ?
ಉ: ಇಂತಹ ತಂತ್ರಾಂಶಗಳು ಬೆಲೆಗೆ ಮತ್ತು ಕೆಲವು ಉಚಿತವಾಗಿಯೂ ದೊರೆಯುತ್ತವೆ. ಆದರೆ ಯಾವುದೂ ಪರಿಪೂರ್ಣವಾಗಿ ಧ್ವನಿಯನ್ನು ತೆಗೆಯುವುದಿಲ್ಲ. ಹಾಗೆ ತೆಗೆಯುವಾಗ ಸ್ವಲ್ಪ ಮಟ್ಟಿಗೆ ಸಂಗೀತವನ್ನೂ ತೆಗೆಯುತ್ತವೆ. http://bit.ly/a8nF8T ಜಾಲತಾಣದಲ್ಲಿ ಅಂತಹ ಕೆಲವು ಉಚಿತ ತಂತ್ರಾಂಶಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳನ್ನು ನೀವು ಬಳಸಿ ನೋಡಬಹುದು.
ಕಂಪ್ಯೂತರ್ಲೆ
ಕೋಲ್ಯ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಿಂದ ಬಸ್ ಹತ್ತಿದ. ಬಸ್ಸಿನಲ್ಲಿ ಕೆಲವು ತಂತ್ರಜ್ಞರೂ ಇದ್ದರು. ಅವರು ಹೊಸದಾಗಿ ಬಿಡುಗಡೆಯಾಗದ ಗೂಗ್ಲ್ ಬಝ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಕೋಲ್ಯನಿಗೆ ಸರಿಯಾಗಿ ಕೇಳಿಸಿಕೊಳ್ಳಲಾಗಲಿಲ್ಲ. ಆತ ಅದು ಯಾವುದೋ ಹೊಸ ನಮೂನೆಯ ಬಜ್ಜಿ ಇರಬೇಕು ಅಂದುಕೊಂಡ.
Articles from the weekly column in Kannada Prabha, Kannada daily, by Dr U B Pavanaja, on information technology, Internet, computer, software utilities, tech jokes, tips and tricks, terms, etc.
ಸೋಮವಾರ, ಫೆಬ್ರವರಿ 15, 2010
ಸೋಮವಾರ, ಫೆಬ್ರವರಿ 8, 2010
ಗಣಕಿಂಡಿ - ೦೩೮ (ಫೆಬ್ರವರಿ ೦೮, ೨೦೧೦)
ಅಂತರಜಾಲಾಡಿ
ಸಹಯೋಗಿ ಕುಮಾರವ್ಯಾಸಭಾರತ
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂದು ಕುವೆಂಪು ನಾರಣಪ್ಪ ಕವಿಯ ಗದುಗಿನ ಭಾರತವನ್ನು ಹಾಡಿ ಹೊಗಳಿದ್ದಾರೆ. ಮಹಾಭಾರತವು ಭಾರತೀಯರ ರಕ್ತದಲ್ಲಿ ಹರಿಯುತ್ತಿದೆ. ಅಂತೆಯೆ ಕುಮಾರವ್ಯಾಸಭಾರತ ಕನ್ನಡಿಗರಿಗೆ ತುಂಬ ಪ್ರೀತಿಯ ಮಹಾಕಾವ್ಯ. ಒಂದು ಕಾಲದಲ್ಲಿ ಈ ಕಾವ್ಯದ ವಾಚನ ಎಲ್ಲ ಹಳ್ಳಿಗಳಲ್ಲೂ ಜರುಗುತ್ತಿತ್ತು. ಈಗಲೂ ಈ ಕಾವ್ಯದ ಜನಪ್ರಿಯತೆ ಕಡಿಮೆಯಾಗಿಲ್ಲ. ಈ ಮಹಾಕಾವ್ಯವನ್ನು ಎಲ್ಲರಿಗೂ ದೊರೆಯುವಂತೆ ಅಂತರಜಾಲದಲ್ಲಿ ಹಾಕಿದರೆ ಹೇಗೆ? ಒಳ್ಳೆಯ ಆಲೋಚನೆ ಎಂದಿರಾ? ಆದರೆ ಅಷ್ಟು ದೊಡ್ಡ ಮಹಾಕಾವ್ಯವನ್ನು ಬೆರಳಚ್ಚು ಮಾಡಿ ಅಂತರಜಾಲದಲ್ಲಿ ಸೇರಿಸುವುದು ಒಬ್ಬರಿಂದ ಆಗುವ ಕೆಲಸವಲ್ಲ. ಹಲವರು ಸೇರಿ ಕೆಲಸ ಮಾಡಿದರೆ ಇದನ್ನು ಸಾಧಿಸಬಹುದು. ಹೀಗೆ ಮಾಡಲೆಂದೆ ಕೆಲವು ಆಸಕ್ತರು ಸೇರಿ ಒಂದು ಬ್ಲಾಗ್‌ತಾಣ ನಿರ್ಮಿಸಿದ್ದಾರೆ. ಅದರ ವಿಳಾಸ gaduginabharata.blogspot.com. ಇಲ್ಲಿ ಹೆಸರು ನೋಂದಾಯಿಸಿಕೊಂಡು ಈ ಕೆಲಸದಲ್ಲಿ ನೀವೂ ಕೈಜೋಡಿಸಬಹುದು.
ಡೌನ್‌ಲೋಡ್
ಗೂಢಚಾರಿಗಳನ್ನು ನಾಶಮಾಡಿ
ಗಣಕದಲ್ಲಿ ಕೆಲವೊಮ್ಮೆ ಗುಪ್ತವಾಗಿ ಅಡಗಿ ಕುಳಿತಿದ್ದು ನೀವು ಮಾಡುವ ಕೆಲಸಗಳನ್ನೆಲ್ಲ ದಾಖಲಿಸಿ ಯಾವುದೋ ಜಾಲತಾಣಕ್ಕೆ ಗುಪ್ತವಾಗಿ ರವಾನಿಸುವ ಕಿಡಿಗೇಡಿ ತಂತ್ರಾಂಶಗಳಿವೆ. ಇವು ಬಹು ಅಪಾಯಕಾರಿ. ಇವು ನಿಮ್ಮ ಗುಪ್ತಪದಗಳನ್ನು (ಪಾಸ್‌ವರ್ಡ್) ಕದಿಯುತ್ತವೆ. ನಿಮ್ಮ ಇಮೈಲ್‌ಗೆ ಯಾರೋ ಕದ್ದು ನುಸುಳಿ ನೀವೇ ಇಮೈಲ್ ಕಳುಹಿಸಿದ್ದುಎಂಬ ಭಾವನೆ ಬರುವಂತೆ ನಿಮ್ಮ ಸ್ನೇಹಿತರಿಗೆ ಇಮೈಲ್ ಮಾಡಿ ನಾನು ಕಷ್ಟದಲ್ಲಿದ್ದೇನೆ, ನನಗೆ ಹಣ ಕಳುಹಿಸಿ ಎಂಬಿತ್ಯಾದಿಯಾಗಿ ಇಮೈಲ್ ಮಾಡಿರುವುದು ವರದಿಯಾಗಿದೆ. ಇಂತಹ ಗೂಢಚಾರಿ ತಂತ್ರಾಂಶಗಳನ್ನು ಹುಡುಕಿ ನಾಶಮಾಡಲು Spybot - Search & Destroy ಎಂಬ ತಂತ್ರಾಂಶವನ್ನು ಬಳಸಬಹುದು. ಈ ತಂತ್ರಾಂಶ ದೊರೆಯು ಜಾಲತಾಣದ ವಿಳಾಸ http://bit.ly/c51kpP
e - ಸುದ್ದಿ
ಅಂತರಜಾಲ ಕ್ಯಾಮರಾದಿಂದಾಗಿ ಬದುಕುಳಿದ
ಜರ್ಮನಿಯ ಕರಾವಳಿಯಲ್ಲಿ ಹೆಪ್ಪುಗಟ್ಟಿದ ಸಮುದ್ರದ ಮೇಲೆ ನಡೆದಾಡುತ್ತ ಒಬ್ಬಾತ ದಾರಿ ತಪ್ಪಿದ. ಸಂಪೂರ್ಣವಾಗಿ ಹೆಪ್ಪುಗಟ್ಟಿದ ಸಮುದ್ರದ ಮೇಲೆ ಆತ ಸೂರ್ಯಾಸ್ತದ ಚಿತ್ರೀಕರಣ ಮಾಡಲೆಂದು ನಡೆಯುತ್ತ ಸಮುದ್ರದ ಒಳಗೆ ಸುಮಾರು ದೂರ ಹೋಗಿಬಿಟ್ಟದ್ದ. ಆ ನಂತರ ಹಿಂದಕ್ಕೆ ಬರಲು ಆತನಿಗೆ ದಾರಿ ತಿಳಿಯಲಿಲ್ಲ. ಎಲ್ಲ ಕಡೆ ನೋಡಿದರು ಬಿಳಿ ಬಣ್ಣವೇ. ಭೂಮಿ ಯಾವ ಕಡೆಗಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆತ ತನ್ನ ಕೈಯಲ್ಲಿದ್ದ ಟಾರ್ಚಿನಲ್ಲಿ ಒಂದೇ ಹಾಗೆ ಹೊತ್ತಿಸಿ ನಂದಿಸಿ ಸಂದೇಶ ಕಳುಹಿಸತೊಡಗಿದ. ಆತನ ಸಂದೇಶವನ್ನು ಅಲ್ಲಿ ಯಾರೂ ಗಮನಿಸಲಿಲ್ಲ. ಆದರೆ ನೂರಾರು ಮೈಲುಗಳ ದೂರದಲ್ಲಿ ಅಂತರಜಾಲ ಕ್ಯಾಮರ ಮೂಲಕ ಸೂರ್ಯಾಸ್ತ ವೀಕ್ಷಿಸುತ್ತಿದ್ದಾಕೆಯೊಬ್ಬಳು ಅದನ್ನು ಗಮನಿಸಿದಳು. ಜರ್ಮನಿಯ ಕರಾವಳಿಯ ಸೌಂದರ್ಯವನ್ನು ಸವಿಯಲೆಂದು ಕ್ಯಾಮರಾ ಇಟ್ಟು ಅದನ್ನು ಅಂತರಜಾಲಕ್ಕೆ ಜೋಡಿಸಲಾಗಿತ್ತು. ಆ ಕ್ಯಾಮರಾದಲ್ಲಿ ಈತನ ಸಂದೇಶ ಮೂಡಿ ಬರುತ್ತಿತ್ತು. ಅದನ್ನು ಆಕೆ ಪೋಲೀಸರಿಗೆ ವರದಿ ಮಾಡಿದಳು. ಪೋಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆತನನ್ನು ಬದುಕಿಸಿದರು.
e- ಪದ
ಗೂಢಚಾರಿ ತಂತ್ರಾಂಶ (spyware) -ಗಣಕದಲ್ಲಿ ಗುಪ್ತವಾಗಿದ್ದುಕೊಂಡು ಮಾಹಿತಿಯನ್ನು ಸಂಗ್ರಹಿಸಿ ಅಂತರಜಾಲದ ಮೂಲಕ ಇನ್ಯಾರಿಗೋ ರವಾನಿಸುವ ಕಿಡಿಗೇಡಿ ತಂತ್ರಾಂಶ. ಇವು ರವಾನಿಸುವ ಮಾಹಿತಿ ಸಾಮಾನ್ಯವಾಗಿ ಇಮೈಲ್, ಅಂತರಜಾಲ ಬ್ಯಾಂಕಿಂಗ್‌ನ ಪಾಸ್‌ವರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಆಗಿರುತ್ತದೆ. ಕೆಲವು ಉಚಿತ ತಂತ್ರಾಂಶಗಳಲ್ಲಿ ಇವು ಗುಪ್ತವಾಗಿ ಸೇರ್ಪಡೆಯಾಗಿರುತ್ತವೆ. ಇನ್ನು ಕೆಲವು ಅಂತರಜಾಲ ತಾಣಗಳಲ್ಲೂ ಇವು ಇರುತ್ತವೆ. ಅಂತಹ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡುವಾಗ ಇವೂ ಜೊತೆಯಲ್ಲಿ ಬಂದುಬಿಡುತ್ತವೆ.
e - ಸಲಹೆ
ಪ್ರ: ನನ್ನ ಗಣಕದಲ್ಲಿ ವೈರಸ್‌ಗಳು ತುಂಬಿವೆ. ಹಾರ್ಡ್‌ಡಿಸ್ಕನ್ನು ಫಾರ್ಮಾಟ್ ಮಾಡಿ ವೈರಸ್‌ಗಳನ್ನೆಲ್ಲ ನಾಶ ಮಾಡಿದರೆ ಪುನಃ ವಿಂಡೋಸ್ ಇನ್‌ಸ್ಟಾಲ್ ಮಾಡಲು ವಿಂಡೋಸ್ ಸಿ.ಡಿ./ಡಿ.ವಿ.ಡಿ. ಬೇಕಾಗುತ್ತದೆಯೇ?
ಉ: ಹೌದು. ಬಹುಪಾಲು ಮಂದಿ ವಿಂಡೋಸ್ ಅನ್ನು ಹಣ ಕೊಟ್ಟು ಕೊಂಡುಕೊಂಡಿರುವುದಿಲ್ಲ. ಇದರಿಂದಾಗಿ ಅವರಲ್ಲಿ ಅಸಲಿ ವಿಂಡೋಸ್ ಸಿ.ಡಿ./ಡಿ.ವಿ.ಡಿ. ಇರುವುದಿಲ್ಲ. ಇದರಿಂದಾಗಿ ವಿಂಡೋಸ್ ಅನ್ನು ಅಳಿಸಿ ಮತ್ತೊಮ್ಮೆ ಇನ್‌ಸ್ಟಾಲ್ ಮಾಡಲು ಆಗುವುದಿಲ್ಲ. ಕನಿಷ್ಠ ವಿಂಡೋಸ್ ಹಣ ಕೊಟ್ಟು ಕೊಂಡುಕೊಳ್ಳುವುದೇ ಒಳ್ಳೆಯದು. ಇದರಿಂದಾಗಿ ಆಗಾಗ ಬಿಡುಗಡೆಯಾಗುವ ನವೀಕರಣಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ನಿಮ್ಮ ಗಣಕವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.
ಕಂಪ್ಯೂತರ್ಲೆ
ಭೂಮಿಯ ಮೇಲೆ ಹಸಿರು ಕಡಿಮೆಯಾಗುತ್ತಿದೆ. ಕೃಷಿ ಮಾಡುವುದೂ ಕಡಿಮೆಯಾಗುತ್ತಿದೆ. ಇದು ಹೀಗೆ ಸಾಗಿದರೆ ಒಳ್ಳೆಯದಲ್ಲ. ನಾನೂ ಸ್ವಲ್ಪ ಕೃಷಿ ಮಾಡಲೇ ಬೇಕು ಎಂದು ಕೋಲ್ಯ ನಿರ್ಧರಿಸಿದ. ಕೂಡಲೆ ಆತ ಮಾಡಿದ್ದೇನು ಗೊತ್ತೆ? ಅಂತರಜಾಲಕ್ಕೆ ಸಂಪರ್ಕ ಮಾಡಿ ಫೇಸ್‌ಬುಕ್ ಜಾಲತಾಣವನ್ನು ತೆರೆದು ಅದರಲ್ಲಿ ಫಾರ್ಮ್‌ವಿಲ್ಲೆ ಎಂಬ ಆಟದ ಮೂಲಕ ತೋಟಗಾರಿಕೆ ಸುರು ಮಾಡಿದ.

ಮಂಗಳವಾರ, ಫೆಬ್ರವರಿ 2, 2010
ಗಣಕಿಂಡಿ - ೦೩೭ (ಫೆಬ್ರವರಿ ೦೧, ೨೦೧೦)
ಅಂತರಜಾಲಾಡಿ
ಕೃಷಿ ಮಾರಾಟವಾಹಿನಿ
ಕೃಷಿ ಉತ್ಪನ್ನಗಳ ಅಂದಂದಿನ ಬೆಲೆ ಆಗಿಂದಾಗ ತಿಳಿಯುವಂತಿದ್ದರೆ ಒಳ್ಳೆಯದಲ್ಲವೇ? ಯಾವ ಉತ್ಪನ್ನಕ್ಕೆ ಯಾವ ದಿನ ಎಷ್ಟು ಬೆಲೆ ಇದೆ ಎಂದು ಅರಿತು ಯಾವುದನ್ನು ಯಾವಾಗ ಮಾರಬಹುದು ಎಂದು ನಿರ್ಧರಿಸಬಹುದು. ಹಾಗೆಯೇ ತಮಗೆ ಸಮೀಪದ ಮಾರುಕಟ್ಟೆ ಯಾವುದು, ಅದು ಎಲ್ಲಿದೆ, ಅದರ ವಿಳಾಸ, ದೂರವಾಣಿ ಸಂಖ್ಯೆ ಎಲ್ಲ ತಿಳಿಯಬೇಕಲ್ಲವೇ? ಹೌದು. ಈ ಎಲ್ಲ ಸೌಕರ್ಯಗಳನ್ನು ಒಳಗೊಂಡ ಕೃಷಿ ಮಾರಾಟವಾಹಿನಿ ಜಾಲತಾಣದ ವಿಳಾಸ krishimaratavahini.kar.nic.in. ಈ ಜಾಲತಾಣ ಕನ್ನಡ (ಯುನಿಕೋಡ್) ಮತ್ತು ಇಂಗ್ಲಿಶ್ ಭಾಷೆಗಳಲ್ಲಿದೆ.
ಡೌನ್‌ಲೋಡ್
ಗೂಗ್ಲ್‌ನಿಂದಲೂ ಕನ್ನಡದ ಕೀಲಿಮಣೆ
ಕನ್ನಡದ ಕೀಲಿಮಣೆ ತಂತ್ರಾಂಶಗಳು ಹಲವಾರಿವೆ. ಹೆಚ್ಚಿನವು ಉಚಿತವಾಗಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಗೂಗ್ಲ್. ಜಾಲತಾಣದ ಮೂಲಕ ಕನ್ನಡವನ್ನು ಬೆರಳಚ್ಚು ಮಾಡುವ ಸವಲತ್ತನ್ನು ಅವರು ಹಿಂದೆಯೇ ನೀಡಿದ್ದರು. ಈಗ ಡೌನ್‌ಲೋಡ್ ಮಾಡಬಲ್ಲ ಕೀಲಿಮಣೆ ತಂತ್ರಾಂಶವನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದು ಬೇಕಿದ್ದಲ್ಲಿ ನೀವು ಭೇಟಿ ಮಾಡಬೇಕಾಗಿರುವ ಜಾಲತಾಣದ ವಿಳಾಸ http://bit.ly/alaAAw. ಇದು 32 ಬಿಟ್ ಆವೃತ್ತಿಯ ವಿಂಡೋಸ್ ಕಾರ್ಯಾಚರಣೆಯ ವ್ಯವಸ್ಥೆಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.
e - ಸುದ್ದಿ
ಐಪ್ಯಾಡ್ = ಐಫೇಲ್
ಆಪಲ್ ಕಂಪೆನಿಯವರು ಹೊಸ ಟ್ಯಾಬ್ಲೆಟ್ ಕಂಪ್ಯೂಟರ್ ತಯಾರಿಸುತ್ತಿದ್ದಾರೆ, ಅದನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವವರಿದ್ದಾರೆ, ಅದರ ಗುಣವಿಶೇಷಗಳು ಏನೇನು ಇರಬಹುದು ಎಂಬಿತ್ಯಾದಿ ಚರ್ಚೆಗಳು ಅಂತರಜಾಲದಲ್ಲಿ ಹಲವಾರು ತಿಂಗಳುಗಳಿಂದ ನಡೆದೇ ಇತ್ತು. ಕೊನೆಗೂ ಆಪಲ್ ಕಂಪೆನಿ ಅದನ್ನು ಐಪ್ಯಾಡ್ ಹೆಸರಿನಿಂದ ಬಿಡುಗಡೆ ಮಾಡಿತು. ಅದರಲ್ಲಿ ಇರುವ ಸವಲತ್ತುಗಳಿಗಿಂತ ಇಲ್ಲದ ಸವಲತ್ತುಗಳ ಬಗ್ಗೆಯೇ ಹೆಚ್ಚಿನ ಚರ್ಚೆಗಳು ಅಂತರಜಾಲ ತುಂಬ ಜರುಗುತ್ತಿವೆ. ಅದರಲ್ಲಿ ಇಲ್ಲದಿರುವವು -ಯುಎಸ್‌ಬಿ ಕಿಂಡಿ, ಕ್ಯಾಮೆರಾ, ಸಿ.ಡಿ./ಡಿ.ವಿ.ಡಿ ಡ್ರೈವ್, ಹಲವು ತಂತ್ರಾಂಶಗಳನ್ನು ಏಕಕಾಲದಲ್ಲಿ ಚಲಾಯಿಸುವ ಸೌಕರ್ಯ, ಕೀಲಿಮಣೆ, ಇತ್ಯಾದಿ. ಜಾಲಿಗರು ಅದನ್ನು ಐಫೇಲ್ (iPad=iFail) ಎಂದು ತೀರ್ಪು ನೀಡಿದ್ದಾರೆ. ಪರ್ವತಪ್ರಸವ ಎನ್ನೋಣವೇ?
e- ಪದ
ಬ್ಲೂ ರೇ (blue ray) ಡಿಸ್ಕ್ - ಅತಿ ಹೆಚ್ಚಿನ ಸಾಂದ್ರತೆಯಲ್ಲಿ ಮಾಹಿತಿಯನ್ನು ಸಂಗ್ರಹಿಸಿಡುವ ಸಿ.ಡಿ./ಡಿ.ವಿ.ಡಿ. ಮಾದರಿಯ ಮಾಹಿತಿ ಸಂಗ್ರಹ ತಟ್ಟೆ. ಒಂದು ಪದರದ ತಟ್ಟೆಗಳಲ್ಲಿ 25 ಜಿಬಿ ಮತ್ತು ಎರಡು ಪದರದವುಗಳಲ್ಲಿ ಸುಮಾರು 50 ಜಿಬಿ ಮಾಹಿತಿಯನ್ನು ಸಂಗ್ರಹಿಸಿಡಬಹುದು. ಒಂದು ಸಾಮಾನ್ಯ ಚಲನಚಿತ್ರ ಸುಮಾರು 1 ಜಿಬಿಯಷ್ಟಿರುತ್ತದೆ ಎಂದರೆ ಈ ಮಾಹಿತಿ ತಟ್ಟೆಗಳ ಸಂಗ್ರಹ ಸಾಮರ್ಥ್ಯ ಅರಿವಾಗಬಹುದು. ಈ ತಟ್ಟೆಗಳು ಸಿ.ಡಿ., ಡಿ.ವಿ.ಡಿ.ಗಳ ಗಾತ್ರದಷ್ಟೇ ಇರುತ್ತವೆ. ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಹೈಡೆಫಿನಿಶನ್ ವೀಡಿಯೋ ಚಲನ ಚಿತ್ರಗಳನ್ನು ಸಂಗ್ರಹಿಸಿಡಲು ಈ ಮಾದರಿಯ ತಟ್ಟೆಗಳೇ ಬೇಕಾಗಿವೆ. ಈ ತಟ್ಟೆಗಳನ್ನು ಚಲಾಯಿಸಬಲ್ಲ ಪ್ಲೇಯರ್‌ಗಳೂ ಮಾರುಕಟ್ಟೆಗೆ ಬರತೊಡಗಿವೆ.
e - ಸಲಹೆ
ಶಣ್ಮುಖ ಕುಮಾರ್ ಅವರ ಪ್ರಸ್ನೆ: ನನ್ನ ಸಹೋದರ ವಿಂಡೋಸ್ ಎಕ್ಸ್‌ಪಿಯ ಪಾಸ್‌ವರ್ಡ್ ಬದಲಿಸಿ ಈಗ ಅದನ್ನು ಮರೆತು ಬಿಟ್ಟಿದ್ದಾನೆ. ಈಗ ನಾನು ನನ್ನ ಗಣಕವನ್ನು ಬಳಸುವುದು ಹೇಗೆ?
ಉ: ನಿಮ್ಮ ಗಣಕದಲ್ಲಿ ವಿಂಡೋಸ್ ಅನ್ನು ನೀವು ಇನ್‌ಸ್ಟಾಲ್ ಮಾಡುವಾಗ ಅದರಲ್ಲಿ ಸೃಷ್ಟಿ ಆಗುವ ಮೇಲಧಿಕಾರಿ ಖಾತೆಗೆ (Administrator account) ನೀವು ಯಾವುದೇ ಪ್ರವೇಶಪದ (ಪಾಸ್‌ವರ್ಡ್) ನೀಡಿಲ್ಲ ಎಂದಾದಲ್ಲಿ ಈ ವಿಧಾನ ಬಳಸಬಹುದು: ಗಣಕವನ್ನು ರಿಬೂಟ್ ಮಾಡಿ. ಅದು ಬೂಟ್ ಆಗುತ್ತಿದ್ದಂತೆ, ವಿಂಡೋಸ್ ಪ್ರಾರಂಭವಾಗುವ ಮೊದಲು F8 ಕೀಲಿಯನ್ನು ಒತ್ತಿ Safe mode ಅನ್ನು ಆಯ್ಕೆ ಮಾಡಿ. ಹಲವು ಪುಟಗಳ ನಂತರ ಬರುವ ಸ್ವಾಗತ ಪುಟದಲ್ಲಿ Administrator ಎಂದು ಆಯ್ಕೆ ಮಾಡಿ. ನಂತರ Control panel ನಲ್ಲಿರುವ User Settings ಸವಲತ್ತನ್ನು ಬಳಸುವ ಮೂಲಕ ನಿಮಗೆ ಬೇಕಾದ ಖಾತೆಯ ಪಾಸ್‌ವರ್ಡ್ ಬದಲಾಯಿಸಿ ರಿಬೂಟ್ ಮಾಡಿ.
ಕಂಪ್ಯೂತರ್ಲೆ
ಆಪಲ್ ಕಂಪೆನಿಯ ಉತ್ಪನ್ನಗಳು i ಅಕ್ಷರದಿಂದ ಪ್ರಾರಂಭವಾಗುತ್ತವೆ. ಉದಾ -iMac, iPod, iPhone ಮತ್ತು ಈಗಿನ ಸೇರ್ಪಡೆ iPad. ಆಪಲ್ ಕಂಪೆನಿಯ ಉತ್ಪನ್ನಗಳಿಗೆ ಅಂಟಿಕೊಂಡ ಅಮೇರಿಕಾ ದೇಶದ ಬಾಲಕನೊಬ್ಬ ಇರಾನ್ (iRan) ಮತ್ತು ಇರಾಕ್ (iRaq) ಕೂಡ ಆಪಲ್ ಕಂಪೆನಿಯ ಉತ್ಪನ್ನ ಎಂದೇ ಭಾವಿಸಿದ್ದು ವರದಿಯಾಗಿದೆ. ಭಾರತ (iNdia) ಏಕೋ ಆತನ ನೆನಪಿಗೆ ಬಂದಂತಿಲ್ಲ.

ಲೇಬಲ್ಗಳು:
ಐಪ್ಯಾಡ್,
ಕೃಷಿ ಮಾರಾಟವಾಹಿನಿ,
ಗೂಗ್ಲ್,
ಬ್ಲೂ ರೇ
ಮಂಗಳವಾರ, ಜನವರಿ 26, 2010
ಗಣಕಿಂಡಿ - ೦೩೬ (ಜನವರಿ ೨೫, ೨೦೧೦)
ಅಂತರಜಾಲಾಡಿ
ಮಳೆಕೊಯ್ಲು ತಾಣ
ಕುಡಿಯುವ ನೀರು ಭೂಮಿಯಲ್ಲಿ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಜನಸಂಖ್ಯೆ ಮತ್ತು ನೀರಿನ ಬೇಡಿಕೆಯ ಹೆಚ್ಚಳ ಈ ಎರಡು ಪ್ರಮುಖ ಕಾರಣಗಳು. ಬೆಂಗಳೂರಿಗೆ ನೀರನ್ನು ೯೫ ಕಿ.ಮೀ. ದೂರದಿಂದ ಅದೂ ೫೦೦ ಮೀ. ಆಳದಿಂದ ಎತ್ತಿ ತರಲಾಗುತ್ತಿದೆ. ಭೂಮಿಗೆ ಬೀಳುವ ಮಳೆಯ ನೀರನ್ನೇ ಹಿಡಿದಿಟ್ಟುಕೊಂಡರೆ ಸಮಸ್ಯೆ ಒಂದು ಮಟ್ಟಿಗೆ ಪರಿಹಾರವಾಗುತ್ತದೆ. ಬೆಂಗಳೂರಿನಲ್ಲಿ ಇನ್ನು ಮುಂದೆ ಕಟ್ಟುವ ಎಲ್ಲ ಮನೆಗಳಲ್ಲಿ ಮಳೆಕೊಯ್ಲನ್ನು ಸರಕಾರವು ಖಡ್ಡಾಯವಾಗಿಸಿದೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ವಿಧಾನಗಳು, ನೀರನ್ನು ಶುದ್ಧೀಕರಿಸುವುದು ಹೇಗೆ, ವಿವಿಧ ವಿಧಾನಗಳು -ಇವುಗಳನ್ನೆಲ್ಲ ವಿವರಿಸುವ ಜಾಲತಾಣಗಳು - rainwaterharvesting.org ಮತ್ತು rainwaterclub.org.
ಡೌನ್‌ಲೋಡ್
ಪರದೆಯನ್ನು ಹಿಡಿದಿಡಿ
ಗಣಕದ ಪರದೆಯಲ್ಲಿ ಕಾಣಿಸುವುದನ್ನೆಲ್ಲ ಅಥವಾ ನಡೆಯತ್ತಿರುವ ಕ್ರಿಯಗಳನ್ನೆಲ್ಲ ಹಿಡಿದಿಟ್ಟು ಒಂದು ಚಲನಚಿತ್ರದ ಮಾದರಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಎಂದು ನಿಮಗೆ ಎಂದಾದರೂ ಅನ್ನಿಸಿದೆಯೇ? ಈ ರೀತಿ ಕೆಲಸ ಮಾಡಬಲ್ಲ ತಂತ್ರಾಂಶ ವಿಂಕ್. ಇದನ್ನು ಬಳಸಿ ಪರದೆಯಲ್ಲಿ ನಡೆಯುತ್ತಿರುವ ಕ್ರಿಯೆಗಳಲ್ಲದೆ, ಮೌಸ್‌ನ ಓಡಾಟ, ಕುಟ್ಟಿದ ಕೀಲಿಗಳು, ಜೊತೆಗೆ ನೀವು ಮೈಕ್ ಮುಂದೆ ಮಾತನಾಡಿದ್ದು ಎಲ್ಲವನ್ನು ಚಲನಚಿತ್ರದಂತೆ ಸಂಗ್ರಹಿಸಿಟ್ಟುಕೊಳ್ಳಬಹುದು. ಇದು ಪಾಠಮಾಡುವವರಿಗೆ ತುಂಬ ಉಪಯುಕ್ತ. ಯಾವುದಾದರೊಂದು ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ ಎಂಬುದಾಗಿ ವಿವರಿಸುತ್ತಿದ್ದಂತೆ ಈ ತಂತ್ರಾಂಶ ಈ ಎಲ್ಲ ವಿವರಣೆಗಳನ್ನು ಸಂಗ್ರಹಿಸಿ ಕೊನೆಗೆ ಒಂದು ಟ್ಯುಟೋರಿಯಲ್ ವೀಡಿಯೋವನ್ನೆ ಮಾಡಿಕೊಡುತ್ತದೆ. ಈ ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/5iCdgY.
e - ಸುದ್ದಿ
ಜೋಕ್ ಮಾಡಿದ್ದಕ್ಕೆ ಸೆರೆಮನೆಗೆ
ವಿಮಾನಕ್ಕೆ ಸಮಯಕ್ಕೆ ಸರಿಯಾಗಿ ತಲುಪಲು ಕಷ್ಟವಾದಾಗ ವಿಮಾನದಲ್ಲಿ ಬಾಂಬ್ ಇದೆ ಎಂದು ಹುಸಿ ಫೋನ್ ಮಾಡಿ ಸೆರೆಮನೆಗೆ ಹೋದವರ ಬಗ್ಗೆ ನೀವು ಕೇಳಿರಬಹುದು. ಈಗ ಅದರ ಟ್ವಿಟ್ಟರ್ ಅಧ್ಯಾಯ ಪ್ರಾರಂಭವಾಗಿದೆ. ಇಂಗ್ಲೆಂಡಿನಲ್ಲಿ ಅತಿಯಾದ ಮಂಜುಗಡ್ಡೆ ತುಂಬಿದುದರಿಂದಾಗಿ ವಿಮಾನ ನಿಲ್ದಾಣವನ್ನು ಮುಚ್ಚಿದುದರ ಬಗ್ಗೆ ರೋಸಿ ಹೋದ ಒಬ್ಬಾತ ಟ್ವಿಟ್ಟರ್‌ನಲ್ಲಿ ತನ್ನ ರೋಷವನ್ನು ಹೊರಹಾಕಿದ. ಆತ ಬರೆದಿದ್ದೇನೆಂದರೆ “ನಿಮಗೆ ಇನ್ನು ಒಂದು ವಾರ ಗಡುವು ನೀಡುತ್ತೇನೆ. ಅದರ ಒಳಗೆ ವಿಮಾನ ನಿಲ್ದಾಣವನ್ನು ಪುನಃ ಚಾಲನೆ ಮಾಡದಿದ್ದರೆ ಅದನ್ನು ಬಾಂಬ್ ಇಟ್ಟು ಸ್ಫೋಟಿಸುತ್ತೇನೆ”. ಈ ಜೋಕನ್ನು ಪೋಲೀಸರು ಗಂಭೀರವಾಗಿ ಪರಿಗಣಿಸಿ ಆತನನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಪ್ರಕಾರ ಬಂಧಿಸಿದರು. ಜಾಮೀನಿನಲ್ಲಿ ಹೊರಬಂದ ಆತ ಇನ್ನೆಂದೂ ಜೋಕ್ ಮಾಡುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿದ್ದಾನೆ.
e- ಪದ
ವಿ-ಕಸ (e-waste = electronic waste, ವಿದ್ಯುನ್ಮಾನ ಕಸ) - ಇಲೆಕ್ಟ್ರಾನಿಕ್ ಉಪಕರಣಗಳನ್ನು ಎಸೆದಾಗ ಉಂಟಾಗುವ ಕಸ. ಗಣಕ, ಮೊಬೈಲ್ ಫೋನ್, ಮುದ್ರಕ, ಟಿವಿ, ಇತ್ಯಾದಿ ಉಪಕರಣಗಳನ್ನು ಎಸೆಯುವುದರಿಂದ ಪರಿಸರದ ಮೇಲೆ ಅತಿ ದೊಡ್ಡ ಹಾನಿ ಆಗುತ್ತದೆ. ಈ ಎಲ್ಲ ಉಪಕರಣಗಳಲ್ಲಿ ಪಾದರಸ, ಸೀಸ, ಆರ್ಸೆನಿಕ್, ಇತ್ಯಾದಿ ವಿಷಕಾರಿ ವಸ್ತುಗಳಿರುತ್ತವೆ. ಈ ಉಪಕರಣಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಈ ವಿಷಕಾರಿ ವಸ್ತುಗಳು, ಭೂಮಿ ಮತ್ತು ನೀರಿನ ಮೂಲಕ ಕೊನೆಗೆ ನಮ್ಮ ಹೊಟ್ಟೆಗೆ ಸೇರುತ್ತವೆ. ಆದುದರಿಂದ ಈ ವಿ-ಕಸ ಎನ್ನುವುದು ಅತಿದೊಡ್ಡ ಸಮಸ್ಯೆಯಾಗಿದೆ.
e - ಸಲಹೆ
ನಾಗರಾಜ ಅವರ ಪ್ರಶ್ನೆ: ನಾನು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ನೆಟ್‌ಬುಕ್ ಕಂಪ್ಯೂಟರ್ ಕೊಂಡುಕೊಳ್ಳುವ ಆಲೋಚನೆಯಲ್ಲಿದ್ದೇನೆ. ನಾನು ಡಿಟಿಪಿ ಮಾಡುವವನು. ಈ ನೆಟ್‌ಬುಕ್ ಕಂಪ್ಯೂಟರ್‌ನಲ್ಲಿ ಹಳೆಯ ತಂತ್ರಾಂಶಗಳಾದ ಪೇಜ್‌ಮೇಕರ್, ಫೋಟೋಶಾಪ್, ಕೋರೆಲ್‌ಡ್ರಾ ಇತ್ಯಾದಿಗಳು ಕೆಲಸ ಮಾಡಬಲ್ಲವೇ?
ಉ: ನೆಟ್‌ಬುಕ್ ಕಂಪ್ಯೂಟರ್‌ನ ಮೆಮೊರಿ ಸಾಮಾನ್ಯವಾಗಿ ೧ಜಿಬಿ ಇರುತ್ತದೆ. ಇದು ನೀವು ತಿಳಿಸಿದ ತಂತ್ರಾಂಶಗಳಿಗೆ ಸಾಕು. ಆದರೆ ಒಂದು ಚಿಕ್ಕ ಸಮಸ್ಯೆ ಇದೆ. ಬಹುಪಾಲು ನೆಟ್‌ಬುಕ್ ಕಂಪ್ಯೂಟರ್‌ಗಳು ವಿಂಡೋಸ್ ೭ ಹೋಮ್ ಆವೃತ್ತಿಯನ್ನು ಒಳಗೊಂಡಿರುತ್ತವೆ. ಇದರಲ್ಲಿ ನೀವು ತಿಳಿಸಿದ ಯಾವ ತಂತ್ರಾಂಶವೂ ಇನ್‌ಸ್ಟಾಲ್ ಆಗುವುದಿಲ್ಲ. ವಿಂಡೋಸ್ ಎಕ್ಸ್‌ಪಿಯನ್ನು ಒಳಗೊಂಡಿರುವ ನೆಟ್‌ಬುಕ್ ಕೊಂಡಕೊಂಡರೆ ನಿಮ್ಮ ಹಳೆಯ ತಂತ್ರಾಂಶಗಳನ್ನು ಬಳಸಿ ಡಿಟಿಪಿ ಕೆಲಸಗಳನ್ನು ಮಾಡಬಹುದು.
ಕಂಪ್ಯೂತರ್ಲೆ
ಆಧುನಿಕ ಗಾದೆಗಳು:

- ಕೆಲಸವಿಲ್ಲದ ಪ್ರೋಗ್ರಾಮ್ಮರ್ ಮೌಸ್ ಸ್ವಚ್ಛ ಮಾಡಿದನಂತೆ.
- ಊರಿಗೆ ಬಂದ ವೈರಸ್ ನಿಮ್ಮ ಕಂಪ್ಯೂಟರ್‌ಗೂ ಬಾರದಿರುತ್ತದೆಯೇ?
- ಕೆಲಸವೆಲ್ಲ ಆದ ಮೇಲೆ ಮೌಸ್ ತಂದರೇನು ಫಲ?
ಲೇಬಲ್ಗಳು:
ಟ್ವಿಟ್ಟರ್,
ನೆಟ್‌ಬುಕ್,
ಮಳೆ ಕೊಯ್ಲು,
ವಿಂಕ್,
e-waste
ಸೋಮವಾರ, ಜನವರಿ 18, 2010
ಗಣಕಿಂಡಿ - ೦೩೫ (ಜನವರಿ ೧೮, ೨೦೧೦)
ಅಂತರಜಾಲಾಡಿ
ಕನ್ನಡ ಕಲಿಯಿರಿ
ಕರ್ನಾಟಕಕ್ಕೆ ಹೊರಗಡೆಯಿಂದ ಪ್ರತಿನಿತ್ಯ ಸಾವಿರಾರು ಜನ ಬರುತ್ತಲೇ ಇದ್ದಾರೆ. ಇವರಲ್ಲಿ ಕೆಲವರು ಕನ್ನಡ ಕಲಿಯಲು ಆಸಕ್ತಿ ತೋರುತ್ತಾರೆ. ಅಂತಹವರಿಗೆ ಕನ್ನಡ ಕಲಿಸುವುದು ಹೇಗೆ? ಅದಕ್ಕಾಗಿ ಮಾರುಕಟ್ಟೆಯಲ್ಲಿ ಕೆಲವು ಪುಸ್ತಕಗಳು ಲಭ್ಯವಿವೆ. ಕೆಲವೊಮ್ಮೆ ಸ್ವಲ್ಪ ಕಾಲ ಮಾತ್ರ ವಾಸಿಸಲು ಕರ್ನಾಟಕಕ್ಕೆ ಬರುವವರಿರುತ್ತಾರೆ. ಅವರಿಗೆ ಪೂರ್ತಿ ಕನ್ನಡ ಕಲಿಯುವ ಆವಶ್ಯಕತೆಯಿರುವುದಿಲ್ಲ. ಅವರಿಗೆ ಮತ್ತು ಕರ್ನಾಟಕಕ್ಕೆ ಬರುವ ಪ್ರವಾಸಿಗಳಿಗೆ ಕನ್ನಡದ ಕೆಲವು ಪದ ಮತ್ತು ವಾಕ್ಯಗಳನ್ನು ಕಲಿಸುವ ಜಾಲತಾಣ ಕನ್ನಡ ಇನ್‌ಫೋಮೀಡಿಯ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಇದನ್ನು ನಡೆಸುತ್ತಿರುವವರು ಸೈಂಟ್ ಜೋಸೆಫ್ಸ್ ಕಾಲೇಜಿನ ವಿದ್ಯಾರ್ಥಿಗಳು. ಈ ಜಾಲತಾಣದ ವಿಳಾಸ kannadainfomedia.com.
ಡೌನ್‌ಲೋಡ್
ಚಿತ್ರಕಾರರಾಗಬೇಕೆ?
ಅಡೋಬ್ ಫೋಟೋಶಾಪ್ ಯಾರಿಗೆ ಗೊತ್ತಿಲ್ಲ? ಗ್ರಾಫಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಗೊತ್ತಿರುವ ತಂತ್ರಾಂಶ ಇದು. ಇದು ತುಂಬ ಚೆನ್ನಾಗಿ ಏನೋ ಇದೆ. ಆದರೆ ಅತಿ ದುಬಾರಿ. ಇದಕ್ಕೆ ಪರ್ಯಾಯವಾಗಿ ಉಚಿತ ಹಾಗೂ ಮುಕ್ತ ತಂತ್ರಾಂಶಗಳಿವೆ. ಇವುಗಳಲ್ಲಿ ಎರಡನ್ನು ಇಲ್ಲಿ ಹೆಸರಿಸಬಹುದು. ಒಂದು Paint.NET. ಇದು ತುಂಬ ಸರಳವಾಗಿದೆ. ಇದು ಬೇಕಿದ್ದಲ್ಲಿ ನೀವು getpaint.net ಜಾಲತಾಣಕ್ಕೆ ಭೇಟಿ ನೀಡಬೇಕು. ಇನ್ನೂ ಸ್ವಲ್ಪ ಹೆಚ್ಚು ಸೌಕರ್ಯಗಳನ್ನು ಹೊಂಡಿರುವ ಅಂತೆಯೇ ಸ್ವಲ್ಪ ಕ್ಲಿಷ್ಟವಾದ ಮುಕ್ತ ಹಾಗೂ ಉಚಿತ ಗ್ರಾಫಿಕ್ಸ್ ತಂತ್ರಾಂಶ ಜಿಂಪ್. ಇದು ದೊರಕುವ ಜಾಲತಾಣ gimp.org.
e - ಸುದ್ದಿ
ಪೋಲೀಸರಿಂದ ತಪ್ಪಿಸಿಕೊಳ್ಳಲು ಟ್ವಿಟ್ಟರ್ ಸಹಾಯ
ನಮ್ಮೂರಿನಲ್ಲಿ ಪೋಲೀಸರು ರಸ್ತೆ ಮಧ್ಯೆ ವಾಹನ ಚಾಲಕರನ್ನು ತಪಾಸಣೆ ಮಾಡಲು ಪ್ರಾರಂಬಿಸುತ್ತಿದ್ದಂತೆ ಆ ರಸ್ತೆಯಲ್ಲಿ ಹೋಗಿ ಬರುವ ವಾಹನ ಚಾಲಕರು ಎದರುಗಡೆಯಿಂದ ಬರುತ್ತಿರುವ ವಾಹನ ಚಾಲಕರುಗಳಿಗೆ ಮುಂದೆ ಪೋಲೀಸರಿದ್ದಾರೆ ಎಂದು ಸಂಕೇತ ನೀಡುವುದು ತಿಳಿದಿರಬಹುದು. ಅಮೇರಿಕದಲ್ಲಿ ಹೆಂಡ ಕುಡಿದು ವಾಹನ ಚಾಲನೆ ನಡೆಸುವವರನ್ನು ಪತ್ತೆ ಹಚ್ಚಲು ಪೋಲೀಸರು ಧಿಡೀರ್ ತಪಾಸಣೆ ಮಾಡುತ್ತಿರುತ್ತಾರೆ. ಪೋಲೀಸರು ಯಾವ ರಸ್ತೆಯಲ್ಲಿ ಈ ರೀತಿ ತಪಾಸಣೆ ನಡೆಸುತ್ತಿದ್ದಾರೆ ಎಂಬುದನ್ನು ವಾಹನ ಚಾಲಕರು ಕೂಡಲೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಲು ಪ್ರಾರಂಭಿಸಿದ್ದಾರೆ. ಹೆಂಡ ಕುಡಿದು ವಾಹನ ನಡೆಸುವವರು ತಾವು ಹೋಗಬೇಕಾದ ರಸ್ತೆಯಲ್ಲಿ ಪೋಲೀಸರು ಇದ್ದಾರೆಯೋ ಎಂಬುದನ್ನು ಟ್ವಿಟ್ಟರ್ ಮೂಲಕ ಪತ್ತೆ ಹಚ್ಚಿ ನಂತರ ಹೊರಡುತ್ತಾರೆ.
e- ಪದ
ಹಬ್ (hub) - ಗಣಕಜಾಲದಲ್ಲಿರುವ ಹಲವಾರು ಸಾಧನ ಮತ್ತು ಗಣಕಗಳನ್ನು ಬೆಸೆಯುವ ಸಾಧನ. ಸಾಮಾನ್ಯವಾಗಿ ಕಂಪೆನಿಗಳಲ್ಲಿ ಮತ್ತು ಕೆಲವೊಮ್ಮೆ ಮನೆಗಳಲ್ಲಿ ಕೂಡ ಹಲವಾರು ಗಣಕಗಳನ್ನು ಒಂದು ಆಂತರಿಕ ಜಾಲದಲ್ಲಿ ಬೆಸೆಯುವಾಗ ಇಂತಹ ಸಾಧನಗಳ ಬಳಕೆ ಆಗುತ್ತದೆ. ಎಲ್ಲ ಗಣಕಗಳನ್ನು ಈ ಹಬ್‌ಗೆ ಜೋಡಿಸಲಾಗುತ್ತದೆ. ಮುದ್ರಕ, ಸ್ಕ್ಯಾನರ್, ಅಂತರಜಾಲಕ್ಕೆ ಸಂಪರ್ಕ ಸಾಧಿಸುವ ಮೋಡೆಮ್ -ಹೀಗೆ ಹಲವಾರು ರೀತಿಯ ಸಾಧನಗಳನ್ನು ಹಬ್ ಮೂಲಕ ಗಣಕಜಾಲಕ್ಕೆ ಸೇರಿಸಲಾಗುತ್ತದೆ.
e - ಸಲಹೆ
ವಿವೇಕ ವೈದ್ಯ ಅವರ ಪ್ರಶ್ನೆ: ನನಗೆ ಆನ್‌ಲೈನ್ ಕೆಲಸಗಳಲ್ಲಿ ತುಂಬ ಆಸಕ್ತಿ ಇದೆ. ಆದರೆ ಹೆಚ್ಚಿನ ಜಾಲತಾಣಗಳು ಕೆಲಸಕ್ಕೆ ಮೊದಲೆ ಹಣ ಕೇಳುತ್ತಿವೆ. ಅಂತಹ ಜಾಲತಾಣಗಳನ್ನು ನಂಬಿ ಹಣ ನೀಡಬಹುದೇ?
ಉ: ಖಂಡಿತ ಬೇಡ. ಯಾವುದಾದರೂ ಜಾಲತಾಣ ಕೆಲಸಕ್ಕೆ ಮೊದಲೆ ಹಣ ಕೇಳಿದರೆ ಅದರಲ್ಲೇನೋ ದೋಷ ಇದೆ ಎಂದು ತೀರ್ಮಾನಿಸಬಹುದು. ಸಾಮಾನ್ಯವಾಗಿ ಇಂತಹ ಜಾಲತಾಣಗಳು ಏನು ಮಾಡುತ್ತವೆಯೆಂದರೆ ನಾವು ಒಂದು ಕಿಟ್ ನೀಡುತ್ತೇವೆ. ಅದನ್ನು ಖರೀದಿಸಬೇಕು. ಅನಂತರ ಪ್ರತಿತಿಂಗಳು ಆ ಕಿಟ್ ಅನ್ನು ಬಳಸಿ ಪ್ರತಿದಿನ ಕೆಲವು ಜಾಲತಾಣಗಳನ್ನು ವೀಕ್ಷಿಸತಕ್ಕದ್ದು. ಒಂದು ಜಾಲತಾಣ ವೀಕ್ಷಣೆ ಮಾಡಿದ್ದಕ್ಕೆ ಇಂತಿಷ್ಟು ಎಂಬುದಾಗಿ ಹಣ ನಿಗದಿ ಮಾಡಲಾಗುತ್ತದೆ. ಅದರಂತೆ ನಿಮಗೆ ಹಣ ಸಂಪಾದನೆ ಆಗುತ್ತದೆ ಎಂಬುದಾಗಿ ನಂಬಿಸುತ್ತಾರೆ. ಇಂತಹ ಬಹುಪಾಲು ಕಂಪೆನಿಗಳು ನೀವು ಕಿಟ್ ಕೊಂಡುಕೊಂಡ ನಂತರ ನಿಮ್ಮ ಯಾವ ಇಮೈಲ್‌ಗಳಿಗೂ ಉತ್ತರಿಸುವುದೇ ಇಲ್ಲ.
ಕಂಪ್ಯೂತರ್ಲೆ
ಗೂಗ್ಲ್ ಟಾಯ್ಲೆಟ್‌ಗೆ!
ಹೌದು. ಗೂಗ್ಲ್ ಟಾಯ್ಲೆಟ್ ಕೆಳಗೆ ಹೋಗುತ್ತಿದೆ! ಏನು ಹಾಗೆಂದರೆ? ವಿಯೆಟ್ನಾಂನಲ್ಲಿ ಗೂಗ್ಲ್ ಹೆಸರಿನ ಟಾಯ್ಲೆಟ್ ಪೇಪರ್ ಇದೆ!

ಬುಧವಾರ, ಜನವರಿ 13, 2010
ಗಣಕಿಂಡಿ - ೦೩೪ (ಜನವರಿ ೧೧, ೨೦೧೦)
ಅಂತರಜಾಲಾಡಿ
ಉಚಿತ ವೀಡಿಯೋ ಪಾಠಗಳು
ಅಂತರಜಾಲದ ಮೂಲಕ ಪಾಠ ಮಾಡುವುದು ಈಗೀಗ ಸರ್ವೇಸಾಮಾನ್ಯವಾಗುತ್ತಿದೆ. ದೂರಶಿಕ್ಷಣದಲ್ಲಂತೂ ಇದಿಲ್ಲದೆ ನಡೆಯುವುದೇ ಇಲ್ಲವೆನ್ನುವಂತಾಗಿದೆ. ಸಾಮಾನ್ಯವಾಗಿ ಇವೆಲ್ಲ ಹಣ ಕೊಟ್ಟು ನೋಡಬೇಕಾದಂತ ಶೈಕ್ಷಣಿಕ ವೀಡಿಯೋ ಪಾಠಗಳಾಗಿರುತ್ತವೆ. ದೂರಶಿಕ್ಷಣದಲ್ಲಾದರೋ ಈ ವೀಡಿಯೋಗಳಿಗೆ ಶುಲ್ಕವನ್ನು ವಾರ್ಷಿಕ ಶುಲ್ಕದಲ್ಲಿ ಸೇರಿಸಿರುತ್ತಾರೆ. ಅಂತರಜಾಲದಲ್ಲಿ ಉಚಿತ ವೀಡಿಯೋ ಪಾಠಗಳೂ ಇವೆ. ಖ್ಯಾತ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಿಂದ ಉಚಿತ ವೀಡಿಯೋ ಪಾಠಗಳನ್ನು ನೋಡಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ academicearth.org. ಖಗೋಳ ವಿಜ್ಞಾನದಿಂದ ಹಿಡಿದು ವೈದ್ಯಕೀಯದ ತನಕ ಹಲವು ವಿಷಯಗಳ ಬಗ್ಗೆ ಪಾಠಗಳ ವೀಡಿಯೋಗಳನ್ನು ಇಲ್ಲಿ ಉಚಿತವಾಗಿ ನೋಡಬಹುದು.
ಡೌನ್‌ಲೋಡ್
ಡ್ರೈವರ್ ಪತ್ತೆಹಚ್ಚಿ
ಕೆಲವೊಮ್ಮೆ ಗಣಕ ಸರಿಯಾಗಿ ಕೆಲಸ ಮಾಡದಿರುವುದಕ್ಕೆ ಅಥವಾ ನಿಧಾನವಾಗಿ ಕೆಲಸ ಮಾಡುವುದಕ್ಕೆ ಸರಿಯಾದ ಡ್ರೈವರ್ ದೊರಕದಿರುವುದೂ ಕಾರಣವಾಗಿರುತ್ತದೆ. ಉದಾಹರಣೆಗೆ ನಿಮ್ಮ ಗಣಕದಲ್ಲಿ ಯಾವುದೋ ಯಂತ್ರಾಂಶ ಸೇರಿಸಲ್ಪಟ್ಟಿದೆಯೆಂದಿಟ್ಟುಕೊಳ್ಳಿ. ಬಹುಮಾಧ್ಯಮದ (ಮಲ್ಟಿಮೀಡಿಯಾ) ಕಾರ್ಡ್, ಗ್ರಾಫಿಕ್ಸ್ ಕಾರ್ಡ್, ವಯರ್‌ಲೆಸ್ ಅಥವಾ ಬ್ಲೂಟೂತ್ ಸಂಪರ್ಕ ಸಾಧನ, ಇತ್ಯಾದಿ ಯಾವುದೋ ಇರಬಹುದು. ಅದನ್ನು ನಡೆಸಲು ಬೇಕಾದ ಡ್ರೈವರ್ ತಂತ್ರಾಂಶ ಗಣಕದಲ್ಲಿ ಇಲ್ಲದಿರಬಹುದು. ಗಣಕದ ಡಿವೈಸ್ ಮ್ಯಾನೇಜರ್ ಎಂಬ ಸವಲತ್ತನ್ನು ಬಳಸಿ ಹುಡುಕಿದರೆ ಈ ಯಂತ್ರಾಂಶದ ಮುಂದೆ ಅದು ಒಂದು ಹಳದಿ ಬಣ್ಣದ ಪ್ರಶ್ನಾರ್ಥಕ ಚಿಹ್ನೆ ಮೂಲಕ ಡ್ರೈವರ್ ಇಲ್ಲ ಎಂಬುದನ್ನು ಸೂಚಿಸುತ್ತದೆ. ಯಾವ ಯಂತ್ರಾಂಶ ಎಂದು ಗೊತ್ತಿದ್ದರೆ ಅದಕ್ಕೆ ಸರಿಯಾದ ಡ್ರೈವರ್ ಹುಡುಕಬಹುದು. ಕೆಲವೊಮ್ಮೆ unknown device ಎಂದು ಸೂಚಿಸಿದಾಗ ಫಜೀತಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಗೊತ್ತಿಲ್ಲದ ಸಾಧನ ಯಾವುದೆಂದು ಪತ್ತೆಹಚ್ಚಲು Unknown Device Identifier ಎನ್ನುವ ಉಚಿತ ತಂತ್ರಾಂಶವನ್ನು http://bit.ly/8v5GIJ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.
e - ಸುದ್ದಿ
ಆಟ ಆಡಿ ಖದೀಮ ಸಿಕ್ಕಿಬಿದ್ದ
ಮಾದಕ ವಸ್ತುಗಳ ವ್ಯವಹಾರದಲ್ಲಿ ನಿರತನಾಗಿದ್ದ ಖದೀಮನೊಬ್ಬ ಗಣಕ ಆಟದಿಂದಾಗಿ ಸಿಕ್ಕಿಬಿದ್ದ ಸುದ್ದಿ ಬಂದಿದೆ. ಈತನನ್ನು ಹಿಡಿಯಲು ೨೦೦೭ನೆಯ ಇಸವಿಯಿಂದಲೇ ಪೋಲೀಸರು ಜಾಲ ಹರಡಿದ್ದರು. ಆತ ಇನ್ನೇನು ಸಿಕ್ಕಿಯೇಬಿಟ್ಟ ಅನ್ನುವಷ್ಟರಲ್ಲಿ ಆತ ಅಮೇರಿಕಾದಿಂದ ಕೆನಡ ದೇಶಕ್ಕೆ ತಪ್ಪಿಸಿಕೊಂಡುಬಿಟ್ಟಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಆತನ ಬಗ್ಗೆ ಅವರಿಗೆ ಇನ್ನೊಂದು ಮಾಹಿತಿಯೂ ಸಿಕ್ಕಿತು. ಅದೇನೆಂದರೆ ಆತ ವರ್ಲ್ಡ್ ಆಫ್ ವಾರ್‌ಕ್ರಾಫ್ಟ್ ಎಂಬ ಅಂತರಜಾಲ ಆಧಾರಿತ ಸುಪ್ರಸಿದ್ಧ ಆಟದ ವ್ಯಸನಿಯಾಗಿದ್ದ ಎಂಬುದು. ಇದರ ಆಧಾರದಿಂದ ಆತ ಯಾವ ಹೆಸರಿನಲ್ಲಿ ಯಾವಾಗಲೂ ಆಡುತ್ತಾನೆ ಎಂಬ ಸುಳಿವಿನ ಮೂಲಕ ಆ ಆಟ ನಡೆಸುವ ಕಂಪೆನಿಯ ಸಹಯೋಗದಿಂದ ಆತನನ್ನು ಕೊನೆಗೂ ಕೆನಡ ದೇಶದಲ್ಲಿ ಸೆರೆಹಿಡಿಯಲಾಯಿತು.
e- ಪದ
ಡ್ರೈವರ್ (driver) - ಯಂತ್ರಾಂಶ ಅಥವಾ ಸಾಧನಗಳನ್ನು ನಿಯಂತ್ರಿಸುವ ತಂತ್ರಾಂಶ. ಗಣಕದೊಳಗೆ ಅಳವಡಿಸಿರುವ ಅಥವಾ ಹೊರಗಡೆಯಿಂದ ಸಂಪರ್ಕಿಸಲ್ಪಟ್ಟಿರುವ ಯಾವುದೇ ಯಂತ್ರಾಂಶ ಅಥವಾ ಸಾಧನವು ಕೆಲಸ ಮಾಡಬೇಕಾದರೆ ಅದಕ್ಕೆ ಸರಿಯಾದ ಡ್ರೈವರ್ ತಂತ್ರಾಂಶ ಅತೀ ಅಗತ್ಯ. ಉದಾಹರಣೆಗೆ ಮುದ್ರಕ, ಕ್ಯಾಮರಾ, ಬಹುಮಾಧ್ಯಮ ಸಲಕರಣೆ, ಸ್ಕ್ಯಾನರ್, ಇತ್ಯಾದಿಗಳು. ಇವುಗಳನ್ನು ಕೊಂಡುಕೊಳ್ಳುವಾಗ ಅವುಗಳ ಜೊತೆ ಈ ಡ್ರೈವರ್ ತಂತ್ರಾಂಶವನ್ನು ಸಿ.ಡಿ.ಯಲ್ಲಿ ನೀಡಿರುತ್ತಾರೆ. ಅದನ್ನು ಇನ್‌ಸ್ಟಾಲ್ ಮಾಡಿದ ನಂತರ ಆ ಸಿ.ಡಿ.ಯನ್ನು ಜೋಪಾನವಾಗಿ ತೆಗೆದಿಟ್ಟುಕೊಳ್ಳಬೇಕು. ಇನ್ನೊಮ್ಮೆ ಯಾವಾಗಾದರೂ ಆ ಸಲಕರಣೆಯನ್ನು ಮತ್ತೊಮ್ಮೆ ಇನ್‌ಸ್ಟಾಲ್ ಮಾಡಬೇಕಾಗಿ ಬಂದಾಗ ಈ ಡ್ರೈವರ್ ತಂತ್ರಾಂಶ ಬೇಕಾಗುತ್ತದೆ. ಸಾಮಾನ್ಯವಾಗಿ ಸಲಕರಣೆ ತಯಾರಕರು ಹೊಸ ಕಾರ್ಯಾಚರಣೆಯ ವ್ಯವಸ್ಥೆ ಬಿಡುಗಡೆಯಾದಾಗ ಅಥವಾ ಯಾವುದಾದರೂ ದೋಷ ಪತ್ತೆಯಾದಾಗ ಡ್ರೈವರ್ ತಂತ್ರಾಂಶದ ಹೊಸ ಆವೃತ್ತಿಯನ್ನು ತಮ್ಮ ಜಾಲತಾಣದಲ್ಲಿ ನೀಡುತ್ತಾರೆ. ಆಗಾಗ ಡ್ರೈವರ್ ತಂತ್ರಾಂಶವನ್ನು ನವೀಕರಿಸಿಕೊಂಡರೆ ಒಳ್ಳೆಯದು.
e - ಸಲಹೆ
ವೈ. ಎಂ. ಲೋಕೇಶ್ ಅವರ ಪ್ರಶ್ನೆ: ನೀವು ಕನ್ನಡ ಪ್ರಭ ಪತ್ರಿಕೆಯಲ್ಲಿ ಗಣಕಿಂಡಿ ಅಂಕಣದ ಮೂಲಕ ನೀಡುವ ಮಾಹಿತಿಗಳು ನನಗೆ ತುಂಬ ಉಪಯುಕ್ತವಾಗಿವೆ. ಅದರಲ್ಲಿ ನೀವು ನೀಡುವ ಸಲಹೆಗಳು, ಜಾಲತಾಣಗಳ ವಿಳಾಸಗಳು ತುಂಬ ಉಪಯುಕ್ತವಾಗಿವೆ. ನನಗೆ ಎಲ್ಲ ಲೇಖನಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗಿದೆ. ಹಿಂದಿನ ಸಂಚಿಕೆಯ ಲೇಖನಗಳು ಎಲ್ಲಿ ದೊರಕುತ್ತವೆ?
ಉ: ನೀವು ganakindi.blogspot.com ಜಾಲತಾಣದಲ್ಲಿ ಎಲ್ಲ ಲೇಖನಗಳನ್ನು ಓದಬಹುದು.
ಕಂಪ್ಯೂತರ್ಲೆ
ಹಿಂಬದಿಯಲ್ಲಿ ಟೈಪ್ ಮಾಡುವುದು ಹೇಗೆ?
ಕೆಲವು ಮುದ್ರಕಗಳು ಪುಟದ ಎರಡು ಬದಿಯಲ್ಲೂ ಮುದ್ರಿಸಬಲ್ಲವು. ಬೆಂಗಳೂರಿನ ಖ್ಯಾತ ಮಾಹಿತಿ ತಂತ್ರಜ್ಞಾನ ಕಂಪೆನಿ ತನ್ನ ಎಲ್ಲ ಉದ್ಯೋಗಿಗಳಿಗೆ ಸೂಚನೆ ನೀಡಿತ್ತು. ಅದೇನೆಂದರೆ ಕಾಗದ ಉಳಿಸಲು ಕಾಗದದ ಎರಡು ಬದಿಗಳಲ್ಲೂ ಮುದ್ರಿಸಬೇಕು ಎಂಬುದಾಗಿತ್ತು. ಒಬ್ಬ ಉದ್ಯೋಗಿ ತನ್ನ ಮೇಲಧಿಕಾರಿಗೆ ಬರೆದ ಇಮೈಲ್ ಈ ರೀತಿ ಇತ್ತು: “ನಾನು ನಿಮ್ಮ ಸೂಚನೆಯಂತೆ ಕಾಗದದದ ಹಿಂಬದಿಯಲ್ಲೂ ಮುದ್ರಿಸಲಿಕ್ಕಾಗಿ ಎರಡು ಬದಿಯಲ್ಲೂ ಟೈಪ್ ಮಾಡಲು ಪ್ರಯತ್ನಿಸಿದೆ. ನಾನು ಮೈಕ್ರೋಸಾಫ್ಟ್ ವರ್ಡ್ ತಂತ್ರಾಂಶವನ್ನು ಬಳಸುತ್ತಿದ್ದೇನೆ. ಅದರಲ್ಲಿ ಮೊದಲನೆಯೆ ಪುಟ ಮುಗಿದ ತಕ್ಷಣ ತಾನಾಗಿಯೇ ಎರಡನೆಯದನ್ನು ಪ್ರಾರಂಭಿಸಿತು. ಮೊದಲನೆಯ ಪುಟದ ಹಿಂಬದಿಯಲ್ಲಿ ಟೈಪ್ ಮಾಡುವುದು ಹೇಗೆ ಎಂಬುದನ್ನು ದಯವಿಟ್ಟು ತಿಳಿಸಬೇಕು”.

ಬುಧವಾರ, ಜನವರಿ 6, 2010
ಗಣಕಿಂಡಿ - ೦೩೩ (ಜನವರಿ ೦೪, ೨೦೧೦)
ಅಂತರಜಾಲಾಡಿ
ಅಂತಾರಾಷ್ಟ್ರೀಯ ಜೀವ ವೈವಿಧ್ಯ ವರ್ಷ
೨೦೧೦ನೆಯ ಇಸವಿಯನ್ನು ಅಂತಾರಾಷ್ಟ್ರೀಯ ಜೀವ ವೈವಿಧ್ಯ ವರ್ಷ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಜೀವ ವೈವಿಧ್ಯವೆಂದರೆ ಭೂಮಿಯ ಮೇಲೆ ಇದ್ದ, ಇರುವ ಮತ್ತು ಮುಂದೆಯೂ ಇರಬೇಕಾದ ಎಲ್ಲ ಜಾತಿಯ ಜೀವಿಗಳಲ್ಲಿರುವ ವೈವಿಧ್ಯ. ಪರಿಸರ ನಾಶದ ಜೊತೆಗೆ ಸಾವಿರಾರು ಜೀವಜಾತಿಗಳೂ ನಾಶವಾಗುತ್ತಿವೆ. ಬೆಂಗಳೂರಿನಿಂದ ಗುಬ್ಬಚ್ಚಿಗಳು ನಾಪತ್ತೆಯಾಗಿರುವುದು ಇದಕ್ಕೆ ಒಂದು ಉದಾಹರಣೆ. ಜೀವವೈವಿಧ್ಯ ಕಡಿಮೆಯಾಗದಂತೆ ಎಲ್ಲರೂ ಸೇರಿ ಕೆಲಸ ಮಾಡಬೇಕಾಗಿದೆ. ಹೀಗೆ ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಲಿಕ್ಕೆಂದೇ ಇರುವ ಜಾಲತಾಣ www.countdown2010.net. ೨೦೧೦ರ ಜೀವವೈವಿಧ್ಯದ ಗುರಿ, ಜೀವವೈವಿಧ್ಯ ಉಳಿಸಬೇಕಾದರೆ ಮಾಡಬೇಕಾದ ಕೆಲಸಗಳು, ಇತ್ಯಾದಿ ಎಲ್ಲ ವಿವರಗಳು ಈ ಜಾಲತಾಣದಲ್ಲಿದೆ.
ಡೌನ್‌ಲೋಡ್
ನೆಕ್ಸುಯಿಝ್ ಆಟ
ಆಟ ಯಾರಿಗೆ ಇಷ್ಟವಿಲ್ಲ? ಗಣಕದಲ್ಲಿ ಆಟ ಆಡುವುದರ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳಿವೆ. ಅಭಿಪ್ರಾಯಗಳು ಏನೇ ಇರಲಿ. ನಮಗೆ ಆಟಗಳ ಜಾಲತಾಣಗಳ ವಿಳಾಸ ಕೊಡಿ ಎಂದು ಕೇಳುವವರಿದ್ದಾರೆ. ಬಹುಪಾಲು ಆಟಗಳು ದುಬಾರಿ ಬೆಲೆಬಾಳುವವು. ತುಂಬ ಜನಪ್ರಿಯವಾಗಿರುವ ಉಚಿತ ಮತ್ತು ಮುಕ್ತ ಆಟ ನೆಕ್ಸುಯಿಝ್. ಇದು ದೊರಕುವ ಜಾಲತಾಣದ ವಿಳಾಸ http://bit.ly/6ajDsz. ಹೆಚ್ಚಿನ ಮುಕ್ತ ತಂತ್ರಾಂಶಗಳಂತೆ ಇದು ಕೂಡ ವಿಂಡೋಸ್ ಮಾತ್ರವಲ್ಲ ಮ್ಯಾಕ್ ಮತ್ತು ಲೈನಕ್ಸ್‌ಗೂ ಲಭ್ಯವಿದೆ. ಇದು ಮೂರು ಆಯಾಮಗಳ ಶೂಟಿಂಗ್ ಗೇಮ್. ಹೆಚ್ಚಿನ ಮಾತೇಕೆ? ನೀವೇ ಡೌನ್‌ಲೋಡ್ ಮಾಡಿ ಆಡಿ ನೋಡಿ.
e - ಸುದ್ದಿ
ನಗುವಿಗೂ ಪೇಟೆಂಟ್!
ಏನಿದುಅಸಂಬದ್ಧ ಅಂದುಕೊಂಡಿರಾ? ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಸದ ಬುಟ್ಟಿಯಿಂದ ಹಿಡಿದು ಮೌಸ್‌ಅನ್ನು ಮೂರು ಸಲ ಕ್ಲಿಕ್ ಮಾಡುವುದಕ್ಕೂ ಪೇಟೆಂಟ್ ಪಡೆಯಲಾಗಿದೆ. ಕಸದ ಬುಟ್ಟಿ ಎಂದರೆ ಗಣಕ ಪರದೆಯ ಮೇಲೆ ಕಾಣಿಸುವ ಕಸದ ಬುಟ್ಟಿಯ ಚಿತ್ರಿಕೆ (ಐಕಾನ್). ಈ ಪೇಟೆಂಟ್ ಪಡೆದಿದ್ದು ಆಪಲ್ ಕಂಪೆನಿ, ತುಂಬ ಹಿಂದೆ. ಈಗಿನ ಸುದ್ದಿ ಐಬಿಎಂ ಕಂಪೆನಿ ಪಡೆದುಕೊಂಡ ಪೇಟೆಂಟಿನದ್ದು. ಗಣಕ, ಅಂತರಜಾಲ ಮಾತುಕತೆ, ಇಮೈಲ್, ಚಾಟ್, ಟ್ವಿಟ್ಟರ್, ಬ್ಲಾಗ್ -ಇತ್ಯಾದಿಗಳಲ್ಲಿ ಪುದಗುಚ್ಛಗಳನ್ನು ಸೂಚಿಸಲು ಆ ಪದಗಳ ಮೊದಲ ಅಕ್ಷರಗಳನ್ನು ಜೋಡಿಸಿ ಬಳಸಲಾಗುತ್ತದೆ. ಉದಾಹರಣೆಗೆ LOL ಅಂದರೆ laughing out loud. ಈ ರೀತಿ ಕಿರುಪಠ್ಯ ಬಳಸುವ ವಿಧಾನಕ್ಕೆ ಐಬಿಎಂ ಕಂಪೆನಿಗೆ ಪೇಟೆಂಟ್ ನೀಡಲಾಗಿದೆ. ಜನಬಳಕೆಯಲ್ಲಿ ಈಗಾಗಲೇ ಇರುವ ರೀತಿನೀತಿಗಳಿಗೆ ಪೇಟೆಂಟ್ ಪಡೆಯುವುದನ್ನು ಹಿಂದೊಮ್ಮೆ ಇದೇ ಐಬಿಎಂ ಕಂಪೆನಿ ಗೇಲಿ ಮಾಡಿತ್ತು. ಈಗ? ಓದುವುದು ಶಾಸ್ತ್ರ, ಇಕ್ಕುವುದು ಗಾಳ ಅಂತೀರಾ?
e- ಪದ
ಸಂಕೇತೀಕರಣ (encoding) -ಗಣಕದಲ್ಲಿ ಸಂಗ್ರಸಿಡಲು ಮತ್ತು ಮಾಹಿತಿಯ ವಿನಿಮಯಕ್ಕಾಗಿ ಅಕ್ಷರಗಳನ್ನು ಡಿಜಿಟಲ್ ವಿಧಾನಕ್ಕೆ ಪರಿವರ್ತಿಸುವ ವಿಧಾನ. ಇದರಲ್ಲಿ ಹಲವು ಬಗೆ ಇವೆ. ಉದಾಹರಣೆಗೆ ಆಸ್ಕಿ (ASCII) ಮತ್ತು ಯುನಿಕೋಡ್ (Unicode). ಒಂದು ವಿಧಾನದಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟರೆ ಅದು ಎಲ್ಲ ತಂತ್ರಾಂಶಗಳಿಗೆ ಮತ್ತು ಸಂಪರ್ಕವಾಹಿನಿಗಳಿಗೆ ಅರ್ಥವಾಗಬೇಕು. ಅದಕ್ಕೆಂದೇ ಜಾಗತಿಕ ಶಿಷ್ಟತೆಯ ಬಳಕೆಯಾಗುತ್ತಿದೆ. ಆಸ್ಕಿ ಶಿಷ್ಟತೆಯಲ್ಲಿ ಜಗತ್ತಿನ ಎಲ್ಲ ಭಾಷೆಗಳಿಗೆ ಸ್ಥಳಾವಕಾಶ ಮಾಡಲು ಸಾಧ್ಯವಿಲ್ಲ. ಆದುದರಿಂದ ಇತ್ತೀಚೆಗೆ ಜಗತ್ತಿನಾದ್ಯಂತ ಯುನಿಕೋಡ್‌ನ ಬಳಕೆ ಆಗುತ್ತಿದೆ.
e - ಸಲಹೆ
ಜಿ. ಎಚ್. ಶ್ರೀಧರ ಅವರ ಪ್ರಶ್ನೆ: ನಾನು ಸುಮಾರು ಒಂದು ವರ್ಷದ ಹಿಂದೆ ಒಂದು ಸಿ.ಡಿ.ಯಲ್ಲಿ ಕೆಲವು ಫೈಲುಗಳನ್ನು ಬರೆದು ಇಟ್ಟಿದ್ದೆ. ಈಗ ಅದನ್ನು ಓದಲಾಗುತ್ತಿಲ್ಲ. ಅದರ ಗಾತ್ರ ೩೦೦ ಎಂ.ಬಿ. ಎಂದು ತೋರಿಸುತ್ತಿದೆ. ಆದರೆ ಯಾವ ಫೈಲೂ ಕಾಣಿಸುತ್ತಿಲ್ಲ. ನನ್ನ ಫೈಲುಗಳು ಎಲ್ಲಿ ಹೋದವು? ಅವುಗಳನ್ನು ವಾಪಾಸು ಪಡೆಯುವುದು ಹೇಗೆ?
ಉ: ಕೆಲವು ಕಡಿಮೆ ಗುಣಮಟ್ಟದ ಸಿ.ಡಿ.ಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿಟ್ಟಾಗ ಕೆಲವೊಮ್ಮೆ ಈ ರೀತಿ ಆಗುತ್ತದೆ. ಇಂತಹ ಸಿ.ಡಿ., ಡಿ.ವಿ.ಡಿ.ಗಳಿಂದ ಮಾಹಿತಿಯನ್ನು ವಾಪಾಸು ಪಡೆಯಲು CD Recovery Toolbox ಎಂಬ ಉಚಿತ ತಂತ್ರಾಂಶ ಲಭ್ಯವಿದೆ. ನೀವು ಇದನ್ನು http://bit.ly/4JUUGn ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಕಂಪ್ಯೂತರ್ಲೆ
ಗೂಗ್ಲ್‌ನವರು ಏನು ಮಾಡಿದರೂ ಸುದ್ದಿಯಾಗುತ್ತದೆ. ಇತ್ತೀಚೆಗೆ ಗೂಗ್ಲ್ ವೇವ್ ಎಂಬ ಸವಲತ್ತನ್ನು ಅಂತರಜಾಲದಲ್ಲಿ ಬಳಕೆದಾರರಿಗೆ ನೀಡಿದ್ದಾರೆ. ಇದು ಉಚಿತವಾಗಿದ್ದರೂ ಯಾರಾದರೂ ಆಹ್ವಾನಿಸಿದವರಿಗೆ ಮಾತ್ರ ಬಳಕೆಗೆ ಲಭ್ಯ. ಈ ಆಹ್ವಾನಕ್ಕಾಗಿ ಜಾಲನಾಗರಿಕರಲ್ಲಿ ತುಂಬ ಗುದ್ದಾಟಗಳೂ ನಡೆದಿವೆ. ಹೀಗೆ ಆಹ್ವಾನ ಪಡೆದ ನಂತರ ಅದನ್ನು ಬಳಸಲು ಹೆಚ್ಚಿನವರಿಗೆ ಅರ್ಥವಾಗಲಿಲ್ಲ. ಹೀಗೆ ಗೂಗ್ಲ್ ವೇವ್ ಅರ್ಥವಾಗಲಿಲ್ಲ ಎಂಬ ಬೇಸರದಲ್ಲಿ ತಂತ್ರಜ್ಞನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ವಡೋದರದಿಂದ ಬಂದಿದೆ. ಇದರ ಬಗ್ಗೆ ಹೆಚ್ಚಿನ ವಿವರ ಬೇಕಿದ್ದಲ್ಲಿ http://bit.ly/8T83L2 ಜಾಲತಾಣಕ್ಕೆ ಭೇಟಿ ನೀಡಬಹುದು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)