ಅಂತರಜಾಲಾಡಿ
ಜ್ಞಾನಕೋಶ
ಅಂತರಜಾಲದಲ್ಲಿ ಕನ್ನಡ ಭಾಷೆಯಲ್ಲಿ ಜ್ಞಾನಕೋಶಗಳು ಇರುವುದೇ ಬೆರಳೆಣಿಕೆಯಷ್ಟು. ಅಂತಹ ಒಂದು ಜ್ಞಾನಕೋಶ www.jnanakosha.org. ಹೆಸರೇ ಸೂಚಿಸುವಂತೆ ಈ ಜಾಲತಾಣದಲ್ಲಿ ಎಲ್ಲ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲು ಪ್ರಯತ್ನ ಪಡಲಾಗಿದೆ. ಇದರ ಹಿಂದೆ ಕೆಲಸ ಮಾಡುವವರ ಪಟ್ಟಿ ನೋಡಿದರೆ ಅಲ್ಲೂ ಬೆರಳೆಣಿಕೆಯಷ್ಟೇ ಮಂದಿ ಇದ್ದಾರೆ. ಗಣಕ, ವಿಜ್ಞಾನ, ತಂತ್ರಜ್ಞಾನ, ಮ್ಯಾನೇಜ್‌ಮೆಂಟ್, ಕಾನೂನು, ಕೃಷಿ, ಆಯುರ್ವೇದ - ಹೀಗೆ ಎಲ್ಲ ವಿಷಯಗಳ ಸೂಚಿ ಇದೆ. ಆಯಾ ವಿಷಯಗಳ ಬಗ್ಗೆ ಕೆಲವು ಲೇಖನಗಳೂ ಇವೆ. ಚರ್ಚಾವೇದಿಕೆ ಹಾಗೂ ಬ್ಲಾಗ್‌ಗಳೂ ಇಲ್ಲಿವೆ. ಮಾಧ್ಯಮದವರ ಮುಂದೆ ತುಂಬ ಗದ್ದಲಮಾಡಿ ಬಿಡುಗಡೆ ಮಾಡಿದ ಸರಕಾರದ “ಕಣಜ” (kanaja.in) ಜಾಲತಾಣ ಇನ್ನೂ ಅಲ್ಲೇ ನಿದ್ದೆ ಮಾಡುತ್ತಿದೆ. ಕನ್ನಡದ ಮುಕ್ತ ವಿಶ್ವಕೋಶದ ವಿಳಾಸ kn.wikipedia.org.
ಡೌನ್‌ಲೋಡ್
ಮೊಬೈಲ್‌ಗೆ ತಂತ್ರಾಂಶ
ಈಗೀಗ ಮಾರುಕಟ್ಟೆಯಲ್ಲಿ ದೊರಕುತ್ತಿರುವ ಫೋನುಗಳು ಬಹುತೇಕ ಕಿಸೆಗಣಕಗಳೇ ಆಗಿವೆ. ಅವುಗಳಲ್ಲಿ ಏನೇನೆಲ್ಲಾ ಮಾಡಬಹುದು. ಆಟಗಳನ್ನೂ ಆಡಬಹುದು. ಅಂತೆಯೇ ಅವುಗಳಿಗೆ ಸಹಸ್ರಾರು ತಂತ್ರಾಂಶಗಳೂ ಲಭ್ಯವಿವೆ. ಗಣಕಗಳಿಗೆ ಹೇಗೆಯೋ ಅಂತೆಯೇ ಆಧುನಿಕ ಮೊಬೈಲ್ ಫೋನ್‌ಗಳಿಗೂ ಕಾರ್ಯಾಚರಣೆಯ ವ್ಯವಸ್ಥೆಗಳಿವೆ. ಅವುಗಳಲ್ಲೂ ಹಲವಾರು ನಮೂನೆಗಳಿವೆ. ಎಲ್ಲ ನಮೂನೆಯ ಫೋನುಗಳಿಗೆ ಹಾಗೂ ಕಾರ್ಯಾಚರಣೆಯ ವ್ಯವಸ್ಥೆಗಳಿಗೆ ತಂತ್ರಾಂಶಗಳು ಎಲ್ಲಿ ದೊರೆಯುತ್ತವೆ ಎಂದು ಹಲವು ಮಂದಿ ಮತ್ತೆ ಮತ್ತೆ ಇಮೈಲ್ ಮೂಲಕ ವಿಚಾರಿಸುತ್ತಿದ್ದಾರೆ. ಅಂತಹ ಒಂದು ಜಾಲತಾಣ bestmobileapp.org. ನಿಜವಾಗಿ ಈ ಜಾಲತಾಣದಲ್ಲಿ ತಂತ್ರಾಂಶ ದೊರೆಯುವುದಿಲ್ಲ. ತಂತ್ರಾಂಶ ಎಲ್ಲಿ ದೊರೆಯುತ್ತದೆ ಎಂಬ ಕೊಂಡಿ ಮಾತ್ರ ಇಲ್ಲಿದೆ. ಹಾಗೆ ದೊರೆಯುವ ಎಲ್ಲ ತಂತ್ರಾಂಶಗಳೂ ಕಾನೂನುಬದ್ಧವಾಗಿರಬೇಕಾಗಿಲ್ಲ. ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು.
e - ಸುದ್ದಿ
ಇಲ್ಲದ ರೋಗಕ್ಕೆ ಮದ್ದು
ನಕಲಿ ವೈದ್ಯರಲ್ಲಿಗೆ ಹೋದರೆ ಸುಳ್ಳು ಸುಳ್ಳೇ ಯಾವುದೋ ದೊಡ್ಡ ಖಾಯಿಲೆ ನಿಮಗೆ ಬಂದಿದೆ ಎಂದು ನಂಬಿಸಿ ನೀರನ್ನೇ ಇಂಜೆಕ್ಷನ್ ಚುಚ್ಚಿ ಹಣ ಕೀಳುವವರ ಕಥೆ ನೀವು ಕೇಳಿರಬಹುದು. ಅಮೇರಿಕದ ಕೋಟ್ಯಾಧೀಶ ಸಂಗೀತ ಸಂಯೋಜಕರೊಬ್ಬರನ್ನು ಗಣಕ ತಂತ್ರಜ್ಷನೊಬ್ಬ ಹೀಗೇ ಮೋಸ ಮಾಡಿದ ಕಥೆ ವರದಿಯಾಗಿದೆ. ಡೇವಿಡ್ಸನ್ ಹೆಸರಿನ ಆ ಸಂಯೋಜಕರು ತಮ್ಮ ಗಣಕವನ್ನು ವಿಕ್ರಮ್ ಬೇಡಿ ಎಂಬಾತ ನಡೆಸುತ್ತಿದ್ದ ಗಣಕ ದುರಸ್ತಿ ಅಂಗಡಿಗೆ ತೆಗೆದುಕೊಂಡು ಹೋದರು. ತಮ್ಮ ಗಣಕದಲ್ಲಿರುವ ತಾನು ತಯಾರಿಸಿದ ಸಂಗೀತ ಸಂಯೋಜನೆಗಳನ್ನು ವೈರಸ್ ಹಾಳುಮಾಡಬಹುದೇನೋ ಎಂಬ ಭಯ ಅವರನ್ನು ಕಾಡುತ್ತಿತ್ತು. ಡೇವಿಡ್ಸನ್ ಅವರ ಅಮಾಯಕತೆಯನ್ನು ಅರಿತ ವಿಕ್ರಮ್ ಬೇಡಿ ಅವರನ್ನು ಬೆದರಿಸಿ, ನಿಮ್ಮ ಗಣಕದಲ್ಲಿ ವೈರಸ್ ಇದೆ, ಅದು ಯಾವುದೋ ದುಷ್ಟ ಕೂಟಕ್ಕೆ ನಿಮ್ಮನ್ನು ಸಂಪರ್ಕಿಸಿದೆ, ನಿಮ್ಮ ಗಣಕದ ವೈರಸ್‌ನಿಂದಾಗಿ ನನ್ನ ಅಂಗಡಿಯಲ್ಲಿರುವ ಎಲ್ಲ ಗಣಕಗಳು ಹಾಳಾಗಿವೆ, ಇನ್ನೂ ಏನೇನೋ ಸುಳ್ಳು ಹೇಳಿ ಬೆದರಿಸಿ ಅವರಿಂದ ಹಣ ಕಿತ್ತ. ಅದೂ ಕಡಿಮೆಯೇನಲ್ಲ, ಸುಮಾರು ೨೦ ಮಿಲಿಯ ಡಾಲರುಗಳು. ಈಗ ವಿಕ್ರಮ್ ಬೇಡಿ ಸೆರೆಯಲ್ಲಿದ್ದಾನೆ.
e- ಪದ
ಕರ್ನಿಂಗ್ (kerning) - ಪುಟವಿನ್ಯಾಸದಲ್ಲಿ(ಡಿಟಿಪಿ) ಬಳಕೆಯಾಗುವ ಪದ. ಮುಖ್ಯವಾಗಿ ಇಂಗ್ಲಿಶ್ ಭಾಷೆಯ ಪುಟವಿನ್ಯಾಸದಲ್ಲಿ ಮಾತ್ರ ಇದರ ಬಳಕೆಯಾಗುತ್ತದೆ. ಇಂಗ್ಲಿಶ್ ಭಾಷೆಯಲ್ಲಿ ಕೆಲವು ಅಕ್ಷರಗಳು ಉದಾ- V ಮತ್ತು A ಪಕ್ಕ ಪಕ್ಕ ಬಂದಾಗ, A ಅಕ್ಷರದ ಎಡಭಾಗ V ಅಕ್ಷರದ ಬಲಭಾಗದಲ್ಲಿ ಸ್ವಲ್ಪ ಒಳಕ್ಕೆ ಹೋಗಬಲ್ಲುದು. ಹೀಗೆ ಹೋಗುವಂತೆ ಮಾಡುವುದಕ್ಕೆ ಕರ್ನಿಂಗ್ ಎನ್ನುತ್ತಾರೆ.
e - ಸಲಹೆ
ಷಣ್ಮುಖ ಅವರ ಪ್ರಶ್ನೆ: ನಾನು ಇತ್ತೀಚೆಗೆ ಒಂದು ಆಪಲ್ ಐಫೋನ್ ಕೊಂಡುಕೊಂಡಿದ್ದೇನೆ. ಅದಕ್ಕೆ ನನಗೆ ಹಾಡುಗಳನ್ನು ಸೇರಿಸಲು ಉಚಿತ ತಂತ್ರಾಂಶ ಬೇಕಾಗಿದೆ. ಎಲ್ಲಿ ಸಿಗುತ್ತದೆ?
ಉ: ನೀವು ಆಪಲ್ ಕಂಪೆನಿಯದ್ದೇ ಐಟ್ಯೂನ್ ಬಳಸಬಹುದು. ಇದು ದೊರೆಯುವ ಜಾಲತಾಣ http://bit.ly/9FVoeI.
ಕಂಪ್ಯೂತರ್ಲೆ
ಗಣಕವಚನ
ಫೇಸ್‌ಬುಕ್‌ನಲ್ಲಿ ಖಾತೆ ತೆರೆದು ಗೋಡೆಬರಹಗಳಿಗೆ ಅಂಜಿದೊಡೆಂತಯ್ಯಾ?
ಆರ್ಕುಟ್‌ನಲ್ಲಿದ್ದುಕೊಂಡು ಸ್ಕ್ರಾಪ್ ಬರಹಗಳಿಗೆ ಅಂಜಿದೊಡೆಂತಯ್ಯಾ?
ಕಂಪ್ಯೂಟರ್ ಕೊಂಡುಕೊಂಡು ವೈರಸ್‌ಗಳಿಗೆ ಅಂಜಿದೊಡೆಂತಯ್ಯಾ?
Articles from the weekly column in Kannada Prabha, Kannada daily, by Dr U B Pavanaja, on information technology, Internet, computer, software utilities, tech jokes, tips and tricks, terms, etc.
ಸೋಮವಾರ, ನವೆಂಬರ್ 15, 2010
ಬುಧವಾರ, ನವೆಂಬರ್ 10, 2010
ಗಣಕಿಂಡಿ - ೦೭೭ (ನವಂಬರ್ ೦೮, ೨೦೧೦)
ಅಂತರಜಾಲಾಡಿ
ಸಿರಿನುಡಿ
ಕನ್ನಡ ಭಾಷೆಗೆ ಸರಿಸುಮಾರು ಎರಡು ಸಹಸ್ರ ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆ ತುಂಬ ಶ್ರೀಮಂತ ಭಾಷೆ. ಈ ಭಾಷೆಯಲ್ಲಿ ಅತ್ಯನ್ನತ ಮಟ್ಟದ ಸಹಸ್ರಾರು ಸಾಹಿತ್ಯ ರಚನೆಯಾಗಿದೆ. ಕನ್ನಡ ಸಾಹಿತ್ಯವನ್ನು ಅಂತರಜಾಲದಲ್ಲಿ ಸೇರಿಸುವ ಕೆಲಸ ಮಾತ್ರ ಅಲ್ಲಲ್ಲಿ ಅಷ್ಟಿಟ್ಟು ಪ್ರಾತಿನಿಧಿಕವಾಗಿ ಆಗಿದೆಯಷ್ಟೆ. ಅಂತಹ ಒಂದು ಜಾಲತಾಣ www.sirinudi.org. ಇದರಲ್ಲಿ ಕನ್ನಡ ಭಾಷೆಯ ಹಲವಾರು ಸಾಹಿತ್ಯ ಕೃತಿಗಳನ್ನು ಓದಬಹುದು. ಕನ್ನಡ ಭಾಷೆ ನಿಜಕ್ಕೂ ಜನರಿಗೆ ಉಪಯುಕ್ತ ಭಾಷೆಯಾಗಬೇಕಾದರೆ ಕನ್ನಡ ಭಾಷೆಯಲ್ಲಿ ಆಧುನಿಕ ವಿಜ್ಞಾನ ತಂತ್ರಜ್ಞಾನದ ಎಲ್ಲ ವಿಷಯಗಳೂ ಪ್ರತಿಬಿಂಬಿತವಾಗಬೇಕು. ಈ ಉದ್ದೇಶದಿಂದ ಪ್ರಾರಂಭವಾದ ಕನ್ನಡ ಭಾಷೆಯ ಪ್ರಪ್ರಥಮ ವಿಜ್ಞಾನ ಪತ್ರಿಕೆಯ ಸಂಚಿಕೆಗಳನ್ನು ಈ ಜಾಲತಾಣದಲ್ಲಿ ಓದಬಹುದು. ಹಾಗೆಯೇ ಅಡಿಗರು ಪ್ರಾರಂಭಿಸಿದ ಸಾಕ್ಷಿ ಪತ್ರಿಕೆಯ ಸಂಚಿಕೆಗಳೂ ಇಲ್ಲಿವೆ.
ಡೌನ್‌ಲೋಡ್
ಗಣಕ ಸ್ವಚ್ಛ ಮಾಡಿ
ಗಣಕದಲ್ಲಿ ತಂತ್ರಾಂಶಗಳನ್ನು ಮತ್ತೆ ಮತ್ತೆ ಇನ್‌ಸ್ಟಾಲ್ ಮತ್ತು ಅನ್‌ಇನ್‌ಸ್ಟಾಲ್ ಮಾಡಿದರೆ ಕೆಲವೊಮ್ಮೆ ತಂತ್ರಾಂಶಗಳು ಪೂರ್ತಿಯಾಗಿ ತೆಗೆಯಲ್ಪಡುವುದಿಲ್ಲ. ಹಾಗೆ ಆಗುತ್ತ ಗಣಕ ನಿಧಾನವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಗಣಕದಲ್ಲೇ ಇರುವ ಅನ್‌ಇನ್‌ಸ್ಟಾಲ್ ಸವಲತ್ತು ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬರುವುದಿಲ್ಲ. ಎಷ್ಟು ಪ್ರಯತ್ನ ಮಾಡಿದರೂ ತನ್ನ ಪಳೆಯುಳಿಕೆಯನ್ನು ಬಿಟ್ಟುಕೊಡದ ತಂತ್ರಾಂಶದ ಅವಶೇಷಗಳನ್ನು ತೆಗೆಯುವುದು ಅಷ್ಟು ಸುಲಭವಲ್ಲ. ತಂತ್ರಾಂಶಗಳನ್ನು ಯಾವುದೇ ಅವಶೇಷವಿಲ್ಲದೆ ಸ್ವಚ್ಛವಾಗಿ ತೆಗೆದುಹಾಕುವ ತಂತ್ರಾಂಶ Revo Uninstaller. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/bPK5Fb. ಇಲ್ಲಿ ನಿಮಗೆ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳು ಲಭ್ಯ.
e - ಸುದ್ದಿ
ಆರ್ಕುಟ್ ಭಗ್ನಪ್ರೇಮಿ
ಭಗ್ನಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಹಳೆಯ ಕಥೆ. ಅದರ ಬಗ್ಗೆ ರೀಲುಗಟ್ಟಲೆ ಸಿನಿಮಾ ಮಾಡಿ ಆಗಿದೆ. ಇತ್ತೀಚೆಗೆ ನಮ್ಮದೇ ಭಾರತ ದೇಶದ ತ್ರಿಪುರಾ ರಾಜ್ಯದಿಂದ ವರದಿಯಾದ ಕಥೆ ಸ್ವಲ್ಪ ಆಧುನಿಕವಾಗಿದೆ. ಇದನ್ನು ಆರ್ಕುಟ್ ಭಗ್ನಪ್ರೇಮದ ಕಥೆ ಎನ್ನಬಹುದು. ವೈದ್ಯಕೀಯ ವಿದ್ಯಾರ್ಥಿ ರೂಪಕ್ ಆರ್ಕುಟ್‌ನಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿದ್ದ. ಆಕೆ ಈತನನ್ನು ಕಡೆಗಣಿಸುತ್ತಿದ್ದಾಳೆ ಎಂದು ನೊಂದುಕೊಂಡ ಆತ ಆತ್ಮಹತ್ಯೆ ಮಾಡಿಕೊಂಡ. ಸ್ವಾರಸ್ಯವೆಂದರೆ ಆತ ಆಕೆಯನ್ನು ಒಮ್ಮೆಯೂ ಮುಖತಃ ಭೇಟಿ ಆಗಿರಲಿಲ್ಲ. ಕೊಲ್ಕತ್ತಾ ಮೂಲದ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಆಕೆಯನ್ನು ಎರಡು ವರ್ಷಗಳ ಹಿಂದೆ ಆತ ಆರ್ಕುಟ್‌ನಲ್ಲಿ ಭೇಟಿಯಾಗಿದ್ದ.
e- ಪದ
ಚತುರವಾಣಿ (ಸ್ಮಾರ್ಟ್‌ಫೋನ್ - smartphone) - ಮೊಬೈಲ್ ಫೋನಿನ ಕೆಲಸಗಳನ್ನೂ ಮಾಡಬಲ್ಲ ಕಿಸೆಗಣಕ. ಇತ್ತೀಚೆಗೆ ಇಂತಹ ಫೋನುಗಳು ಅಗ್ಗವಾಗುತ್ತ ಜನಸಾಮಾನ್ಯರ ಕೈಗೆಟುಕುವಂತಾಗುತ್ತಿವೆ. ಈ ಫೋನುಗಳಲ್ಲಿ ಅಂತರಜಾಲ ನೋಡುವುದು, ಇಮೈಲ್ ಮಾಡುವುದು, ಪದಸಂಸ್ಕರಣೆ, ಜಿಪಿಎಸ್ ಬಳಸಿ ತಾನು ಇರುವ ಸ್ಥಾನ ತಿಳಿಯುವುದು, ಇನ್ನೂ ಏನೇನೋ ಮಾಡಬಹುದು. ಇಂತಹ ಫೋನುಗಳಿಗೆ ಸಹಸ್ರಾರು ತಂತ್ರಾಂಶಗಳು ಅಂತರಜಾಲದಲ್ಲಿ ಲಭ್ಯವಿವೆ. ಇವುಗಳು ಕೆಲಸ ಮಾಡಲು ಆಂಡ್ರೋಯಿಡ್, ವಿಂಡೋಸ್ ಫೋನ್, ಐಓಎಸ್, ಇತ್ಯಾದಿ ಯಾವುದಾದರೊಂದು ಕಾರ್ಯಾಚರಣೆಯ ವ್ಯವಸ್ಥೆ ಅಗತ್ಯ.
e - ಸಲಹೆ
ಗಿರೀಶ್ ಅವರ ಪ್ರಶ್ನೆ: ನನ್ನ ಗಣಕದ ಡೆಸ್ಕ್‌ಟಾಪ್ ಮೇಲೆ ಇರುವ ಎಲ್ಲ ಐಕಾನ್‌ಗಳು ತುಂಬ ಚಿಕ್ಕದಾಗಿವೆ. ಆವನ್ನು ದೊಡ್ಡದಾಗಿಸುವುದು ಹೇಗೆ? ನಾನು ವಿಂಡೋಸ್೭ ಬಳಸುತ್ತಿದ್ದೇನೆ.
ಉ: ಎಲ್ಲ ತಂತ್ರಾಂಶಗಳ ಕಿಟಿಕಿಗಳನ್ನು ಕಿರಿದಾಗಿಸಿ ಅಂದರೆ ಕೇವಲ ಡೆಸ್ಕ್‌ಟಾಪ್ ಮಾತ್ರ ಇರುವಂತೆ ಮಾಡಿ. ಈಗ Ctrl-A ಒತ್ತುವ ಮೂಲಕ ಎಲ್ಲ ಐಕಾನ್‌ಗಳನ್ನು ಆಯ್ಕೆ ಮಾಡಿ. ನಂತರ Ctrl ಕೀಲಿಯನ್ನು ಒತ್ತಿ ಹಿಡಿದುಕೊಂಡು ಮೌಸ್‌ನ ಚಕ್ರವನ್ನು ತಿರುಗಿಸಿ.
ಕಂಪ್ಯೂತರ್ಲೆ
ಕೋಲ್ಯನಲ್ಲಿ ಇರುವ ಫೋನಿನಲ್ಲಿ ಕನ್ನಡ ಅಕ್ಷರಗಳು ಮೂಡಿಬರುತ್ತಿರಲಿಲ್ಲ. ನವಂಬರ್ ತಿಂಗಳು ಬಂದಿದೆ. ಮೊಬೈಲ್ ಫೋನಿನಲ್ಲಿ ಕನ್ನಡ ಮೂಡಿಬರದಿದ್ದರೆ ಚೆನ್ನಾಗಿರುವುದಿಲ್ಲ ತಾನೆ? ಆತ ಕಾಗದದಲ್ಲಿ ಕನ್ನಡ ಎಂದು ಬರೆದು ಅದನ್ನು ಕತ್ತರಿಸಿ ಫೋನಿಗೆ ಅಂಟಿಸಿ ಎಲ್ಲರಿಗೂ “ನನ್ನ ಫೋನಿನಲ್ಲಿ ಕನ್ನಡ ಕಾಣಿಸುತ್ತಿದೆ” ಎಂದು ತೋರಿಸಿದ.

ಸೋಮವಾರ, ನವೆಂಬರ್ 1, 2010
ಗಣಕಿಂಡಿ - ೦೭೬ (ನವಂಬರ್ ೦೧, ೨೦೧೦)
ಅಂತರಜಾಲಾಡಿ
ಕಂಪ್ಯೂನಲ್ಲಿಕನ್ನಡ
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಬೆಳೆಯಬೇಕಾಗಿದೆ. ಗಣಕದಲ್ಲಿ ಕನ್ನಡ ಬಳಕೆಯ ಬಗ್ಗೆ ಜನರಲ್ಲಿ ಹಲವಾರು ಸಂಶಯಗಳಿರುತ್ತವೆ. ಹಾಗೆಯೇ ಗಣಕ ಮತ್ತು ಅಂತರಜಾಲ ಬಳಕೆ ಬಗ್ಗೆ ಕನ್ನಡದಲ್ಲಿ ಮಾಹಿತಿ ಜನರಿಗೆ ಬೇಕಾಗಿದೆ. ಮಾಹಿತಿ ತಂತ್ರಜ್ಞಾನವೆಂದರೆ ಕೇವಲ ಗಣಕ ಮತ್ತು ಅಂತರಜಾಲವಲ್ಲ. ಮೊಬೈಲ್ ಫೋನು ಕೂಡ ಈ ಪಟ್ಟಿಗೆ ಸೇರುತ್ತದೆ. ೨೧ನೆಯ ಶತಮಾನದಲ್ಲಿ ಕನ್ನಡ ಉಳಿದು ಬೆಳೆಯಬೇಕಾದರೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ವ್ಯಾಪಕವಾಗಿ ಆಗಬೇಕು. ಈ ಆಶಯಗಳಿಗೆ ಪೂರಕವಾಗಿರುವ ಒಂದು ಜಾಲತಾಣ compuinkannada.co.cc. ಈ ಜಾಲತಾಣದಲ್ಲಿ ಕನ್ನಡ ಭಾಷೆಯಲ್ಲಿ ಮಾಹಿತಿ ತಂತ್ರಜ್ಞಾನದ ವಿವಿಧ ಅಂಗಗಳ ಬಗ್ಗೆ ಲೇಖನ, ಟ್ಯುಟೋರಿಯಲ್, ಉಚಿತ ತಂತ್ರಾಂಶ ಎಲ್ಲ ಇವೆ.
ಡೌನ್‌ಲೋಡ್
ಆಂಡ್ರೋಯಿಡ್‌ಗೆ ತಂತ್ರಾಂಶ
ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿರುವ ಮೊಬೈಲ್ ಫೋನ್ ಕಾರ್ಯಾಚರಣೆಯ ವ್ಯವಸ್ಥೆ ಆಂಡ್ರೋಯಿಡ್. ಇದು ಗೂಗಲ್‌ನವರು ಬಿಡುಗಡೆ ಮಾಡಿದ ಕಾರ್ಯಾಚರಣೆಯ ವ್ಯವಸ್ಥೆ. ಇವುಗಳನ್ನು ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಎಂದು ಕರೆಯಲಾಗುವ ಮೊಬೈಲ್ ಫೋನ್‌ಗಳಲ್ಲಿ ಬಳಸುತ್ತಾರೆ. ಈ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಕೆಲಸ ಮಾಡುವ ತಂತ್ರಾಂಶಗಳು ಲಕ್ಷದಷ್ಟಿವೆ. ಇವುಗಳಲ್ಲಿ ಎಂದಿನಂತೆ ಉಚಿತ ಮತ್ತು ವಾಣಿಜ್ಯಕ ಎಂಬ ವಿಭಾಗಗಳಿವೆ. ಈ ಆಂಡ್ರೋಯಿಡ್ ಫೋನ್ ತಂತ್ರಾಂಶಗಳು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.android.com. ಈ ಜಾಲತಾಣವನ್ನು ಗಣಕದ ಮೂಲಕ ಅಥವಾ ನಿಮ್ಮ ಆಂಡ್ರೋಯಿಡ್ ಫೋನ್ ಮೂಲಕವೂ ಪ್ರವೇಶಿಸಬಹುದು.
e - ಸುದ್ದಿ
ಉತ್ತಮ ಕಳ್ಳ
ಸ್ವೀಡನ್ ದೇಶದ ಪ್ರೊಫೆಸರ್ ಒಬ್ಬರು ತಮ್ಮ ಗಣಕವಿದ್ದ ಚೀಲವನ್ನು ತಮ್ಮ ಕಟ್ಟಡದ ಮೆಟ್ಟಿಲ ಬಳಿ ಇಟ್ಟು ಬಟ್ಟೆ ತೊಳೆಯುವ ಯಂತ್ರದ ಬಳಿಗೆ ಹೋಗಿದ್ದರು. ವಾಪಾಸು ಬಂದಾಗ ಅವರ ಚೀಲ ಕಳವಾಗಿತ್ತು. ಅವರು ಕೂಡಲೆ ಪೋಲೀಸರಿಗೆ ತಿಳಿಸಿದರು. ಒಂದು ಘಂಟೆಯ ನಂತರ ನೋಡಿದಾಗ ಅವರು ಚೀಲ ಇಟ್ಟ ಜಾಲಗದಲ್ಲಿ ಅವರ ಚೀಲ ಪ್ರತ್ಯಕ್ಷವಾಗಿತ್ತು. ಅದರಲ್ಲಿದ್ದ ಕ್ರೆಡಿಟ್ ಕಾರ್ಡ್, ಫೋನ್, ಡೈರಿ, ಇತ್ಯಾದಿ ವಸ್ತುಗಳು ಸುರಕ್ಷಿತವಾಗಿದ್ದವು. ಆದರೆ ಅವರ ಲ್ಯಾಪ್‌ಟಾಪ್ ಮಾತ್ರ ಇರಲಿಲ್ಲ. ಸುಮಾರು ಒಂದು ವಾರದ ನಂತರ ಅವರಿಗೆ ಒಂದು ಪ್ಯಾಕೆಟ್ ಕೋರಿಯರ್ ಮೂಲಕ ಬಂತು. ಅದರಲ್ಲಿ ಒಂದು ಯುಎಸ್‌ಬಿ ಡ್ರೈವ್ ಇತ್ತು. ಅದನ್ನು ಪರಿಶೀಲಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅವರ ಲ್ಯಾಪ್‌ಟಾಪ್‌ನಲ್ಲಿ ಇದ್ದ ಅವರಿಗೆ ಅಗತ್ಯವಾಗಿದ್ದ ಎಲ್ಲ ಮಾಹಿತಿಗಳು ಆ ಯುಎಸ್‌ಬಿ ಡ್ರೈವ್‌ನಲ್ಲಿದ್ದವು. ಕಳ್ಳರಲ್ಲೂ ಒಳ್ಳೆಯವರಿರುತ್ತಾರೆ ಅಲ್ಲವೇ?
e- ಪದ
ಆಂಡ್ರೋಯಿಡ್ (Android) - ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವ ಒಂದು ವಿಧದ ಕಾಯಾಚರಣೆಯ ವ್ಯವಸ್ಥೆ. ಇದು ಮೂಲತಃ ಮುಕ್ತ ತಂತ್ರಾಂಶವಾದ ಲಿನಕ್ಸ್‌ನಿಂದ ವಿಕಾಸವಾದುದು. ೨೦೦೫ರಲ್ಲಿ ಇದೇ ಹೆಸರಿನ ಕಂಪೆನಿ ಇದನ್ನು ಪ್ರಥಮವಾಗಿ ತಯಾರು ಮಾಡಿತು. ನಂತರ ಗೂಗಲ್ ಈ ಕಂಪೆನಿಯನ್ನು ಕೊಂಡುಕೊಂಡು ಮುಕ್ತವಾಗಿ ಬಿಡುಗಡೆ ಮಾಡಿದೆ. ಈಗ ಪ್ರಪಂಚದ ಸುಮಾರು ಶೇಕಡ ೨೦ ಸ್ಮಾರ್ಟ್‌ಫೋನ್‌ಗಳು ಈ ಕಾರ್ಯಾಚರಣೆಯ ವ್ಯವಸ್ಥೆಯನ್ನು ಬಳಸುತ್ತವೆ. ಈ ನಮೂನೆಯ ಫೋನುಗಳಲ್ಲಿ ಅಂತರಜಾಲ ಸಂಪರ್ಕ, ಇಮೈಲ್, ಜಿಪಿಎಸ್, ಇತ್ಯಾದಿ ಎಲ್ಲ ಸೌಲಭ್ಯಗಳಿರುತ್ತವೆ.
e - ಸಲಹೆ
ಆಂಡ್ರೋಯಿಡ್ ಫೋನಿನಲ್ಲಿ ಕನ್ನಡ
ಆಂಡ್ರೋಯಿಡ್ ಫೋನಿನಲ್ಲಿ ಕನ್ನಡ ಯುನಿಕೋಡ್ ಜಾಲತಾಣ ವೀಕ್ಷಣೆ ಮಾಡಬೇಕೇ? ಅದಕ್ಕಾಗಿ ನೀವು ಪ್ರಥಮವಾಗಿ ಒಪೆರಾ ಮಿನಿ ಎಂಬ ಜಾಲತಾಣ ವೀಕ್ಷಣೆಯ ತಂತ್ರಾಂಶವನ್ನು ಆಂಡ್ರೋಯಿಡ್ ಜಾಲತಾಣದಿಂದ ಫೋನಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಜಾಲತಾಣದ ವಿಳಾಸ ನಮೂದಿಸುವ ಜಾಗದಲ್ಲಿ about:config ಎಂದು ಟೈಪಿಸಬೇಕು. ಅಲ್ಲಿ ಮೂಡಿಬರುವ ಆಯ್ಕೆಗಳಲ್ಲಿ Use bitmap fonts for complex scripts ಎಂದು ಆಯ್ಕೆ ಮಾಡಿಕೊಳ್ಳಬೇಕು. ನಂತರ ಕನ್ನಡ ಯುನಿಕೋಡ್‌ನಲ್ಲಿರುವ ಜಾಲತಾಣಗಳ ವೀಕ್ಷಣೆ ಮಾಡಬಹುದು.
ಕಂಪ್ಯೂತರ್ಲೆ
ಐಟಿ ಮಂದಿ ಹಾಡು
ಮುದ್ದು ಕಂದನಾಗಿ ಹುಟ್ಟಿ ಕೀಬೋರ್ಡ್ ಮೌಸ್ ಕುಟ್ಟಿಕೊಂಡು
ಹಂಗೂ ಹಿಂಗೂ ಪ್ರೋಗ್ರಾಮ್ ಮಾಡಿ ಲೈಫು ಇಷ್ಟೇನೆ

ಸೋಮವಾರ, ಅಕ್ಟೋಬರ್ 25, 2010
ಗಣಕಿಂಡಿ - ೦೭೫ (ಅಕ್ಟೋಬರ್ ೨೫, ೨೦೧೦)
ಅಂತರಜಾಲಾಡಿ
ಕೃಷಿ ಮಾಧ್ಯಮ ಕೇಂದ್ರ
ಪತ್ರಿಕೆಗಳು ನೂರಾರಿವೆ. ಕೃಷಿಪರವಾಗಿರುವವೂ ಕೆಲವಿವೆ. ಕೃಷಿಪತ್ರಿಕೋದ್ಯಮದ ಬೆಳವಣಿಗೆಗೆ ಪೂರಕವಾಗಿ ಅಸ್ತಿತ್ವಕ್ಕೆ ಬಂದದ್ದು ಕೃಷಿ ಮಾಧ್ಯಮ ಕೇಂದ್ರ. ಈಗ ಇದಕ್ಕೆ ದಶಕದ ಸಂಭ್ರಮ. ಕೃಷಿ ಗ್ರಾಮೀಣ ಪತ್ರಿಕೋದ್ಯಮ ತರಬೇತಿ, ಕೃಷಿ ಪತ್ರಿಕೋದ್ಯಮ ಪ್ರಶಸ್ತಿ, ಅಭಿವೃದ್ಧಿ ಪತ್ರಿಕೋದ್ಯಮ ಕಾರ್ಯಾಗಾರ, ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪುಸ್ತಕ ಪ್ರಕಟಣೆ -ರೀತಿ ಹಲವಾರು ಚಟುವಟಿಕೆಗಳನ್ನು ಈ ಕೇಂದ್ರ ಹಮ್ಮಿಕೊಂಡಿದೆ. ಈ ಕೇಂದ್ರದ ಜಾಲತಾಣ krushimadhyama.org. ಈ ಜಾಲತಾಣ ಕನ್ನಡ ಹಾಗೂ ಇಂಗ್ಲಿಶ್ ಭಾಷೆಗಳಲ್ಲಿವೆ. ಕಾಮ್ ನ್ಯೂಸ್ ಹೆಸರಿನ ಸುದ್ದಿಪತ್ರಿಕೆಯ ಈಗಿನ ಮತ್ತು ಹಳೆಯ ಸಂಚಿಕೆಗಳನ್ನೂ ಇದೇ ಜಾಲತಾಣದಲ್ಲಿ ಓದಬಹುದು. ಅಂದ ಹಾಗೆ ಇದೇ ಅಕ್ಟೋಬರ್ ೨೮ರಂದು ಚಿಕ್ಕಮಗಳೂರಿನಲ್ಲಿ ಈ ಕೇಂದ್ರ ತನ್ನ ದಶಮಾನೋತ್ಸವವನ್ನು ಆಚರಿಸುತ್ತಿದೆ.
ಡೌನ್‌ಲೋಡ್
ಮುಕ್ತ ಆಫೀಸ್
ಎಲ್ಲರೂ ಉಚಿತ ಹಾಗೂ ಮುಕ್ತವಾಗಿ ಬಳಸಬಲ್ಲ ಆಫೀಸ್ ತಂತ್ರಾಂಶಗುಚ್ಛ openoffice. ಇದು ಸನ್‌ಮೈಕ್ರೋಸಿಸ್ಟಮ್ ಕಂಪೆನಿಗೆ ಸೇರಿತ್ತು. ಸನ್ ಕಂಪೆನಿಯನ್ನು ಅರೇಕಲ್ ಕಂಪೆನಿ ಕೊಂಡುಕೊಂಡಿತು. ಆಗ ಈ ಮುಕ್ತ ಆಫೀಸ್‌ಗೆ ತೊಂದರೆಯಾಯಿತು. ಈ ತಂತ್ರಾಂಶವನ್ನು ಮುಕ್ತವಾಗಿಯೇ ಮುಂದುವರಿಯಲು ಅದು ಅನುವು ಮಾಡಿಕೊಡುತ್ತದೆಯೇ ಎಂಬ ಅನುಮಾನ ಈ ತಂತ್ರಾಂಶಕ್ಕಾಗಿ ಕೆಲಸ ಮಾಡುತ್ತಿರುವವರಿಗೆ ಬಂತು. ಈಗ ಅವರೆಲ್ಲ ಸೇರಿ libreoffice ಎಂಬ ಹೊಸ ಹೆಸರಿನಲ್ಲಿ ಇದನ್ನು ಬಿಡುಗಡೆ ಮಾಡಲು ಪ್ರಾರಂಭಿಸಿದ್ದಾರೆ. ಇದು ದೊರೆಯುವ ಜಾಲತಾಣ www.documentfoundation.org. ಈ ಜಾಲತಾಣದಿಂದ ಕಾಲಕಾಲಕ್ಕೆ ಬಿಡುಗಡೆಯಾಗುವ ಹೊಸ ಹೊಸ ಆವೃತ್ತಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿಕೊಳ್ಳಬಹುದು.
e - ಸುದ್ದಿ
ಯುನಿಕೋಡ್‌ನಲ್ಲಿ ರೂಪಾಯಿ
ಭಾರತ ಸರಕಾರವು ನಮ್ಮ ಹಣ ರೂಪಾಯಿಗೆ ಒಂದು ಹೊಸ ಚಿಹ್ನೆಯನ್ನು ಘೋಷಿಸಿದ್ದು ಎಲ್ಲರಿಗೂ ನೆನಪಿರಬಹುದು. ಈ ಚಿಹ್ನೆ ಮಾಹಿತಿ ತಂತ್ರಜ್ಞಾನದ ಎಲ್ಲ ಕಡೆ ಬಳಕೆಗೆ ಬರಬೇಕಿದ್ದರೆ ಪ್ರಥಮವಾಗಿ ಇದು ಯುನಿಕೋಡ್‌ನಲ್ಲಿ ಅಳವಡಿಕೆಯಾಗಬೇಕು. ಸಂತಸದ ಸುದ್ದಿಯೇನೆಂದರೆ ಅಕ್ಟೋಬರ್ ೧೧ರಂದು ಘೋಷಿಸಲ್ಲಪಟ್ಟ ಯುನಿಕೋಡ್‌ನ ಆವೃತ್ತಿ ೬.೦ ರಲ್ಲಿ ಭಾರತದ ರೂಪಾಯಿ ಚಿಹ್ನೆಗೆ ಸ್ಥಾನ ನೀಡಲಾಗಿದೆ. ಇದರ ಯುನಿಕೋಡ್ ಸಂಕೇತಸ್ಥಾನ 20B9. ಫಾಂಟ್ ತಯಾರಕರು ಇನ್ನುಮುಂದೆ ಈ ಸ್ಥಾನದಲ್ಲಿ ಹೊಸ ರೂಪಾಯಿ ಚಿಹ್ನೆಯನ್ನು ಸೇರಿಸಬಹುದು. ಆದರೆ ಎಲ್ಲ ಕಾರ್ಯಾಚರಣೆಯ ವ್ಯವಸ್ಥೆ, ದತ್ತಸಂಗ್ರಹ (ಡಾಟಾಬೇಸ್) ತಂತ್ರಾಂಶಗಳಲ್ಲಿ ಈ ಚಿಹ್ನೆಯನ್ನು ಅಳವಡಿಸಿಕೊಳ್ಳಬೇಕಾದರೆ ಇನ್ನೂ ಕನಿಷ್ಠ ಒಂದು ವರ್ಷ ಕಾಲಾವಧಿ ಬೇಕು. ಅಂದಹಾಗೆ ತಮಿಳು, ಗುಜರಾತಿ ಹಾಗೂ ಬೆಂಗಾಳಿ ಭಾಷೆಯ ರೂಪಾಯಿ ಚಿಹ್ನೆಗಳಿಗೆ ಯುನಿಕೋಡ್‌ನಲ್ಲಿ ಪ್ರತ್ಯೇಕ ಜಾಗವಿದೆ. ಕನ್ನಡ ಲಿಪಿಯಲ್ಲಿ ತುಳು, ಕೊಡವ, ಬ್ಯಾರಿ, ಇತ್ಯಾದಿ ಭಾಷೆಗಳನ್ನು ಯುನಿಕೋಡ್‌ನಲ್ಲಿ ಸೇರಿಸುವ ಬಗ್ಗೆ ಯಾರೂ ಕೆಲಸ ಮಾಡುತ್ತಿಲ್ಲ.
e- ಪದ
ಜಾಹೀರಾತು ತಂತ್ರಾಂಶ (adware) -ಬಳಕೆದಾರರಿಗೆ ಉಚಿತವಾಗಿರುವ ಆದರೆ ಜಾಹೀರಾತುಗಳನ್ನು ಪ್ರದರ್ಶಿಸುವ ತಂತ್ರಾಂಶ. ಕೆಲವು ತಂತ್ರಾಂಶಗಳು ಬಳಕೆಗೇನೋ ಉಚಿತವಾಗಿ ದೊರೆಯುತ್ತವೆ. ಆದರೆ ಅವುಗಳನ್ನು ಬಳಸುವಾಗ ಜಾಹೀರಾತುಗಳನ್ನು ಪ್ರದರ್ಶಿಸುತ್ತವೆ. ಆ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿದರೆ ಅದು ನಿಮ್ಮನ್ನು ಸಂಬಂಧಪಟ್ಟ ಜಾಲತಾಣಕ್ಕೆ ಕರೆದೊಯ್ಯುತ್ತದೆ. ತಂತ್ರಾಂಶ ತಯಾರಿಯ ವೆಚ್ಚವನ್ನು ತಯಾರಕರು ಹೀಗೆ ಜಾಹೀರಾತುಗಳ ಮೂಲಕ ಪಡೆಯುತ್ತಾರೆ.
e - ಸಲಹೆ
ಸಂತೋಷಕುಮಾರರ ಪ್ರಶ್ನೆ: ಕನ್ನಡ ಭಾಷೆಯ e-ಪುಸ್ತಕಗಳ ಜಾಲತಾಣ ಇದೆಯೇ?
ಉ: ಕೇಂದ್ರ ಸರಕಾರದ ವಿದ್ಯನ್ಮಾನ ಗ್ರಂಥಾಲಯ ಜಾಲತಾಣದಲ್ಲಿ ಹಲವಾರು ಕನ್ನಡ ಪುಸ್ತಕಗಳಿವೆ. ಅದರ ವಿಳಾಸ www.dli.ernet.in.
ಕಂಪ್ಯೂತರ್ಲೆ
ಕೋಲ್ಯನ ಹುಟ್ಟುಹಬ್ಬಕ್ಕೆ ಯಾರೋ ಕೇಕ್‌ನ ಚಿತ್ರವನ್ನು ಶುಭಾಶಯವೆಂದು ಇಮೈಲ್ ಮೂಲಕ ಕಳುಹಿಸಿದ್ದರು. ಕೋಲ್ಯ ಅದನ್ನು ಮುದ್ರಿಸಿ ತಿನ್ನಲು ಹೊರಟ!

ಸೋಮವಾರ, ಅಕ್ಟೋಬರ್ 18, 2010
ಗಣಕಿಂಡಿ - ೦೭೪ (ಅಕ್ಟೋಬರ್ ೧೮, ೨೦೧೦)
ಅಂತರಜಾಲಾಡಿ
ಮೊಬೈಲ್‌ಫೋನು ಕೊಳ್ಳಬೇಕೇ?
ಒಂದು ಕಾಲವಿತ್ತು. ಮೊಬೈಲ್ ಫೋನ್ ಎಂದರೆ ಯಾರಿಗಾದರು ಕರೆ ಮಾಡುವುದು, ಯಾರಾದರು ಕರೆ ಮಾಡಿದರೆ ಮಾತನಾಡುವುದು, ಎಸ್‌ಎಂಎಸ್ ಕಳುಹಿಸುವುದು -ಇವಿಷ್ಟೆ ಮೊಬೈಲ್ ಫೋನಿನ ಕೆಲಸಗಳಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಮೊಬೈಲ್ ಫೋನು ಒಂದು ಕಿಸೆಗಣಕವಾಗಿ ಪರಿವರ್ತಿತವಾಗಿದೆ. ಅದರಲ್ಲಿ ಇಮೈಲ್, ಅಂತರಜಾಲ ವೀಕ್ಷಣೆ, ಕ್ಯಾಮರಾ ಬಳಸಿ ಫೋಟೋ ತೆಗೆಯುವುದು, ಬ್ಯಾಂಕಿಂಗ್, ತಾವಿರುವ ಸ್ಥಳದ ಮ್ಯಾಪ್ ನೋಡುವುದು, ಹೀಗೆ ಇನ್ನೂ ಏನೇನೋ ಮಾಡಬಹುದಾಗಿದೆ. ಫೋನಿನ ಗುಣಲಕ್ಷಣಗಳಿಗನುಗುಣವಾಗಿ ಬೆಲೆಯಲ್ಲೂ ವ್ಯತ್ಯಾಸವಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಿರಾರು ಫೋನುಗಳಲ್ಲಿ ಯಾವುದನ್ನು ಕೊಳ್ಳುವುದು, ಯಾವ ಫೋನಿನಲ್ಲಿ ಯಾವ ಸೌಲಭ್ಯಗಳಿವೆ ತಿಳಿಯುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯುವ ಜಾಲತಾಣ www.fonearena.com.
ಡೌನ್‌ಲೋಡ್
ರೇಡಿಯೋ ಆಲಿಸಿರಿ
ಕಾಲ ಬದಲಾದಂತೆ ರೇಡಿಯೋವೂ ಬದಲಾಗಿದೆ. ಈಗ ಅಂತರಜಾಲದಲ್ಲಿ ಹಲವಾರು ರೇಡಿಯೋ ಕೇಂದ್ರಗಳಿವೆ. ಅವುಗಳ ಜಾಲತಾಣ ವಿಳಾಸ ತಿಳಿದಿದ್ದರೆ ಬ್ರೌಸರ್ ಮೂಲಕ ಅವುಗಳನ್ನು ಆಲಿಸಬಹುದು. ಇನ್ನೂ ಸರಳ ವಿಧಾನವೆಂದರೆ ಈ ಜಾಲತಾಣಗಳನ್ನು ತೆರೆದು ರೇಡಿಯೋ ಆಲಿಸಲು ಅನುವು ಮಾಡಿಕೊಡುವ ತಂತ್ರಾಂಶದ ಬಳಕೆ. ಇಂತಹ ತಂತ್ರಾಂಶಗಳೂ ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ TapinRadio. ಇದು ತುಂಬ ಸರಳವಾಗಿದೆ. ಪ್ರಪಂಚದ ಸಾವಿರಾರು ರೇಡಿಯೋ ಜಾಲತಾಣಗಳಿಗೆ ಸೂಚಿ ಇದರಲ್ಲಿದೆ. ರೇಡಿಯೋ ಆಲಿಸುವುದು ಮಾತ್ರವಲ್ಲದೆ ಕಾರ್ಯಕ್ರಮಗಳನ್ನು ಮುದ್ರಿಸಿಕೊಳ್ಳುವ ಸವಲತ್ತೂ ಈ ತಂತ್ರಾಂಶದಲ್ಲಿದೆ. ಈ ಉಚಿತ ತಂತ್ರಾಂಶ ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/derkS3.
e - ಸುದ್ದಿ
ಟ್ವಿಟ್ಟರ್ ಮದುವೆ
ಅಂತರಜಾಲದಲ್ಲಿ ಚರ್ಚಾವೇದಿಕೆಗಳಲ್ಲಿ ಅಥವಾ ಬ್ಲಾಗ್‌ತಾಣಗಳಲ್ಲಿ ಭೇಟಿಯಾಗಿ ಪ್ರೇಮದಲ್ಲಿ ಪರಿವರ್ತನೆಯಾಗಿ ಮದುವೆಯಲ್ಲಿ ಅಂತ್ಯವಾಗುವುದು ಹೊಸದೇನಲ್ಲ. ಅದರದೇ ಮುಂದುವರಿದ ಅಧ್ಯಾಯ ಟ್ವಿಟ್ಟರ್. ಪಾಲ್ ಮತ್ತು ಸಾಯಿರಾ ಅವರು ಟ್ವಿಟ್ಟರ್‌ನಲ್ಲಿ ಯಾವಾಗಲೂ ಒಬ್ಬರನ್ನೊಬ್ಬರು ಹಿಂಬಾಲಿಸುತ್ತಿದ್ದರು, ಒಬ್ಬರಿಗೊಬ್ಬರು ಟ್ವೀಟ್ ಮಾಡುತ್ತಿದ್ದರು. ಹೀಗೆ ಮುಂದುವರಿದು ಕೊನೆಗೆ ಮದುವೆಯೂ ಆದರು. ಅಷ್ಟೇ ಅಲ್ಲ. ಈ ಮದುವೆಯ ಆಹ್ವಾನ, ಮದುವೆ ನಡೆದಾಗ ಎಲ್ಲ ನಡಾವಳಿಗಳು ಎಲ್ಲ ಟ್ವಿಟ್ಟರ್ ಮೂಲಕವೇ ಜರುಗಿದವು.
e- ಪದ
ಸೈಮಲ್‌ಕಾಸ್ಟ್ (Simulcast =simultaneous broadcast) - ಏಕಕಾಲದಲ್ಲಿ ಹಲವಾರು ವಿಧಾನಗಳಲ್ಲಿ ಬಹುಮಾಧ್ಯಮ ಕಾರ್ಯಕ್ರಮದ ಪ್ರಸಾರ. ಈ ಹಲವಾರು ವಿಧಾನಗಳಲ್ಲಿ ರೇಡಿಯೋ, ಟಿವಿ, ಅಂತರಜಾಲ, ಎಫ್‌ಎಂ, ಉಪಗ್ರಹ ಮೂಲಕ ಪ್ರಸಾರ ಎಲ್ಲ ಸೇರಿವೆ.
e - ಸಲಹೆ
ಜಗದೀಶರ ಪ್ರಶ್ನೆ: IMEI ಹಾಗೂ ಮೊಬೈಲ್ ಹ್ಯಾಂಡ್ ಸೆಟ್ ಸಂಖ್ಯೆಯ ಆಧಾರದ ಮೇಲೆ ಕಳೆದುಹೊದ ಮೊಬೈಲ್‌ಅನ್ನು ಪತ್ತೆ ಹಚ್ಚಲು ಯಾವುದಾದರೂ ಜಾಲತಾಣ ಇದೆಯೇ? ಇದ್ದರೆ ಈ ಬಗ್ಗೆ ಮಾಹಿತಿ ನೀಡಬೇಕಾಗಿ ವಿನಂತಿ.
ಉ: trackimei.com
ಕಂಪ್ಯೂತರ್ಲೆ
ಫ್ಲಾಪಿ ಹೋಯ್ತು ಸಿ.ಡಿ. ಬಂತು ಡುಂ ಡುಂ
ಸಿ.ಡಿ. ಹೋಯ್ತು ಡಿ.ವಿ.ಡಿ. ಬಂತು ಡುಂ ಡುಂ
ಡಿ.ವಿ.ಡಿ. ಹೋಯ್ತು ಯು.ಎಸ್.ಬಿ ಬಂತು ಡುಂ ಡುಂ

ಲೇಬಲ್ಗಳು:
ಟ್ವಿಟ್ಟರ್,
ಮೊಬೈಲ್ ಫೋನ್,
ರೇಡಿಯೋ,
IMEI,
Simulcast
ಸೋಮವಾರ, ಅಕ್ಟೋಬರ್ 11, 2010
ಗಣಕಿಂಡಿ - ೦೭೩ (ಅಕ್ಟೋಬರ್ ೧೧, ೨೦೧೦)
ಅಂತರಜಾಲಾಡಿ
ಕಾನೂನು ಮಾತನಾಡಿ
ಕಾನೂನು ಎಲ್ಲರಿಗೂ ಬೇಕು. ಆದರೆ ಕಾನೂನುಗಳ ಬಗ್ಗೆ ಎಷ್ಟು ಜನರಿಗೆ ಸರಿಯಾದ ಮಾಹಿತಿ ಇದೆ? ಕಾನೂನು ಪುಸ್ತಕಗಳೇನೋ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವನ್ನು ಓದಿ ಅರ್ಥಮಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ವಕೀಲರೇ ಆಗಬೇಕು. ಜನಸಾಮಾನ್ಯರಿಗೆ ಕಾನೂನುಗಳ ಬಗ್ಗೆ ಮಾಹಿತಿ ನೀಡುವ ಜಾಲತಾಣ www.lawisgreek.com. ಕಾನೂನು ಗ್ರೀಕ್ ಭಾಷೆ ಆಗಬೇಕಾಗಿಲ್ಲ, ಎಲ್ಲರಿಗೂ ಅರ್ಥವಾಗಬೇಕು ಎಂಬ ಉದ್ದೇಶದಿಂದ ಸರಳ ಭಾಷೆಯಲ್ಲಿ ಕಾನೂನುಗಳನ್ನು ಇಲ್ಲಿವಿವರಿಸಲಾಗಿದೆ. ವಕೀಲರುಗಳ ಬ್ಲಾಗ್ ಕೂಡ ಇಲ್ಲಿದೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಕಾನೂನು ವಿದ್ಯಾರ್ಥಿಗಳಿಗೂ ವಕೀಲರಿಗೂ ಈ ಜಾಲತಾಣ ಉಪಯುಕ್ತವಾಗಿದೆ.
ಡೌನ್‌ಲೋಡ್
ಇನ್‌ವಾಯಿಸ್ ತಯಾರಿಸಿ
ನೀವು ಒಬ್ಬ ಚಿಕ್ಕ ವ್ಯಾಪಾರಿಯೇ (ಗಾತ್ರದಲ್ಲಲ್ಲ, ವ್ಯಾಪಾರದಲ್ಲಿ :))? ಹಾಗಿದ್ದಲ್ಲಿ ನಿಮಗೆ ಇನ್‌ವಾಯಿಸ್ ತಯಾರಿಸುವ ತಲೆನೋವು ಇದ್ದಿದ್ದೇ. ಈಗಂತೂ ವ್ಯಾಟ್ ಕಡ್ಡಾಯವಾಗಿರುವುದರಿಂದ ಯಾವುದೇ ವ್ಯವಹಾರ ಇನ್‌ವಾಯಿಸ್ ಇಲ್ಲದೆ ಸಾಧ್ಯವಿಲ್ಲ. ಇನ್‌ವಾಯಿಸ್ ತಯಾರಿಸಲು ಹಲವಾರು ವಾಣಿಜ್ಯಕ ತಂತ್ರಾಂಶಗಳಿವೆ. ಇವುಗಳಲ್ಲಿ ಹಲವಾರು ಸವಲತ್ತುಗಳೇನೋ ಇವೆ. ಅಂತೆಯೇ ಅವು ದುಬಾರಿ ಕೂಡ. ಸಣ್ಣ ವ್ಯಾಪಾರಿಗಳಿಗೆ ದುಬಾರಿ ತಂತ್ರಾಂಶ ಕೊಳ್ಳುವುದು ಕಷ್ಟ. ಇನ್‌ವಾಯಿಸ್ ತಯಾರಿಸಲು ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/c8ssgX.
e - ಸುದ್ದಿ
ವಿಮಾನ ಪತ್ತೆ
ಆಪಲ್ ಐಫೋನ್‌ಗೆ ವಿಮಾನ ಪತ್ತೆಯ ತಂತ್ರಾಂಶ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಅದನ್ನು ಬಳಸಿ ಜಿಪಿಎಸ್ ತಂತ್ರಜ್ಞಾನದ ಮೂಲಕ ನೀವಿರುವ ಸ್ಥಳದ ಮೇಲೆ ಎಷ್ಟು ಹೊತ್ತಿಗೆ ಯಾವ ವಿಮಾನ ಹಾರಲಿದೆ ಎಂಬುದನ್ನು ಅದು ತಿಳಿಸುತ್ತದೆ. ಯಾವ ಕಂಪೆನಿಯ ವಿಮಾನ, ಎಲ್ಲಿಂದ ಎಲ್ಲಿಗೆ ಹೋಗುತ್ತದೆ, ಎಷ್ಟು ಎತ್ತರದಲ್ಲಿ ಹಾರುತ್ತದೆ ಇತ್ಯಾದಿ ಎಲ್ಲ ವಿವರಗಳು ಸುಲಭದಲ್ಲಿ ಲಭ್ಯ. ಈ ತಂತ್ರಾಂಶ ಈಗ ಅಮೆರಿಕದ ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ತಂತ್ರಾಂಶವನ್ನು ಬಳಸಿ ರಾಕೆಟ್ ಮೂಲಕ ವಿಮಾನವನ್ನು ಉರುಳಿಸಿದರೆ ಎಂಬುದು ಅವರ ಚಿಂತೆ. ಈ ತಂತ್ರಾಂಶ ಕೆಲಸ ಮಾಡದಂತೆ ಮಾಡಲು ಅವರು ತಿಣುಕಾಡುತ್ತಿದ್ದಾರೆ.
e- ಪದ
ಜಿಪಿಎಸ್(GPS -Global Positioning System) - ಅಂತರಿಕ್ಷದಲ್ಲಿ ಹಾರಾಡುತ್ತಿರುವ ಉಪಗ್ರಹಗಳನ್ನು ಬಳಸಿ ಒಂದು ಸ್ಥಳದ ನಿಖರವಾದ ಅಕ್ಷಾಂಶ ರೇಖಾಂಶವನ್ನು ಪತ್ತೆಹಚ್ಚುವುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಇಂತಹ ಸರಳವಾದ ಉಪಕರಣಗಳು ದೊರೆಯುತ್ತಿವೆ. ಕಾರುಗಳಲ್ಲೂ ಅವುಗಳನ್ನು ಅಳವಡಿಸಬಹುದು. ಇದರ ಜೊತೆ ದೊರೆಯುವ ತಂತ್ರಾಂಶವನ್ನು ಬಳಸಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ದಾರಿ ತಿಳಿಯಬಹುದು. ರಸ್ತೆಬದಿಯಲ್ಲಿ ಇರುವವರನ್ನು ದಾರಿ ಕೇಳಬೇಕಾಗಿಲ್ಲ. ಕೆಲವು ಮೊಬೈಲ್ ಫೋನುಗಳಲ್ಲೂ ಈ ತಂತ್ರಜ್ಞಾನವಿದೆ. ಆದರೆ ಅದು ಮೊಬೈಲ್ ಗೋಪುರಗಳನ್ನು ಬಳಸಿ ಫೋನು ಇರುವ ಸ್ಥಳವನ್ನು ಹೇಳುತ್ತದೆ.
e - ಸಲಹೆ
ಚೇತನ ವಾಲಿಶೆಟ್ಟರ ಪ್ರಶ್ನೆ: ನನಗೆ ನನ್ನ ಸಿ.ಡಿ. ಡ್ರೈವ್ ಅನ್ನು ಅದರಲ್ಲಿರುವ ಗುಂಡಿ ಬಳಸದೆ ಕೀಬೋರ್ಡ್ ಮೂಲಕವೇ ತೆರಯಬೇಕು. ಇದು ಸಾಧ್ಯವೇ?
ಉ: ಸಾಧ್ಯ. ಸಿ.ಡಿ. ಡ್ರೈವ್‌ನ ಐಕಾನ್ ಮೇಲೆ ಮೌಸ್ ಇಟ್ಟು ಬಲ-ಕ್ಲಿಕ್ ಮಾಡಿ eject ಎಂದು ಆಯ್ಕೆ ಮಾಡಿ.
ಕಂಪ್ಯೂತರ್ಲೆ
ಗಣಕವಾಡು
ನೀ ಕುಟ್ಟುವ ಕೀಬೋರ್ಡ್ ಅದೆ ಕನ್ನಡ
ನೀ ನೋಡುವ ನೆಟ್ ಅದೆ ಕನ್ನಡ

ಇನ್‌ವಾಯಿಸ್,
ಕಾನೂನು,
ಗಣಕವಾಡು,
GPS
ಸೋಮವಾರ, ಅಕ್ಟೋಬರ್ 4, 2010
ಗಣಕಿಂಡಿ - ೦೭೨ (ಅಕ್ಟೋಬರ್ ೦೪, ೨೦೧೦)
ಅಂತರಜಾಲಾಡಿ
ಮೈಸೂರು ಅರಮನೆ
ಮೈಸೂರು ಅಂಬಾವಿಲಾಸ ಅರಮನೆ ಜಗದ್ವಿಖ್ಯಾತ. ಇದೊಂದನ್ನೇ ನೋಡಲೆಂದು ಭಾರತಕ್ಕೆ ಬರುವ ಪ್ರವಾಸಿಗರಿದ್ದಾರೆ. ನೀವು ಮೈಸೂರು ಅರಮನೆ ನೊಡಿದ್ದೀರಾ? ನೋಡಿಲ್ಲವಾದರೆ ಅದನ್ನು ನೋಡಬೇಕಾದರೆ ಮೈಸೂರಿಗೇ ಹೋಗಬೇಕಾಗಿಲ್ಲ. ಅರಮನೆಯ ಪೂರ್ತಿ ಮೂರು ಆಯಾಮಗಳ ಚಿತ್ರ ಹಾಗೂ ವಾಸ್ತವ ಸದೃಶ ಪ್ರತಿಕೃತಿ ನೋಡಬೇಕಾದರೆ ನೀವು mysorepalace.tv ಜಾಲತಾಣಕ್ಕೆ ಭೇಟಿ ನೀಡಬೇಕು. ಅರಮನೆಯ ಒಳಗೆಲ್ಲ ಓಡಾಡಿದಂತೆ ನಿಮಗೆ ಭಾಸವಾಗುವ ಪ್ರತಿಕೃತಿಗಳು ಇಲ್ಲಿವೆ. ಅರಮನೆಯ ಬಗ್ಗೆ ಇತರೆ ಮಾಹಿತಿಗಳೂ ಇಲ್ಲಿವೆ. ಅರಮನೆ ನೋಡಿದವರಿಗೂ ನೋಡಿದ ಅನುಭವ ಮತ್ತೊಮ್ಮೆ ಮೂಡುವಂತೆ ಮಾಡುವ ಅತ್ಯತ್ತಮ ಜಾಲತಾಣ ಇದು. ಕನ್ನಡ ಭಾಷೆಯಲ್ಲೂ ಇದೆ.
ಡೌನ್‌ಲೋಡ್
ಆಟ ತಯಾರಿಸಿ
ಗಣಕದಲ್ಲಿ ಆಟ ಆಡುವುದು ತುಂಬ ಜನರಿಗೆ ಇಷ್ಟವಾದ ಕೆಲಸ. ಕೆಲವೊಮ್ಮೆ ಅದು ಒಂದು ಚಟವೂ ಹೌದು. ಆಟಗಳನ್ನು ಆಡುವಾಗ ನಾನೂ ಒಂದು ಗಣಕ ಆಟ ತಯಾರಿಸುವಂತಿದ್ದರೆ ಎಂದು ಅನ್ನಿಸಿದೆಯೇ? ಅದಕ್ಕಾಗಿ ತುಂಬ ಕ್ಲಿಷ್ಟವಾದ ಪ್ರೋಗ್ರಾಮ್ಮಿಂಗ್ ಕಲಿಯಬೇಕು ಅಂದುಕೊಂಡಿದ್ದೀರಾ? ಯಾವುದೇ ಪ್ರೋಗ್ರಾಮ್ಮಿಂಗ್ ಕಲಿಯದೇ ಗಣಕ ಆಟ ತಯಾರಿಸಲು ಅನುವು ಮಾಡಿಕೊಡುವ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.scirra.com.
e - ಸುದ್ದಿ
ಇಂಗ್ಲೆಂಡಿನಲ್ಲಿ ೧೪ ವರ್ಷ ತುಂಬಿ ೧೫ನೆಯ ವರ್ಷಕ್ಕೆ ಕಾಲಿಟ್ಟ ಹುಡುಗಿಯೊಬ್ಬಳಿಗೆ ತನ್ನ ೧೫ನೆಯ ಹುಟ್ಟುಹಬ್ಬಕ್ಕೆ ೧೫ ಜನ ಆಪ್ತ ಸ್ನೇಹಿತೆಯರನ್ನು ಆಹ್ವಾನಿಸಬೇಕು ಎಂಬ ಬಯಕೆ ಆಯಿತು. ಅದಕ್ಕೆಂದೇ ಆಕೆ ಫೇಸ್‌ಬುಕ್ ಜಾಲತಾಣದಲ್ಲಿ ಒಂದು ಆಹ್ವಾನಪತ್ರಿಕೆಯನ್ನು ತಯಾರಿಸಿ ಹಾಕಿದಳು. ಆದರೆ ಆಕೆ ಮಾಡಿದ ತಪ್ಪೇನೆಂದರೆ ಆ ಆಹ್ವಾನ ಪತ್ರಿಕೆಯನ್ನು ಎಲ್ಲರಿಗೂ ಓದಲು ಸಾಧ್ಯವಾಗುವಂತೆ ಮಾಡಿದ್ದು. ಕೇವಲ ಸ್ನೇಹಿತರು ಮಾತ್ರ ಓದಬಲ್ಲರು ಎಂದು ಆಕೆ ಆಯ್ಕೆ ಮಾಡಿರಲಿಲ್ಲ. ಅದನ್ನು ಓದಿದ ೨೧,೦೦೦ ಮಂದಿ ಆಹ್ವಾನವನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಬರುತ್ತೇವೆ ಎಂದು ನಮೂದಿಸಿದ್ದಾರೆ. ಈಗ ಆಕೆಯ ತಾಯಿಗೆ ತಲೆಬಿಸಿಯಾಗಿದೆ. ಅಕ್ಟೋಬರ್ ೭ರಂದು ಆಕೆಯ ಹುಟ್ಟುಹಬ್ಬಕ್ಕೆ ನಿಜಕ್ಕೂ ಎಷ್ಟು ಮಂದಿ ಬರುತ್ತಾರೆ ಎಂದು ಕಾದು ನೋಡಬೇಕಾಗಿದೆ.
e- ಪದ
ವಾಸ್ತವ ಸದೃಶ (virtual reality) - ಗಣಕ ಯಂತ್ರಾಂಶ ಮತ್ತು ತಂತ್ರಾಂಶ ಬಳಸಿ ನಿಜವಾದ ಸನ್ನಿವೇಶವನ್ನು ಅನುಭವಿಸಿದ ಭ್ರಮೆ ಉಂಟು ಮಾಡುವುದು. ಗಣಕ ಆಟಗಳಲ್ಲಿ ಇದು ತುಂಬ ಜನಪ್ರಿಯ. ನಿಜವಾಗಿಯೂ ವೈರಿಯನ್ನು ಹೊಡೆಯುತ್ತಿದ್ದೇನೆ ಎಂಬ ಭಾವನೆ ಬರುತ್ತದೆ. ವಿಮಾನ ಚಾಲನೆ, ಶಸ್ತ್ರಕ್ರಿಯೆ, ಇತ್ಯಾದಿಗಳನ್ನು ಕಲಿಸಲೂ ಈಗೀಗ ಈ ವಿಧಾನವನ್ನು ಬಳಸಲಾಗುತ್ತಿದೆ.
e - ಸಲಹೆ
ಗಿರಿ ಅವರ ಪ್ರಶ್ನೆ: ನಾನು ಯುಟ್ಯೂಬ್ ಬಳಸುತ್ತಿದ್ದೇನೆ. ಆದರೆ ಅದರಲ್ಲಿ ಡೌನ್‌ಲೋಡ್ ಐಕಾನ್ ಇಲ್ಲ. ಯುಟ್ಯೂಬ್‌ನಿಂದ ಡೌನ್‌ಲೋಡ್ ಮಾಡಲು ಏನು ಮಾಡಬೇಕು?
ಉ: ನೀವು YouTube Downloader ತಂತ್ರಾಂಶವನ್ನು ಬಳಸಬಹುದು. ಇದು ದೊರೆಯುವ ಜಾಲತಾಣ http://bit.ly/oRMpZ.
ಕಂಪ್ಯೂತರ್ಲೆ
ಗಣಕತಗಾದೆ: ತಂತ್ರಾಂಶದಲ್ಲಿಯ ಬಗ್ (ದೋಷ) ವು ಕುರ್ಚಿ ಮತ್ತು ಕೀಬೋರ್ಡ್ ಮಧ್ಯೆ ಕುಳಿತಿರುತ್ತದೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)