ಅಂತರಜಾಲಾಡಿ
ಸಮುದಾಯ ನಿಘಂಟು
ಅಂತರಜಾಲದಲ್ಲಿ ಕನ್ನಡದ ಒಂದು ಸಮುದಾಯ ನಿಘಂಟು ಇದೆ. ಇದು ಕನ್ನಡದ ಮುಕ್ತ ವಿಶ್ವಕೋಶ ಅರ್ಥಾತ್ ವಿಕಿಪೀಡಿಯಾ ಬಳಗಕ್ಕೆ ಸೇರಿದೆ. ಸದ್ಯಕ್ಕೆ ಇದರಲ್ಲಿ ಸುಮಾರು ೮೪ ಸಾವಿರ ಪದಗಳಿವೆ. ಇದರಲ್ಲಿ ಇರುವ ಪದಗಳು ಒಂದು ವ್ಯವಸ್ಥಿತ ಚೌಕಟ್ಟಿಲ್ಲಿ ಇರುವಂತೆ ಕಂಡುಬರುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಇದರಲ್ಲಿ ಪದಗಳನ್ನು ಸೇರಿಸಿರುವವರು ಜನಸಾಮಾನ್ಯರು. ಯಾವುದೇ ನಿಗಂಟು ತಜ್ಞರಲ್ಲ. ಸರಕಾರ ನೇಮಿಸಿದ ಯಾವುದೇ ಸಮಿತಿಯೂ ಅಲ್ಲ. ಈ ನಿಘಂಟಿನ ಜಾಲತಾಣದ ವಿಳಾಸ - kn.wiktionary.org. ಅಲ್ಲಿಗೆ ನೀವೂ ಭೇಟಿ ನೀಡಿ. ಅಷ್ಟಕ್ಕೆ ನಿಲ್ಲಿಸಬೇಡಿ. ನೀವೂ ಈ ಜಾಲತಾಣಕ್ಕೆ ನಿಮ್ಮ ಕಾಣಿಕೆ ನೀಡಿ. ಅಂದ ಹಾಗೆ ಮುಕ್ತ ವಿಶ್ವಕೋಶ ವಿಕಿಪೀಡಿಯಾಕ್ಕೆ ಜನವರಿ ೧೫, ೨೦೧೧ಕ್ಕೆ ೧೦ ವರ್ಷ ತುಂಬುತ್ತಿದೆ. ಅದರ ಆಚರಣೆಗೆ ತಯಾರಿ ನಡೆಯುತ್ತಿದೆ. ನೀವೂ ಈ ಆಚರಣೆಯಲ್ಲಿ ಭಾಗವಹಿಸಬೇಕಾದರೆ ten.wikipedia.org ಜಾಲತಾಣದಲ್ಲಿ ಹೆಸರು ನೋಂದಾಯಿಸಿ.
ಡೌನ್ಲೋಡ್
ಕ್ಯಾಲೆಂಡರ್
ಕ್ಯಾಲೆಂಡರ್ ಅನ್ನು ಗೋಡೆಗೆ ತೂಗು ಹಾಕುವ ಕಾಲ ಕಳೆದು ಹೋಯಿತು. ಈಗ ಎಲ್ಲವೂ ಗಣಕದಲ್ಲೇ. ಕ್ಯಾಲೆಂಡರ್ ತಂತ್ರಾಂಶಗಳು ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ Rainlendar. ಇದನ್ನು ಬಳಸಿ ಯಾವ ಯಾವ ದಿನ, ಸಮಯಗಳಲ್ಲಿ ಯಾವ ಯಾವ ಕಾರ್ಯಗಳನ್ನು ಮಾಡಬೇಕಾಗಿದೆ, ಅಲಾರ್ಮ್, ಕಾರ್ಯಕ್ರಮಗಳ ಪಟ್ಟಿ ಎಲ್ಲ ದಾಖಲಿಸಬಹುದು. ಇದು ದೊರೆಯುವ ಜಾಲತಾಣ http://bit.ly/hhXklw. ಇಲ್ಲಿ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳು ಲಭ್ಯ. ಎರಡರ ವ್ಯತ್ಯಾಸವನ್ನೂ ಅಲ್ಲೇ ಓದಿಕೊಳ್ಳಬಹುದು.
e - ಸುದ್ದಿ
ಐಫೋನ್ ಕಳ್ಳನನ್ನು ಹಿಡಿದ ಹೆಲಿಕಾಫ್ಟರ್
ಐಫೋನ್ ಕಳ್ಳನನ್ನು ಹೆಲಿಕಾಫ್ಟರ್ ಮೂಲಕ ಬೆಂಬತ್ತಿ ಸೆರೆಹಿಡಿದ ಕಥೆ ಕೇಳಿದ್ದೀರಾ? ಇದು ಆಸ್ಟ್ರೇಲಿಯದಿಂದ ವರದಿಯಾದ ಕಥೆ. ಮೆಲ್ಬೋರ್ನ್ನಲ್ಲಿ ಒಬ್ಬಾಕೆ ರಸ್ತೆ ಬದಿಯಲ್ಲಿ ಐಫೋನ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಒಬ್ಬ ಕಳ್ಳ ಆಕೆಯ ಐಫೋನನ್ನು ಕಿತ್ತುಕೊಂಡು ಹೋದ. ಆಕೆಯ ದೂರನ್ನು ದಾಖಲಿಸಿಕೊಂಡ ಪೋಲೀಸರು ಸಮೀಪದಲ್ಲೇ ಹಾರಾಡುತ್ತಿದ್ದ ಪೋಲೀಸ್ ಹೆಲಿಕಾಫ್ಟರಿಗೆ ಆಕೆಯ ದೂರನ್ನು ವರ್ಗಾಯಿಸಿದರು. ಅದೃಷ್ಟಕ್ಕೆ ಐಫೋನಿನಲ್ಲಿದ್ದ ಜಿ.ಪಿ.ಎಸ್. ಸೌಲಭ್ಯ ಐಫೋನ್ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ವರದಿ ಮಾಡುತ್ತಿತ್ತು. ಹೆಲಿಕಾಫ್ಟರ್ ಮೂಲಕ ಪೋಲೀಸರು ಕಳ್ಳನ ಬೆಂಬತ್ತಿ ಅತನನ್ನು ಹಿಡಿದರು.
e- ಪದ
ಪೃಥಕ್ಕರಣ ಸಾಮರ್ಥ್ಯ (ರೆಸೊಲೂಶನ್ - resolution) - ಒಂದು ಚಿತ್ರದ ಸ್ಪಷ್ಟತೆಯ ಮಾಪನ. ಸಾಮಾನ್ಯವಾಗಿ ಗಣಕ ಪರದೆ (ಮೋನಿಟರ್) ಮತ್ತು ಮುದ್ರಕದಲ್ಲಿ ಚಿತ್ರವನ್ನು (ಗ್ರಾಫಿಕ್ಸ್) ಎಷ್ಟು ಸ್ಪಷ್ಟವಾಗಿ ಮೂಡಿಸಬಹುದು ಎಂಬುದನ್ನು ಇದು ಸೂಚಿಸುತ್ತದೆ. ಚಿತ್ರವನ್ನು ಚಿಕ್ಕಚಿಕ್ಕ ಚುಕ್ಕಿಗಳನ್ನು ಮೂಡಿಸುವ ಮೂಲಕ ಪಡೆಯಲಾಗುತ್ತದೆ. ಈ ಚುಕ್ಕಿಗಳ ಸಂಖ್ಯೆ ಹೆಚ್ಚಿದ್ದಷ್ಟು ಚಿತ್ರ ಹೆಚ್ಚು ಸ್ಪಷ್ಟವಾಗಿ ಮೂಡುತ್ತದೆ. ಸಾಮಾನ್ಯವಾಗಿ ಗಣಕ ಪರದೆಯ ರೆಸುಲೂಶನ್ 800x600, 1024x768, ಇತ್ಯಾದಿ ಇರುತ್ತದೆ.
e - ಸಲಹೆ
ರಾಮಚಂದ್ರರ ಪ್ರಶ್ನೆ: ಗಣಕದ ಕಾನ್ಫಿಗರೇಶನ್ ತಿಳಿಯುವುದು ಹೇಗೆ?
ಉ: ಗಣಕದ ಪರದೆಯ ಮೇಲೆ ಕಾಣಿಸುವ My Computer ಐಕಾನ್ ಮೇಲೆ ಗಣಕದ ಮೌಸ್ನ ಬಲಗುಂಡಿಯನ್ನು ಕ್ಲಿಕ್ ಮಾಡಿ ನಂತರ Properties ಅನ್ನು ಆಯ್ಕೆ ಮಾಡಿ.
ಕಂಪ್ಯೂತರ್ಲೆ
ಕೋಲ್ಯನಲ್ಲಿಯಾರೋ “ನಿನ್ನ ಹೊಸ ವರ್ಷದ ರೆಸೊಲೂಶನ್ ಏನು” ಎಂದು ಕೇಳಿದಾಗ ಆತ “1024x768” ಎಂದು ಉತ್ತರಿಸಿದ.
Articles from the weekly column in Kannada Prabha, Kannada daily, by Dr U B Pavanaja, on information technology, Internet, computer, software utilities, tech jokes, tips and tricks, terms, etc.
ಸೋಮವಾರ, ಜನವರಿ 3, 2011
ಬುಧವಾರ, ಡಿಸೆಂಬರ್ 29, 2010
ಗಣಕಿಂಡಿ - ೦೮೪ (ಡಿಸೆಂಬರ್ ೨೭, ೨೦೧೦)
ಅಂತರಜಾಲಾಡಿ
ಸಂಸ್ಕೃತ ಪುಸ್ತಕಮೇಳ
ಪ್ರಪಂಚದ ಅತಿ ಹಳೆಯ ಶುದ್ಧ ವೈಜ್ಞಾನಿಕ ಭಾಷೆ ಸಂಸ್ಕೃತ. ಇಂದಿಗೂ ಈ ಭಾಷೆಯನ್ನು ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ನೋಂದಾಯಿಸುವವರು ಇಂದಿಗೂ ಇದ್ದಾರೆ. ಇಂದು ಗಣಕ ಪರಿಭಾಷೆಯಲ್ಲಿ ಬಳಕೆಯಲ್ಲಿರುವ ಸಹಜ ಭಾಷಾ ಸಂಸ್ಕರಣೆಗೆ (natural language processing) ಮೂಲಮಂತ್ರಗಳನ್ನು ನೀಡಿದ್ದು ಸಂಸ್ಕೃತ ಭಾಷೆಯಲ್ಲಿ ಪಾಣಿನಿ. ಭಾರತದ ಸಂವಿಧಾನವು ಅಧಿಕೃತವಾಗಿ ಅಂಗೀಕರಿಸಿರುವ ೨೨ ಭಾಷೆಗಳಲ್ಲಿ ಸಂಸ್ಕೃತವೂ ಸೇರಿದೆ. ವಿಶ್ವದ ಪ್ರಪ್ರಥಮ ಸಂಸ್ಕೃತ ಪುಸ್ತಕ ಮೇಳ ೨೦೧೧ರ ಜನವರಿ ೭ರಿಂದ ೧೦ರ ತನಕ ಬೆಂಗಳೂರಿನಲ್ಲಿ ಜರುಗಲಿದೆ. ಈ ಬಗ್ಗೆ ಸಮಸ್ತ ವಿವರ ನೀಡುವ ಜಾಲತಾಣ www.samskritbookfair.org. ಈ ಮೇಳದಲ್ಲಿ ನೀವೂ ಹಲವಾರು ರೀತಿಯಲ್ಲಿ ಭಾಗವಹಿಸಬಹುದು. ವಿವರಗಳು ಜಾಲತಾಣದಲ್ಲಿವೆ.
ಡೌನ್ಲೋಡ್
ಔಟ್ಲುಕ್ನಿಂದ ಜಿಮೈಲ್ಗೆ
ಜಿಮೈಲ್ ತುಂಬ ಜನಪ್ರಿಯ ಉಚಿತ ಇಮೈಲ್ ಸೇವೆ. ಹಲವರು ಜಿಮೈಲ್ ಜೊತೆ ಸಿಗುವ ವಿಳಾಸ ಪುಸ್ತಕದ ಸೌಕರ್ಯವನ್ನೂ ಬಳಸುತ್ತಾರೆ. ಇಮೈಲ್ಗಳನ್ನು ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲು ಮತ್ತು ಇಮೈಲ್ ಕಳುಹಿಸಲು ಬಳಸುವ ಜನಪ್ರಿಯ ತಂತ್ರಾಂಶ ಮೈಕ್ರೋಸಾಫ್ಟ್ ಔಟ್ಲುಕ್. ಇದರಲ್ಲೂ ವಿಳಾಸ ಪುಸ್ತಕದ ಸೌಕರ್ಯವಿದೆ. ಈ ಸೌಕರ್ಯದ ವೈಶಿಷ್ಟ್ಯವೇನೆಂದರೆ ಇದನ್ನು ಬಳಸಲು ಅಂತರಜಾಲಕ್ಕೆ ಸಂಪರ್ಕ ಅಗತ್ಯವಿಲ್ಲ. ಜಿಮೈಲ್ನಲ್ಲಿರುವ ಮತ್ತು ಔಟ್ಲುಕ್ನಲ್ಲಿರುವ ವಿಳಾಸಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುವ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/e0sNgT.
e - ಸುದ್ದಿ
ಫೇಸ್ಬುಕ್ನಲ್ಲಿ ಅವಮಾನ -ಪರಾರಿ
ಫಿಲಡೆಲ್ಪಿಯಾ ನಗರದಲ್ಲಿ ಸರಣಿ ಕಲೆ ಮತ್ತು ಲೈಂಗಿಕ ಅತ್ಯಾಚಾರ ಮಾಡಿದ ಆರೋಪಿಯನ್ನು ಪೋಲೀಸರು ಹುಡುಕುತ್ತಿದ್ದರು. ಅದೇ ಸಮಯದಲ್ಲಿ ಯಾರೋ ಪೋಕರಿಗಳು ಒಬ್ಬಾತನ ಫೋಟೋವನ್ನು ಫೇಸ್ಬುಕ್ನಲ್ಲಿ ಸೇರಿಸಿ ಸರಣಿ ಕೊಲೆ ಮಾಡಿದವ ಈತನೇ ಎಂದು ಸಂದೇಶ ಹಾಕಿದ್ದರು. ಆತ ನಿಜವಾಗಿ ನಿರಪರಾಧಿ ಆಗಿದ್ದ. ಆದರೆ ಜನರು ಗುಂಪುಕಟ್ಟಿಕೊಂಡು ಆತನ ಮನೆ ಮುಂದೆ ಗದ್ದಲ ಮಾಡತೊಡಗಿದರು. ಆತ ತಾನಾಗಿಯೇ ಡಿ.ಎನ್.ಎ. ಪರೀಕ್ಷೆಗೆ ಒಳಪಡಿಸಿಕೊಂಡು ನಿರಪರಾಧಿ ಎಂದು ಪೋಲೀಸರಿಂದ ಹೇಳಿಕೆ ನೀಡಿಸಿದ ನಂತರವೇ ಆತ ನಿರಾಳವಾಗಿ ಇರಲು ಸಾಧ್ಯವಾದದ್ದು.
e- ಪದ
ರೌಟರ್ (router) - ಗಣಕಜಾಲಗಳಲ್ಲಿ ಬಳಕೆಯಾಗುವ ಸಾಧನ. ಇದು ಕನಿಷ್ಠ ಎರಡು ಜಾಲಗಳಿಗೆ ಸಂಪರ್ಕಗೊಂಡಿರುತ್ತದೆ. ಗಣಕಜಾಲಗಳಲ್ಲಿ ಮಾಹಿತಿಗುಚ್ಛಗಳನ್ನು ಜಾಲದಿಂದ ಜಾಲಕ್ಕೆ ಕಳುಹಿಸಲು ಇದರ ಬಳಕೆ ಆಗುತ್ತದೆ.
e - ಸಲಹೆ
ದಾವಣಗೆರೆ ಪುನೀತ್ ಅವರ ಪ್ರಶ್ನೆ: ಮೈಕ್ರೋಸಾಫ್ಟ್ ಆಫೀಸ್ ೨೦೦೭ನ್ನು ಡೌನ್ಲೋಡ್ ಮಾಡಬೇಕು. ಯಾವ ಜಾಲತಾಣದಲ್ಲಿ ಸಿಗುತ್ತದೆ?
ಉ: ಆಫೀಸ್ ತಂತ್ರಾಂಶ ಉಚಿತವಾಗಿ ಸಿಗುವುದಿಲ್ಲ. ಅದನ್ನು ಹಣಕೊಟ್ಟು ಕೊಂಡುಕೊಳ್ಳಬೇಕು. ವಿವಿಧ ಆವೃತ್ತಿಗಳ ಬೆಲೆ ತಿಳಿಯಲು ಹಾಗೂ ಕೊಂಡುಕೊಳ್ಳಲು microsoftstore.co.in ಜಾಲತಾಣಕ್ಕೆ ಭೇಟಿ ನೀಡಿ. ಅಂತರಜಾಲದ ಮೂಲಕ ಉಚಿತವಾಗಿ ಮೈಕ್ರೋಸಾಫ್ಟ್ ಆಫೀಸ್ ಬಳಸಬೇಕಿದ್ದರೆ office.live.com ಜಾಲತಾಣಕ್ಕೆ ಭೇಟಿ ನಿಡಿ.
ಕಂಪ್ಯೂತರ್ಲೆ
ಗಣಕವೇದವಾಕ್ಯ: ನೀವು ಅತಿ ಅವಸರದಲ್ಲಿದ್ದೀರೆಂಬುದನ್ನು ಗಣಕ, ಮುದ್ರಕ, ಇತ್ಯಾದಿ ಸಾಧನಗಳಿಗೆ ಅರಿವು ಮಾಡಬೇಡಿ. ನೀವು ಅತಿ ಅವಸರದಲ್ಲಿದ್ದಾಗಲೆ ಅವು ಕೈಕೊಡುತ್ತವೆ.

ಬುಧವಾರ, ಡಿಸೆಂಬರ್ 22, 2010
ಗಣಕಿಂಡಿ - ೦೮೩ (ಡಿಸೆಂಬರ್ ೨೦, ೨೦೧೦)
ಅಂತರಜಾಲಾಡಿ
ರಸಾಯನಶಾಸ್ತ್ರ ವರ್ಷ
೨೦೧೧ನೆಯ ಇಸವಿಯನ್ನು ರಸಾಯನಶಾಸ್ತ್ರ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಮನುಕುಲದ ಒಳಿತಿಗಾಗಿ ರಸಾಯನಶಾಸ್ತ್ರದ ಕೊಡುಗೆಯನ್ನು ಜನರಿಗೆ ತಿಳಿಸಿ ಹೇಳುವುದು ಈ ವರ್ಷಾಚರಣೆಯ ಮೂಲ ಉದ್ದೇಶಗಳಲ್ಲೊಂದು. “ರಸಾಯನಶಾಸ್ತ್ರ - ನಮ್ಮ ಜೀವನ, ನಮ್ಮ ಭವಿಷ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ೨೦೧೧ರಲ್ಲಿ ಪ್ರಪಂಚಾದ್ಯಂತ ನಡೆಸಲು ತಯಾರಿ ನಡೆದಿದೆ. ಈ ಕಾರ್ಯಕ್ರಮಗಳು ಏನೇನು, ಎಲ್ಲೆಲ್ಲಿ ಇವು ನಡೆಯುತ್ತಿವೆ, ಇತ್ಯಾದಿ ಮಾಹಿತಿಗಳಿಗೆ www.chemistry2011.org ಜಾಲತಾಣಕ್ಕೆ ಭೇಟಿ ನೀಡಿ. ನಿಮ್ಮೂರಿನಲ್ಲಿ ಈ ವರ್ಷಾಚರಣೆಯಲ್ಲಿ ನೀವು ಪಾಲ್ಗೊಳ್ಳಬೇಕೇ? ಅಥವಾ ಕಾರ್ಯಕ್ರಮದ ರೂವಾರಿ ನೀವಾಗಲು ಉತ್ಸುಕರಾಗಿದ್ದೀರಾ? ಹಾಗಿದ್ದರೆ ಇದೇ ಜಾಲತಾಣದಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ.
ಡೌನ್ಲೋಡ್
ಫೋಟೋಗಳಿಂದ ಸಿನಿಮಾಕ್ಕೆ
ನೀವು ಇತ್ತೀಚೆಗೆ ಯಾವುದಾದರು ಪ್ರೇಕ್ಷಣೀಯ ಸ್ಥಳಕ್ಕೆ ಹೋಗಿರುತ್ತೀರಿ. ಆಗ ತೆಗೆದ ಫೋಟೋಗಳನ್ನು ಒಂದಾದ ನಂತರ ಒಂದರಂತೆ ಗಣಕದ ಪರದೆಯಲ್ಲಿ ಮೂಡಿಸಿ ತೋರಿಸುತ್ತೀರಿ ತಾನೆ? ಅದರ ಬದಲಿಗೆ ಆ ಎಲ್ಲ ಫೋಟೋಗಳನ್ನು ಒಂದಾದ ನಂತರ ಒಂದು ಚಲನಚಿತ್ರದ ಮಾದರಿಯಲ್ಲಿ ಮೂಡಿಬರುವಂತೆ ಮಾಡಿದರೆ ಹೇಗೆ? ಅಷ್ಟು ಮಾತ್ರವಲ್ಲ ಅದನ್ನು ಸಿ.ಡಿ. ಅಥವಾ ಡಿ.ವಿ.ಡಿ.ಗೆ ವರ್ಗಾಯಿಸಿ ನಿಮ್ಮ ಡಿ.ವಿ.ಡಿ ಪ್ಲೇಯರ್ನಲ್ಲಿ ಪ್ಲೇ ಮಾಡಿ ಮನೆಯಲ್ಲಿರುವ ಟಿ.ವಿ. ಪರದೆಯಲ್ಲಿ ಮೂಡಿಸಿದರೆ ಇನ್ನೂ ಚೆನ್ನ ತಾನೆ? ಹೀಗೆ ಫೋಟೋಗಳಿಂದ ಚಲನಚಿತ್ರ ತಯಾರಿಸುವ ಒಂದು ಉಚಿತ ತಂತ್ರಾಂಶ Foto2Avi. ಇದು ದೊರೆಯುವ ಜಾಲತಾಣದ ವಿಳಾಸ bit.ly/hVFeyK.
e - ಸುದ್ದಿ
ಗೂಗ್ಲ್ ತೆರಿಗೆ
ಗೂಗ್ಲ್ ಬಳಸಿ ಯಾವುದಾದರೊಂದು ಮಾಹಿತಿಯನ್ನು ಹುಡುಕುವಾಗ ಪಕ್ಕದಲ್ಲಿ ಜಾಹೀರಾತುಗಳು ಬರುವುದನ್ನು ಗಮನಿಸಿದ್ದೀರಿ ತಾನೆ? ಈ ರೀತಿ ಜಾಹೀರಾತು ಹಾಕಲು ಗೂಗ್ಲ್ಗೆ ಹಣ ಕೊಡಬೇಕು. ಈ ಜಾಹೀರಾತುಗಳು ಗೂಗ್ಲ್ನಲ್ಲಿ ಮಾತ್ರವಲ್ಲ. ಬಹುತೇಕ ಎಲ್ಲ ಜಾಲತಾಣಗಳಲ್ಲೂ ಕಾಣಸಿಗುತ್ತವೆ. ಈ ರೀತಿ ಜಾಲತಾಣಗಳಲ್ಲಿ ಜಾಹೀರಾತು ನೀಡಲು ಇನ್ನು ಮುಂದೆ ಫ್ರಾನ್ಸ್ ದೇಶದಲ್ಲಿ ಶೇಕಡ ೧ ತೆರಿಗೆ ನೀಡಬೇಕಾಗುತ್ತದೆ. ಈ ತೆರಿಗೆ ಜನವರಿ ೨೦೧೧ರಿಂದ ಜಾರಿಗೆ ಬರಲಿದೆ. ಈ ತೆರಿಗೆಗೆ ಗೂಗ್ಲ್ ತೆರಿಗೆ ಎಂದು ಜನ ನಾಮಕರಣ ಮಾಡಿದ್ದಾರೆ. ಅಂದ ಹಾಗೆ ಈ ರೀತಿ ತೆರಿಗೆ ಹಾಕಬಹುದು ಎಂಬುದನ್ನು ನಮ್ಮ ಸರಕಾರಕ್ಕೆ ಯಾರೂ ತಿಳಿಸಬೇಡಿ!
e- ಪದ
ಸ್ವಪ್ರತಿಷ್ಠೆಯ ಹಡುಕಾಟ (Egosurfing) -ಇದು ಸಾಮಾನ್ಯವಾಗಿ ಗೂಗ್ಲ್ ಅಥವಾ ಬೇರೆ ಯಾವುದಾದರು ಜಾಲಶೋಧಕವನ್ನು ಬಳಸಿ ಅಂತರಜಾಲದಲ್ಲಿ ತನ್ನ ಬಗ್ಗೆ ಏನೇನು ದಾಖಲಾಗಿದೆ ಎಂಬುದನ್ನು ಹುಡುಕುವುದನ್ನು ಸೂಚಿಸಲು ಬಳಕೆಯಾಗುತ್ತಿದೆ. ಹೀಗೆ ಮಾಡುವುದರಿಂದ ತಮ್ಮ ಬಗ್ಗೆ ಬೇರೆ ಯಾರಾದರು ಎಲ್ಲಿಲ್ಲಿ ಏನೇನು ಮಾಹಿತಿ ಹಾಕಿದ್ದಾರೆ, ಏನೇನು ಹೊಗಳಿದ್ದಾರೆ ಅಥವಾ ತೆಗಳಿದ್ದಾರೆ ಎಲ್ಲ ತಿಳಿಯಬಹುದು.
e - ಸಲಹೆ
ಅಶ್ವಿನ್ ಅವರ ಪ್ರಶ್ನೆ: ೮, ೯ ಮತ್ತು ಹತ್ತನೆಯ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ವೀಡಿಯೋ ಪಾಠಗಳು ಎಲ್ಲಿ ಸಿಗುತ್ತವೆ?
ಉ: ಇದೇ ಅಂಕಣದಲ್ಲಿ ಹಿಂದೊಮ್ಮೆ ಸೂಚಿಸಿದ್ದ www.khanacademy.org ಜಾಲತಾಣ ನೋಡಿ. ಹಾಗೆಯೇ www.howstuffworks.com ಜಾಲತಾಣವನ್ನೂ ನೋಡಿ.
ಕಂಪ್ಯೂತರ್ಲೆ
ಹುಡುಗ: ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ?
ಹುಡುಗಿ: ಹೌದು
[ಹುಡುಗ ಓಡಲು ಪ್ರಾರಂಭಿಸುತ್ತಾನೆ]
ಹುಡುಗಿ: ಎಲ್ಲಿಗೆ ಓಡುತ್ತಿದ್ದೀಯಾ?
ಹುಡುಗ: ಫೇಸ್ಬುಕ್ನಲ್ಲಿ relationship status ಬದಲಿಸಲು ಹೋಗುತ್ತಿದ್ದೇನೆ.

ಲೇಬಲ್ಗಳು:
ಗೂಗ್ಲ್,
ರಸಾಯನಶಾಸ್ತ್ರ,
Egosurfing,
Foto2Avi
ಸೋಮವಾರ, ಡಿಸೆಂಬರ್ 13, 2010
ಗಣಕಿಂಡಿ - ೦೮೨ (ಡಿಸೆಂಬರ್ ೧೩, ೨೦೧೦)
ಅಂತರಜಾಲಾಡಿ
ಭ್ರಷ್ಟಾಚಾರ ನಿರ್ಮೂಲನೆ
೨೦೧೦ನೆಯ ಇಸವಿಯನ್ನು ಹಗರಣಗಳ ವರ್ಷ ಎಂದೇ ಕರೆಯಬಹುದು. ಪ್ರತಿ ದಿನ ಒಂದಲ್ಲ ಒಂದು ಭ್ರಷ್ಟಾಚಾರದ ವರದಿ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ಜನರಿಗಂತೂ ಈ ಭ್ರಷ್ಟಾಚಾರಗಳನ್ನು ನೋಡಿ ನೋಡಿ ರೋಸಿ ಹೋಗಿದೆ. ಇದಕ್ಕೆ ಕೊನೆಯೇ ಇಲ್ಲವೇ? ರಾಜಕಾರಣಿ ಮತ್ತು ಸರಕಾರಿ ಅಧಿಕಾರಿಗಳಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಜನರೇ ಮುಂದೆ ಬಂದು ಇದಕ್ಕೆಲ್ಲ ಕೊನೆ ಹಾಕಿಸಬೇಕಾಗಿದೆ. ಅದಕ್ಕಾಗಿಯೇ ಒಂದು ಚಳವಳಿ ನಡೆಯಬೇಕಾಗಿದೆ. ಹಾಗೆಂದು ನೀವು ಭಾವಿಸುತ್ತಿದ್ದೀರಾ? ಹಾಗಿದ್ದರೆ ನಾವೆಲ್ಲ ಏನು ಮಾಡಬಹದು? ಏನು ಮಾಡಬೇಕು? ಎಲ್ಲರೂ ಒಂದುಗೂಡುವುದು ಹೇಗೆ? ಇಂತಹ ಒಂದು ಚಳವಳಿಗೆಂದೇ ಒಂದು ಜಾಲತಾಣ ಸಿದ್ಧವಾಗಿದೆ. ಅದರ ವಿಳಾಸ -killcorruption.org. ಇನ್ನು ತಡವೇಕೆ? ಅಲ್ಲಿಗೆ ಭೇಟಿ ನೀಡಿ ಮುಂದಿನ ಕಾರ್ಯಕ್ರಮಗಳಿಗೆ ನಿಮ್ಮ ಕೈಜೋಡಿಸಿ.
ಡೌನ್ಲೋಡ್
ಗುಪ್ತ ಟೊರೆಂಟ್
ಅಂತರಜಾಲದಲ್ಲಿ ತಂತ್ರಾಂಶ, ಸಂಗೀತ, ಚಲನಚಿತ್ರ, ಅಥವಾ ಇನ್ಯಾವುದೇ ಫೈಲುಗಳನ್ನು ಪ್ರಪಂಚಾದ್ಯಂತ ವಿವಿಧ ವ್ಯಕ್ತಿಗಳು ತಮ್ಮ ಗಣಕಗಳಲ್ಲಿ ಸಂಗ್ರಹಿಸಿಟ್ಟು ಆಸಕ್ತರಿಗೆ ಡೌನ್ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ರೀತಿಯ ಸೌಲಭ್ಯಕ್ಕೆ P2P ಅಂದರೆ ಪರ್ಸನ್-ಟು-ಪರ್ಸನ್ ಅರ್ಥಾತ್ ವ್ಯಕ್ತಿಯಿಂದ ವ್ಯಕ್ತಿಗೆ ಎಂದು ಕರೆಯುತ್ತಾರೆ. ಇದಕ್ಕಾಗಿ ಬಳಸುವುದು ಟೊರೆಂಟ್ ವಿಧಾನವನ್ನು. ಈ ರೀತಿಯಲ್ಲಿ ಡೌನ್ಲೋಡ್ ಮಾಡಲು ಹಲವು ತಂತ್ರಾಂಶಗಳಿವೆ. ಅಂತಹ ಒಂದು ತಂತ್ರಾಂಶ OneSwarm. ಇದರ ವೈಶಿಷ್ಟ್ಯವೇನೆಂದರೆ ಇದು ನಿಮ್ಮ ಪರಿಚಯವನ್ನು ಅಂದರೆ ನಿಮ್ಮ ಐಪಿ ವಿಳಾಸ ಇತ್ಯಾದಿಗಳನ್ನು ಗುಪ್ತವಾಗಿಡುತ್ತದೆ. ಈ ತಂತ್ರಾಂಶ ದೊರೆಯುವ ಜಾಲತಾಣ bit.ly/e7WKjo.
e - ಸುದ್ದಿ
ಸ್ಟೀವ್ ಜಾವ್ಸ್ಗೆ ಸಾಲ ವಾಪಾಸು ಬಂದಿಲ್ಲ
ಅಮೆರಿಕದಲ್ಲಿ ಪ್ರತಿ ಕಂಪೆನಿಯೂ ತಾನು ಇತರರಿಗೆ ಕೊಡಬೇಕಾದ ಮತ್ತು ಇತರರಿಂದ ತನಗೆ ಬರಬೇಕಾದ ಹಣ ಮತ್ತು ಆಸ್ತಿಗಳ ಬಗ್ಗೆ ಪ್ರತಿ ವರ್ಷ ಸರಕಾರಕ್ಕೆ ವರದಿ ನಿಡಬೇಕು. ಈ ರೀತಿ ಆಪಲ್ ಕಂಪೆನಿ ಈ ವರ್ಷ ನೀಡಿದ ವರದಿಯಲ್ಲಿ ತಾನು ಒಬ್ಬ ವ್ಯಕ್ತಿಗೆ 37.91 ಡಾಲರು ವಾಪಾಸು ನೀಡಬೇಕಾಗಿದೆ. ಅವರು ಅದನ್ನು ಇನ್ನೂ ಪಡೆದುಕೊಂಡಿಲ್ಲ ಎಂದು ಮಾಹಿತಿ ನೀಡಿದೆ. ಯಾಕೆ ಅವರು ಇನ್ನೂ ಪಡೆದುಕೊಂಡಿಲ್ಲ? ಅವರು ಯಾರು ಎಂಬ ಮಾಹಿತಿ, ಅವರ ವಿಳಾಸ ಸಿಕ್ಕಿಲ್ಲವೇ ಎಂಬ ಅನುಮಾನ ಬರುತ್ತಿದೆಯೇ? ಆ ವ್ಯಕ್ತಿ ಮತ್ತಿನ್ಯಾರೂ ಅಲ್ಲ. ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜೋವ್ಸ್ ಅವರೇ!
e- ಪದ
ಡಿಡಿಓಎಸ್ (DDoS =Distributed Denial of Service) -ಏಕಕಾಲದಲ್ಲಿ ಪ್ರಪಂಚದ ಹಲವು ಕಡೆಗಳಿಂದ ಒಂದೇ ಜಾಲತಾಣಕ್ಕೆ ಧಾಳಿ ಮಾಡಿ ಅದು ಯಾರಿಗೂ ದೊರಕದಂತೆ ಮಾಡುವುದು. ಎಲ್ಲ ಸರ್ವರ್ಗಳಿಗೂ ಏಕಕಾಲಕ್ಕೆ ಇಂತಿಷ್ಟೇ ಬೇಡಿಕೆಗಳನ್ನು ಪೂರೈಸುವ ಶಕ್ತಿ ಇರುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆಗಳು ಬಂದರೆ ಅದು ಉತ್ತರಿಸುವುದಿಲ್ಲ. ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಜಾಲತಾಣದಲ್ಲಿ ಘೋಷಿಸಿದಾಗ ಪ್ರಾರಂಭದಲ್ಲಿ ಒಂದೆರಡು ಗಂಟೆಗಳ ಕಾಲ ಅದನ್ನು ವೀಕ್ಷಿಸಲು ಅಸಾಧ್ಯವಾಗುವುದು ಇದೇ ಕಾರಣಕ್ಕೆ. ಡಿಡಿಓಎಸ್ ಧಾಳಿಯಲ್ಲಿ ಹ್ಯಾಕರ್ಗಳು ಜಗತ್ತಿನ ಲಕ್ಷಗಟ್ಟಳೆ ಗಣಕಗಳನ್ನು ವಶಕ್ಕೆ ತೆಗದುಕೊಂಡು ಅವುಗಳ ಮೂಲಕ ಒಂದು ಜಾಲತಾಣಕ್ಕೆ ಧಾಳಿ ಇಟ್ಟು ಅದನ್ನು ನಿಷ್ಕ್ರಿಯಗೊಳಿಸುತ್ತಾರೆ. ಇತ್ತೀಚೆಗೆ ತುಂಬ ಸುದ್ದಿ ಮಾಡಿದ ವಿಕಿಲೀಕ್ಸ್ಗೆ ಹಣ ಸಂದಾಯ ಮಾಡುವುದನ್ನು ನಿಲ್ಲಿಸಿದ ವೀಸಾ, ಮಾಸ್ಟರ್ಕಾರ್ಡ್ ಮತ್ತು ಪೇಪಾಲ್ ಜಾಲತಾಣಗಳಿಗೆ ಅನೋನಿಮ್ ಹೆಸರಿನಲ್ಲಿ ಧಾಳಿ ಮಾಡಿ ಅವುಗಳನ್ನು ಕೆಲವು ಗಂಟೆಗಳ ಕಾಲ ನಿಷ್ಕ್ರಿಯ ಮಾಡಿದ್ದರು.
e - ಸಲಹೆ
ಬೆಂಗಳೂರಿನ ಮಧುಸೂದನರ ಪಶ್ನ್ರೆ: ನಾನು ASP.NET ವಿದ್ಯಾರ್ಥಿ. ನನಗೆ ಅದರ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕು. ಯಾವ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಸಿಗುತ್ತದೆ?
ಉ: ಮೈಕ್ರೋಸಾಫ್ಟ್ನವರದೇ ಆದ msdn.microsoft.com ಮತ್ತು www.asp.net ಜಾಲತಾಣಗಳನ್ನು ನೋಡಿ.
ಕಂಪ್ಯೂತರ್ಲೆ
ಭಯೋತ್ಪಾದಕರು ಹೈಟೆಕ್ ಆಗುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಅವರು ಹೊಸ ನಮೂನೆಯ ಬಾಂಬ್ ತಯಾರಿಸಿದ್ದಾರೆ. ಒಂದು ಜಾಗದಲ್ಲಿ ಬಾಂಬ್ ಸ್ಫೋಟ ಆದ ತಕ್ಷಣ ಇದನ್ನು ನಾವೇ ಮಾಡಿದ್ದು ಎಂದು ಆ ಬಾಂಬ್ ಭಯೋತ್ಪಾದಕರ ಫೇಸ್ಬುಕ್ ಜಾಲತಾಣ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಅದು ದಾಖಲಿಸುತ್ತದೆ.

ಸೋಮವಾರ, ಡಿಸೆಂಬರ್ 6, 2010
ಗಣಕಿಂಡಿ - ೦೮೧ (ಡಿಸೆಂಬರ್ ೦೬, ೨೦೧೦)
ಅಂತರಜಾಲಾಡಿ
ಮುಕ್ತ ಶಿಕ್ಷಣ ಸಂಪನ್ಮೂಲ
ಶಿಕ್ಷಣ ದಿನ ಕಳೆದಂತೆ ಅತಿ ದುಬಾರಿಯಾಗುತ್ತಿದೆ. ಪುಸ್ತಕಗಳ ಬೆಲೆ ಗಮನಿಸಿದ್ದೀರಾ? ಸರಕಾರಿ ಪುಸ್ತಕಗಳ ಹೊರತಾಗಿ ಇತರೆ ಖಾಸಗಿ ಪುಸ್ತಕಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ತಮ ಚಿತ್ರಗಳಿಂದ ತುಂಬಿದ ಪುಸ್ತಕಗಳ ಬೆಲೆ ಇನ್ನೂ ಅಧಿಕ. ಶಿಕ್ಷಣ ಜನಸಾಮಾನ್ಯರಿಗೆ ಸುಲಭವಾಗಿ ದೊರಕುವಂತಿರಬೇಕು ಮತ್ತು ಮುಕ್ತವಾಗಿರಬೇಕೆಂದು ಹೇಳುವವರು ನಮ್ಮ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇದ್ದಾರೆ. ಇವರೆಲ್ಲ ಸೇರಿಕೊಂಡು ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಸಂಪನ್ಮೂಲಗಳನ್ನು ಮುಕ್ತವಾಗಿ ದೊರೆಯುವಂತೆ ಮಾಡಲು ಒಂದು ಜಾಲತಾಣವನ್ನು ನಿರ್ಮಿಸಿದ್ದಾರೆ. ಅದರ ವಿಳಾಸ -www.oercommons.org. ಇತರೆ ಮುಕ್ತ ಸಂಪನ್ಮೂಲಗಳಿಗೆ ಇದರಲ್ಲಿ ಸಂಪರ್ಕಕೊಂಡಿಗಳೂ ಇವೆ.
ಡೌನ್ಲೋಡ್
ಎಂಪಿ3 ಟ್ಯಾಗ್
ಗಣಕ ಮತ್ತು ಹಾಡುಗಳ ಪ್ಲೇಯರ್ಗಳಲ್ಲಿ ಬಳಕೆಯಾಗುವ ಹಾಡುಗಳು ಸಾಮಾನ್ಯವಾಗಿ ಎಂಪಿ೩ ವಿಧಾನದವುಗಳು. ಈ ಹಾಡುಗಳ ಕಡತಗಳಿಗೆ (ಫೈಲ್) ಹಲವು ಗುಣವಿಶೇಷಗಳಿರುತ್ತವೆ. ಅವುಗಳೆಂದರೆ ಹಾಡಿನ ಶೀರ್ಷಿಕೆ, ಕಲಾವಿದ, ಆಲ್ಬಮ್ ಹೆಸರು, ಆಲ್ಬಮ್ ಚಿತ್ರ, ದಿನಾಂಕ, ಇತ್ಯಾದಿ. ಹೆಚ್ಚಿನ ಗಣಕದಲ್ಲಿ ಈ ಹಾಡುಗಳನ್ನು ಪ್ಲೇ ಮಾಡುವಾಗ ಸಾಮಾನ್ಯವಾಗಿ ಈ ಗುಣವೈಶಿಷ್ಟ್ಯಗಳಿಗೆ ಅನುಗಣವಾಗಿ ಅವುಗಳನ್ನು ಪ್ಲೇ ಮಾಡಲಾಗುತ್ತದೆ. ಹೆಚ್ಚಿನ ಎಂಪಿ೩ ಪ್ಲೇಯರ್ಗಳಲ್ಲೂ (ಉದಾ -ಐಪಾಡ್) ಇದೇ ವಿಧಾನವನ್ನು ಬಳಸಲಾಗುತ್ತದೆ. ಹಾಡುಗಳನ್ನು ಸಿ.ಡಿ.ಯಿಂದ ಗಣಕದಲ್ಲಿ ಪ್ರತಿಮಾಡಿ ಎಂಪಿ೩ಗೆ ಪರಿವರ್ತನೆ ಮಾಡಿದಾಗ ಈ ಎಲ್ಲ ಗುಣವೈಶಿಷ್ಟ್ಯಗಳನ್ನು ದಾಖಲಿಸಬೇಕು. ಇಲ್ಲವಾದಲ್ಲಿ ಅವುಗಳನ್ನು ಪ್ಲೇ ಮಾಡಲು ಒದ್ದಾಡಬೇಕಾಗುತ್ತದೆ. ಹಾಡುಗಳಿಗೆ ಈ ಎಂಪಿ೩ ಗುಣವೈಶಿಷ್ಟ್ಯಗಳನ್ನು ದಾಖಲಿಸಲು ಅನುವುಮಾಡಿಕೊಡುವ ಒಂದು ಉಚಿತ ತಂತ್ರಾಂಶ Mp3tag. ಇದು ದೊರೆಯುವ ಜಾಲತಾಣ www.mp3tag.de/en.
e - ಸುದ್ದಿ
1$ ಪರಿಹಾರ
ಗೂಗ್ಲ್ ಬೀದಿನೋಟ ಎಂಬ ಜಾಲತಾಣದಲ್ಲಿ ಬೀದಿಗಳನ್ನು ಅಂತರಜಾಲದ ಮೂಲಕ ವೀಕ್ಷಣೆ ಮಾಡಬಹುದು. ಮಕ್ಕಳನ್ನು ಅಮೇರಿಕಕ್ಕೆ ಕಳುಹಿಸಿರುವ ಭಾರತೀಯರು ಇಲ್ಲಿ ಕುಳಿತೇ ಅವರ ಮಕ್ಕಳ ಮನೆ, ಕಛೇರಿ, ಅವರು ಓಡಾಡುವ ರಸ್ತೆಗಳು, ಅಂಗಡಿಗಳನ್ನೆಲ್ಲ ನೋಡಬಹುದು. ಈ ರೀತಿ ಬೀದಿನೋಟವನ್ನು ದಾಖಲಿಸಲು ಗೂಗ್ಲ್ನವರು ಕಾರಿನ ಮೇಲೆ ಕ್ಯಾಮರಾ ಇಟ್ಟು ಬೀದಿ ಬೀದಿ ಓಡಿಸುತ್ತಾರೆ. ಹೀಗೆ ಬೀದಿನೋಟದಲ್ಲಿ ತಮ್ಮ ಖಾಸಗಿ ಮನೆ, ಬೀದಿಗಳನ್ನು ತೋರಿಸಿದ್ದರ ವಿರುದ್ಧ ಒಂದು ದಂಪತಿಗಳು ದಾವೆ ಹೂಡಿದರು. ಎರಡು ವರ್ಷಗಳ ಹೋರಾಟದ ನಂತರ ಅವರಿಗೆ ಪರಿಹಾರವೂ ದೊರೆಯಿತು. ಎಷ್ಟು ಗೊತ್ತೆ? ಕೇವಲ ೧ ಡಾಲರು! ಆ ದಂಪತಿಗಳು ಈಗಾಗಲೆ ರಿಯಲ್ ಎಸ್ಟೇಟ್ ಜಾಲತಾಣವೊಂದರಲ್ಲಿ ತಮ್ಮ ಮನೆ, ಬೀದಿ, ಆಸ್ತಿಗಳ ಫೋಟೋ ದಾಖಲಿಸಿದ್ದರು. ಹೀಗಿರುವಾಗ ಗೂಗ್ಲ್ನವರು ಏನು ವಿಶೇಷ ತಪ್ಪು ಮಾಡಿದಂತಾಯಿತು? ಹೌದು. ಗೂಗ್ಲ್ನವರು ಒಂದು ತಪ್ಪು ಮಾಡಿದ್ದರು. ಅದೇನೆಂದರೆ ಆ ದಂಪತಿಗಳ ಖಾಸಗಿ ರಸ್ತೆಯಲ್ಲಿ ತಮ್ಮ ಕಾರು ಚಲಾಯಿಸಿದ್ದು. ಅದಕ್ಕಾಗಿ ಪರಿಹಾರ ನೀಡಬೇಕೆಂದು ನ್ಯಾಯಾಲಯ ತೀರ್ಮಾನ ನಿಡಿತು.
e- ಪದ
ಡೊಮೈನ್ (domain) - ಅಂತರಜಾಲದಲ್ಲಿ ಮತ್ತು ಗಣಕ ಜಾಲದಲ್ಲಿ ಗಣಕಗಳು ಮತ್ತು ಇತರೆ ಸಾಧನಗಳು ಒಂದು ಗುಂಪಾಗಿ ಎಲ್ಲವಕ್ಕೂ ಏಕರೀತಿಯ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ. ಅಂತರಜಾಲದಲ್ಲಿ ಇವುಗಳನ್ನು ಸಂಖ್ಯೆಗಳ ಗುಚ್ಛದ ಮೂಲಕವೂ ಗುರುತಿಸಲಾಗುತ್ತದೆ. ಈ ರೀತಿಯ ಸಂಖ್ಯೆಗುಚ್ಛದ ವಿಳಾಸಕ್ಕೆ ಐಪಿ ವಿಳಾಸ ಎಂದು ಕರೆಯಲಾಗುತ್ತದೆ.
e - ಸಲಹೆ
ಪಣಜಿಯ ಸಂತೋಷರ ಪ್ರಶ್ನೆ: ನನ್ನಲ್ಲಿ ಒಂದು ಸ್ಯಾಮ್ಸಂಗ್ ಫೋನ್ ಇದೆ. ಗಣಕದಲ್ಲಿ ಹಾಡುಗಳನ್ನು ನನಗೆ ಬೇಕಾದ ರೀತಿಯಲ್ಲಿ ಸರಿಹೊಂದಿಸಿ ಅವುಗಳನ್ನು ಫೋನಿಗೆ ವರ್ಗಾಯಿಸಿದೆ. ಆದರೆ ಈಗ ಫೋನಿನಲ್ಲಿ ಹಾಡುಗಳು ನನಗೆ ಬೇಕಾದ ರೀತಿಯಲ್ಲಿ ಸಿಗುತ್ತಿಲ್ಲ. ಹಾಡುಗಳ ಶೀರ್ಷಿಕೆ ಪ್ರಕಾರ ಹಾಡುಗಳು ಕಾಣಿಸುತ್ತಿಲ್ಲ. ಇದಕ್ಕೇನು ಪರಿಹಾರ?
ಉ: ನೀವು ಹಾಡುಗಳನ್ನು ಫೋನಿಗೆ ವರ್ಗಾಯಿಸುವ ಮೊದಲು ಅವುಗಳ ಎಂಪಿ೩ ಟ್ಯಾಗ್ಗಳನ್ನು ಹಾಡುಗಳ ಶೀರ್ಷಿಕೆ, ಕಲಾವಿದ, ಇತ್ಯಾದಿ ಗುಣವೈಶಿಷ್ಟ್ಯಗಳನ್ನು ಸೇರಿಸಿ ನಂತರ ಫೋನಿಗೆ ವರ್ಗಾಯಿಸಬೇಕು. ಆಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಈ ರೀತಿ ಎಂಪಿ೩ ಟ್ಯಾಗ್ ಸಂಪಾದಿಸಲು ಇದೇ ಅಂಕಣದಲ್ಲಿ ಸೂಚಿಸಿರುವ Mp3tag ತಂತ್ರಾಂಶ ಬಳಸಿ.
ಕಂಪ್ಯೂತರ್ಲೆ
ತಲೆಕೆಡಿಸುವ ಜಾಲತಾಣಗಳು, ವೈರಸ್ ತುಂಬಿದ ಡೌನ್ಲೋಡ್ಗಳು, ಸಮಯ ಹಾಳುಮಾಡುವ e-ಸುದ್ದಿಗಳು, ಕೆಲಸಕ್ಕೆ ಬಾರದ e-ಸಲಹೆಗಳು, ನಗಿಸದ ಕಂಪ್ಯೂತರ್ಲೆಗಳು - ಗಣಕಿಂಡಿ ಇಷ್ಟೇನೆ.

ಮಂಗಳವಾರ, ನವೆಂಬರ್ 30, 2010
ಗಣಕಿಂಡಿ - ೦೮೦ (ನವಂಬರ್ ೨೯, ೨೦೧೦)
ಅಂತರಜಾಲಾಡಿ
ಲಿನಕ್ಸಾಯಣ
ಗಣಕ ನಡೆಸಲು ಕಾರ್ಯಾಚರಣೆಯ ವ್ಯವಸ್ಥೆ ಬೇಕು. ಹೆಚ್ಚಿನ ಮಂದಿ ಬಳಸುತ್ತಿರುವುದು ಮೈಕ್ರೋಸಾಫ್ಟ್ ವಿಂಡೋಸ್. ಆದರೆ ಅದು ತುಂಬ ದುಬಾರಿ. ಹಣ ಕೊಡದೆ, ಕಾನೂನು ಬಾಹಿರವಾಗಿ ವಿಂಡೋಸ್ ಬಳಸುತ್ತಿರುವವರು ನಮ್ಮಲ್ಲಿ ಅನೇಕ ಮಂದಿ ಇದ್ದಾರೆ. ಅಂತಹವರು ವಿಂಡೋಸ್ ಬದಲಿಗೆ ಸಂಪೂರ್ಣ ಉಚಿತ ಹಾಗೂ ಮುಕ್ತ ಕಾರ್ಯಾಚರಣೆಯ ವ್ಯವಸ್ಥೆ ಲಿನಕ್ಸ್ ಬಳಸಬಹುದು. ಲಿನಕ್ಸ್ ಅನ್ನು ಎಲ್ಲಿಂದ ಪಡೆದುಕೊಳ್ಳಬಹುದು? ಈ ಲಿನಕ್ಸ್ ಬಳಸುವುದು ಹೇಗೆ? ಅದರಲ್ಲಿ ಕನ್ನಡ ಮೂಡಿಸುವುದು ಮತ್ತು ಬೆರಳಚ್ಚು ಮಾಡುವುದು ಹೇಗೆ? - ಇತ್ಯಾದಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಕನ್ನಡ ಭಾಷೆಯಲ್ಲಿ ಬೇಕಿದ್ದಲ್ಲಿ ನೀವು ಲಿನಕ್ಸಾಯಣ ಜಾಲತಾಣಕ್ಕೆ ಭೇಟಿ ನೀಡಬಹುದು. ಇದರ ವಿಳಾಸ - linuxaayana.net.
ಡೌನ್ಲೋಡ್
ಡಾಸ್ ಆಟ ಆಡಿ
ಸುಮಾರು ಹದಿನೈದು ವರ್ಷಗಳ ಹಿಂದೆ ಡಾಸ್ ಕಾರ್ಯಾಚರಣೆಯ ವ್ಯವಸ್ಥೆಯಲ್ಲಿ ಆಟಗಳನ್ನು ಆಡಿದವರಲ್ಲಿ ನೀವೂ ಒಬ್ಬರೇ? ಆ ಆಟಗಳನ್ನು ಈಗಲೂ ಆಡಬೇಕು ಅನ್ನಿಸುತ್ತಿದೆಯೇ? ಹೌದಾದಲ್ಲಿ ನಿಮಗೆ ಡಾಸ್ ಆಟಗಳು ಸಿಗುವ ಜಾಲತಾಣವನ್ನು ತಿಳಿಸಬೇಕು. ಅದುವೇ dosgamesarchive.com. ಇಲ್ಲಿ ನೀವು ಹಳೆಯ ಜನಪ್ರಿಯ ಆಟಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಆಟಗಳಲ್ಲಿ ಪ್ಯಾಕ್ಮಾನ್, ಡಿಗ್ಗರ್, ಬ್ಲಾಕ್ಸ್, ಇತ್ಯಾದಿ ಸೇರಿವೆ. ಆಟಗಳನ್ನು ಹಲವು ವಿಭಾಗಗಳಲ್ಲಿ ವಿಭಜಿಸಿ ಅವುಗಳ ಸೂಚಿಯನ್ನು ನೀಡಲಾಗಿದೆ. ನೆನಪಿಡಿ -ಇವು ಯಾವುವೂ ಹೊಚ್ಚ ಹೊಸ ವಿಂಡೋಸ್ನಲ್ಲಿ ಕೆಲಸ ಮಾಡುವುದಿಲ್ಲ. ವಿಂಡೋಸ್ನಲ್ಲಿ ಇವುಗಳನ್ನು ಆಡಬೇಕಿದ್ದಲ್ಲಿ ಹಿಂದೊಮ್ಮೆ ಇದೇ ಅಂಕಣದಲ್ಲಿ ಸೂಚಿಸಿದ್ದ ಡಾಸ್ಬಾಕ್ಸ್ನ್ನು (dosbox.com) ಬಳಸಬೇಕು.
e - ಸುದ್ದಿ
ವ್ಯಕ್ತಿಯಿಂದ ವ್ಯಕ್ತಿಗೆ ಗಣಕ ಕಡತಗಳ ವರ್ಗಾವಣೆಗೆ ಇರುವ ಒಂದು ವಿಧಾನ ಟೊರೆಂಟ್. ಇದರ ಬಳಕೆ ಅತಿ ಹೆಚ್ಚು ಆಗುತ್ತಿರುವುದು ಚಲನಚಿತ್ರಗಳ ಚೌರ್ಯಕ್ಕೆ. ಈ ರೀತಿ ಟೊರೆಂಟ್ ಜಾಲಕ್ಕೆ ಕೃತಿಚೌರ್ಯ ಮಾಡಿದ ಚಲನಚಿತ್ರ, ತಂತ್ರಾಂಶ, ಹಾಡು, ವೀಡಿಯೋ, ಇತ್ಯಾದಿಗಳನ್ನು ಸೇರಿಸುವುದು ಕಾನೂನು ಪ್ರಕಾರ ಅಪರಾಧ. ಈ ರೀತಿಯ ಅಪರಾಧ ಎಸಗಿದ್ದಾರೆ ಎಂಬ ಆರೋಪ ಹೊರಿಸಿ ಹೈದರಾಬಾದ್ ಪೋಲೀಸರು ನಾಲ್ಕು ಮಂದಿ ಯುವಕರನ್ನು ದಸ್ತಗಿರಿ ಮಾಡಿದ್ದಾರೆ. ಟೊರೆಂಟ್ಗಳಿಗೆ ಸೂಚಿ ನೀಡುವ ಜಾಲತಾಣ ನಡೆಸಿದ್ದು ಮಾತ್ರವಾಗಿದ್ದರೆ ಅವರನ್ನು ದಸ್ತಗಿರಿ ಮಾಡಲು ಕಷ್ಟವಾಗುತ್ತಿತ್ತು. ಆದರೆ ಚಲನಚಿತ್ರಗಳನ್ನು ಪ್ರತಿ ಮಾಡಿ ಈ ಜಾಲತಾಣಕ್ಕೆ ಸೇರಿಸಿದ್ದು ಅವರ ಅಪರಾಧ.
e- ಪದ
ಟೆದರಿಂಗ್ (Tethering) - ಮೊಬೈಲ್ ಫೋನನ್ನು ಗಣಕ ಯಾ ಲ್ಯಾಪ್ಟಾಪ್ನ್ನು ಅಂತರಜಾಲಕ್ಕೆ ಸಂಪರ್ಕಿಸಲು ಬಳಸುವ ಒಂದು ವಿಧಾನ. ಇದನ್ನು ಸಾಮಾನ್ಯವಾಗಿ 3G ಸವಲತ್ತು ಇರುವ ಮೊಬೈಲ್ ಫೋನಿನಲ್ಲಿ ಮಾತ್ರ ಬಳಸುತ್ತಾರೆ. ಹೀಗೆ ಪಡೆದ ಅಂತರಜಾಲ ಸಂಪರ್ಕವನ್ನು ಇತರೆ ಗಣಕಗಳ ಜೊತೆ ಹಂಚಿಕೊಳ್ಳಬಹುದು.
e - ಸಲಹೆ
ತಿಪ್ಪೇಸ್ವಾಮಿಯವರ ಪ್ರಶ್ನೆ: ನಾನು ನನ್ನ ಗಣಕದಿಂದ ತುಂಗ, ಶ್ರುತಿ ಮತ್ತು ವೃಂದ ಹೆಸರಿನ ಫಾಂಟ್ಗಳನ್ನು ಅಳಿಸಿಹಾಕಿದ್ದೆ. ಗಣಕದಲ್ಲಿ ಕನ್ನಡದ Language Interface Pack ಕೂಡ ಇದೆ. ಈಗ ಕನ್ನಡದಲ್ಲಿ ಮೆನು ಮೂಡಿಬರಬೇಕಾದ ಜಾಗದಲ್ಲಿ ಖಾಲಿ ಚೌಕಗಳು ಕಾಣಿಸುತ್ತಿವೆ. ಇದಕ್ಕೆ ಏನು ಪರಿಹಾರ?
ಉ: ನೀವು ಯಾವ ಕಾರ್ಯಾಚರಣೆಯ ವ್ಯವಸ್ಥೆ ಬಳಸುತ್ತಿದ್ದೀರಿ ಎಂದು ತಿಳಿಸಿಲ್ಲ. ವಿಂಡೋಸ್ ಎಕ್ಸ್ಪಿ ಎಂದು ಭಾವಿಸುತ್ತೇನೆ. ಕಂಟ್ರೋಲ್ ಪ್ಯಾನೆಲ್ಗೆ ಹೋಗಿ ಭಾರತೀಯ ಭಾಷೆಯನ್ನು ಮತ್ತೊಮ್ಮೆ ಚಾಲನೆ ಮಾಡಿದಲ್ಲಿ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಅಥವಾ ನಿಮ್ಮ ಸ್ನೇಹಿತರ ಗಣಕದಿಂದ ತುಂಗ ಫಾಂಟ್ನ್ನು ಪ್ರತಿ ಮಾಡಿಕೊಂಡು ನಿಮ್ಮ ಗಣಕಕ್ಕೆ ಸೇರಿಸಿದರೂ ಆಗಬಹುದು.
ಕಂಪ್ಯೂತರ್ಲೆ
ಗಣಕವ್ಯಸನಿ ಒಬ್ಬ ಹಡಗು ಮುಳುಗಿದಾಗ ಬದುಕುಳಿದು ಜನವಸತಿಯಿಲ್ಲದ ದ್ವೀಪದಲ್ಲಿ ಸೇರಿಕೊಂಡ. ಅವನ ಲ್ಯಾಪ್ಟಾಪ್ ಆನ್ ಮಾಡಿದಾಗ ಅದು ಕೆಲಸ ಮಾಡಿತು. ಡಾಟಾ ಕಾರ್ಡ್ ಮೂಲಕ ಅಂತರಜಾಲ ಸಂಪರ್ಕವೂ ಸಿಕ್ಕಿತು. ಕೂಡಲೇ ಆತ ಗಣಕ ಸೇವಾ ಕೇಂದ್ರಕ್ಕೆ ಇಮೈಲ್ ಮಾಡಿದ - “ನಿಮ್ಮಲ್ಲಿ ಲ್ಯಾಪ್ಟಾಪ್ನ ಹಾರ್ಡ್ಡಿಸ್ಕಿನಿಂದ ಮರಳು ತೆಗೆಯುವ ತಂತ್ರಾಂಶ ಇದೆಯೇ?”

ಸೋಮವಾರ, ನವೆಂಬರ್ 22, 2010
ಗಣಕಿಂಡಿ - ೦೭೯ (ನವಂಬರ್ ೨೨, ೨೦೧೦)
ಅಂತರಜಾಲಾಡಿ
ಕಿಂದರಜೋಗಿ
ಮಕ್ಕಳಿಗಾಗಿ ಕಥೆ, ಕವನ, ನಾಟಕ, ಇತ್ಯಾದಿಗಳು ನಮ್ಮಲ್ಲಿ ಅಂದರೆ ಕನ್ನಡ ಭಾಷೆಯಲ್ಲಿ ಇರುವುದೇ ಬಹುಕಡಿಮೆ. ಹಾಗಿರುವಾಗ ಅಂತರಜಾಲದಲ್ಲಿ ಅವುಗಳನ್ನು ಭೂತಕನ್ನಡಿ ಹಾಕಿಯೇ ಹುಡುಕಬೇಕು. ಈಗೊಂದು ಸಿಹಿಸುದ್ದಿ ಬಂದಿದೆ. ಕನ್ನಡ ಭಾಷೆಯಲ್ಲಿ ಮಕ್ಕಳಿಗಾಗಿ ಒಂದು ಅಂತರಜಾಲ ನಿರ್ಮಾಣವಾಗಿದೆ. ಅದರಲ್ಲಿ ಕಥೆ, ಕವನ, ನಾಟಕ, ವಿಜ್ಞಾನ ಪ್ರಯೋಗಗಳು, ಕಾರ್ಟೂನ್ ಎಲ್ಲ ಇವೆ. ಇದು ಒಂದು ರೀತಿಯಲ್ಲಿ ಜನರಿಂದ ಜನರಿಗಾಗಿ ಇರುವ ಜಾಲತಾಣ. ಅಂದರೆ ನಾವು ನೀವು ಎಲ್ಲರೂ ಈ ಜಾಲತಾಣಕ್ಕೆ ಲೇಖನಗಳನ್ನು ನೀಡಬಹುದು. ಇದರ ವಿಳಾಸ - kindarajogi.com.
ಡೌನ್ಲೋಡ್
ವಿ-ಪುಸ್ತಕ ಪರಿವರ್ತಕ
ವಿದ್ಯುನ್ಮಾನ ಪುಸ್ತಕಗಳು ಈಗ ಜನಪ್ರಿಯವಾಗುತ್ತಿವೆ. ವಿ-ಪುಸ್ತಕಗಳನ್ನು ಓದಲೆಂದೇ ಗ್ಯಾಜೆಟ್ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಉದಾ:- ಐಪ್ಯಾಡ್, ಕಿಂಡಲ್, ನೂಕ್, ಇತ್ಯಾದಿ. ಗಣಕ ಮತ್ತು ಸ್ಮಾರ್ಟ್ಫೋನ್ಗಳಲ್ಲೂ ಈ ಪುಸ್ತಕಗಳನ್ನು ಓದಬಹುದು. ಆದರೆ ಪ್ರತಿಯೊಬ್ಬರೂ ತಮ್ಮದೇ ವಿಧಾನದ ವಿ-ಪುಸ್ತಕವನ್ನು ಬಳಸುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಹಲವಾರು ನಮೂನೆಯ ವಿ-ಪುಸ್ತಕಗಳು ತುಂಬಿವೆ. ನಿಮ್ಮ ಫೋನಿಗೆ ಬೇಕಾದ ವಿಧಾನದ ಪುಸ್ತಕ ನಿಮ್ಮಲ್ಲಿ ಇಲ್ಲ, ಆದರೆ ನಿಮ್ಮಲ್ಲಿ ಇನ್ನೊಂದು ವಿಧಾನದ ವಿ-ಪುಸ್ತಕ ಇದೆ ಎಂದಾದಲ್ಲಿ ಈ ಪುಸ್ತಕಗಳನ್ನು ಒಂದು ವಿಧಾನದಿಂದ ಇನ್ನೊಂದು ವಿಧಾನಕ್ಕೆ ಪರಿವರ್ತಿಸಲು ಒಂದು ಮುಕ್ತ ತಂತ್ರಾಂಶ ಲಭ್ಯವಿದೆ. ಅದುವೇ calibre. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ calibre-ebook.com/download. ಈ ಜಾಲತಾಣದಲ್ಲಿ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಕಾರ್ಯಾಚರಣೆಯ ವ್ಯವಸ್ಥೆಗಳಿಗೆ ತಂತ್ರಾಂಶ ಲಭ್ಯವಿದೆ.
e - ಸುದ್ದಿ
ಶ್ವಾನಟ್ವೀಟ್
“ನನ್ನ ಬೇರುಗಳಿಗೆ ನೀರು ಕಡಿಮೆಯಾಗುತ್ತಿದೆ” ಎಂದು ಟ್ವೀಟ್ ಮಾಡುವ ಗಿಡದ ಬಗ್ಗೆ ಈ ಅಂಕಣದಲ್ಲಿ ಹಿಂದೊಮ್ಮೆ ವರದಿ ಮಾಡಲಾಗಿತ್ತು. ಈಗ ಶ್ವಾನಪುರಾಣದ ಟ್ವಿಟ್ಟರ್ ಅಧ್ಯಾಯ ಪ್ರಾರಂಭವಾಗಿದೆ. ಪಪ್ಪಿಟ್ವೀಟ್ ಎಂಬ ಗ್ಯಾಜೆಟ್ ಅಮೆರಿಕದಲ್ಲಿ ಮಾರುಕಟ್ಟೆಗೆ ಬಂದಿದೆ. ಅದನ್ನು ನಾಯಿಯ ಕುತ್ತಿಗೆಯ ಪಟ್ಟಿಗೆ ಜೋಡಿಸಲಾಗುತ್ತದೆ. ಓಡಾಟ, ಬೊಗಳಾಟ, ನಿದ್ದೆ ಇತ್ಯಾದಿ ನಾಯಿಗಳು ಸಹಜವಾಗಿ ಮಾಡುವ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅದಕ್ಕೆ ಇದೆ. ಅಷ್ಟು ಮಾತ್ರವಲ್ಲ. ಅದನ್ನು ನಿಸ್ತಂತು ವಿಧಾನದಲ್ಲಿ ಮನೆಯ ಗಣಕಕ್ಕೆ ಜೋಡಿಸಬಹುದು. ಇದರ ಜೊತೆ ದೊರೆಯುವ ತಂತ್ರಾಂಶದಲ್ಲಿ ಆಯಾಯ ಕ್ರಿಯೆಗೆ ಅನ್ವಯವಾಗುವಂತೆ ಟ್ವೀಟ್ ಮಾಡುವ ಸವಲತ್ತು ಇದೆ. ಇನ್ನು ಮುಂದೆ ಶ್ವಾನದೊಡೆಯ ಆಫೀಸಿನಲ್ಲಿದ್ದಾಗ ಮನೆಯ ನಾಯಿಯಿಂದ “ನಾನು ನಿದ್ದೆ ಮಾಡುತ್ತಿದ್ದೇನೆ”, “ನಾನು ಬೊಗಳಿದಾಗ ಊರೇ ಬೊಗಳುತ್ತದೆ” -ಇತ್ಯಾದಿ ಟ್ವೀಟ್ ಬರಬಹುದು.
e- ಪದ
ಸ್ಪರ್ಶಪರದೆ (ಟಚ್ಸ್ಕ್ರೀನ್ -touchscreen) -ಮುಟ್ಟಿದರೆ ಕೆಲಸ ಮಾಡುವ ಪರದೆಗಳು. ಇಂತಹವುಗಳ ಬಳಕೆ ಈಗೀಗ ಮೊಬೈಲ್ ಫೋನ್ಗಳಲ್ಲಿ ಸಹಜವಾಗುತ್ತಿದೆ. ಈ ಸ್ಪರ್ಶಪರದೆಗಳಲ್ಲಿ ಎರಡು ನಮೂನೆ. ಕಡ್ಡಿಯಿಂದ ಅಥವಾ ಉಗುರಿನಿಂದ ಒತ್ತಿದರೆ ಕೆಲಸ ಮಾಡುವಂತಹವು ಮತ್ತು ಬೆರಳಿನಿಂದ ಒತ್ತಿದರೆ ಮಾತ್ರ ಕೆಲಸ ಮಾಡುವಂತಹವು. ಈ ಸ್ಪರ್ಶಪರದೆಗಳನ್ನು ಎಟಿಎಂ ಮತ್ತು ಕಿಯೋಸ್ಕ್ಗಳಲ್ಲೂ ಬಳಸುತ್ತಾರೆ.
e - ಸಲಹೆ
ಪರಶುರಾಮ ಕಟ್ಟಿಮನಿಯವರ ಪ್ರಶ್ನೆ: Shared drive ನ ಕೆಳಗಿನ ಹಸ್ತದ ಚಿತ್ರವನ್ನು ಹೇಗೆ ತೆಗೆಯಬೇಕು?
ಉ: ಈ ಚಿತ್ರ ಅರ್ಥಾತ್ ಐಕಾನ್ ನಿಮ್ಮ ಡ್ರೈವ್ ಅಥವಾ ಫೋಲ್ಡರ್ ಗಣಕಜಾಲದಲ್ಲಿ ಇರುವ ಇತರರೊಂದಿಗೆ ಹಂಚಿಕೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ಚಿತ್ರ ಇರುವ ತನಕ ನಿಮ್ಮ ಡ್ರೈವ್ ಅಥವಾ ಫೋಲ್ಡರ್ ಅನ್ನು ಅದೇ ಗಣಕಜಾಲದಲ್ಲಿ ಇರುವ ಇತರೆ ಮಂದಿ ಬಳಸಬಹುದು. ಹಂಚಿಕೆಯನ್ನು (sharing) ನಿಲ್ಲಿಸಿದೊಡನೆ ಈ ಚಿತ್ರವೂ ಮಾಯವಾಗುತ್ತದೆ.
ಕಂಪ್ಯೂತರ್ಲೆ
ಟ್ವಿಟ್ಟರ್ ಗಾದೆ
ಆಡಿದ ಮಾತು ಮಾಡಿದ ಟ್ವೀಟ್ ಹಿಂದಕ್ಕೆ ಬರುವುದಿಲ್ಲ.

ಕಿಂದರಜೋಗಿ,
ಟ್ವಿಟ್ಟರ್,
calibre,
touchscreen
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)