ಅಂತರಜಾಲಾಡಿ
ಆವರ್ತಕೋಷ್ಟಕ ವೀಡಿಯೋ
ಮೂಲವಸ್ತುಗಳನ್ನು ಒಂದು ಕ್ರಮದಲ್ಲಿ ಜೋಡಿಸಿರುವ ಆವರ್ತಕೋಷ್ಟಕ ಎಲ್ಲರಿಗೂ ತಿಳಿದಿರುವ ವಿಚಾರ. ಈ ಆವರ್ತಕೋಷ್ಟಕದ ಬಗ್ಗೆ ಹಲವಾರು ಜಾಲತಾಣಗಳಿವೆ. ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಬಲ್ಲ ತಂತ್ರಾಂಶಗಳೂ ಇವೆ. ಆ ಬಗ್ಗೆ ಇದೇ ಅಂಕಣದಲ್ಲಿ ಮಾಹಿತಿ ನೀಡಲಾಗಿತ್ತು. ಆವರ್ತಕೋಷ್ಟಕದಲ್ಲಿರುವ ಪ್ರತಿ ಮೂಲವಸ್ತುವಿಗೂ ಒಂದು ಕಥೆ ಇದೆ. ಒಂದೊಂದು ಧಾತುವಿನ ಕಥೆಯೂ ಸ್ವಾರಸ್ಯಕರ. ಕೆಲವು ಮೂಲವಸ್ತುಗಳನ್ನು ಪ್ರಯೋಗಾಲಯದಲ್ಲಿ ಮಾತ್ರ ಕಾಣಬಹದು. ಅವುಗಳ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಇಂತಹ ಕುತೂಹಲವನ್ನು ತಣಿಸುವ ಜಾಲತಾಣ www.periodicvideos.com. ಮೂಲವಸ್ತುಗಳ ಬಗ್ಗೆ ಮಾತ್ರವಲ್ಲ, ಇನ್ನೂ ಹಲವಾರು ಸ್ವಾರಸ್ಯಕರ ವೀಡಿಯೋಗಳು ಈ ಜಾಲತಾಣದಲ್ಲಿವೆ. ಭಾರತೀಯ ರಸಾಯನಶಾಸ್ತ್ರ ಎಂಬ ಒಂದೇ ಒಂದು ವೀಡಿಯೋದಲ್ಲಿ ಭಾರತಕ್ಕೆ ಇದು ತನಕ ಬಂದಿರುವ ಒಂದೇ ಒಂದು ವಿಜ್ಞಾನ ನೋಬೆಲ್ ಬಗ್ಗೆ ವಿವರಗಳಿವೆ.
ಡೌನ್‌ಲೋಡ್
ಮೌಸ್ ಗುದ್ದಾಟ ಬಿಡಿ
ಮೌಸ್ ಇಲ್ಲದ ಗಣಕ ಊಹಿಸುವುದೇ ಕಷ್ಟ. ಗಣಕದಲ್ಲಿ ಕೆಲಸ ಮಾಡುವಾಗ ಬೆರಳುಗಳಿಗೆ ಸುಲಭವಾಗಲಿ ಎಂದು ಮೌಸ್‌ನ ಆವಿಷ್ಕಾರವಾಯಿತು. ಆದರೂ ಕೆಲವೊಮ್ಮೆ ಮೌಸ್ ಕಿರಿಕಿರಿ ಉಂಟುಮಾಡುತ್ತದೆ. ಮತ್ತೆ ಮತ್ತೆ ಒಂದೇ ರೀತಿ ಬೆರಳುಗಳನ್ನು ಬಳಸುವುದರಿಂದ ಮುಂಗೈ ಮತ್ತು ಬೆರಳುಗಳಿಗೆ ನೋವಾಗುವ ಸಾಧ್ಯತೆಗಳಿವೆ. ಈ ರೀತಿ ನೋವಾಗುವುದನ್ನು ತಪ್ಪಿಸಬೇಕಾದರೆ ಮೌಸ್ ಬಳಸುವ ವಿಧಾನ ಬದಲಾಯಿಸಬೇಕು ಮಾತ್ರವಲ್ಲ ಮೌಸ್ ಬಳಸುವುದನ್ನೇ ಕಡಿಮೆ ಮಾಡಬೇಕು. ಆದರೆ ಮೌಸ್ ಇಲ್ಲದೆ ಗಣಕ ಬಳಸುವುದೆಂತು ಅನ್ನುತ್ತೀರಾ? ಮೌಸ್ ಇಲ್ಲದೆ ಕೇವಲ ಕೀಲಿಮಣೆ ಬಳಸಿ ಮೌಸ್‌ನ ಎಲ್ಲ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುವ ತಂತ್ರಾಂಶ MouseFIGHTER. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - www.mousefighter.com.
e - ಸುದ್ದಿ
ಗುಂಡೇಟಿನಿಂದ ಉಳಿಸಿದ ಫೋನು
ಹಿಮದ ಪ್ರಪಾತಕ್ಕೆ ಜಾರದಂತೆ ಒಬ್ಬಾತನನ್ನು ಬದುಕುಳಿಸಿದ ದೊಡ್ಡ ಗಾತ್ರದ ಫೋನು ಬಗ್ಗೆ ಇದೇ ಅಂಕಣದಲ್ಲಿ ವರದಿ ನೀಡಲಾಗಿತ್ತು. ಗುಂಡೇಟಿನಿಂದ ಒಬ್ಬಾತನನ್ನು ಫೋನೊಂದು ಬದುಕುಳಿಸಿದ ಕಥೆ ಈಗ ವರದಿಯಾಗಿದೆ. ಎದೆಯ ಭಾಗದಲ್ಲಿ ಅಂಟಿಸಿದ್ದ ಲೋಹದ ಬಿಲ್ಲೆಯಿಂದಾಗಿ ಗುಂಡೇಟಿನಿಂದ ಬದುಕುಳಿದ ಕಥೆಯನ್ನು ಖ್ಯಾತ ಹಿಂದಿ ಸಿನಿಮಾದಲ್ಲಿ ನೋಡಿದ ನೆನಪಿರಬಹುದು. ಈ ಕಥೆಯೂ ಅದೇ ರೀತಿ ಇದೆ. ಅಟ್ಲಾಂಟದ ಜಾನ್ ಗಾರ್ಬರ್ ಹೆಸರಿನ ವ್ಯಕ್ತಿ ರಾತ್ರಿಕ್ಲಬ್ಬೊಂದರಲ್ಲಿ ಸುರಕ್ಷಕನಾಗಿ ಕೆಲಸ ಮಾಡುತ್ತಿದ್ದ. ಅತಿಯಾಗಿ ಕುಡಿದಿದ್ದ ಕೆಲವು ಮಂದಿ ಆತನೊಡನೆ ಜಗಳ ಕಾದರು. ಕೊನೆಗೊಬ್ಬ ತನ್ನ ಪಿಸ್ತೂಲಿನಿಂದ ಆತನ ಎದೆಯ ಭಾಗಕ್ಕೆ ಗುಂಡು ಹೊಡೆದ. ಜಾನ್ ಧರಿಸಿದ್ದ ದಪ್ಪ ಕೋಟನ್ನು ಸೀಳಿ ಮುಂದುವರೆದ ಗುಂಡು ಆತನ ಅಂಗಿ ಕಿಸೆಯಲ್ಲಿದ್ದ ದಪ್ಪ ಫೋನಿನಿಂದಾಗಿ ತಡೆಹಿಡಿಯಲ್ಪಟ್ಟಿತು. ಈಗ ಆತನ ಕೋಟು ಮತ್ತು ಫೋನು ಎರಡಲ್ಲೂ ತೂತುಗಳಾಗಿವೆ. ಆತನ ಜೀವಕ್ಕೇನೂ ಅಪಾಯವಾಗಲಿಲ್ಲ. ಅಂಗಿಕಿಸೆಯಲ್ಲಿ ಫೋನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎನ್ನುವವರು ಈಗೇನಂತಾರೆ?
e- ಪದ
ಆಪ್ (App) -ಇದು application ಎಂಬುದರ ಸಂಕ್ಷಿಪ್ತ ರೂಪ. ಗಣಕ, ಸ್ಮಾರ್ಟ್‌ಫೋನ್ ಅಥವಾ ಇನ್ಯಾವುದಾದರೂ ಮಾಹಿತಿ ತಂತ್ರಜ್ಞಾನ ಆಧಾರಿತ ಸಾಧನದಲ್ಲಿ ಕೆಲಸ ಮಾಡುವ ಆನ್ವಯಿಕ ತಂತ್ರಾಂಶ. ಈ ಪದವನ್ನು ೨೦೧೦ರ ಪದ ಎಂದು ಆಯ್ಕೆ ಮಾಡಲಾಗಿದೆ.
e - ಸಲಹೆ
ಪ್ರ: ಕರ್ನಾಟಕ ಲೋಕಾಯುಕ್ತರ ಜಾಲತಾಣದ ವಿಳಾಸ ಏನು?
ಉ: lokayukta.kar.nic.in
ಕಂಪ್ಯೂತರ್ಲೆ
ಐದನೆಯ ತರಗತಿಯಲ್ಲಿ ಓದುತ್ತಿರುವ ಕೋಲ್ಯನ ಮಗನಿಗೆ ಶೇಕ್ಸ್‌ಪಿಯರ್ ಬಗ್ಗೆ ಪ್ರಬಂಧ ಬರೆದುಕೊಂಡು ಬರಲು ಶಾಲೆಯಲ್ಲಿ ಹೇಳಿದ್ದರು. ಆತ ಗೂಗ್‌ಲ್‌ನಲ್ಲಿ ಶೇಕ್ಸ್‌ಪಿಯರ್ ಎಂಬು ಟೈಪಿಸಿದಾಗ ಬಂದ ಮಾಹಿತಿಗಳನ್ನೆಲ್ಲ ಓದದೆ ನಕಲು ಮಾಡಿ ಒಂದು ವರ್ಡ್ ಫೈಲಿಗೆ ಅಂಟಿಸಿ ತೆಗೆದುಕೊಂಡು ಹೋಗಿ ಒಪ್ಪಿಸಿದ. ಅದರಲ್ಲಿ ಒಂದು ಕಡೆ “ನಾನು ಈ ಬರವಣಿಗೆಯನ್ನು ನನ್ನ ಪ್ರೇಯಸಿಯ ನೆನಪಿಗೆ ಮುಡಿಪಾಗಿ ನೀಡುತ್ತಿದ್ದೇನೆ” ಎಂದು ಇತ್ತು.
Articles from the weekly column in Kannada Prabha, Kannada daily, by Dr U B Pavanaja, on information technology, Internet, computer, software utilities, tech jokes, tips and tricks, terms, etc.
ಮಂಗಳವಾರ, ಜನವರಿ 18, 2011
ಸೋಮವಾರ, ಜನವರಿ 10, 2011
ಗಣಕಿಂಡಿ - ೦೮೬ (ಜನವರಿ ೧೦, ೨೦೧೧)
ಅಂತರಜಾಲಾಡಿ
ಗ್ರಹ ಹುಡುಕಿ
ನಮ್ಮ ಬ್ರಹ್ಮಾಂಡದಲ್ಲಿರುವ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ನಮ್ಮ ಸೂರ್ಯನಿಗೆ ಮಾತ್ರ ಗ್ರಹಗಳಿವೆ ಎಂದು ನಂಬಿದ್ದ ಕಾಲ ಇತ್ತು. ಬೇರೆ ನಕ್ಷತ್ರಗಳಿಗೂ ಗ್ರಹಗಳಿವೆ ಎಂದು ಈಗ ಪತ್ತೆಹಚ್ಚಲಾಗಿದೆ. ಈಗಾಗಲೆ ಸುಮಾರು ೫೦೦ಕ್ಕಿಂತ ಹೆಚ್ಚು ಅಂತಹ ಗ್ರಹಗಳನ್ನು ಕಂಡುಹುಡುಕಲಾಗಿದೆ. ಇಂತಹ ಗ್ರಹಗಳನ್ನು ಕಂಡುಹುಡುಕುವುದು ಸುಲಭವಲ್ಲ. ನಕ್ಷತ್ರದಿಂದ ಸೂಸುವ ಬೆಳಕನ್ನು ಮತ್ತು ಅದರ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಗ್ರಹಗಳು ಸುತ್ತುತ್ತಿವೆ ಎಂದು ತೀರ್ಮಾನಿಸಲಾಗುತ್ತದೆ. ಈ ಸಂಶೋಧನೆಗೆ ತುಂಬ ಸಮಯ ಮತ್ತು ತಾಳ್ಮೆ ಬೇಕು. ಇದಕ್ಕೆಂದೆ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ದೂರದರ್ಶಕಗಳಿಂದ ದೊರಕಿದ ಮಾಹಿತಿಯನ್ನು ಉಚಿತವಾಗಿ ಅಂತರಜಾಲದಲ್ಲಿ ಸೇರಿಸಿದ್ದಾರೆ. ಆಸಕ್ತರು ಈ ಮಾಹಿತಿಯನ್ನು ಬಳಸಿ ಮನೆಯಲ್ಲೇ ಕುಳಿತು ಗ್ರಹಗಳನ್ನು ಪತ್ತೆಹಚ್ಚಬಹುದು. ಹೀಗೆ ಗ್ರಹಗಳನ್ನು ಹುಡುಕಲೆಂದೇ ಮಾಹಿತಿ ನೀಡುವ ಜಾಲತಾಣ www.planethunters.org. ಇತ್ತೀಚೆಗೆ ಒಬ್ಬರು ಇಂತಹ ಮಾಹಿತಿ ಬಳಸಿ ತಮ್ಮ ಮನೆಯಲ್ಲೇ ಕುಳಿತು ನಾಲ್ಕು ಗ್ರಹಗಳನ್ನು ಪತ್ತೆಹಚ್ಚಿದ್ದಾರೆ.
ಡೌನ್‌ಲೋಡ್
ಯಾರಿಂದಾಯಿತು?
ಆಗಾಗ ಗಣಕವು ನೀಲಿ ಪರದೆ ಪ್ರದರ್ಶಿಸಿ ತಟಸ್ಥವಾಗುತ್ತಿದೆಯೆ? ಇಂತಹ ಸಮಸ್ಯೆಗೆ ಒಂದು ಪ್ರಮುಖ ಕಾರಣ ಯಾವುದೋ ತಂತ್ರಾಂಶವು ಬಳಸುತ್ತಿರುವ ಡ್ರೈವರ್ ತಂತ್ರಾಂಶ ಆಗಿರಬಹುದು. ಹಲವು ಸಾಧನಗಳನ್ನು ಬಳಸುವಾಗ ತಂತ್ರಾಂಶಗಳನ್ನು ಸರಿಯಾಗಿ ನವೀಕರಿಸಿಕೊಳ್ಳದಿದ್ದಾಗ ಇಂತಹ ತೊಂದರೆ ಕಂಡುಬರುತ್ತದೆ. ಯಾವ ಡ್ರೈವರ್ ಕೈಕೊಟ್ಟು ಗಣಕ ತಟಸ್ಥವಾಯಿತು ಎಂದು ಪತ್ತೆಹಚ್ಚಲು ಅನುವು ಮಾಡಿಕೊಡುವ ಒಂದು ಉಚಿತ ತಂತ್ರಾಂಶ WhoCrashed. ಇದರ ವಿಳಾಸ - http://bit.ly/gFU2Cy. ಗಣಕ ತಟಸ್ಥವಾದಾಗ ಅಥವಾ ತನ್ನಿಂದತಾನೆ ರಿಬೂಟ್ ಆದಾಗ ಅದು ಕೆಲವು ವರದಿಗಳನ್ನು ತಯಾರಿಸುತ್ತದೆ. ಈ ವರದಿಗಳನ್ನು ಗಣಕಪರಿಣತರಲ್ಲದವರಿಗೂ ಅರ್ಥವಾಗುವ ರೀತಿಗೆ ಪರಿವರ್ತಿಸಿ ಹೊಸ ವರದಿಯನ್ನು ಈ ತಂತ್ರಾಂಶ ನೀಡುತ್ತದೆ.
e - ಸುದ್ದಿ
ಟಿವಿಯನ್ನು ಹಿಂದೆಹಾಕಿದ ಅಂತರಜಾಲ
ಅಮೆರಿಕದಲ್ಲಿ ಒಂದು ಸಮೀಕ್ಷೆ ನಡೆಸಲಾಯಿತು. ಅಮೆರಿಕದ ಯುವ ಜನತೆ ಸುದ್ದಿಗಳಿಗೆ ಟಿವಿಯ ಬದಲಿಗೆ ಅಂತರಜಾಲವನ್ನೆ ಹೆಚ್ಚು ಆಶ್ರಯಿಸುತ್ತಾರೆ ಎಂಬುದು ಈ ಸಮೀಕ್ಷೆಯಿಂದ ತಿಳಿದುಬಂತು. ೩೦ ವರ್ಷದ ಕೆಳಗಿನ ೬೫% ಜನರು ಸುದ್ದಿಗಳನ್ನು ತಿಳಿಯಲು ಅಂತರಜಾಲವನ್ನು ನಂಬಿದ್ದಾರೆ. ೫೨% ಜನರು ಮಾತ್ರ ಸುದ್ದಿಗಳಿಗೆ ಟಿವಿಯನ್ನು ಆಶ್ರಯಿಸಿದ್ದಾರೆ. ೨೦೦೭ನೆಯ ಇಸವಿಯಲ್ಲಿ ೩೪%ರಷ್ಟು ಜನರು ಮಾತ್ರ ಸುದ್ದಿಗಳಿಗೆ ಅಂತರಜಾಲವನ್ನು ಆಶ್ರಯಿಸಿದ್ದರು. ನಮ್ಮ ದೇಶದಲ್ಲೂ ಪ್ರಮುಖ ನಗರಗಳಲ್ಲಿ ಸುದ್ದಿಗಳಿಗೆ ಅಂತರಜಾಲವನ್ನು ಆಶ್ರಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸುದ್ದಿಮಾಧ್ಯಮದ ಮಂದಿ ಇದನ್ನು ಗಮನಿಸುತ್ತಿದ್ದೀರಾ?
e- ಪದ
ಪಾವತಿ ಮಹಾದ್ವಾರ (payment gateway) -ಅಂತರಜಾಲದ ಮೂಲಕ ವ್ಯಾಪಾರ ಮಾಡುವಾಗ ಸಾಮಾನ್ಯವಾಗಿ ವ್ಯಾಪಾರಿ ಜಾಲತಾಣವು ಹಣಸಂದಾಯದ ವಿಷಯಕ್ಕೆ ಬಂದಾಗ ಇನ್ನೊಂದು ಜಾಲತಾಣಕ್ಕೆ ನಿಮ್ಮನ್ನು ವರ್ಗಾಯಿಸುವುದನ್ನು ಗಮನಿಸಿರಬಹುದು. ಈ ಜಾಲತಾಣವೇ ಪಾವತಿ ಮಹಾದ್ವಾರ. ಇವುಗಳನ್ನು ಸಾಮಾನ್ಯವಾಗಿ ಅಂತರಜಾಲ ಬ್ಯಾಂಕ್‌ಗಳು ನಡೆಸುತ್ತವೆ. ಇವು ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಇನ್ಯಾವುದಾದರು ಅಂತರಜಾಲ ಹಣಸಂದಾಯದ ವಿಧಾನದ ಮೂಲಕ ನಿಮ್ಮ ಖಾತೆಯಿಂದ ವ್ಯಾಪಾರಿ ಜಾಲತಾಣಕ್ಕೆ ಹಣವನ್ನು ವರ್ಗಾಯಿಸುತ್ತವೆ.
e - ಸಲಹೆ
ಮೈಸೂರಿನ ಪ್ರಸನ್ನ ರಾವ್ ಅವರ ಪ್ರಶ್ನೆ: ನಾನು ಗಣಕದಲ್ಲಿ ಒಂದಕ್ಕಿಂತ ಹೆಚ್ಚು ವೈರಸ್ ನಿರೋಧಕ ತಂತ್ರಾಂಶಗಳನ್ನು ಬಳಸಬಹುದೇ?
ಉ: ಒಂದಕ್ಕಿಂತ ಹೆಚ್ಚು ವೈರಸ್ ನಿರೋಧಕ ತಂತ್ರಾಂಶಗಳನ್ನು ಬಳಸುವುದು ಒಳ್ಳೆಯದಲ್ಲ. ಕೆಲವು ತಂತ್ರಾಂಶಗಳು ಈ ರೀತಿ ಬಳಸಲು ನಿಮಗೆ ಬಿಡುವುದೂ ಇಲ್ಲ.
ಕಂಪ್ಯೂತರ್ಲೆ
ಕೋಲ್ಯ ಒಂದು ಅತ್ಯಾಧುನಿಕ ಗಣಕ ನಿಯಂತ್ರಿತ ಕಾರು ಕೊಂಡುಕೊಂಡ. ಕಾರನ್ನು ಓಡಿಸಲು ಒಬ್ಬ ಡ್ರೈವರ್ ನೇಮಿಸಿಕೊಂಡ. ಕಾರು ಮಾತ್ರ ಹೊರಡಲಿಲ್ಲ. ಕೋಲ್ಯ ಡ್ರೈವರ್‌ಗೆ ಕೇಳಿದ “ಏನಾಯಿತು” ಎಂದು. “ಗಣಕಕ್ಕೆ ಡ್ರೈವರ್ ತಂತ್ರಾಂಶ ಹಾಕಬೇಕಾಗಿದೆ” ಎಂದು ಡ್ರೈವರ್ ಹೇಳಿದ. ಕೋಲ್ಯನಿಗೆ ವಿಪರೀತ ಕೋಪ ಬಂತು. “ನೀನೆ ಒಬ್ಬ ಡ್ರೈವರ್. ನಿನಗೊಬ್ಬ ಡ್ರೈವರ್ ಬೇಕೇ?” ಎಂದು ಗುರ್ರಾಯಿಸಿದ.

ಸೋಮವಾರ, ಜನವರಿ 3, 2011
ಗಣಕಿಂಡಿ - ೦೮೫ (ಜನವರಿ ೦೩, ೨೦೧೧)
ಅಂತರಜಾಲಾಡಿ
ಸಮುದಾಯ ನಿಘಂಟು
ಅಂತರಜಾಲದಲ್ಲಿ ಕನ್ನಡದ ಒಂದು ಸಮುದಾಯ ನಿಘಂಟು ಇದೆ. ಇದು ಕನ್ನಡದ ಮುಕ್ತ ವಿಶ್ವಕೋಶ ಅರ್ಥಾತ್ ವಿಕಿಪೀಡಿಯಾ ಬಳಗಕ್ಕೆ ಸೇರಿದೆ. ಸದ್ಯಕ್ಕೆ ಇದರಲ್ಲಿ ಸುಮಾರು ೮೪ ಸಾವಿರ ಪದಗಳಿವೆ. ಇದರಲ್ಲಿ ಇರುವ ಪದಗಳು ಒಂದು ವ್ಯವಸ್ಥಿತ ಚೌಕಟ್ಟಿಲ್ಲಿ ಇರುವಂತೆ ಕಂಡುಬರುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಇದರಲ್ಲಿ ಪದಗಳನ್ನು ಸೇರಿಸಿರುವವರು ಜನಸಾಮಾನ್ಯರು. ಯಾವುದೇ ನಿಗಂಟು ತಜ್ಞರಲ್ಲ. ಸರಕಾರ ನೇಮಿಸಿದ ಯಾವುದೇ ಸಮಿತಿಯೂ ಅಲ್ಲ. ಈ ನಿಘಂಟಿನ ಜಾಲತಾಣದ ವಿಳಾಸ - kn.wiktionary.org. ಅಲ್ಲಿಗೆ ನೀವೂ ಭೇಟಿ ನೀಡಿ. ಅಷ್ಟಕ್ಕೆ ನಿಲ್ಲಿಸಬೇಡಿ. ನೀವೂ ಈ ಜಾಲತಾಣಕ್ಕೆ ನಿಮ್ಮ ಕಾಣಿಕೆ ನೀಡಿ. ಅಂದ ಹಾಗೆ ಮುಕ್ತ ವಿಶ್ವಕೋಶ ವಿಕಿಪೀಡಿಯಾಕ್ಕೆ ಜನವರಿ ೧೫, ೨೦೧೧ಕ್ಕೆ ೧೦ ವರ್ಷ ತುಂಬುತ್ತಿದೆ. ಅದರ ಆಚರಣೆಗೆ ತಯಾರಿ ನಡೆಯುತ್ತಿದೆ. ನೀವೂ ಈ ಆಚರಣೆಯಲ್ಲಿ ಭಾಗವಹಿಸಬೇಕಾದರೆ ten.wikipedia.org ಜಾಲತಾಣದಲ್ಲಿ ಹೆಸರು ನೋಂದಾಯಿಸಿ.
ಡೌನ್‌ಲೋಡ್
ಕ್ಯಾಲೆಂಡರ್
ಕ್ಯಾಲೆಂಡರ್ ಅನ್ನು ಗೋಡೆಗೆ ತೂಗು ಹಾಕುವ ಕಾಲ ಕಳೆದು ಹೋಯಿತು. ಈಗ ಎಲ್ಲವೂ ಗಣಕದಲ್ಲೇ. ಕ್ಯಾಲೆಂಡರ್ ತಂತ್ರಾಂಶಗಳು ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ Rainlendar. ಇದನ್ನು ಬಳಸಿ ಯಾವ ಯಾವ ದಿನ, ಸಮಯಗಳಲ್ಲಿ ಯಾವ ಯಾವ ಕಾರ್ಯಗಳನ್ನು ಮಾಡಬೇಕಾಗಿದೆ, ಅಲಾರ್ಮ್, ಕಾರ್ಯಕ್ರಮಗಳ ಪಟ್ಟಿ ಎಲ್ಲ ದಾಖಲಿಸಬಹುದು. ಇದು ದೊರೆಯುವ ಜಾಲತಾಣ http://bit.ly/hhXklw. ಇಲ್ಲಿ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳು ಲಭ್ಯ. ಎರಡರ ವ್ಯತ್ಯಾಸವನ್ನೂ ಅಲ್ಲೇ ಓದಿಕೊಳ್ಳಬಹುದು.
e - ಸುದ್ದಿ
ಐಫೋನ್ ಕಳ್ಳನನ್ನು ಹಿಡಿದ ಹೆಲಿಕಾಫ್ಟರ್
ಐಫೋನ್ ಕಳ್ಳನನ್ನು ಹೆಲಿಕಾಫ್ಟರ್ ಮೂಲಕ ಬೆಂಬತ್ತಿ ಸೆರೆಹಿಡಿದ ಕಥೆ ಕೇಳಿದ್ದೀರಾ? ಇದು ಆಸ್ಟ್ರೇಲಿಯದಿಂದ ವರದಿಯಾದ ಕಥೆ. ಮೆಲ್ಬೋರ್ನ್‌ನಲ್ಲಿ ಒಬ್ಬಾಕೆ ರಸ್ತೆ ಬದಿಯಲ್ಲಿ ಐಫೋನ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಒಬ್ಬ ಕಳ್ಳ ಆಕೆಯ ಐಫೋನನ್ನು ಕಿತ್ತುಕೊಂಡು ಹೋದ. ಆಕೆಯ ದೂರನ್ನು ದಾಖಲಿಸಿಕೊಂಡ ಪೋಲೀಸರು ಸಮೀಪದಲ್ಲೇ ಹಾರಾಡುತ್ತಿದ್ದ ಪೋಲೀಸ್ ಹೆಲಿಕಾಫ್ಟರಿಗೆ ಆಕೆಯ ದೂರನ್ನು ವರ್ಗಾಯಿಸಿದರು. ಅದೃಷ್ಟಕ್ಕೆ ಐಫೋನಿನಲ್ಲಿದ್ದ ಜಿ.ಪಿ.ಎಸ್. ಸೌಲಭ್ಯ ಐಫೋನ್ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ವರದಿ ಮಾಡುತ್ತಿತ್ತು. ಹೆಲಿಕಾಫ್ಟರ್ ಮೂಲಕ ಪೋಲೀಸರು ಕಳ್ಳನ ಬೆಂಬತ್ತಿ ಅತನನ್ನು ಹಿಡಿದರು.
e- ಪದ
ಪೃಥಕ್ಕರಣ ಸಾಮರ್ಥ್ಯ (ರೆಸೊಲೂಶನ್ - resolution) - ಒಂದು ಚಿತ್ರದ ಸ್ಪಷ್ಟತೆಯ ಮಾಪನ. ಸಾಮಾನ್ಯವಾಗಿ ಗಣಕ ಪರದೆ (ಮೋನಿಟರ್) ಮತ್ತು ಮುದ್ರಕದಲ್ಲಿ ಚಿತ್ರವನ್ನು (ಗ್ರಾಫಿಕ್ಸ್) ಎಷ್ಟು ಸ್ಪಷ್ಟವಾಗಿ ಮೂಡಿಸಬಹುದು ಎಂಬುದನ್ನು ಇದು ಸೂಚಿಸುತ್ತದೆ. ಚಿತ್ರವನ್ನು ಚಿಕ್ಕಚಿಕ್ಕ ಚುಕ್ಕಿಗಳನ್ನು ಮೂಡಿಸುವ ಮೂಲಕ ಪಡೆಯಲಾಗುತ್ತದೆ. ಈ ಚುಕ್ಕಿಗಳ ಸಂಖ್ಯೆ ಹೆಚ್ಚಿದ್ದಷ್ಟು ಚಿತ್ರ ಹೆಚ್ಚು ಸ್ಪಷ್ಟವಾಗಿ ಮೂಡುತ್ತದೆ. ಸಾಮಾನ್ಯವಾಗಿ ಗಣಕ ಪರದೆಯ ರೆಸುಲೂಶನ್ 800x600, 1024x768, ಇತ್ಯಾದಿ ಇರುತ್ತದೆ.
e - ಸಲಹೆ
ರಾಮಚಂದ್ರರ ಪ್ರಶ್ನೆ: ಗಣಕದ ಕಾನ್ಫಿಗರೇಶನ್ ತಿಳಿಯುವುದು ಹೇಗೆ?
ಉ: ಗಣಕದ ಪರದೆಯ ಮೇಲೆ ಕಾಣಿಸುವ My Computer ಐಕಾನ್ ಮೇಲೆ ಗಣಕದ ಮೌಸ್‌ನ ಬಲಗುಂಡಿಯನ್ನು ಕ್ಲಿಕ್ ಮಾಡಿ ನಂತರ Properties ಅನ್ನು ಆಯ್ಕೆ ಮಾಡಿ.
ಕಂಪ್ಯೂತರ್ಲೆ
ಕೋಲ್ಯನಲ್ಲಿಯಾರೋ “ನಿನ್ನ ಹೊಸ ವರ್ಷದ ರೆಸೊಲೂಶನ್ ಏನು” ಎಂದು ಕೇಳಿದಾಗ ಆತ “1024x768” ಎಂದು ಉತ್ತರಿಸಿದ.

ಲೇಬಲ್ಗಳು:
ವಿಕಿಪೀಡಿಯಾ,
Rainlendar,
resolution
ಬುಧವಾರ, ಡಿಸೆಂಬರ್ 29, 2010
ಗಣಕಿಂಡಿ - ೦೮೪ (ಡಿಸೆಂಬರ್ ೨೭, ೨೦೧೦)
ಅಂತರಜಾಲಾಡಿ
ಸಂಸ್ಕೃತ ಪುಸ್ತಕಮೇಳ
ಪ್ರಪಂಚದ ಅತಿ ಹಳೆಯ ಶುದ್ಧ ವೈಜ್ಞಾನಿಕ ಭಾಷೆ ಸಂಸ್ಕೃತ. ಇಂದಿಗೂ ಈ ಭಾಷೆಯನ್ನು ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ನೋಂದಾಯಿಸುವವರು ಇಂದಿಗೂ ಇದ್ದಾರೆ. ಇಂದು ಗಣಕ ಪರಿಭಾಷೆಯಲ್ಲಿ ಬಳಕೆಯಲ್ಲಿರುವ ಸಹಜ ಭಾಷಾ ಸಂಸ್ಕರಣೆಗೆ (natural language processing) ಮೂಲಮಂತ್ರಗಳನ್ನು ನೀಡಿದ್ದು ಸಂಸ್ಕೃತ ಭಾಷೆಯಲ್ಲಿ ಪಾಣಿನಿ. ಭಾರತದ ಸಂವಿಧಾನವು ಅಧಿಕೃತವಾಗಿ ಅಂಗೀಕರಿಸಿರುವ ೨೨ ಭಾಷೆಗಳಲ್ಲಿ ಸಂಸ್ಕೃತವೂ ಸೇರಿದೆ. ವಿಶ್ವದ ಪ್ರಪ್ರಥಮ ಸಂಸ್ಕೃತ ಪುಸ್ತಕ ಮೇಳ ೨೦೧೧ರ ಜನವರಿ ೭ರಿಂದ ೧೦ರ ತನಕ ಬೆಂಗಳೂರಿನಲ್ಲಿ ಜರುಗಲಿದೆ. ಈ ಬಗ್ಗೆ ಸಮಸ್ತ ವಿವರ ನೀಡುವ ಜಾಲತಾಣ www.samskritbookfair.org. ಈ ಮೇಳದಲ್ಲಿ ನೀವೂ ಹಲವಾರು ರೀತಿಯಲ್ಲಿ ಭಾಗವಹಿಸಬಹುದು. ವಿವರಗಳು ಜಾಲತಾಣದಲ್ಲಿವೆ.
ಡೌನ್‌ಲೋಡ್
ಔಟ್‌ಲುಕ್‌ನಿಂದ ಜಿಮೈಲ್‌ಗೆ
ಜಿಮೈಲ್ ತುಂಬ ಜನಪ್ರಿಯ ಉಚಿತ ಇಮೈಲ್ ಸೇವೆ. ಹಲವರು ಜಿಮೈಲ್ ಜೊತೆ ಸಿಗುವ ವಿಳಾಸ ಪುಸ್ತಕದ ಸೌಕರ್ಯವನ್ನೂ ಬಳಸುತ್ತಾರೆ. ಇಮೈಲ್‌ಗಳನ್ನು ನಿಮ್ಮ ಗಣಕಕ್ಕೆ ಇಳಿಸಿಕೊಳ್ಳಲು ಮತ್ತು ಇಮೈಲ್ ಕಳುಹಿಸಲು ಬಳಸುವ ಜನಪ್ರಿಯ ತಂತ್ರಾಂಶ ಮೈಕ್ರೋಸಾಫ್ಟ್ ಔಟ್‌ಲುಕ್. ಇದರಲ್ಲೂ ವಿಳಾಸ ಪುಸ್ತಕದ ಸೌಕರ್ಯವಿದೆ. ಈ ಸೌಕರ್ಯದ ವೈಶಿಷ್ಟ್ಯವೇನೆಂದರೆ ಇದನ್ನು ಬಳಸಲು ಅಂತರಜಾಲಕ್ಕೆ ಸಂಪರ್ಕ ಅಗತ್ಯವಿಲ್ಲ. ಜಿಮೈಲ್‌ನಲ್ಲಿರುವ ಮತ್ತು ಔಟ್‌ಲುಕ್‌ನಲ್ಲಿರುವ ವಿಳಾಸಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುವ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/e0sNgT.
e - ಸುದ್ದಿ
ಫೇಸ್‌ಬುಕ್‌ನಲ್ಲಿ ಅವಮಾನ -ಪರಾರಿ
ಫಿಲಡೆಲ್ಪಿಯಾ ನಗರದಲ್ಲಿ ಸರಣಿ ಕಲೆ ಮತ್ತು ಲೈಂಗಿಕ ಅತ್ಯಾಚಾರ ಮಾಡಿದ ಆರೋಪಿಯನ್ನು ಪೋಲೀಸರು ಹುಡುಕುತ್ತಿದ್ದರು. ಅದೇ ಸಮಯದಲ್ಲಿ ಯಾರೋ ಪೋಕರಿಗಳು ಒಬ್ಬಾತನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಸೇರಿಸಿ ಸರಣಿ ಕೊಲೆ ಮಾಡಿದವ ಈತನೇ ಎಂದು ಸಂದೇಶ ಹಾಕಿದ್ದರು. ಆತ ನಿಜವಾಗಿ ನಿರಪರಾಧಿ ಆಗಿದ್ದ. ಆದರೆ ಜನರು ಗುಂಪುಕಟ್ಟಿಕೊಂಡು ಆತನ ಮನೆ ಮುಂದೆ ಗದ್ದಲ ಮಾಡತೊಡಗಿದರು. ಆತ ತಾನಾಗಿಯೇ ಡಿ.ಎನ್.ಎ. ಪರೀಕ್ಷೆಗೆ ಒಳಪಡಿಸಿಕೊಂಡು ನಿರಪರಾಧಿ ಎಂದು ಪೋಲೀಸರಿಂದ ಹೇಳಿಕೆ ನೀಡಿಸಿದ ನಂತರವೇ ಆತ ನಿರಾಳವಾಗಿ ಇರಲು ಸಾಧ್ಯವಾದದ್ದು.
e- ಪದ
ರೌಟರ್ (router) - ಗಣಕಜಾಲಗಳಲ್ಲಿ ಬಳಕೆಯಾಗುವ ಸಾಧನ. ಇದು ಕನಿಷ್ಠ ಎರಡು ಜಾಲಗಳಿಗೆ ಸಂಪರ್ಕಗೊಂಡಿರುತ್ತದೆ. ಗಣಕಜಾಲಗಳಲ್ಲಿ ಮಾಹಿತಿಗುಚ್ಛಗಳನ್ನು ಜಾಲದಿಂದ ಜಾಲಕ್ಕೆ ಕಳುಹಿಸಲು ಇದರ ಬಳಕೆ ಆಗುತ್ತದೆ.
e - ಸಲಹೆ
ದಾವಣಗೆರೆ ಪುನೀತ್ ಅವರ ಪ್ರಶ್ನೆ: ಮೈಕ್ರೋಸಾಫ್ಟ್ ಆಫೀಸ್ ೨೦೦೭ನ್ನು ಡೌನ್‌ಲೋಡ್ ಮಾಡಬೇಕು. ಯಾವ ಜಾಲತಾಣದಲ್ಲಿ ಸಿಗುತ್ತದೆ?
ಉ: ಆಫೀಸ್ ತಂತ್ರಾಂಶ ಉಚಿತವಾಗಿ ಸಿಗುವುದಿಲ್ಲ. ಅದನ್ನು ಹಣಕೊಟ್ಟು ಕೊಂಡುಕೊಳ್ಳಬೇಕು. ವಿವಿಧ ಆವೃತ್ತಿಗಳ ಬೆಲೆ ತಿಳಿಯಲು ಹಾಗೂ ಕೊಂಡುಕೊಳ್ಳಲು microsoftstore.co.in ಜಾಲತಾಣಕ್ಕೆ ಭೇಟಿ ನೀಡಿ. ಅಂತರಜಾಲದ ಮೂಲಕ ಉಚಿತವಾಗಿ ಮೈಕ್ರೋಸಾಫ್ಟ್ ಆಫೀಸ್ ಬಳಸಬೇಕಿದ್ದರೆ office.live.com ಜಾಲತಾಣಕ್ಕೆ ಭೇಟಿ ನಿಡಿ.
ಕಂಪ್ಯೂತರ್ಲೆ
ಗಣಕವೇದವಾಕ್ಯ: ನೀವು ಅತಿ ಅವಸರದಲ್ಲಿದ್ದೀರೆಂಬುದನ್ನು ಗಣಕ, ಮುದ್ರಕ, ಇತ್ಯಾದಿ ಸಾಧನಗಳಿಗೆ ಅರಿವು ಮಾಡಬೇಡಿ. ನೀವು ಅತಿ ಅವಸರದಲ್ಲಿದ್ದಾಗಲೆ ಅವು ಕೈಕೊಡುತ್ತವೆ.

ಬುಧವಾರ, ಡಿಸೆಂಬರ್ 22, 2010
ಗಣಕಿಂಡಿ - ೦೮೩ (ಡಿಸೆಂಬರ್ ೨೦, ೨೦೧೦)
ಅಂತರಜಾಲಾಡಿ
ರಸಾಯನಶಾಸ್ತ್ರ ವರ್ಷ
೨೦೧೧ನೆಯ ಇಸವಿಯನ್ನು ರಸಾಯನಶಾಸ್ತ್ರ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಮನುಕುಲದ ಒಳಿತಿಗಾಗಿ ರಸಾಯನಶಾಸ್ತ್ರದ ಕೊಡುಗೆಯನ್ನು ಜನರಿಗೆ ತಿಳಿಸಿ ಹೇಳುವುದು ಈ ವರ್ಷಾಚರಣೆಯ ಮೂಲ ಉದ್ದೇಶಗಳಲ್ಲೊಂದು. “ರಸಾಯನಶಾಸ್ತ್ರ - ನಮ್ಮ ಜೀವನ, ನಮ್ಮ ಭವಿಷ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ೨೦೧೧ರಲ್ಲಿ ಪ್ರಪಂಚಾದ್ಯಂತ ನಡೆಸಲು ತಯಾರಿ ನಡೆದಿದೆ. ಈ ಕಾರ್ಯಕ್ರಮಗಳು ಏನೇನು, ಎಲ್ಲೆಲ್ಲಿ ಇವು ನಡೆಯುತ್ತಿವೆ, ಇತ್ಯಾದಿ ಮಾಹಿತಿಗಳಿಗೆ www.chemistry2011.org ಜಾಲತಾಣಕ್ಕೆ ಭೇಟಿ ನೀಡಿ. ನಿಮ್ಮೂರಿನಲ್ಲಿ ಈ ವರ್ಷಾಚರಣೆಯಲ್ಲಿ ನೀವು ಪಾಲ್ಗೊಳ್ಳಬೇಕೇ? ಅಥವಾ ಕಾರ್ಯಕ್ರಮದ ರೂವಾರಿ ನೀವಾಗಲು ಉತ್ಸುಕರಾಗಿದ್ದೀರಾ? ಹಾಗಿದ್ದರೆ ಇದೇ ಜಾಲತಾಣದಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ.
ಡೌನ್‌ಲೋಡ್
ಫೋಟೋಗಳಿಂದ ಸಿನಿಮಾಕ್ಕೆ
ನೀವು ಇತ್ತೀಚೆಗೆ ಯಾವುದಾದರು ಪ್ರೇಕ್ಷಣೀಯ ಸ್ಥಳಕ್ಕೆ ಹೋಗಿರುತ್ತೀರಿ. ಆಗ ತೆಗೆದ ಫೋಟೋಗಳನ್ನು ಒಂದಾದ ನಂತರ ಒಂದರಂತೆ ಗಣಕದ ಪರದೆಯಲ್ಲಿ ಮೂಡಿಸಿ ತೋರಿಸುತ್ತೀರಿ ತಾನೆ? ಅದರ ಬದಲಿಗೆ ಆ ಎಲ್ಲ ಫೋಟೋಗಳನ್ನು ಒಂದಾದ ನಂತರ ಒಂದು ಚಲನಚಿತ್ರದ ಮಾದರಿಯಲ್ಲಿ ಮೂಡಿಬರುವಂತೆ ಮಾಡಿದರೆ ಹೇಗೆ? ಅಷ್ಟು ಮಾತ್ರವಲ್ಲ ಅದನ್ನು ಸಿ.ಡಿ. ಅಥವಾ ಡಿ.ವಿ.ಡಿ.ಗೆ ವರ್ಗಾಯಿಸಿ ನಿಮ್ಮ ಡಿ.ವಿ.ಡಿ ಪ್ಲೇಯರ್‌ನಲ್ಲಿ ಪ್ಲೇ ಮಾಡಿ ಮನೆಯಲ್ಲಿರುವ ಟಿ.ವಿ. ಪರದೆಯಲ್ಲಿ ಮೂಡಿಸಿದರೆ ಇನ್ನೂ ಚೆನ್ನ ತಾನೆ? ಹೀಗೆ ಫೋಟೋಗಳಿಂದ ಚಲನಚಿತ್ರ ತಯಾರಿಸುವ ಒಂದು ಉಚಿತ ತಂತ್ರಾಂಶ Foto2Avi. ಇದು ದೊರೆಯುವ ಜಾಲತಾಣದ ವಿಳಾಸ bit.ly/hVFeyK.
e - ಸುದ್ದಿ
ಗೂಗ್ಲ್ ತೆರಿಗೆ
ಗೂಗ್ಲ್ ಬಳಸಿ ಯಾವುದಾದರೊಂದು ಮಾಹಿತಿಯನ್ನು ಹುಡುಕುವಾಗ ಪಕ್ಕದಲ್ಲಿ ಜಾಹೀರಾತುಗಳು ಬರುವುದನ್ನು ಗಮನಿಸಿದ್ದೀರಿ ತಾನೆ? ಈ ರೀತಿ ಜಾಹೀರಾತು ಹಾಕಲು ಗೂಗ್ಲ್‌ಗೆ ಹಣ ಕೊಡಬೇಕು. ಈ ಜಾಹೀರಾತುಗಳು ಗೂಗ್ಲ್‌ನಲ್ಲಿ ಮಾತ್ರವಲ್ಲ. ಬಹುತೇಕ ಎಲ್ಲ ಜಾಲತಾಣಗಳಲ್ಲೂ ಕಾಣಸಿಗುತ್ತವೆ. ಈ ರೀತಿ ಜಾಲತಾಣಗಳಲ್ಲಿ ಜಾಹೀರಾತು ನೀಡಲು ಇನ್ನು ಮುಂದೆ ಫ್ರಾನ್ಸ್ ದೇಶದಲ್ಲಿ ಶೇಕಡ ೧ ತೆರಿಗೆ ನೀಡಬೇಕಾಗುತ್ತದೆ. ಈ ತೆರಿಗೆ ಜನವರಿ ೨೦೧೧ರಿಂದ ಜಾರಿಗೆ ಬರಲಿದೆ. ಈ ತೆರಿಗೆಗೆ ಗೂಗ್ಲ್ ತೆರಿಗೆ ಎಂದು ಜನ ನಾಮಕರಣ ಮಾಡಿದ್ದಾರೆ. ಅಂದ ಹಾಗೆ ಈ ರೀತಿ ತೆರಿಗೆ ಹಾಕಬಹುದು ಎಂಬುದನ್ನು ನಮ್ಮ ಸರಕಾರಕ್ಕೆ ಯಾರೂ ತಿಳಿಸಬೇಡಿ!
e- ಪದ
ಸ್ವಪ್ರತಿಷ್ಠೆಯ ಹಡುಕಾಟ (Egosurfing) -ಇದು ಸಾಮಾನ್ಯವಾಗಿ ಗೂಗ್ಲ್ ಅಥವಾ ಬೇರೆ ಯಾವುದಾದರು ಜಾಲಶೋಧಕವನ್ನು ಬಳಸಿ ಅಂತರಜಾಲದಲ್ಲಿ ತನ್ನ ಬಗ್ಗೆ ಏನೇನು ದಾಖಲಾಗಿದೆ ಎಂಬುದನ್ನು ಹುಡುಕುವುದನ್ನು ಸೂಚಿಸಲು ಬಳಕೆಯಾಗುತ್ತಿದೆ. ಹೀಗೆ ಮಾಡುವುದರಿಂದ ತಮ್ಮ ಬಗ್ಗೆ ಬೇರೆ ಯಾರಾದರು ಎಲ್ಲಿಲ್ಲಿ ಏನೇನು ಮಾಹಿತಿ ಹಾಕಿದ್ದಾರೆ, ಏನೇನು ಹೊಗಳಿದ್ದಾರೆ ಅಥವಾ ತೆಗಳಿದ್ದಾರೆ ಎಲ್ಲ ತಿಳಿಯಬಹುದು.
e - ಸಲಹೆ
ಅಶ್ವಿನ್ ಅವರ ಪ್ರಶ್ನೆ: ೮, ೯ ಮತ್ತು ಹತ್ತನೆಯ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳ ಬಗ್ಗೆ ವೀಡಿಯೋ ಪಾಠಗಳು ಎಲ್ಲಿ ಸಿಗುತ್ತವೆ?
ಉ: ಇದೇ ಅಂಕಣದಲ್ಲಿ ಹಿಂದೊಮ್ಮೆ ಸೂಚಿಸಿದ್ದ www.khanacademy.org ಜಾಲತಾಣ ನೋಡಿ. ಹಾಗೆಯೇ www.howstuffworks.com ಜಾಲತಾಣವನ್ನೂ ನೋಡಿ.
ಕಂಪ್ಯೂತರ್ಲೆ
ಹುಡುಗ: ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ?
ಹುಡುಗಿ: ಹೌದು
[ಹುಡುಗ ಓಡಲು ಪ್ರಾರಂಭಿಸುತ್ತಾನೆ]
ಹುಡುಗಿ: ಎಲ್ಲಿಗೆ ಓಡುತ್ತಿದ್ದೀಯಾ?
ಹುಡುಗ: ಫೇಸ್‌ಬುಕ್‌ನಲ್ಲಿ relationship status ಬದಲಿಸಲು ಹೋಗುತ್ತಿದ್ದೇನೆ.

ಗೂಗ್ಲ್,
ರಸಾಯನಶಾಸ್ತ್ರ,
Egosurfing,
Foto2Avi
ಸೋಮವಾರ, ಡಿಸೆಂಬರ್ 13, 2010
ಗಣಕಿಂಡಿ - ೦೮೨ (ಡಿಸೆಂಬರ್ ೧೩, ೨೦೧೦)
ಅಂತರಜಾಲಾಡಿ
ಭ್ರಷ್ಟಾಚಾರ ನಿರ್ಮೂಲನೆ
೨೦೧೦ನೆಯ ಇಸವಿಯನ್ನು ಹಗರಣಗಳ ವರ್ಷ ಎಂದೇ ಕರೆಯಬಹುದು. ಪ್ರತಿ ದಿನ ಒಂದಲ್ಲ ಒಂದು ಭ್ರಷ್ಟಾಚಾರದ ವರದಿ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದೆ. ಜನರಿಗಂತೂ ಈ ಭ್ರಷ್ಟಾಚಾರಗಳನ್ನು ನೋಡಿ ನೋಡಿ ರೋಸಿ ಹೋಗಿದೆ. ಇದಕ್ಕೆ ಕೊನೆಯೇ ಇಲ್ಲವೇ? ರಾಜಕಾರಣಿ ಮತ್ತು ಸರಕಾರಿ ಅಧಿಕಾರಿಗಳಿಂದ ಏನನ್ನೂ ನಿರೀಕ್ಷಿಸುವಂತಿಲ್ಲ. ಜನರೇ ಮುಂದೆ ಬಂದು ಇದಕ್ಕೆಲ್ಲ ಕೊನೆ ಹಾಕಿಸಬೇಕಾಗಿದೆ. ಅದಕ್ಕಾಗಿಯೇ ಒಂದು ಚಳವಳಿ ನಡೆಯಬೇಕಾಗಿದೆ. ಹಾಗೆಂದು ನೀವು ಭಾವಿಸುತ್ತಿದ್ದೀರಾ? ಹಾಗಿದ್ದರೆ ನಾವೆಲ್ಲ ಏನು ಮಾಡಬಹದು? ಏನು ಮಾಡಬೇಕು? ಎಲ್ಲರೂ ಒಂದುಗೂಡುವುದು ಹೇಗೆ? ಇಂತಹ ಒಂದು ಚಳವಳಿಗೆಂದೇ ಒಂದು ಜಾಲತಾಣ ಸಿದ್ಧವಾಗಿದೆ. ಅದರ ವಿಳಾಸ -killcorruption.org. ಇನ್ನು ತಡವೇಕೆ? ಅಲ್ಲಿಗೆ ಭೇಟಿ ನೀಡಿ ಮುಂದಿನ ಕಾರ್ಯಕ್ರಮಗಳಿಗೆ ನಿಮ್ಮ ಕೈಜೋಡಿಸಿ.
ಡೌನ್‌ಲೋಡ್
ಗುಪ್ತ ಟೊರೆಂಟ್
ಅಂತರಜಾಲದಲ್ಲಿ ತಂತ್ರಾಂಶ, ಸಂಗೀತ, ಚಲನಚಿತ್ರ, ಅಥವಾ ಇನ್ಯಾವುದೇ ಫೈಲುಗಳನ್ನು ಪ್ರಪಂಚಾದ್ಯಂತ ವಿವಿಧ ವ್ಯಕ್ತಿಗಳು ತಮ್ಮ ಗಣಕಗಳಲ್ಲಿ ಸಂಗ್ರಹಿಸಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ರೀತಿಯ ಸೌಲಭ್ಯಕ್ಕೆ P2P ಅಂದರೆ ಪರ್ಸನ್-ಟು-ಪರ್ಸನ್ ಅರ್ಥಾತ್ ವ್ಯಕ್ತಿಯಿಂದ ವ್ಯಕ್ತಿಗೆ ಎಂದು ಕರೆಯುತ್ತಾರೆ. ಇದಕ್ಕಾಗಿ ಬಳಸುವುದು ಟೊರೆಂಟ್ ವಿಧಾನವನ್ನು. ಈ ರೀತಿಯಲ್ಲಿ ಡೌನ್‌ಲೋಡ್ ಮಾಡಲು ಹಲವು ತಂತ್ರಾಂಶಗಳಿವೆ. ಅಂತಹ ಒಂದು ತಂತ್ರಾಂಶ OneSwarm. ಇದರ ವೈಶಿಷ್ಟ್ಯವೇನೆಂದರೆ ಇದು ನಿಮ್ಮ ಪರಿಚಯವನ್ನು ಅಂದರೆ ನಿಮ್ಮ ಐಪಿ ವಿಳಾಸ ಇತ್ಯಾದಿಗಳನ್ನು ಗುಪ್ತವಾಗಿಡುತ್ತದೆ. ಈ ತಂತ್ರಾಂಶ ದೊರೆಯುವ ಜಾಲತಾಣ bit.ly/e7WKjo.
e - ಸುದ್ದಿ
ಸ್ಟೀವ್ ಜಾವ್ಸ್‌ಗೆ ಸಾಲ ವಾಪಾಸು ಬಂದಿಲ್ಲ
ಅಮೆರಿಕದಲ್ಲಿ ಪ್ರತಿ ಕಂಪೆನಿಯೂ ತಾನು ಇತರರಿಗೆ ಕೊಡಬೇಕಾದ ಮತ್ತು ಇತರರಿಂದ ತನಗೆ ಬರಬೇಕಾದ ಹಣ ಮತ್ತು ಆಸ್ತಿಗಳ ಬಗ್ಗೆ ಪ್ರತಿ ವರ್ಷ ಸರಕಾರಕ್ಕೆ ವರದಿ ನಿಡಬೇಕು. ಈ ರೀತಿ ಆಪಲ್ ಕಂಪೆನಿ ಈ ವರ್ಷ ನೀಡಿದ ವರದಿಯಲ್ಲಿ ತಾನು ಒಬ್ಬ ವ್ಯಕ್ತಿಗೆ 37.91 ಡಾಲರು ವಾಪಾಸು ನೀಡಬೇಕಾಗಿದೆ. ಅವರು ಅದನ್ನು ಇನ್ನೂ ಪಡೆದುಕೊಂಡಿಲ್ಲ ಎಂದು ಮಾಹಿತಿ ನೀಡಿದೆ. ಯಾಕೆ ಅವರು ಇನ್ನೂ ಪಡೆದುಕೊಂಡಿಲ್ಲ? ಅವರು ಯಾರು ಎಂಬ ಮಾಹಿತಿ, ಅವರ ವಿಳಾಸ ಸಿಕ್ಕಿಲ್ಲವೇ ಎಂಬ ಅನುಮಾನ ಬರುತ್ತಿದೆಯೇ? ಆ ವ್ಯಕ್ತಿ ಮತ್ತಿನ್ಯಾರೂ ಅಲ್ಲ. ಆಪಲ್ ಕಂಪೆನಿಯ ಮುಖ್ಯಸ್ಥ ಸ್ಟೀವ್ ಜೋವ್ಸ್ ಅವರೇ!
e- ಪದ
ಡಿಡಿಓಎಸ್ (DDoS =Distributed Denial of Service) -ಏಕಕಾಲದಲ್ಲಿ ಪ್ರಪಂಚದ ಹಲವು ಕಡೆಗಳಿಂದ ಒಂದೇ ಜಾಲತಾಣಕ್ಕೆ ಧಾಳಿ ಮಾಡಿ ಅದು ಯಾರಿಗೂ ದೊರಕದಂತೆ ಮಾಡುವುದು. ಎಲ್ಲ ಸರ್ವರ್‌ಗಳಿಗೂ ಏಕಕಾಲಕ್ಕೆ ಇಂತಿಷ್ಟೇ ಬೇಡಿಕೆಗಳನ್ನು ಪೂರೈಸುವ ಶಕ್ತಿ ಇರುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆಗಳು ಬಂದರೆ ಅದು ಉತ್ತರಿಸುವುದಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಜಾಲತಾಣದಲ್ಲಿ ಘೋಷಿಸಿದಾಗ ಪ್ರಾರಂಭದಲ್ಲಿ ಒಂದೆರಡು ಗಂಟೆಗಳ ಕಾಲ ಅದನ್ನು ವೀಕ್ಷಿಸಲು ಅಸಾಧ್ಯವಾಗುವುದು ಇದೇ ಕಾರಣಕ್ಕೆ. ಡಿಡಿಓಎಸ್ ಧಾಳಿಯಲ್ಲಿ ಹ್ಯಾಕರ್‌ಗಳು ಜಗತ್ತಿನ ಲಕ್ಷಗಟ್ಟಳೆ ಗಣಕಗಳನ್ನು ವಶಕ್ಕೆ ತೆಗದುಕೊಂಡು ಅವುಗಳ ಮೂಲಕ ಒಂದು ಜಾಲತಾಣಕ್ಕೆ ಧಾಳಿ ಇಟ್ಟು ಅದನ್ನು ನಿಷ್ಕ್ರಿಯಗೊಳಿಸುತ್ತಾರೆ. ಇತ್ತೀಚೆಗೆ ತುಂಬ ಸುದ್ದಿ ಮಾಡಿದ ವಿಕಿಲೀಕ್ಸ್‌ಗೆ ಹಣ ಸಂದಾಯ ಮಾಡುವುದನ್ನು ನಿಲ್ಲಿಸಿದ ವೀಸಾ, ಮಾಸ್ಟರ್‌ಕಾರ್ಡ್ ಮತ್ತು ಪೇಪಾಲ್ ಜಾಲತಾಣಗಳಿಗೆ ಅನೋನಿಮ್ ಹೆಸರಿನಲ್ಲಿ ಧಾಳಿ ಮಾಡಿ ಅವುಗಳನ್ನು ಕೆಲವು ಗಂಟೆಗಳ ಕಾಲ ನಿಷ್ಕ್ರಿಯ ಮಾಡಿದ್ದರು.
e - ಸಲಹೆ
ಬೆಂಗಳೂರಿನ ಮಧುಸೂದನರ ಪಶ್ನ್ರೆ: ನಾನು ASP.NET ವಿದ್ಯಾರ್ಥಿ. ನನಗೆ ಅದರ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕು. ಯಾವ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಸಿಗುತ್ತದೆ?
ಉ: ಮೈಕ್ರೋಸಾಫ್ಟ್‌ನವರದೇ ಆದ msdn.microsoft.com ಮತ್ತು www.asp.net ಜಾಲತಾಣಗಳನ್ನು ನೋಡಿ.
ಕಂಪ್ಯೂತರ್ಲೆ
ಭಯೋತ್ಪಾದಕರು ಹೈಟೆಕ್ ಆಗುತ್ತಿರುವುದು ಗೊತ್ತೇ ಇದೆ. ಇತ್ತೀಚೆಗೆ ಅವರು ಹೊಸ ನಮೂನೆಯ ಬಾಂಬ್ ತಯಾರಿಸಿದ್ದಾರೆ. ಒಂದು ಜಾಗದಲ್ಲಿ ಬಾಂಬ್ ಸ್ಫೋಟ ಆದ ತಕ್ಷಣ ಇದನ್ನು ನಾವೇ ಮಾಡಿದ್ದು ಎಂದು ಆ ಬಾಂಬ್ ಭಯೋತ್ಪಾದಕರ ಫೇಸ್ಬುಕ್ ಜಾಲತಾಣ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಅದು ದಾಖಲಿಸುತ್ತದೆ.

ಸೋಮವಾರ, ಡಿಸೆಂಬರ್ 6, 2010
ಗಣಕಿಂಡಿ - ೦೮೧ (ಡಿಸೆಂಬರ್ ೦೬, ೨೦೧೦)
ಅಂತರಜಾಲಾಡಿ
ಮುಕ್ತ ಶಿಕ್ಷಣ ಸಂಪನ್ಮೂಲ
ಶಿಕ್ಷಣ ದಿನ ಕಳೆದಂತೆ ಅತಿ ದುಬಾರಿಯಾಗುತ್ತಿದೆ. ಪುಸ್ತಕಗಳ ಬೆಲೆ ಗಮನಿಸಿದ್ದೀರಾ? ಸರಕಾರಿ ಪುಸ್ತಕಗಳ ಹೊರತಾಗಿ ಇತರೆ ಖಾಸಗಿ ಪುಸ್ತಕಗಳ ಬೆಲೆ ಗಗನಕ್ಕೇರಿದೆ. ಅದರಲ್ಲೂ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ತಮ ಚಿತ್ರಗಳಿಂದ ತುಂಬಿದ ಪುಸ್ತಕಗಳ ಬೆಲೆ ಇನ್ನೂ ಅಧಿಕ. ಶಿಕ್ಷಣ ಜನಸಾಮಾನ್ಯರಿಗೆ ಸುಲಭವಾಗಿ ದೊರಕುವಂತಿರಬೇಕು ಮತ್ತು ಮುಕ್ತವಾಗಿರಬೇಕೆಂದು ಹೇಳುವವರು ನಮ್ಮ ದೇಶದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಇದ್ದಾರೆ. ಇವರೆಲ್ಲ ಸೇರಿಕೊಂಡು ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಸಂಪನ್ಮೂಲಗಳನ್ನು ಮುಕ್ತವಾಗಿ ದೊರೆಯುವಂತೆ ಮಾಡಲು ಒಂದು ಜಾಲತಾಣವನ್ನು ನಿರ್ಮಿಸಿದ್ದಾರೆ. ಅದರ ವಿಳಾಸ -www.oercommons.org. ಇತರೆ ಮುಕ್ತ ಸಂಪನ್ಮೂಲಗಳಿಗೆ ಇದರಲ್ಲಿ ಸಂಪರ್ಕಕೊಂಡಿಗಳೂ ಇವೆ.
ಡೌನ್‌ಲೋಡ್
ಎಂಪಿ3 ಟ್ಯಾಗ್
ಗಣಕ ಮತ್ತು ಹಾಡುಗಳ ಪ್ಲೇಯರ್‌ಗಳಲ್ಲಿ ಬಳಕೆಯಾಗುವ ಹಾಡುಗಳು ಸಾಮಾನ್ಯವಾಗಿ ಎಂಪಿ೩ ವಿಧಾನದವುಗಳು. ಈ ಹಾಡುಗಳ ಕಡತಗಳಿಗೆ (ಫೈಲ್) ಹಲವು ಗುಣವಿಶೇಷಗಳಿರುತ್ತವೆ. ಅವುಗಳೆಂದರೆ ಹಾಡಿನ ಶೀರ್ಷಿಕೆ, ಕಲಾವಿದ, ಆಲ್ಬಮ್ ಹೆಸರು, ಆಲ್ಬಮ್ ಚಿತ್ರ, ದಿನಾಂಕ, ಇತ್ಯಾದಿ. ಹೆಚ್ಚಿನ ಗಣಕದಲ್ಲಿ ಈ ಹಾಡುಗಳನ್ನು ಪ್ಲೇ ಮಾಡುವಾಗ ಸಾಮಾನ್ಯವಾಗಿ ಈ ಗುಣವೈಶಿಷ್ಟ್ಯಗಳಿಗೆ ಅನುಗಣವಾಗಿ ಅವುಗಳನ್ನು ಪ್ಲೇ ಮಾಡಲಾಗುತ್ತದೆ. ಹೆಚ್ಚಿನ ಎಂಪಿ೩ ಪ್ಲೇಯರ್‌ಗಳಲ್ಲೂ (ಉದಾ -ಐಪಾಡ್) ಇದೇ ವಿಧಾನವನ್ನು ಬಳಸಲಾಗುತ್ತದೆ. ಹಾಡುಗಳನ್ನು ಸಿ.ಡಿ.ಯಿಂದ ಗಣಕದಲ್ಲಿ ಪ್ರತಿಮಾಡಿ ಎಂಪಿ೩ಗೆ ಪರಿವರ್ತನೆ ಮಾಡಿದಾಗ ಈ ಎಲ್ಲ ಗುಣವೈಶಿಷ್ಟ್ಯಗಳನ್ನು ದಾಖಲಿಸಬೇಕು. ಇಲ್ಲವಾದಲ್ಲಿ ಅವುಗಳನ್ನು ಪ್ಲೇ ಮಾಡಲು ಒದ್ದಾಡಬೇಕಾಗುತ್ತದೆ. ಹಾಡುಗಳಿಗೆ ಈ ಎಂಪಿ೩ ಗುಣವೈಶಿಷ್ಟ್ಯಗಳನ್ನು ದಾಖಲಿಸಲು ಅನುವುಮಾಡಿಕೊಡುವ ಒಂದು ಉಚಿತ ತಂತ್ರಾಂಶ Mp3tag. ಇದು ದೊರೆಯುವ ಜಾಲತಾಣ www.mp3tag.de/en.
e - ಸುದ್ದಿ
1$ ಪರಿಹಾರ
ಗೂಗ್ಲ್ ಬೀದಿನೋಟ ಎಂಬ ಜಾಲತಾಣದಲ್ಲಿ ಬೀದಿಗಳನ್ನು ಅಂತರಜಾಲದ ಮೂಲಕ ವೀಕ್ಷಣೆ ಮಾಡಬಹುದು. ಮಕ್ಕಳನ್ನು ಅಮೇರಿಕಕ್ಕೆ ಕಳುಹಿಸಿರುವ ಭಾರತೀಯರು ಇಲ್ಲಿ ಕುಳಿತೇ ಅವರ ಮಕ್ಕಳ ಮನೆ, ಕಛೇರಿ, ಅವರು ಓಡಾಡುವ ರಸ್ತೆಗಳು, ಅಂಗಡಿಗಳನ್ನೆಲ್ಲ ನೋಡಬಹುದು. ಈ ರೀತಿ ಬೀದಿನೋಟವನ್ನು ದಾಖಲಿಸಲು ಗೂಗ್ಲ್‌ನವರು ಕಾರಿನ ಮೇಲೆ ಕ್ಯಾಮರಾ ಇಟ್ಟು ಬೀದಿ ಬೀದಿ ಓಡಿಸುತ್ತಾರೆ. ಹೀಗೆ ಬೀದಿನೋಟದಲ್ಲಿ ತಮ್ಮ ಖಾಸಗಿ ಮನೆ, ಬೀದಿಗಳನ್ನು ತೋರಿಸಿದ್ದರ ವಿರುದ್ಧ ಒಂದು ದಂಪತಿಗಳು ದಾವೆ ಹೂಡಿದರು. ಎರಡು ವರ್ಷಗಳ ಹೋರಾಟದ ನಂತರ ಅವರಿಗೆ ಪರಿಹಾರವೂ ದೊರೆಯಿತು. ಎಷ್ಟು ಗೊತ್ತೆ? ಕೇವಲ ೧ ಡಾಲರು! ಆ ದಂಪತಿಗಳು ಈಗಾಗಲೆ ರಿಯಲ್ ಎಸ್ಟೇಟ್ ಜಾಲತಾಣವೊಂದರಲ್ಲಿ ತಮ್ಮ ಮನೆ, ಬೀದಿ, ಆಸ್ತಿಗಳ ಫೋಟೋ ದಾಖಲಿಸಿದ್ದರು. ಹೀಗಿರುವಾಗ ಗೂಗ್ಲ್‌ನವರು ಏನು ವಿಶೇಷ ತಪ್ಪು ಮಾಡಿದಂತಾಯಿತು? ಹೌದು. ಗೂಗ್ಲ್‌ನವರು ಒಂದು ತಪ್ಪು ಮಾಡಿದ್ದರು. ಅದೇನೆಂದರೆ ಆ ದಂಪತಿಗಳ ಖಾಸಗಿ ರಸ್ತೆಯಲ್ಲಿ ತಮ್ಮ ಕಾರು ಚಲಾಯಿಸಿದ್ದು. ಅದಕ್ಕಾಗಿ ಪರಿಹಾರ ನೀಡಬೇಕೆಂದು ನ್ಯಾಯಾಲಯ ತೀರ್ಮಾನ ನಿಡಿತು.
e- ಪದ
ಡೊಮೈನ್ (domain) - ಅಂತರಜಾಲದಲ್ಲಿ ಮತ್ತು ಗಣಕ ಜಾಲದಲ್ಲಿ ಗಣಕಗಳು ಮತ್ತು ಇತರೆ ಸಾಧನಗಳು ಒಂದು ಗುಂಪಾಗಿ ಎಲ್ಲವಕ್ಕೂ ಏಕರೀತಿಯ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ. ಅಂತರಜಾಲದಲ್ಲಿ ಇವುಗಳನ್ನು ಸಂಖ್ಯೆಗಳ ಗುಚ್ಛದ ಮೂಲಕವೂ ಗುರುತಿಸಲಾಗುತ್ತದೆ. ಈ ರೀತಿಯ ಸಂಖ್ಯೆಗುಚ್ಛದ ವಿಳಾಸಕ್ಕೆ ಐಪಿ ವಿಳಾಸ ಎಂದು ಕರೆಯಲಾಗುತ್ತದೆ.
e - ಸಲಹೆ
ಪಣಜಿಯ ಸಂತೋಷರ ಪ್ರಶ್ನೆ: ನನ್ನಲ್ಲಿ ಒಂದು ಸ್ಯಾಮ್‌ಸಂಗ್ ಫೋನ್ ಇದೆ. ಗಣಕದಲ್ಲಿ ಹಾಡುಗಳನ್ನು ನನಗೆ ಬೇಕಾದ ರೀತಿಯಲ್ಲಿ ಸರಿಹೊಂದಿಸಿ ಅವುಗಳನ್ನು ಫೋನಿಗೆ ವರ್ಗಾಯಿಸಿದೆ. ಆದರೆ ಈಗ ಫೋನಿನಲ್ಲಿ ಹಾಡುಗಳು ನನಗೆ ಬೇಕಾದ ರೀತಿಯಲ್ಲಿ ಸಿಗುತ್ತಿಲ್ಲ. ಹಾಡುಗಳ ಶೀರ್ಷಿಕೆ ಪ್ರಕಾರ ಹಾಡುಗಳು ಕಾಣಿಸುತ್ತಿಲ್ಲ. ಇದಕ್ಕೇನು ಪರಿಹಾರ?
ಉ: ನೀವು ಹಾಡುಗಳನ್ನು ಫೋನಿಗೆ ವರ್ಗಾಯಿಸುವ ಮೊದಲು ಅವುಗಳ ಎಂಪಿ೩ ಟ್ಯಾಗ್‌ಗಳನ್ನು ಹಾಡುಗಳ ಶೀರ್ಷಿಕೆ, ಕಲಾವಿದ, ಇತ್ಯಾದಿ ಗುಣವೈಶಿಷ್ಟ್ಯಗಳನ್ನು ಸೇರಿಸಿ ನಂತರ ಫೋನಿಗೆ ವರ್ಗಾಯಿಸಬೇಕು. ಆಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಈ ರೀತಿ ಎಂಪಿ೩ ಟ್ಯಾಗ್ ಸಂಪಾದಿಸಲು ಇದೇ ಅಂಕಣದಲ್ಲಿ ಸೂಚಿಸಿರುವ Mp3tag ತಂತ್ರಾಂಶ ಬಳಸಿ.
ಕಂಪ್ಯೂತರ್ಲೆ
ತಲೆಕೆಡಿಸುವ ಜಾಲತಾಣಗಳು, ವೈರಸ್ ತುಂಬಿದ ಡೌನ್‌ಲೋಡ್‌ಗಳು, ಸಮಯ ಹಾಳುಮಾಡುವ e-ಸುದ್ದಿಗಳು, ಕೆಲಸಕ್ಕೆ ಬಾರದ e-ಸಲಹೆಗಳು, ನಗಿಸದ ಕಂಪ್ಯೂತರ್ಲೆಗಳು - ಗಣಕಿಂಡಿ ಇಷ್ಟೇನೆ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)