ಅಂತರಜಾಲಾಡಿ
ಫಾಂಟ್ ತಯಾರಿಸಬೇಕೇ?
ಯಾವುದೇ ಕಡತ ತಯಾರಿಸಬೇಕಾದರೂ ಒಂದು ಫಾಂಟ್ ಬೇಕೇ ಬೇಕು. ಸಾಮಾನ್ಯವಾಗಿ ಗಣಕದ ಕಾರ್ಯಾಚರಣೆಯ ವ್ಯವಸ್ಥೆ (ಉದಾ - ವಿಂಡೋಸ್) ಜೊತೆ ಹಲವಾರು ಫಾಂಟ್‌ಗಳು ನಿಮಗೆ ಉಚಿತವಾಗಿ ದೊರೆತಿರುತ್ತವೆ. ನಿಮ್ಮದೇ ಫಾಂಟ್ ತಯಾರಿಸಬೇಕೇ? ಅದಕ್ಕಾಗಿ ಹಲವಾರು ದುಬಾರಿ ತಂತ್ರಾಂಶಗಳು ಲಭ್ಯವಿವೆ. ಉಚಿತವಾಗಿ ಅಂತರಜಾಲ ಮೂಲಕ ಫಾಂಟ್ ತಯಾರಿಸಲು ಈಗ ಒಂದು ಸವಲತ್ತು ಲಭ್ಯವಿದೆ. ಅದಕ್ಕಾಗಿ ನೀವು ಭೇಟಿ ನೀಡಬೇಕಾದ ಜಾಲತಾಣ fontstruct.fontshop.com. ಈ ಜಾಲತಾಣವನ್ನು ಬಳಸಿ ನೀವು ತಯಾರಿಸಿದ ಫಾಂಟ್ ಮೇಲೆ ಸಂಪೂರ್ಣ ಹಕ್ಕು ನಿಮ್ಮದಾಗಿರುತ್ತದೆ. ಅದನ್ನು ನೀವು ಬೇಕಾದ ರೀತಿ ಬಳಸಬಹುದು ಹಾಗೂ ಜಗತ್ತಿಗೆಲ್ಲ ಹಂಚಬಹುದು.
ಡೌನ್‌ಲೋಡ್
ವೇಳಾಪಟ್ಟಿ ತಯಾರಿಸಿ
ನೀವು ಶಾಲೆಯ ಮುಖ್ಯೋಪಾಧ್ಯಾಯರೇ? ಅಥವಾ ನಿಮ್ಮ ಶಾಲೆಯ ವೇಳಾಪಟ್ಟಿ (ಟೈಮ್‌ಟೇಬಲ್) ತಯಾರಿಸುವ ಜವಾಬ್ದಾರಿ ನಿಮ್ಮ ತಲೆ ಮೇಲಿದೆಯೇ? ಈ ವೇಳಾಪಟ್ಟಿ ತಯಾರಿಸುವುದು ತುಂಬ ತಲೆನೋವಿನ ಕೆಲಸ. ಈ ವೇಳಾಪಟ್ಟಿಯನ್ನು ಗಣಕ ಬಳಸಿ ತಯಾರಿಸುವ ತಂತ್ರಾಂಶವೊಂದು ಸಿಗುವಂತಿದ್ದರೆ ಚೆನ್ನಾಗಿತ್ತು ಎಂದು ಅನಿಸಿದೆಯೇ? ಹಾಗಿದ್ದಲ್ಲಿ ನಿಮಗೆ ಬೇಕು FET ತಂತ್ರಾಂಶ. ಇದು ಸಂಪೂರ್ಣ ಉಚಿತ ಹಾಗೂ ಮುಕ್ತ ತಂತ್ರಾಂಶ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.lalescu.ro/liviu/fet.
e - ಸುದ್ದಿ
ಗೂಗ್ಲ್‌ಗೆ ದಂಡ
ಗೂಗ್ಲ್ ಒಡೆತನಕ್ಕೆ ಸೇರಿದ ಆರ್ಕುಟ್ ಜಾಲತಾಣ ಎಲ್ಲರಿಗೂ ಗೊತ್ತಿರಬಹುದು. ಅದರಲ್ಲಿ ಯಾರು ಬೇಕಾದರೂ ತಮಗಿಷ್ಟ ಬಂದಂತೆ ಮಾಹಿತಿ ಸೇರಿಸಬಹುದು. ಬ್ರೆಝಿಲ್ ದೇಶದಲ್ಲಿ ಈ ಆರ್ಕುಟ್ ಜಾಲತಾಣದಲ್ಲಿ ಯಾರೋ ಕಿಡಿಗೇಡಿ ಕ್ರೈಸ್ತ ಪಾದ್ರಿಯೊಬ್ಬರ ಬಗ್ಗೆ ಕೆಟ್ಟ ಕೆಟ್ಟದಾಗಿ ಏನೇನೋ ಬರೆದಿದ್ದ. ಇದಕ್ಕಾಗಿ ಬ್ರೆಝಿಲ್ ದೇಶದ ನ್ಯಾಯಾಲಯವು ಗೂಗ್ಲ್‌ನ್ನು ಹೊಣೆಯೆಂದು ತೀರ್ಮಾನಿಸಿ ಗೂಗ್ಲ್‌ಗೆ ಸುಮಾರು ೮೫೦೦ ಡಾಲರುಗಳಷ್ಟು ದಂಡ ವಿಧಿಸಿದೆ. ಆರ್ಕುಟ್‌ನಲ್ಲಿ ಯಾರು ಬೇಕಾದರೂ ಏನನ್ನಾದರೂ ಬರೆಯಬಹುದು. ಅದಕ್ಕಾಗಿ ಗೂಗ್ಲ್‌ನ್ನು ಹೊಣೆಗಾರನನ್ನಾಗಿ ತೀರ್ಮಾನಿಸಬಾರದು ಎಂಬ ಗೂಗ್ಲ್‌ನವರ ವಾದವನ್ನು ನ್ಯಾಯಾಲಯವು ಮಾನ್ಯ ಮಾಡಲಿಲ್ಲ.
e- ಪದ
ಏರೋ (Aero) - ವಿಂಡೋಸ್ ವಿಸ್ತ ಮತ್ತು ೭ ರಲ್ಲಿ ಅಳವಡಿಸಿರುವ ಇಂಟರ್‌ಫೇಸ್. ಇದನ್ನು ಚಾಲನೆಗೊಳಿಸಿದಲ್ಲಿ ನಿಮ್ಮ ಗಣಕದ ಪರದೆಯಲ್ಲಿ ಕಿಟಿಕಿಗಳು ತುಂಬ ಸುಂದರವಾಗಿ ಕಾಣಿಸುತ್ತವೆ. ಕಿಟಿಕಿಯ ಮೇಲಿನ ಬಾರ್ ಅರೆಪಾರದರ್ಶಕವಾಗಿ ಕಾನಿಸುತ್ತವೆ. ವಿಂಡೋಸ್ ೭ ರಲ್ಲಿ ಇನ್ನೂ ಒಂದು ಸವಲತ್ತನ್ನು ನೀಡಿದ್ದಾರೆ. ಈ ಬಾರ್‌ನ್ನು ಮೌಸ್‌ನಲ್ಲಿ ಹಿಡಿದು ಜೋರಾಗಿ ಅಳ್ಳಾಡಿಸಿದರೆ ಆ ಕಿಟಿಕಿ ಒಂದನ್ನು ಬಿಟ್ಟು ಉಳಿದೆಲ್ಲ ಕಿಟಿಕಿಗಳು ಕೆಳಗಿನ ಸ್ಟಾಟಸ್‌ಬಾರ್‌ನಲ್ಲಿ ಚಿಕ್ಕದಾಗಿ ಕುಳಿತುಕೊಳ್ಳುತ್ತವೆ.
e - ಸಲಹೆ
ಸುದರ್ಶನ ಅವರ ಪ್ರಶ್ನೆ: ನನ್ನಲ್ಲಿ ಒಂದು ಕ್ರಿಯೇಟಿವ್ ಎಂಪಿ೩ ಪ್ಲೇಯರ್ ಇದೆ. ಅದರಲ್ಲಿ ಕೆಲವು ಹಾಡುಗಳಿವೆ. ಇತ್ತೀಚೆಗೆ ಒಂದು ಖಾಯಿಲೆ ಅದಕ್ಕೆ ತಗುಲಿದೆ. ಅದನ್ನು ಗಣಕದ ಯುಎಸ್‌ಬಿ ಡ್ರೈವ್‌ನಲ್ಲಿ ತೂರಿಸಿದೊಡನೆ ಗಣಕ ತಟಸ್ಥವಾಗುತ್ತದೆ (ಹ್ಯಾಂಗಿಂಗ್). ಇದಕ್ಕೇನು ಪರಿಹಾರ?
ಉ: ನಿಮ್ಮ ಎಂಪಿ೩ ಪ್ಲೇಯರ್‌ನಲ್ಲಿ ವೈರಸ್ ಇರಬಹುದು. ನಿಮ್ಮಲ್ಲಿ ಉಬುಂಟು ಕಾರ್ಯಾಚರಣೆಯ ವ್ಯವಸ್ಥೆ ಇದ್ದಲ್ಲಿ ಗಣಕವನ್ನು ಅದಕ್ಕೆ ಬೂಟ್ ಮಾಡಿ. ನಂತರ ಎಂಪಿ೩ ಪ್ಲೇಯರನ್ನು ಸಂಪರ್ಕಿಸಿ, ಅದರಲ್ಲಿರುವ ಮುಖ್ಯ ಮಾಹಿತಿಗಳನ್ನು ಪ್ರತಿ ಮಾಡಿಕೊಂಡು ಅದನ್ನು ಪೂರ್ತಿ ಫಾರ್ಮಾಟ್ ಮಾಡಿ. ನಂತರ ವಿಂಡೋಸ್‌ಗೆ ಬೂಟ್ ಮಾಡಿ. ಕ್ರಿಯೇಟಿವ್ ಕಂಪೆನಿಯವರ (www.creative.com) ಜಾಲತಾಣದಿಂದ MP3 player recovery tool ಎಂಬ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಅದರ ಮೂಲಕ ಎಂಪಿ೩ ಪ್ಲೇಯರ್‌ನ್ನು ಪುನಃ ಕೆಲಸ ಮಾಡುವಂತೆ ಸರಿಪಡಿಸಿಕೊಳ್ಳಬಹುದು.
ಕಂಪ್ಯೂತರ್ಲೆ
ಕೋಲ್ಯ ಗಣಕ ತೆಗೆದುಕೊಂಡ. ಮರುದಿನ ಕಂಪೆನಿಗೆ ಫೋನ್ ಮಾಡಿ ದೂರು ನೀಡಿದ “ನನ್ನ ಗಣಕದಲ್ಲಿ ಸಿ.ಡಿ. ಹಾಕಿದ್ದೇನೆ. ಈಗ ಹೊರಗೆ ತೆಗೆಯಲು ಬರುತ್ತಿಲ್ಲ. ನಿಮ್ಮ ಇಂಜಿನಿಯರ್ ಕಳುಹಿಸಿ”. ಕಂಪೆನಿಯಿಂದ ಇಂಜಿನಿಯರ್ ಬಂದು ಪರಿಶೀಲಿಸಿದ. ಕೋಲ್ಯ ಏನು ಮಾಡಿದ್ದ ಊಹಿಸಿಬಲ್ಲಿರಾ? ಆತನ ಗಣಕದಲ್ಲಿ ಸಿ.ಡಿ. ಡ್ರೈವ್ ಮತ್ತು ಗಣಕದ ಕೇಸಿಂಗ್ ಮಧ್ಯೆ ಸ್ವಲ್ಪ ಖಾಲಿ ಜಾಗ ಇತ್ತು. ಆತ ಸಿ.ಡಿ.ಯನ್ನು ಆ ಕಿಂಡಿಯಲ್ಲಿ ತೂರಿಸಿದ್ದ!
Articles from the weekly column in Kannada Prabha, Kannada daily, by Dr U B Pavanaja, on information technology, Internet, computer, software utilities, tech jokes, tips and tricks, terms, etc.
ಮಂಗಳವಾರ, ಮೇ 11, 2010
ಸೋಮವಾರ, ಮೇ 3, 2010
ಗಣಕಿಂಡಿ - ೦೫೦ (ಮೇ ೦೩, ೨೦೧೦)
ಅಂತರಜಾಲಾಡಿ
ಭ್ರಮಾಲೋಕ
ಕೆಲವು ಚಿತ್ರಗಳನ್ನು ನೋಡಿದಾಗ ಅದರೊಳಗೆ ಇನ್ನೋನೋ ಇದ್ದಂತೆ ಭಾಸವಾಗುತ್ತದೆ. ಮತ್ತೆ ಕೆಲವು ಚಿತ್ರಗಳು ಚಲನೆಯ ಭ್ರಮೆಯನ್ನು ಮೂಡಿಸುತ್ತವೆ. ನಿಜವಾಗಿ ನೋಡಿದರೆ ಚಿತ್ರ ಚಲಿಸುತ್ತಿರುವುದಿಲ್ಲ. ಇಂತಹ ಭ್ರಮೆಗಳನ್ನು ಸೃಷ್ಟಿಸುವ ಹಲವು ನಮೂನೆಯ ಚಿತ್ರಗಳನ್ನು ನೋಡಬೇಕಾದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.moillusions.com. ಇಲ್ಲಿರುವ ಚಿತ್ರಗಳನ್ನು ಹಲವು ವಿಭಾಗಗಳಲ್ಲಿ ನೀಡಲಾಗಿದೆ. ನಿಮಗಿಷ್ಟವಾದ ವಿಭಾಗಕ್ಕೆ ನೀವು ಭೇಟಿ ನೀಡಬಹುದು.
ಡೌನ್‌ಲೋಡ್
ವೈರಸ್ ಖಾಯಿಲೆಯಿಂದ ಗುಣಪಡಿಸಿ
ಕೆಲವೊಮ್ಮೆ ವೈರಸ್ ಧಾಳಿಯಿಂದಾಗಿ ಹಾರ್ಡ್‌ಡಿಸ್ಕ್‌ನ ಬೂಟ್ ಜಾಗದಲ್ಲೇ ವೈರಸ್ ಕುಳಿತಿರುತ್ತದೆ. ಇಂತಹ ಸಂದರ್ಭದಲ್ಲಿ ವೈರಸ್ ನಿರೋಧಕ ತಂತ್ರಾಂಶಗಳು ಕೆಲಸ ಮಾಡುವುದಿಲ್ಲ. ಯಾಕೆಂದರೆ ಅವುಗಳಿಗಿಂತ ಮೊದಲೇ ವೈರಸ್ ಹೋಗಿ ಗಣಕದ ಮೆಮೊರಿಯಲ್ಲಿ ಕುಳಿತಿರುತ್ತವೆ. ಸಿ.ಡಿ.ಯಿಂದ ಬೂಟ್ ಮಾಡಿ ವೈರಸ್ ಅಳಿಸುವುದೊಂದೇ ಇದಕ್ಕೆ ಪರಿಹಾರ. ಇಂತಹ ಒಂದು ತಂತ್ರಾಂಶ Dr.Web LiveCD . ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/dsW7Wt. ಇದನ್ನು ಬಳಸಬೇಕಾದರೆ ನೀವು ಸ್ವಲ್ಪ ಪರಿಣತರಾಗಿರಬೇಕು. ಈ ಜಾಲತಾಣದಲ್ಲಿ ದೊರೆಯುವ ಸಿ.ಡಿ. ಇಮೇಜನ್ನು ಬಳಸಿ ಒಂದು ಸಿ.ಡಿ. ತಯಾರಿಸಿ ಆ ಸಿ.ಡಿ.ಯಿಂದ ಬೂಟ್ ಮಾಡಿ ಹಾರ್ಡ್‌ಡಿಸ್ಕನ್ನು ಸರಿಪಡಿಸಿಕೊಳ್ಳಬಹುದು.
e - ಸುದ್ದಿ
ಫೇಸ್‌ಬುಕ್ ಮೂಲಕ ಕಿಡ್ನಿ ದಾನ
ಅಮೇರಿಕದ ಕನೆಕ್ಟಿಕಟ್ ನಗರದ ಮೇಯರ್ ಅಲ್ಮೋನ್‌ಗೆ ಫೇಸ್‌ಬುಕ್‌ನಲ್ಲಿ ಸುಮಾರು ೧೬೦೦ ಮಂದಿ ಗೆಳೆಯರಿದ್ದರು. ಅವರೆಲ್ಲರ ಸಂದೇಶಗಳನ್ನು ಆಕೆ ಓದುತ್ತಿದ್ದಂತೆ ಒಂದು ಸಂದೇಶ ಆಕೆಯ ಗಮನ ಸೆಳೆಯಿತು. ಒಬ್ಬಾತ ತನಗೆ ಮೂತ್ರಪಿಂಡ ಬೇಕಾಗಿದೆ ಎಂದು ಸಂದೇಶ ನೀಡಿದ್ದ. ಆಕೆ ಕೂಡಲೆ ಆತನನ್ನು ಸಂಪರ್ಕಿಸಿ, ತನ್ನ ಮೂತ್ರಪಿಂಡವೊಂದನ್ನು ಆತನಿಗೆ ದಾನ ಮಾಡಿದಳು. ಈಗ ಇಬ್ಬರೂ ಆರೋಗ್ಯವಾಗಿದ್ದಾರೆ. ನಮ್ಮ ರಾಜಕಾರಣಿಗಳಿಂದ ಇಂತಹ ಕಾರ್ಯವೊಂದನ್ನು ನಿರೀಕ್ಷಿಸಬಹುದೇ?
e- ಪದ
ಎನ್‌ಟಿಎಫ್‌ಎಸ್ (NTFS - New Technology File System) - ವಿಂಡೋಸ್ ಎನ್‌ಟಿ, ಎಕ್ಸ್‌ಪಿ ಮತ್ತು ಅನಂತರದ ಕಾರ್ಯಾಚರಣೆಯ ವ್ಯವಸ್ಥೆಯನ್ನು ಅಳವಡಿಸಿದ ಗಣಕಗಳಲ್ಲಿ ಬಳಕೆಯಾಗುತ್ತಿರುವ ಕಡತ (ಫೈಲು) ಸಂಗ್ರಹ ವ್ಯವಸ್ಥೆ. ಇದು ಗಣಕದ ಹಾರ್ಡ್‌ಡಿಸ್ಕ್ ಮತ್ತು ಇತರೆ ಸಂಗ್ರಹ ಸಾಧನಗಳಲ್ಲಿ ಸಂಗ್ರಹವಾಗಿರುವ ಕಡತಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಡುತ್ತದೆ. ಯಾವ ಕಡತ ಎಲ್ಲಿದೆ, ಅದು ಬಳಸಿರುವ ಜಾಗದ ಸಂಖ್ಯೆಗಳು ಯಾವುವು, ಎಲ್ಲಿಂದ ಪ್ರಾರಂಭವಾಗಿ ಎಲ್ಲಿ ತನಕ ಇದೆ, ಎಲ್ಲ ವಿವರಗಳನ್ನು ಇದು ದಾಖಲಿಸಿಡುತ್ತದೆ. ಒಂದು ಕಡತವನ್ನು ಅಳಿಸಿದಾಗ ಆ ಕಡತವು ನಿಜವಾಗಿ ಅಳಿಸಲ್ಪಡುವುದಿಲ್ಲ. ಆ ಕಡತವು ಬಳಸಿರುವ ಜಾಗವು ಬೇರೆ ಕಡತಗಳಿಗೆ ಲಭ್ಯ ಎಂದು ಅದು ದಾಖಲಿಸಿಕೊಳ್ಳುತ್ತದೆ. ಇನ್ನೊಂದು ಕಡತವು ಆ ಜಾಗವನ್ನು ಬಳಸಿಲ್ಲವಾದಲ್ಲಿ ಅಳಿಸಿದ ಕಡತವನ್ನು ಕೆಲವು ತಂತ್ರಾಂಶಗಳನ್ನು ಬಳಸಿ ಪುನಃ ಪಡೆಯಬಹುದು.
e - ಸಲಹೆ
ತುರುವೇಕೆರೆಯ ಉಷಾ ಶ್ರೀನಿವಾಸ್ ಅವರ ಪ್ರಶ್ನೆ: ಕಳೆದವಾರದ ಸಂಚಿಕೆಯಲ್ಲಿ ಶ್ರೀಧರ್ ಹೂಗಾರ್‌ರವರ ಪ್ರಶ್ನೆಗೆ ತಾವು ಫಾರ್ಮಾಟ್ ಮಾಡಿದ ನಂತರ ಯಾವುದೇ ಫೈಲ್‌ಗಳೂ ಸಿಗಲಾರವು ಎಂದು ಉತ್ತರಿಸಿದ್ದೀರಿ. ಆದರೆ ಡೇಟಾ ರಿಕವರಿ ಸಾಫ್ಟ್‌ವೇರ್‌ನಿಂದ ಇಂತಹ ಫೈಲ್‌ಗಳು ದೊರೆಯುತ್ತವೆ ಎಂದು ನನ್ನ ಸ್ನೇಹಿತನೊಬ್ಬ ಹೇಳಿದ್ದಾನೆ. ಇದು ಸಾಧ್ಯವೇ? ಸಾಧ್ಯವಾದರೆ ಈ ಸಾಫ್ಟ್‌ವೇರ್ ಉಚಿತವಾಗಿ ನೆಟ್‌ನಲ್ಲಿ ಲಭ್ಯವೇ? ದಯಮಾಡಿ ತಿಳಿಸಿ.
ಉ: ಕಳೆದವಾರದ ಪ್ರಶ್ನೆಯಲ್ಲಿ ಶ್ರೀಧರ್ ಹೂಗಾರ್ ಅವರು ತಿಳಿಸಿದ್ದೇನೆಂದರೆ ಅವರು ಡೆಸ್ಕ್‌ಟಾಪ್‌ನಲ್ಲಿ ಅಂದರೆ C ಡ್ರೈವ್‌ನಲ್ಲಿ ಫೈಲ್ ಸೇವ್ ಮಾಡಿದ್ದರು. ನಂತರ ಫಾರ್ಮಾಟ್ ಮಾಡಿದ್ದರು. ಇದು ಫೈಲನ್ನು ಅಳಿಸುವುದಕ್ಕಿಂತ ಸ್ವಲ್ಪ ಜಾಸ್ತಿ. ಕೇವಲ ಅಳಿಸಿದ್ದಾದರೆ ಅದನ್ನು NTFS Undelete ಎಂಬ ತಂತ್ರಾಂಶ ಬಳಸಿ ಪುನಃ ಪಡೆಯಲು ಪ್ರಯತ್ನಿಸಬಹುದು. ಈ ಬಗ್ಗೆ ನಾನು ಈಗಾಗಲೇ ವಿವರವಾಗಿ ಬರೆದಿದ್ದೇನೆ. ೭-೧೨-೨೦೦೯ರ ಗಣಕಿಂಡಿ ನೋಡಿ (http://bit.ly/cfILh6). C ಡ್ರೈವ್ ಅನ್ನು ಫಾರ್ಮಾಟ್ ಮಾಡುವುದರಲ್ಲಿ ಎರಡು ವಿಧಗಳಿವೆ. ಒಂದು quick format ಮತ್ತು full format. quick format ಮಾಡಿದ ನಂತರವೂ ಅದರಲ್ಲಿಯ ಮಾಹಿತಿಯನ್ನು ಪುನಃ ಪಡೆಯಲು ಸಾಧ್ಯವಿದೆ. ಆದರೆ full format ಮಾಡಿದರೆ ಮಾಹಿತಿಯನ್ನು ಪುನಃ ಪಡೆಯುವುದು ಬಹುಮಟ್ಟಿಗೆ ಅಸಾಧ್ಯವೇ. C ಡ್ರೈವ್ ಅನ್ನು ಫಾರ್ಮಾಟ್ ಮಾಡಿದರೆ ಗಣಕ ಕೆಲಸ ಮಾಡುವುದಿಲ್ಲ. ಆದರೂ ಅದರಲ್ಲಿ ಪುನಃ ವಿಂಡೋಸ್ ಇನ್‌ಸ್ಟಾಲ್ ಮಾಡಿಲ್ಲವಾದಲ್ಲಿ ಸಿ.ಡಿ.ಯಿಂದ ಬೂಟ್ ಮಾಡಿ ಅಳಿಸಿದ ಮಾಹಿತಿಯನ್ನು ಪುನಃ ಪಡೆಯಲು ಪ್ರಯತ್ನಿಸಬಹುದು. ಇದೇ ಸಂಚಿಕೆಯಲ್ಲಿ ನೀಡಿದ Dr.Web LiveCD ಅನ್ನು ಬಳಸಿ ಪ್ರಯತ್ನಿಸಬಹುದು.
ಕಂಪ್ಯೂತರ್ಲೆ
ಟ್ವಿಟ್ಟರ್ ಗಾದೆಗಳು

- ಟ್ವೀಟ್ ಮಾಡುವುದರಿಂದ ಹುಲಿಗಳನ್ನು ಉಳಿಸಲಾಗುವುದಿಲ್ಲ.
- ಯಾರು ಮಂತ್ರಿಯಾದರೇನಂತೆ ಟ್ವೀಟ್ ಮಾಡುವುದು ತಪ್ಪುವುದಿಲ್ಲ.
- ಆರ್ಕುಟ್‌ಗೆ ಒಂದು ಕಾಲ, ಟ್ವಿಟ್ಟರ್‌ಗೆ ಒಂದು ಕಾಲ.
- ಇಂಟರ್‌ನೆಟ್‌ಗೆ ಬಂದವನು ಟ್ವಿಟ್ಟರ್‌ಗೆ ಬರದಿರುವನೇ?
ಲೇಬಲ್ಗಳು:
ಟ್ವಿಟ್ಟರ್,
ಫೇಸ್‌ಬುಕ್,
ಭ್ರಮಾಲೋಕ,
Dr.Web LiveCD,
NTFS
ಮಂಗಳವಾರ, ಏಪ್ರಿಲ್ 27, 2010
ಗಣಕಿಂಡಿ - ೦೪೯ (ಎಪ್ರಿಲ್ ೨೬, ೨೦೧೦)
ಅಂತರಜಾಲಾಡಿ
ಫೈಲ್ ಮಾಹಿತಿ
ನಿಮ್ಮ ಸ್ನೇಹಿತರೊಬ್ಬರು ನಿಮಗೆ ಒಂದು ಫೈಲ್ (ಕಡತ) ಅನ್ನು ಇಮೈಲ್ ಮೂಲಕ ಕಳುಹಿಸಿದ್ದಾರೆ. ಆದರೆ ಅದು ಯಾವ ತಂತ್ರಾಂಶದಲ್ಲಿ ತೆರೆಯುತ್ತದೆ ಎಂದು ನಿಮಗೆ ಗೊತ್ತಿಲ್ಲ. ಅವರು ತಿಳಿಸಿಯೂ ಇಲ್ಲ. ಆಗ ಏನು ಮಾಡುತ್ತೀರಿ? ಎಲ್ಲ ಫೈಲ್‌ಗಳಿಗೂ ಕಡತ ವಿಸ್ತರಣೆ (file extension) ಇರುತ್ತದೆ. ಕಡತದ ಹೆಸರಿನಲ್ಲಿ ಕೊನೆಯ ಚುಕ್ಕಿಯ ನಂತರ ಇರುವ 3 ಅಥವಾ 4 ಅಕ್ಷರಗಳು ಆ ಕಡತ (ಫೈಲ್) ಯಾವ ತಂತ್ರಾಂಶಕ್ಕೆ ಸಂಬಂಧಿಸಿದ್ದು ಎಂಬುದನ್ನು ಸೂಚಿಸುತ್ತದೆ. ಕೆಲವು ಉದಾಹರಣೆಗಳು - doc -ಮೈಕ್ರೋಸಾಫ್ಟ್ ವರ್ಡ್, txt -ಕೇವಲ ಪಠ್ಯ (Notepad), p65 -ಪೇಜ್‌ಮೇಕರ್ 6.5, ಇತ್ಯಾದಿ. ಯಾವ ಕಡತ ವಿಸ್ತರಣೆ ಯಾವ ತಂತ್ರಾಂಶಕ್ಕೆ ಸಂಬಧಿಸಿದ್ದು ಎಂದು ತಿಳಿಯಬೇಕೇ? ಹಾಗಿದ್ದರೆ www.fileinfo.com ಜಾಲತಾಣಕ್ಕೆ ಭೇಟಿ ನೀಡಿ.
ಡೌನ್‌ಲೋಡ್
ಮನಸ್ಸಿನ ನಕಾಶೆ
ಮನಸ್ಸಿನಲ್ಲಿ ಮೂಡಿಬರುವ ಆಲೋಚನೆಗಳನ್ನು ನಕಾಶೆ ರೂಪದಲ್ಲಿ ಚಿತ್ರಿಸುವುದನ್ನು mindmap ಎನ್ನುತ್ತಾರೆ. ಇಂತಹ ನಕಾಶೆಗಳನ್ನು ಚಿತ್ರಿಸಲು ಹಲವಾರು ತಂತ್ರಾಂಶಗಳು ಲಭ್ಯವಿವೆ. ಅಂತಹ ಒಂದು ಮುಕ್ತ ತಂತ್ರಾಂಶ FreeMind. ಪರಿಯೋಜನೆಗಳ ಮತ್ತು ಅವುಗಳಲ್ಲಿಯ ಉಪಯೋಜನೆಗಳ ನಕಾಶೆ, ಟಿಪ್ಪಣಿಗಳನ್ನು ವ್ಯವಸ್ಥಿತವಾಗಿಡುವುದು, ಜ್ಞಾನಲೇಖನಗಳನ್ನು ವ್ಯವಸ್ಥಿತವಾಗಿಡುವುದು, ಭಾಷಣ ಕೊಡಲು ಅಗತ್ಯ ವಿಷಯಗಳನ್ನು ನಕಾಶೆ ರೂಪದಲ್ಲಿ ಮೂಡಿಸುವುದು -ಇತ್ಯಾದಿಗಳನ್ನೆಲ್ಲ ಈ ತಂತ್ರಾಂಶ ಬಳಸಿ ಮಾಡಬಹುದು. ಇದನ್ನು ಪಡೆಯಲು ನೀವು ಭೇಟಿ ನೀಡಬೇಕಾದ ಜಾಲತಾಣ http://bit.ly/bir0gv
e - ಸುದ್ದಿ
ಮೆದುಳನ್ನು ಓದುವುದು
ಒಬ್ಬ ವ್ಯಕ್ತಿ ಏನು ಆಲೋಚನೆ ಮಾಡುತ್ತಿದ್ದಾನೆ ಎಂಬುದನ್ನು ತಿಳಿಯುವ ತಂತ್ರಾಂಶವನ್ನು ತಯಾರಿಸುವಲ್ಲಿ ಅಮೇರಿಕಾದ ವಿಜ್ಞಾನಿಗಳು ಭಾಗಶಃ ಯಶಸ್ಸು ಪಡೆದಿದ್ದಾರೆ. ಮೆದುಳಿನ ಸ್ಕ್ಯಾನ್ ಮಾಡಿಸುವುದು ನಿಮಗೆ ತಿಳಿದೇ ಇರಬಹುದು. ಈ ಸ್ಕ್ಯಾನ್‌ಗಳಲ್ಲಿ ವ್ಯಕ್ತಿಯ ಆಲೋಚನೆಗಳೂ ಅಡಗಿವೆ. ಕೆಲವು ವ್ಯಕ್ತಿಗಳಿಗೆ ಹಲವಾರು ಪದಗಳನ್ನು ತೋರಿಸಿ ಆಗ ಅವರು ಮಾಡುವ ಆಲೋಚನೆಗಳನ್ನು ಸ್ಕ್ಯಾನ್ ಮೂಲಕ ದಾಖಲಿಸಲಾಯಿತು. ನಂತರ ಆ ವ್ಯಕ್ತಿಗಳಿಗೆ ಕೆಲವು ಪದಗಳ ಬಗ್ಗೆ ಆಲೋಚಿಸಲು ತಿಳಿಸಲಾಯಿತು. ಆಗ ತೆಗೆದ ಮೆದುಳಿನ ಸ್ಕ್ಯಾನ್‌ಗಳನ್ನು ಗಣಕವು ವಿಶ್ಲೇಷಿಸಿ ಅವರು ಇಂತಹುದೇ ಪದದ ಬಗ್ಗೆ ಆಲೋಚಿಸುತ್ತಿದ್ದಾರೆ ಎಂದು ತಿಳಿಸಿತು. ಈ ಪರೀಕ್ಷೆಯಲ್ಲಿ ಗಣಕವು ತೇರ್ಗಡೆಯಾಯಿತು. ಈ ಸಂಶೋಧನೆ ಈಗಿನ್ನೂ ಪ್ರಾರಂಭದ ಹಂತದಲ್ಲಿದೆ.
e- ಪದ
ಟ್ವೀಟ್ ಮಾಡುವುದು (tweeting) -ಟ್ವಿಟ್ಟರ್‌ನಲ್ಲಿ ಸಂದೇಶ ಸೇರಿಸುವುದು. ೧೪೦ ಅಕ್ಷರಗಳ ಒಳಗೆ ಬ್ಲಾಗ್ ಮಾಡುವ ಜಾಲತಾಣ ಟ್ವಿಟ್ಟರ್. ಇದರಲ್ಲಿ ಸೇರಿಸುವ ಸಂದೇಶಕ್ಕೆ ಟ್ವೀಟ್ ಎನ್ನುತ್ತಾರೆ. ಹಾಗೆ ಸಂದೇಶ ಸೇರಿಸುವುದನ್ನು ಟ್ವೀಟ್ ಮಾಡುವುದು ಅಥವಾ ಟ್ವೀಟಿಸುವುದು ಎನ್ನಬಹುದು. ನಾನು ಟ್ವೀಟ್ ಮಾಡಿದೆ ಅಥವಾ ನಾನು ಟ್ವೀಟಿಸಿದೆ ಎಂದೂ ಬಳಕೆ ಮಾಡಬಹುದು. ನಾನು ಫೋನ್ ಮಾಡಿದೆ ಅಥವಾ ಫೋನಾಯಿಸಿದೆ ಎಂಬ ಬಳಕೆಯ ಜೊತೆ ಹೋಲಿಸಿಕೊಳ್ಳಿ.
e - ಸಲಹೆ
ಶ್ರೀಧರ ಹೂಗಾರ್ ಅವರ ಪ್ರಶ್ನೆ: ನನ್ನ ಕಂಪ್ಯೂಟರಿನಲ್ಲಿ ಡೆಸ್ಕ್‌ಟಾಪ್ ಮೇಲೆ ಒಂದು ಫೈಲ್ ಉಳಿಸಿದ್ದೆ. ಆದರೆ ಆ ದಿನ ಕರೆಂಟ್ ಸಮಸ್ಯೆಯಿಂದಾಗಿ ನನ್ನ ಕಂಪ್ಯೂಟರ್ ಹಾಳಾಯಿತು. ಆಗ ನಾನು ಕಂಪ್ಯೂಟರನ್ನು ಫಾರ್ಮಾಟ್ ಮಾಡಿದ್ದೇನೆ. ನನಗೆ ಈಗ ಆ ಫೈಲೇ ಬೇಕಾಗಿದ್ದು ನಾನು ಹೇಗೆ ಪಡೆಯಬಹುದು ಎಂದು ತಿಳಿಸಿ ಕೊಡಬೇಕಾಗಿ ಕೇಳುತ್ತಿದ್ದೇನೆ.
ಉ: ಒಮ್ಮೆ ಫಾರ್ಮಾಟ್ ಮಾಡಿದ ನಂತರ ಯಾವ ಫೈಲ್ ಕೂಡ ನಿಮಗೆ ಸಿಗಲಾರದು.
ಕಂಪ್ಯೂತರ್ಲೆ
ಟ್ವಿಟ್ಟರ್ ವ್ಯಸನಿಯ ಹಾಡುಗಳು

- ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಟ್ವೀಟ್ ಮಾಡುತ್ತಿರು.
- ಎದೆ ತುಂಬಿ ಟ್ವೀಟಿದೆನು ಇಂದು ನಾನು. ಎಲ್ಲ ಓದಲಿ ಎಂದು ನಾನು ಟ್ವೀಟುವುದಿಲ್ಲ. ಟ್ವೀಟುವುದು ಅನಿವಾರ್ಯ ಕರ್ಮ ನನಗೆ.
ಲೇಬಲ್ಗಳು:
ಟ್ವಿಟ್ಟರ್,
ಟ್ವೀಟ್,
ಫೈಲ್ ಮಾಹಿತಿ,
mindmap
ಸೋಮವಾರ, ಏಪ್ರಿಲ್ 19, 2010
ಗಣಕಿಂಡಿ - ೦೪೮ (ಎಪ್ರಿಲ್ ೧೯, ೨೦೧೦)
ಅಂತರಜಾಲಾಡಿ
ಗಣಿತಜ್ಞರಾಗಿ
ಕೆಲವು ಶಾಲಾ ವಿದ್ಯಾರ್ಥಿಗಳಿಗೆ ತುಂಬ ತಲೆನೋವಿನ ಸಮಸ್ಯೆ ಗಣಿತ. ಯಾವುದೋ ವರ್ಷದಲ್ಲಿ ತಂದೆ ಮತ್ತು ಮಗನ ಪ್ರಾಯದ ವ್ಯತ್ಯಾಸ ಇಷ್ಟು ಪಾಲು, ಇನ್ನೆಷ್ಟೋ ವರ್ಷಗಳ ನಂತರ ಇಷ್ಟು ಪಾಲು, ಹಾಗಾದರೆ ಅವರ ಪ್ರಾಯಗಳೆಷ್ಟು? ಇದು ಎಲ್ಲ ವಿದ್ಯಾರ್ಥಿಗಳು ಬಿಡಿಸಲೇಬೇಕಾದ ಸಮಸ್ಯೆ. ಸಮೀಕರಣಗಳ ಗ್ರಾಫ್ ಬಿಡಿಸುವುದು ಇನ್ನೊಂದು ನಮೂನೆಯ ಸಮಸ್ಯೆ. ಗಣಿತವೆಂದರೆ ಇಷ್ಟೇ ಅಲ್ಲ. ಇನ್ನೂ ಹಲವು ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳನ್ನು ಬಿಡಿಸಲೆಂದೇ ಒಂದು ಜಾಲತಾಣವಿದೆ. ಅದುವೇ www.wolframalpha.com. ಹಾಗೆಂದು ಈ ಜಾಲತಾಣ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಮಾತ್ರವೇ ಇದೆ ಎಂದು ತಿಳಿಯಬೇಕಾಗಿಲ್ಲ. ಅವರೇ ಹೇಳಿಕೊಂಡಂತೆ ಇದು ಒಂದು ಜ್ಞಾನಯಂತ್ರ. ಹೆಚ್ಚಿನ ಮಾಹಿತಿಗಳನ್ನು ನೀವೇ ಭೇಟಿ ನೀಡಿ ತಿಳಿದುಕೊಳ್ಳಿ.
ಡೌನ್‌ಲೋಡ್
ತೊಂದರೆ ಪರಿಹರಿಸಿಕೊಳ್ಳಿ
ಗಣಕದಲ್ಲಿ ಆಗಾಗ ಹಲವಾರು ತೊಂದರೆಗಳು ಕಂಡುಬರುತ್ತವೆ. ನನ್ನ ಗಣಕಕ್ಕೆ ಏನಾಗಿದೆ ಎಂದು ತಲೆ ಕೆರೆದುಕೊಳ್ಳುತ್ತೀರಿ. ಆಗ ಸಹಾಯಕ್ಕೆ ಬರುವುದು Sysinternals Suite ಎಂಬ ತಂತ್ರಾಂಶ. ಇದನ್ನು ಬಳಸಿ ಗಣಕದ ಯಾವ ಭಾಗದಲ್ಲಿ ಏನು ತೊಂದರೆ ಇದೆ ಎಂದು ತಿಳಿದುಕೊಂಡು ಅದನ್ನು ಪರಿಹರಿಸಿಕೊಳ್ಳಬಹುದು. ಇದನ್ನು ಬಳಸಲು ನೀವು ಸ್ವಲ್ಪ ಮಟ್ಟಿನ ತಾಂತ್ರಿಕ ಪರಿಣತಿ ಹೊಂದಿದ್ದರೆ ಒಳ್ಳೆಯದು. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ http://dwarfurl.com/be85d8
e - ಸುದ್ದಿ
ಗೂಗ್ಲ್ ಅರ್ಥ್ ಮೂಲಕ ಪಳೆಯುಳಿಕೆಗಳ ಪತ್ತೆ
ದಕ್ಷಿಣ ಆಫ್ರಿಕಾದಲ್ಲಿ ಹುಡುಗನೊಬ್ಬ ಕಾಡಿನಲ್ಲಿ ಆಟವಾಡುತ್ತ ಒಂದು ತುಂಬ ಹಳೆಯ ಕಾಲದ ಜೀವಿಯೊಂದರ ಪಳೆಯುಳಿಕೆಯನ್ನು ಎಡವಿದ. ಅದನ್ನು ಪರಿಶೀಲಿಸಿದಾಗ ಅದು ೨೦ ಲಕ್ಷ ವರ್ಷಗಳಷ್ಟು ಹಳೆಯ, ವಿಕಾಸದಲ್ಲಿ ಮಾನವನಿಗಿಂತ ಒಂದು ಹಂತ ಹಿಂದಿದ್ದ ಜೀವಿಯದಾಗಿತ್ತು ಎಂದು ತಿಳಿದುಬಂತು. ವಿಜ್ಞಾನಿಗಳು ಗೂಗ್ಲ್ ಅರ್ಥ್ ಬಳಸಿ ಆ ಪ್ರದೇಶವನ್ನು ಪರಿಶೀಲಿಸಿದಾಗ ಆ ಪ್ರದೇಶದಲ್ಲಿ ಹಲವಾರು ಗುಹೆಗಳು ಕಂಡು ಬಂದವು. ಅವುಗಳಲ್ಲಿ ಅದೇ ರೀತಿಯ ಇನ್ನೂ ಹಲವಾರು ಪಳೆಯುಳಿಕೆಗಳು ಸಿಕ್ಕವು. ಈ ಜೀವಿ ಮಾನವನ ವಿಕಾಸದಲ್ಲಿ ಒಂದು ಮಹತ್ವದ ಕೊಂಡಿ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
e- ಪದ
ವೈಕಿ (wiki) - ಸಹಯೋಗಿ ಜ್ಞಾನ ಭಂಡಾರ. ಇದಕ್ಕೆ ಉತ್ತಮ ಉದಾಹರಣೆ ಸಹಯೋಗಿ ಮುಕ್ತ ವಿಶ್ವಕೋಶ wikipedia.org. ಇದಕ್ಕೆ ಯಾರು ಬೇಕಾದರು ಮಾಹಿತಿ ಸೇರಿಸಬಹುದು ಮತ್ತು ಇರುವ ಮಾಹಿತಿಯನ್ನು ತಿದ್ದಬಹುದು.
e - ಸಲಹೆ
ಅಶೋಕ ಬಿಳಗಿ ಅವರ ಪತ್ರ: ಕಳೆದವಾರ ನೀವು ಸೂಚಿಸಿದ WebcamXP ತಂತ್ರಾಂಶದಲ್ಲಿ ವೈರಸ್ ಇದೆ. ದಯವಿಟ್ಟು ಇಂತಹ ವೈರಸ್ ಭರಿತ ತಂತ್ರಾಂಶಗಳನ್ನು ಸೂಚಿಸಬೇಡಿ. ಜಾಲತಾಣಗಳನ್ನು ಸೂಚಿಸುವಾಗ ಎಚ್ಚರವಿರಲಿ.
ಉ: ನಾನು ಆ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಬಳಸಿ ನೋಡಿದ್ದೇನೆ. ಅದರಲ್ಲಿ ಯಾವುದೇ ವೈರಸ್ ಇಲ್ಲ. ನಾನು ಮೈಕ್ರೋಸಾಫ್ಟ್ ಸೆಕ್ಯುರಿಟಿ ಎಸ್ಸೆನ್ಶಿಯಲ್ಸ್ ವೈರಸ್ ನಿರೋಧಕ ಬಳಸುತ್ತದ್ದೇನೆ. ಇದು ಚೆನ್ನಾಗಿದೆ. ಎಲ್ಲ ವೈಸರ್‌ಗಳನ್ನು ಇದು ಪತ್ತೆಹಚ್ಚುತ್ತದೆ. ನಾನು ಅತ್ಯಾಧುನಿಕ ಬ್ರೌಸರ್ ತಂತ್ರಾಂಶಗಳನ್ನು ಬಳಸುತ್ತೇನೆ (ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೮, ಫೈರ್‌ಪಾಕ್ಸ್ ೩.೬, ಗೂಗ್ಲ್ ಕ್ರೋಮ್ ೪.೧). ಇವು ವೈರಸ್‌ಭರಿತ ಜಾಲತಾಣಗಳನ್ನು ತಡೆಹಿಡಿಯುತ್ತವೆ. ಬಹುಶಃ ನಿಮ್ಮ ಗಣಕದಲ್ಲಿ ವೈರಸ್ ಇರಬಹುದು. ಒಮ್ಮೆ ಪರಿಶೀಲಿಸಿ ನೋಡಿ.
ಕಂಪ್ಯೂತರ್ಲೆ
ತರಲೆ ಅನುವಾದ
ಇಂಗ್ಲಿಶ್: please copy this thumb drive and return
ಕನ್ನಡ: ಈ ಹೆಬ್ಬೆರಳನ್ನು ಕೋಪಿಸಿಕೊಂಡು ವಾಪಾಸುಕೊಡು

ಗಣಿತಜ್ಞರಾಗಿ,
ಗೂಗ್ಲ್ ಅರ್ಥ್,
Sysinternal,
wiki
ಸೋಮವಾರ, ಏಪ್ರಿಲ್ 12, 2010
ಗಣಕಿಂಡಿ - ೦೪೭ (ಎಪ್ರಿಲ್ ೧೨, ೨೦೧೦)
ಅಂತರಜಾಲಾಡಿ
ಸುಳ್ಳುಸುದ್ದಿಗಳಿಗೊಂದು ಜಾಲತಾಣ
ಸುದ್ದಿ ಎಲ್ಲರಿಗೂ ಬೇಕು. ಆದರೆ ಸುಳ್ಳು ಸುದ್ದಿ? ಅರ್ಥಾತ್ ವಿಡಂಬನಾತ್ಮಕ ಸುದ್ದಿ. ನಿಜವಾಗಿ ನೋಡಿದರೆ ಅವು ಸುದ್ದಿ ಅಲ್ಲ. ಆದರೆ ಸದ್ಯ ಪ್ರಚಲಿತ ವಿಷಯಗಳನ್ನೇ ತಿರುಚಿ ನಿಜವಾದ ಸುದ್ದಿಯೇನೋ ಎಂಬಂತೆ ಬಿಂಬಿಸಿ ತಯಾರಿಸಿದ ರೋಚಕ “ಸುದ್ದಿ”ಗಳು. ಓದಲು ನಿಜವಾಗಿಯೂ ಉಲ್ಲಾಸದಾಯಕವಾಗಿರುತ್ತವೆ. ಕೆಲವೊಮ್ಮೆ ವಿಚಾರಪ್ರದವಾಗಿಯೂ ಇರುತ್ತವೆ. ಇಂತಹ ಸುದ್ದಿಗಳ ಜಾಲತಾಣ www.fakingnews.com. ಇದು ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಜಾಲತಾಣ. ಅಂದರೆ ಇಲ್ಲಿರುವುದೆಲ್ಲ ಭಾರತೀಯ “ಸುದ್ದಿ”ಗಳು. ಇದರಲ್ಲಿ ಕೆಲವು ನಿಜಕ್ಕೂ ಸ್ವಾರಸ್ಯಕರವಾದ “ಸುದ್ದಿ”ಗಳು ಪ್ರಕಟವಾಗಿವೆ. ಉದಾಹರಣೆಗೆ ಗೂಗ್ಲ್ ವೇವ್ ಅರ್ಥವಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ತಂತ್ರವ್ಯಸನಿ (ಗೀಕ್). ಈ ಜಾಲತಾಣವು ಜಗತ್ಪ್ರಸಿದ್ಧ ಓನಿಯನ್ (www.theonion.com) ಜಾಲತಾಣವನ್ನು ಮಾದರಿಯಾಗಿ ಇಟ್ಟುಕೊಂಡು ತಯಾರಾಗಿದೆ. ಇದೇ ಮಾದರಿಯಲ್ಲಿ ಕನ್ನಡದಲ್ಲಿ ಬೊಗಳೆ ಓದಬೇಕೆ? ಹಾಗಿದ್ದರೆ www.anveshi.net ಜಾಲತಾಣಕ್ಕೆ ಭೇಟಿ ನೀಡಿ.
ಡೌನ್‌ಲೋಡ್
ಕ್ಯಾಮರಾ ತಂತ್ರಾಂಶ
ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುಪಾಲು ಲ್ಯಾಪ್‌ಟಾಪ್ ಗಣಕಗಳಲ್ಲಿ (ಮಡಿಲ ಗಣಕ?) ವೆಬ್‌ಕ್ಯಾಮ್ ಅಂದರೆ ಕ್ಯಾಮರಾ ಅಳವಡಿಸಿರುತ್ತಾರೆ. ಆದರೆ ಲ್ಯಾಪ್‌ಟಾಪ್ ತಯಾರಕರು ಅದನ್ನು ಬಳಸಲು ಯಾವುದೇ ತಂತ್ರಾಂಶ ನೀಡಿರುವುದಿಲ್ಲ. ಈ ಕ್ಯಾಮರಾ ಬಳಸಿ ನೀವು ನಿಮ್ಮ ಸ್ನೇಹಿತರ ಜೊತೆ ಅಂತರಜಾಲ ಮುಖೇನ ವೀಡಿಯೋ ಚಾಟ್ ಮಾಡಬಹುದು. ಅಂದರೆ ನೀವು ಮತ್ತು ನಿಮ್ಮ ಸ್ನೇಹಿತ ಒಬ್ಬರನ್ನೊಬ್ಬರು ನೋಡಿಕೊಂಡು ಮಾತನಾಡಬಹುದು. ಈ ವೆಬ್‌ಕ್ಯಾಮ್‌ಗಳನ್ನು ಬಳಸಲು ತಂತ್ರಾಂಶ ಬೇಕು ತಾನೆ? ಅಂತಹ ಒಂದು ಉಚಿತ ತಂತ್ರಾಂಶ webcamXP ದೊರೆಯುವ ಜಾಲತಾಣ www.webcamxp.com. ಇದನ್ನು ಬಳಸಿ ಅಮೇರಿಕದಲ್ಲಿರುವ ಹುಡುಗ ಭಾರತದಲ್ಲಿರುವ ಹಡುಗಿಯ ವಧುಪರೀಕ್ಷೆಯನ್ನೂ ನಡೆಸಬಹುದು! ಇದನ್ನು ಬಳಸಿ ಇದರಲ್ಲಿ ಮೂಡುವ ವೀಡಿಯೋ ನೋಡಿಕೊಂಡು ತಲೆ ಬಾಚಿ ನೋಡೋಣ!
e - ಸುದ್ದಿ
ಕಳೆದುಹೋದವನ್ನು ಪತ್ತೆ ಹಚ್ಚಿ
ನಮ್ಮಲ್ಲಿ ಕೆಲವರಿಗೆ ಬೀಗದ ಕೈ, ಛತ್ರಿ, ಐಪ್ಯಾಡ್, ಪೊಬೈಲ್ ಫೋನ್, ಇತ್ಯಾದಿಗಳನ್ನು ಆಗಾಗ ಕಳೆದುಕೊಳ್ಳುವ ಅಭ್ಯಾಸವಿದೆ. ಅವುಗಳನ್ನು ಕಳ್ಳರು ಕದಿಯುತ್ತಾರೆಂದಲ್ಲ. ಅವನ್ನು ಎಲ್ಲಿ ಇಟ್ಟಿದ್ದೆನೆಂಬುದು ಅವರಿಗೆ ಮರೆತು ಹೋಗಿರುತ್ತದೆ. ಮೊಬೈಲ್ ಫೋನಾದರೆ ಆ ಸಂಖ್ಯೆಗೆ ಇನ್ನೊಂದು ಫೋನಿನಿಂದ ಕರೆ ಮಾಡಿ ಪತ್ತೆ ಹಚ್ಚಬಹುದು. ಇತರೆ ವಸ್ತುಗಳನ್ನು ಎಲ್ಲಿಟ್ಟಿದ್ದೆ ಎಂದು ಜ್ಞಾಪಿಸಿಕೊಳ್ಳುವುದು ಹೇಗೆ? ಜಪಾನಿನ ವಿಜ್ಞಾನಿಗಳು ಇದಕ್ಕೆಂದೇ ಒಂದು ಗ್ಯಾಜೆಟ್ ತಯಾರಿಸಿದ್ದಾರೆ. ಇದು ಕಣ್ಣಿಗೆ ಧರಿಸುವ ಕನ್ನಡಕದ ತರಹ ಇರುತ್ತದೆ. ಆದರೆ ಇದರಲ್ಲಿ ಒಂದು ಕ್ಯಾಮರಾ, ಒಂದು ಚಿಕ್ಕ ಪರದೆ ಮತ್ತು ಬುದ್ಧಿವಂತ ಗಣಕ ಎಲ್ಲ ಇವೆ. ಇದನ್ನು ಧರಿಸಿ ಮನೆಯೆಲ್ಲ ಓಡಾಡಿ ಕಣ್ಣಿಗೆ ಬಿದ್ದ ಎಲ್ಲ ವಸ್ತುಗಳ ಹೆಸರುಗಳನ್ನು ದೊಡ್ಡದಾಗಿ ಹೇಳುತ್ತಾ ಹೋಗಬೇಕು. ಗಣಕ ಅವನ್ನೆಲ್ಲ ದಾಖಲಿಸುತ್ತ ಹೋಗುತ್ತದೆ. ಮುಂದೆ ಯಾವಾಗಾದರೊಮ್ಮೆ ಯಾವುದಾದರು ವಸ್ತು ಎಲ್ಲಿಟ್ಟಿದ್ದೆ ಎಂದು ಜ್ಞಾಪಿಸಿಕೊಳ್ಳಬೇಕಾದಾಗ ಅದರ ಹೆಸರನ್ನು ಹೇಳಿದರೆ ಸಾಕು. ಗಣಕ ತನ್ನಲ್ಲಿರುವ ಮಾಹಿತಿಯನ್ನು ಜಾಲಾಡಿ ಕೊನೆಯ ಬಾರಿಗೆ ಆ ವಸ್ತುವನ್ನು ಎಲ್ಲಿ ನೋಡಿದ್ದೆ ಎಂಬ ವೀಡಿಯೋ ತುಣುಕನ್ನು ಕನ್ನಡಕದ ಮೂಲೆಯಲ್ಲಿರುವ ಚಿಕ್ಕ ಪರದೆಯಲ್ಲಿ ಪ್ಲೇ ಮಾಡಿ ತೋರಿಸುತ್ತದೆ. ಅದೇನೋ ಸರಿ. ಆದರೆ ಕನ್ನಡಕವನ್ನೇ ಎಲ್ಲಿಟ್ಟಿದ್ದೆ ಎಂದು ಮರೆತರೆ?
e- ಪದ
ಮನೆಯೊಳಗೆ ಮನೆಯೊಡೆಯನಿಲ್ಲ
ಕಾಬ್‌ವೆಬ್ ಸೈಟ್ (cobweb Site) - ಹಲವು ಸಮಯಗಳಿಂದ ಯಾವುದೇ ಮಾಹಿತಿಯನ್ನು ನವೀಕರಿಸದ ಜಾಲತಾಣ. ಜಾಲತಾಣವನ್ನು ತಯಾರಿಸುವುದು ಸುಲಭ. ಆದರೆ ಅದಕ್ಕೆ ಆಗಾಗ ಮಾಹಿತಿಯನ್ನು ಸೇರಿಸುವುದು ಮಾತ್ರ ಅಷ್ಟು ಸುಲಭದ ಕೆಲಸವಲ್ಲ. ಆದುದರಿಂದ ವಿಶ್ವವ್ಯಾಪಿ ಜಾಲದಲ್ಲಿ ಕೋಟಿಗಟ್ಟಲೆ ಜಾಲತಾಣಗಳು ಗೊರಕೆ ಹೊಡೆಯುತ್ತಿವೆ ಅಥವಾ ಮನೆಯೊಡೆಯನಿಲ್ಲದ ಮನೆಯೊಳಗೆ ಜೇಡರ ಬಲೆ ತುಂಬಿದಂತಿವೆ. ನಮ್ಮ ಬಹುಪಾಲು ಸರಕಾರಿ ಮತ್ತು ಅರೆ ಸರಕಾರಿ ಜಾಲತಾಣಗಳ ಹಣೆಬರೆಹ ಹೀಗೆಯೇ ಇದೆ. ತುಂಬ ಗದ್ದಲ ಮಾಡಿ ಜಾಲತಾಣದ ಉದ್ಘಾಟನೆ ಮಾಡುತ್ತಾರೆ. ನಂತರ ಅದಕ್ಕೆ ಕಾಲಕಾಲಕ್ಕೆ ಮಾಹಿತಿ ಸೇರಿಸುವ ಗೊಡವೆಗೆ ಯಾರೂ ಹೋಗುವುದಿಲ್ಲ. ಉದಾಹರಣೆಗೆ ಕರ್ನಾಟಕ ಸರಕಾರದ ವಿಶ್ವಕೋಶ ಕಣಜ (kanaja.in). ಉದ್ಘಾಟನೆಯ ನಂತರ ಈ ಜಾಲತಾಣಕ್ಕೆ ಯಾವ ಮಾಹಿತಿಯನ್ನೂ ಸೇರಿಸಿಲ್ಲ.
e - ಸಲಹೆ
ದಾವಣಗೆರೆಯ ಶಮಂತ್ ವಿ.ಎಂ. ಅವರ ಪ್ರಶ್ನೆ: ನಾನು ಡಿಜಿಟಲ್ ಕ್ಯಾಮರದಿಂದ ತೆಗೆದ ಮಹತ್ವದ ಫೋಟೋಗಳನ್ನು ಸಿ.ಡಿ. ಒಂದರಲ್ಲಿ ಉಳಿಸಿಟ್ಟಿದ್ದೆ. ಆದರೆ ಆ ಸಿ.ಡಿ. ಮಧ್ಯ ಭಾಗದಿಂದ ಸ್ವಲ್ಪ ಸೀಳು ಬಿಟ್ಟಿದೆ. ಈಗ ಆ ಸಿ.ಡಿ. ಗಣಕ ಯಂತ್ರದ ಸಿ.ಡಿ. ಚಾಲಕದಲ್ಲಿ ಆರಂಭವಾಗುತ್ತಿಲ್ಲ. ಅವು ಮಹತ್ವದ ಛಾಯಾಚಿತ್ರಗಳಾಗಿದ್ದು ಅವುಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಸಾಧ್ಯವೇ ದಯವಿಟ್ಟು ತಿಳಿಸಿ. ನಾನು ನಿಮ್ಮ ಗಣಕಿಂಡಿ ಅಂಕಣದ ಓದುಗ.
ಉ: ಹಿಂದೊಮ್ಮೆ ಇಂತಹದೇ ಪ್ರಶ್ನೆಗೆ ಉತ್ತರಿಸಲಾಗಿತ್ತು. ನೀವು CD Recovery Toolbox ಎಂಬ ಉಚಿತ ತಂತ್ರಾಂಶವನ್ನು ಬಳಸಿ ಪ್ರಯತ್ನಿಸಬಹುದು. ನೀವು ಇದನ್ನು http://bit.ly/4JUUGn ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಕಂಪ್ಯೂತರ್ಲೆ
ಗಣಕ ತಗಾದೆಗಳು
ಚಾಟ್‌ನಲ್ಲಿ ಹೋದ ಮಾನ ಇಮೈಲ್‌ನಲ್ಲಿ ವಾಪಾಸು ಬರುವುದಿಲ್ಲ.
ಆರ್ಕುಟ್‌ನಲ್ಲಿ ಹೋದ ಮಾನ ಫೇಸ್‌ಬುಕ್‌ನಲ್ಲಿ ವಾಪಾಸು ಬರುವುದಿಲ್ಲ.
ಬ್ಲಾಗ್ ಮಾಡಲು ಸೋಮಾರಿಯಾದವನು ಟ್ವೀಟ್ ಮಾಡಿದನಂತೆ.
ಟ್ವೀಟ್ ಮಾಡುವುದರಿಂದ ಹುಲಿಗಳನ್ನು ಉಳಿಸಲು ಸಾಧ್ಯವಿಲ್ಲ.

ಮಂಗಳವಾರ, ಏಪ್ರಿಲ್ 6, 2010
ಗಣಕಿಂಡಿ - ೦೪೬ (ಎಪ್ರಿಲ್ ೦೫, ೨೦೧೦)
ಅಂತರಜಾಲಾಡಿ
ಬೋರ್ ಆಗಿದೆಯೇ?
ಅಂದ ಹಾಗೆ ಈ ಬೋರ್ ಅನ್ನೋ ಪದಕ್ಕೆ ಶೇಕಡ ನೂರು ಸಮಾನಾರ್ಥವಾದ ಕನ್ನಡ ಪದವೇನು? ಇಲ್ಲವೇ? ಯಾಕೆಂದರೆ ಮೂಲ ಕನ್ನಡಿಗರಿಗೆ ಬೋರ್ ಆಗುತ್ತಲೇ ಇರಲಿಲ್ಲ! ಇರಲಿ. ಈಗ ಪಾಶ್ಚಾತ್ಯ ಸಂಸ್ಕೃತಿಯ ಗಾಳಿಯಿಂದಾಗಿ ನಿಮಗೂ ಬೋರ್ ಆಗುತ್ತಿದೆಯೇ? ಹಾಗಿದ್ದರೆ ನೀವು ಖಂಡಿತವಾಗಿಯೂ www.bored.com ಜಾಲತಾಣಕ್ಕೆ ಭೇಟಿ ನೀಡಬೇಕು. ನಿಮ್ಮ ಬೋರ್ ಹೋಗಲಾಡಿಸಲು ಬೇಕಾದುದೆಲ್ಲ ಇಲ್ಲಿವೆ. ಆಟಗಳು, ವಿಡಿಯೋ, ನಗೆಹನಿ, ಸಮಸ್ಯೆಗಳು ಹೀಗೆ ನಿಮ್ಮ ಬೋರ್ ಕಳೆಯಲು ಹಾಗೂ ಸಮಯ ಹಾಳು ಮಾಡಲು ಬೇಕಾದ ಎಲ್ಲ ಸಂಗತಿಗಳು ಇಲ್ಲಿವೆ. ಇನ್ನೊಮ್ಮೆ ನಿಮ್ಮ ಸ್ನೇಹಿತರು ಯಾರಾದರೂ “ನನಗೆ ತುಂಬ ಬೋರ್ ಆಗುತ್ತಿದೆ” ಎಂದರೆ ಈ ಜಾಲತಾಣಕ್ಕೆ ಭೇಟಿ ನೀಡಲು ಸಲಹೆ ನೀಡಿ! ಈ ಜಾಲತಾಣದಲ್ಲಿ ಇನ್ನೂ ಒಂದು ಸೌಲಭ್ಯವಿದೆ. ಅಮೇರಿಕಾದ ಯಾವುದಾದರೂ ದೂರವಾಣಿಗೆ ಸಂದೇಶವನ್ನು ಬೆರಳಚ್ಚು ಮಾಡಿದರೆ ಅದನ್ನು ಆ ದೂರವಾಣಿಗೆ ಫೋನ್ ಮಾಡಿ ಅದು ಉಲಿಯುತ್ತದೆ!
ಡೌನ್‌ಲೋಡ್
ವೀಡಿಯೋ ಕದಿಯಬೇಕೇ?
ಹಲವಾರು ವೀಡಿಯೋ ಜಾಲತಾಣಗಳಿವೆ. ಅವುಗಳಲ್ಲಿ ಯುಟ್ಯೂಬ್ (youtube.com) ತುಂಬ ಜನಪ್ರಿಯ. ಬೇರೆ ಬೇರೆ ವೀಡಿಯೋ ಜಾಲತಾಣಗಳಿಂದ ವೀಡಿಯೋ ಡೌನಲೋಡ್ ಮಾಡಲು ಬೇರೆ ಬೇರೆ ತಂತ್ರಾಂಶಗಳು ಲಭ್ಯವಿವೆ. ಆದರೆ ಎಲ್ಲ ಜಾಲತಾಣಗಳಿಂದಲೂ ವೀಡಿಯೋ ಡೌನ್‌ಲೋಡ್ ಮಾಡಬಲ್ಲ ತಂತ್ರಾಂಶ ಒಂದಿದೆ. ಅದುವೇ xVideoServiceThief. ಇದನ್ನು ಬಳಸಿ ಎಲ್ಲ ಜಾಲತಾಣಗಳಿಂದಲೂ ವೀಡಿಯೋ ಡೌನ್‌ಲೋಡ್ ಮಾಡಬಹುದು. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ - http://bit.ly/99Dm2P. ಈ ತಂತ್ರಾಂಶ ಬಳಸಿ ಯಾವ ನಮೂನೆಯ ವೀಡಿಯೋವನ್ನೂ ಡೌನ್‌ಲೋಡ್ ಮಾಡಬಹುದು. ಡೌನ್‌ಲೋಡ್ ಆದ ನಂತರ ನಿಮಗೆ ಬೇಕಾದ ವಿಧಾನಕ್ಕೆ ಪರಿವರ್ತಿಸಿಕೊಳ್ಳಲೂಬಹುದು. ಈ ತಂತ್ರಾಂಶ ಕೇವಲ ವಿಂಡೋಸ್‌ಗೆ ಮಾತ್ರವಲ್ಲ, ಲಿನಕ್ಸ್ ಹಾಗೂ ಮ್ಯಾಕ್‌ಗೂ ಲಭ್ಯವಿದೆ.
e - ಸುದ್ದಿ
ಮಾನವನ ಕೈ ಮೂಲಕ ಬ್ರಾಡ್‌ಬ್ಯಾಂಡ್
ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ತಂತಿ, ನಿಸ್ತಂತು (ವೈರ್‌ಲೆಸ್) ಮೂಲಕ ಪಡೆಯುವುದು ತಿಳಿದಿರಬಹುದು. ಇತ್ತೀಚೆಗೆ ಕೊರಿಯಾದ ವಿಜ್ಞಾನಿಗಳು ಮಾನವನ ಕೈ ಮೂಲಕವೇ ಬ್ರಾಡ್‌ಬ್ಯಾಂಡ್ ವೇಗದಲ್ಲಿ ಮಾಹಿತಿ ಸಂವಹನದಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬ ವ್ಯಕ್ತಿಯ ಕೈಯಲ್ಲಿ ೩೦ ಸೆ.ಮೀ. ದೂರದಲ್ಲಿ ಎರಡು ಎಲೆಕ್ಟ್ರೋಡ್‌ಗಳನ್ನು ಅಳವಡಿಸಿ ಅವುಗಳ ಮೂಲಕ ೧೦ ಮೆಗಾಬಿಟ್‌ನಷ್ಟು ವೇಗದಲ್ಲಿ ಮಾಹಿತಿ ಕಳುಹಿಸುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅತಿ ಕಡಿಮೆ ವಿದ್ಯಚ್ಛಕ್ತಿಯನ್ನು ಈ ಪ್ರಯೋಗದಲ್ಲಿ ಬಳಸಲಾಗಿತ್ತು. ಇದು ಮನುಷ್ಯರ ಚರ್ಮ, ಹೃದಯ, ರಕ್ತ ಪರಿಚಲನೆಯ ಮೇಲೆ ಯಾವುದೇ ದುಷ್ಪರಿಣಾಮ ಮಾಡುವುದಿಲ್ಲ ಎಂದು ಅವರು ಹೇಳಿಕೆ ನಿಡಿದ್ದಾರೆ. ಆದರೆ ಇವುಗಳನ್ನು ಅವರು ಪರೀಕ್ಷೆ ಮೂಲಕ ದೃಢಪಡಿಸಿಲ್ಲ.
e- ಪದ
ಮಾನವಾಂಶ? (ಹ್ಯೂಮನ್ ವೇರ್ - humanware) - ಎಲ್ಲ ತಂತ್ರಾಂಶ ಮತ್ತು ಯಂತ್ರಾಂಶಗಳು ಮಾನವನನ್ನು ಗಮನದಲ್ಲಿಟ್ಟುಕೊಂಡೇ ತಯಾರಾಗಿರುವುದು. ಆದರೆ ಅವು ಯಾವಾಗಲೂ ಹಾಗೆಯೇ ಇದೆ ಎಂಬುದು ನಿಜವಲ್ಲ. ಇತ್ತೀಚೆಗೆ ಗ್ರಾಹಕನನ್ನು ಗಮನದಲ್ಲಿಟ್ಟುಕೊಂಡು ಅಂದರೆ ಬಳಕೆದಾರ ಸ್ನೇಹಿಯಾದ ಯಂತ್ರಾಂಶ ಮತ್ತು ತಂತ್ರಾಂಶಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇವುಗಳಿಗೆ ಹ್ಯೂಮನ್‌ವೇರ್ ಎಂದು ಹೆಸರಿಸಲಾಗಿದೆ. ಸರಕಾರದ ನೌಕರರಿಗೆ ಯಾವ ರೀತಿಯ ಯಂತ್ರಾಂಶ ಮತ್ತು ತಂತ್ರಾಂಶ ನೀಡಿದರೂ ಅವರು ಅದನ್ನು ಬಳಸದಿರುವುದು ನಿಮಗೆ ತಿಳಿದಿರಬಹುದು. ಈ ಸರಕಾರಿ ಹ್ಯೂಮನ್‌ವೇರ್ ರೋಗಕ್ಕೆ ಮದ್ದಿಲ್ಲ :)
e - ಸಲಹೆ
ಭರತ್ ಅವರ ಪ್ರಶ್ನೆ: ನನಗೆ ಉಚಿತ ಕೀ ಲೋಗ್ಗರ್ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: ಕೀ ಲೋಗ್ಗರ್ ಅಂದರೆ ನಿಮ್ಮ ಗಣಕದಲ್ಲಿ ಒತ್ತಿದ ಎಲ್ಲ ಕೀಲಿಗಳನ್ನು ಗುಪ್ತವಾಗಿ ಸಂಗ್ರಹಿಸಿಡುವ ತಂತ್ರಾಂಶ. ಇಂತಹ ತಂತ್ರಾಂಶಗಳನ್ನು ಸಾಮಾನ್ಯವಾಗಿ ಎಲ್ಲ ವೈರಸ್ ನಿರೋಧಕ ತಂತ್ರಾಂಶಗಳು ಅಳಿಸಿಹಾಕುತ್ತವೆ. ವೈರಸ್ ನಿರೋಧಕ ತಂತ್ರಾಂಶದಲ್ಲಿ ಮೊದಲೇ ಈ ಕೀ ಲೋಗ್ಗರ್ ತಂತ್ರಾಂಶದ ಹೆಸರನ್ನು ದಾಖಲಿಸಿ, ಅಳಿಸದಂತೆ ಮಾಡಿ ಮುಂದುವರೆಯಬೇಕಾಗುತ್ತದೆ. ಹೀಗೆಲ್ಲ ಮಾಡಲು ನೀವು ತಯಾರಿದ್ದರೆ ನೀವು www.refog.com/keylogger.html ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಸಂಪೂರ್ಣ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳಿವೆ. ಉಚಿತ ಆವೃತ್ತಿಯಲ್ಲಿ ಕೆಲವು ಮಿತಿಗಳಿವೆ. ಅವು ಏನೇನು ಎಂದು ಅದೇ ಜಾಲತಾಣದಲ್ಲಿ ಪಟ್ಟಿ ಮಾಡಿದ್ದಾರೆ.
ಕಂಪ್ಯೂತರ್ಲೆ
ಗಣಕಜ್ಞ ವಚನಗಳು
ಗಣಕಜ್ಞನೆಂಬವನು ಗರ್ವದಿಂದಾದವನೆ?
ಸರ್ವರೊಳು ಒಂದೊಂದು ಬಗ್ ಪಡೆದು
ಪ್ರೋಗ್ರಾಮ್‌ನ ಕಂತೆಯೇ ಆದ ಗಣಕಜ್ಞ
ಜಾತಿಹೀನನ ಮನೆಯ ಗಣಕ ತಾ ಹೀನವೇ?
ಗಣಕಕ್ಕೆ ಜಾತಿ ತಾನೇಕೆ? ಗಣಕ ಕೆಲಸ
ಮಾಡಿದರೆ ತಾ ಸಾಲದೆ ಗಣಕಜ್ಞ
ಚಾಟ್ ಮಾಡಿದರು ಉತ್ತರಿಸದ
ಇಮೈಲ್‌ಗೂ ಉತ್ತರಿಸದ ಭೂಪ ತಾ
ಏನು ಮಾಡದರೇನು ಫಲ ಗಣಕಜ್ಞ

ಮಂಗಳವಾರ, ಮಾರ್ಚ್ 30, 2010
ಗಣಕಿಂಡಿ - ೦೪೫ (ಮಾರ್ಚ್ ೨೯, ೨೦೧೦)
ಅಂತರಜಾಲಾಡಿ
ಎಪ್ರಿಲ್ ಫೂಲ್
ಎಪ್ರಿಲ್ ೧ರಂದು ಜನರನ್ನು ಎಪ್ರಿಲ್ ಫೂಲ್ ಮಾಡುವ ಹವ್ಯಾಸ ಈಗ, ಇತರೆ ವಿದೇಶೀ ಗೀಳುಗಳಂತೆ, ನಮ್ಮಲ್ಲಿಗೂ ಬಂದು ಬಿಟ್ಟಿದೆ. ಹಲವಾರು ನಮೂನೆಗಳಲ್ಲಿ ಸ್ನೇಹಿತರನ್ನು, ಬಂಧುಗಳನ್ನು, ಸಹೋದ್ಯೋಗಿಗಳನ್ನು ಮೂರ್ಖರನ್ನಾಗಿಸಬೇಕೆ? ಮೂರ್ಖರನ್ನಾಗಿಸಲು ಹಲವಾರು ಉಪಾಯಗಳು ಬೇಕೇ? ಹಾಗಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ aprilfoolzone.com. ಈ ಜಾಲತಾಣದಲ್ಲಿ ಬೇರೆ ಬೇರೆ ವಿಧಾನಗಳಲ್ಲಿ ಜನರನ್ನು ಹೇಗೆ ಬೇಸ್ತು ಬೀಳಿಸಬಹುದು ಎಂದು ವಿವರಿಸಿದ್ದಾರೆ. ಉದಾಹರಣೆಗೆ ನಿಮ್ಮ ಸ್ನೇಹಿತರ ಗಣಕದಲ್ಲಿ ಮೌಸ್‌ನ ಎಡ ಮತ್ತು ಬಲ ಗುಂಡಿಗಳ ಕಾರ್ಯಗಳನ್ನು ಬದಲಿಸಿಬಿಡಿ. ಆತ ಎಡ ಗುಂಡಿ ಒತ್ತಿದಾಗ ಅದು ಬಲಗುಂಡಿ ಒತ್ತಿದಂತೆ ನಡೆದುಕೊಳ್ಳುತ್ತದೆ.
ಡೌನ್‌ಲೋಡ್
ಕೀಟಲೆ ತಂತ್ರಾಂಶ
ಎಪ್ರಿಲ್ ಫೂಲ್ ಮಾಡಲು ಉಪಾಯಗಳು ಏನೋ ಸಿಕ್ಕವು. ಆದರೆ ಕೀಟಲೆ ತಂತ್ರಾಂಶಗಳು ಬೇಕೆನಿಸುತ್ತಿವೆಯೇ? ಹೌದಾದಾರೆ ನೀವು ಭೇಟಿ ನೀಡಬೇಕಾದ ಜಾಲತಾಣ rjlpranks.com/pranks. ಇಲ್ಲಿ ಸುಮಾರು ೪೦ಕ್ಕೂ ಮೀರಿ ಕೀಟಲೆ ತಂತ್ರಾಂಶಗಳು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿವೆ. ಉದಾಹರಣೆಗೆ Add/Remove ಎನ್ನುವ ತಂತ್ರಾಂಶ. ಇದನ್ನು ನಿಮ್ಮ ಸ್ನೇಹಿತನ ಗಣಕದಲ್ಲಿ ಬಳಸಿ ನೋಡಿ. ಆತನ ಗಣಕದಲ್ಲಿ ಇರುವ ಎಲ್ಲ ತಂತ್ರಾಂಶಗಳ ಪಟ್ಟಿ ನೀಡಿ ಇವುಗಳನ್ನೆಲ್ಲ ನಾನು ತೆಗೆದು ಹಾಕುತ್ತಿದ್ದೇನೆ ಎಂಬ ಸಂದೇಶ ನೀಡುತ್ತದೆ. ನಂತರ ಎಲ್ಲವನ್ನೂ ಒಂದೊಂದಾಗಿ ಅಳಿಸಿಹಾಕಿದ್ದೇನೆ ಎಂಬ ಪಟ್ಟಿ ನೀಡುತ್ತದೆ. ಕೊನೆಗೆ ಗಾಭರಿಯಾಗಬೇಡಿ, ಯಾವುದನ್ನೂ ಅಳಿಸಿಲ್ಲ ಎಂದು ಸಂದೇಶ ನೀಡುತ್ತದೆ. ಇದೇ ರೀತಿ ಬೇಸ್ತು ಬೀಳಿಸುವ ಹಲವು ತಂತ್ರಾಂಶಗಳು ಇಲ್ಲಿ ಲಭ್ಯ.
e - ಸುದ್ದಿ
ಕೆಲಸ ಕಳೆದುಕೊಂಡ ತಂತ್ರಜ್ಞ...
ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲೊಮ್ಮೆ ನೂರಾರು ಕಾರುಗಳು ಇದ್ದಕ್ಕಿದ್ದಂತೆ ಸ್ತಬ್ಧವಾದವು. ಇನ್ನು ಕೆಲವು ಇದ್ದಕ್ಕಿದ್ದಂತೆ ಹಾರ್ನ್ ಬಾರಿಸತೊಡಗಿದವು. ಈ ಎಲ್ಲ ಕಾರುಗಳಲ್ಲಿ ಒಂದು ಗ್ಯಾಜೆಟ್ ಅಳವಡಿಸಲಾಗಿತ್ತು. ಅದರ ಕರ್ತವ್ಯವೇನೆಂದರೆ ಕಾರು ಕೊಂಡಾತ ಬ್ಯಾಂಕಿನ ಸಾಲದ ಕಂತು ಕಟ್ಟದಿದ್ದಲ್ಲಿ ಅದು ಕಾರಿನ ಹಾರ್ನ್ ಕಿರಿಚುವಂತೆ ಮಾಡಬಲ್ಲುದು ಹಾಗೂ ಕಾರನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಬಲ್ಲುದು. ಇದು ಕಾರು ಕೊಂಡಾತನಿಗೆ ಕಂತು ಕಟ್ಟಲು ಎಚ್ಚರಿಕೆ ನೀಡಲು ಕಾರು ತಯಾರಕರು ಮತ್ತು ಬ್ಯಾಂಕಿನವರು ಸೇರಿ ರೂಪಿಸಿದ ತಂತ್ರ. ಈ ಗ್ಯಾಜೆಟ್ ಅನ್ನು ಅಂತರಜಾಲದ ಮೂಲಕ ಚಾಲನೆಗೊಳಿಸಬಹುದಿತ್ತು. ಈ ಸಂದರ್ಭದಲ್ಲಿ ಆದುದೇ ಬೇರೆ. ಕಾರು ಕಂಪೆನಿಯಲ್ಲಿ ಕೆಲಸದಲ್ಲಿದ್ದ ತಂತ್ರಜ್ಞನೊಬ್ಬ ಕೆಲಸ ಕಳೆದುಕೊಂಡಿದ್ದ. ಕೆಲಸದಿಂದ ತೆಗೆದುಹಾಕಿದ್ದಕ್ಕಾಗಿ ಕಂಪೆನಿ ಮೇಲೆ ಸೇಡು ತೀರಿಸಿಕೊಳ್ಳಲು ಆತ ಅನುಸರಿಸಿದ ಉಪಾಯವಿದು. ಕಂಪೆನಿ ಬಿಡುವ ಮೊದಲು ಗ್ರಾಹಕರ ಕಾರುಗಳ ಮತ್ತು ಅವುಗಳಲ್ಲಿ ಅಳವಡಿಸಿದ್ದ ಗ್ಯಾಜೆಟ್‌ಗಳ ವಿವರಗಳನ್ನು ಆತ ಕೊಂಡೊಯ್ದಿದ್ದ. ಮನೆಯಲ್ಲಿ ಕುಳಿತುಕೊಂಡು ತನಗಿಷ್ಟಬಂದಂತೆ ಕಾರುಗಳನ್ನು ನಿಷ್ಕ್ರಿಯ ಮಾಡುತ್ತ ಹೋದ. ಕೊನೆಗೆ ಪೋಲೀಸರ ಅತಿಥಿಯಾದ.
e- ಪದ
ಬಗ್ (bug) - ಗಣಕ ಕ್ರಮವಿಧಿ (programming language) ತಯಾರಿಕೆಯಲ್ಲಿ, ತಂತ್ರಾಂಶದಲ್ಲಿ ಅಥವಾ ಯಂತ್ರಾಂಶದಲ್ಲಿ ನುಸುಳಿದ ದೋಷ. ಉದಾಹರಣೆಗೆ ನಿಮಗೆ ಟೆಲಿಫೋನ್ ಇಲಾಖೆಯಿಂದ “ನಿಮ್ಮ ಬಾಕಿ ೦ (ಸೊನ್ನೆ) ರೂ.ಗಳನ್ನು ಕೂಡಲೆ ಪಾವತಿಸತಕ್ಕದ್ದು” ಎಂದು ಎಚ್ಚರಿಕೆಯ ಪತ್ರ ಗಣಕದ ಮೂಲಕ ಬಂದಿದೆ ಎಂದಿಟ್ಟುಕೊಳ್ಳೋಣ. ಇಲ್ಲಿ ಏನಾಗಿದೆಯೆಂದರೆ ಗಣಕ ಕ್ರಮವಿಧಿ ತಯಾರಿಸಿದವರು ಬಾಕಿ ಸೊನ್ನೆ ಇದ್ದಾಗ ಪತ್ರ ಕಳುಹಿಸತಕ್ಕದ್ದಲ್ಲ ಎಂದ ಒಂದು ನಿಯಮವನ್ನು ಕ್ರಮವಿಧಿಯಲ್ಲಿ ಸೇರಿಸಲು ಮರೆತಿದ್ದು. ಇದು ತಂತ್ರಾಂಶದ ಬಗ್. ೧೯೪೫ನೆಯ ಇಸವಿಯಲ್ಲಿಅಸ್ತಿತ್ವದಲ್ಲಿದ್ದ ಮಾರ್ಕ್-II ಎಂಬ ಹೆಸರಿನ ಗಣಕದಲ್ಲಿ ವಿದ್ಯುತ್ ರಿಲೇ ಸ್ವಿಚ್ ಒಂದರಲ್ಲಿ ನಿಜವಾದ ತಗಣೆಯೊಂದು ಸಿಕ್ಕಿಹಾಕಿಕೊಂಡು ಅದು ಕೆಲಸ ನಿಲ್ಲಿಸಿತ್ತು, ಆದುದರಿಂದ ಎಲ್ಲ ಗಣಕ ದೋಷಗಳಿಗೆ ಬಗ್ ಎಂಬ ಹೆಸರು ಬಂತು ಎಂದು ಐತಿಹ್ಯವಿದೆ.
e - ಸಲಹೆ
ರೋಹಿತ್ ಸಿಂಗ್ ಅವರ ಪ್ರಶ್ನೆ: ನಾನು ಅವಸ್ತ್ ವೈರಸ್ ನಿರೋಧಕ ತಂತ್ರಾಂಶ ಬಳಸುತ್ತಿದ್ದೇನೆ. ನನ್ನ ಗಣಕ ತುಂಬ ನಿಧಾನವಾಗಿದೆ. ಅವಸ್ತ್ ಗಣಕವನ್ನು ನಿಧಾನಗೊಳಿಸುತ್ತದೆ ಎಂದು ಕೆಲವರು ಹೇಳುತ್ತಾರೆ. ಹೌದೇ? ಅದರ ಬದಲಿಗೆ ಬೆರೆ ಯಾವ ಉಚಿತ ವೈರಸ್ ನಿರೋಧಕ ತಂತ್ರಾಂಶ ಬಳಸಬಹುದು?
ಉ: ಹೌದು. ಅವಸ್ತ್ ಗಣಕವನ್ನು ನಿಧಾನಗೊಳಿಸುತ್ತದೆ. ಅದರ ಬದಲಿಗೆ ನೀವು ಮೈಕ್ರೋಸಾಫ್ಟ್‌ನವರ ಉಚಿತ ತಂತ್ರಾಂಶ ಬಳಸಬಹುದು. ಅದು ದೊರೆಯುವ ಜಾಲತಾಣ - microsoft.com/security_essentials
ಕಂಪ್ಯೂತರ್ಲೆ
ಕೋಲ್ಯ ಗಣಕ ತರಬೇತಿ ಸಂಸ್ಥೆಗೆ ವಿದ್ಯಾರ್ಥಿಯಾಗಿ ಸೇರಿದ. ಒಂದು ಪೀರಿಯಡ್ ಖಾಲಿ ಇದ್ದಾಗ ಏನಾದರೊಂದು ತರಲೆ ಮಾಡಬೇಕೆಂದು ಹೊರಟ. ಎರಡು ಗಣಕಗಳು ಪಕ್ಕ ಪಕ್ಕದಲ್ಲಿದ್ದವು. ಆತ ಒಂದರ ಕೀಬೋರ್ಡನ್ನು ಇನ್ನೊಂದು ಗಣಕಕ್ಕೆ ಜೋಡಿಸಿಟ್ಟ. ತರಬೇತಿದಾರರು ಬಂದು ಹೇಳಿಕೊಡಲು ಹೊರಟಾಗ, ಕೀಲಿಮಣೆಯಲ್ಲಿ ಕುಟ್ಟಿದ್ದು ಯಾವುದೂ ಪರದೆ ಮೇಲೆ ಬರುತ್ತಿರಲಿಲ್ಲ.

ಎಪ್ರಿಲ್ ಫೂಲ್,
ಕೀಟಲೆ ತಂತ್ರಾಂಶ,
ಬಗ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)