ಅಂತರಜಾಲಾಡಿ
ವಜ್ರದೊಂದಿಗೆ ಆಡಿ
ಆಟ ಆಡಲು ಇಷ್ಟಪಡದವರಾರು? ಆಟಗಳಲ್ಲಿ ಹಲವು ಬಗೆ. ವೇಗವಾಗಿ ಆಡಬೇಕಾದ ಆಟಗಳು, ರೇಸಿಂಗ್, ಶೂಟಿಂಗ್, ಇತ್ಯಾದಿ. ಇನ್ನೊಂದು ಬಗೆಯವು ಸಮಸ್ಯೆಗಳನ್ನು ನಿಡಿಸುವಂತವು. ಬೆಲೆಬಾಳುವ ಕಲ್ಲು ಅಥವಾ ವಜ್ರಗಳನ್ನು ಹೆಕ್ಕುವ ಆಟ ಮತ್ತೊಂದು. ಬೆಲೆಬಾಳುವ ಕಲ್ಲುಗಳೊಡನೆ ಆಡುವ ಆಟ ಬಿಜ್ಯುವೆಲ್‌ಡ್. ಹೆಸರೇ ಹೇಳುವಂತೆ ಆಭರಣಗಳನ್ನು ಹೊಂದಿ ಅಥವಾ ಅವುಗಳೋಡನೆ ಆಡಿ. ಈ ಆಟ ತುಂಬ ಖ್ಯಾತವಾದುದು. ಇದನ್ನು ಡೌನ್‌ಲೋಡ್ ಮಾಡಿಕೊಂಡು ಆಡಬೇಕಾದರೆ ಹಣ ನೀಡಬೇಕು. ಆದರೆ ಹಣ ನೀಡದೆ ಅಂತರಜಾಲತಾಣದಲ್ಲಿಯೇ ಈ ಆಟವನ್ನು ಆಡಬಹುದು. ಅದಕ್ಕಾಗಿ ನೀವು ಭೇಟಿ ನಿಡಬೇಕಾಗಿರುವ ಜಾಲತಾಣ - www.digbejeweled.com.
ಡೌನ್‌ಲೋಡ್
ಆಂಡ್ರೋಯಿಡ್‌ನಿಂದ ಔಟ್‌ಲುಕ್‌ಗೆ
ಮೊಬೈಲ್ ಫೋನ್ ನಡೆಸುವ ಕಾರ್ಯಾಚರಣೆಯ ವ್ಯವಸ್ಥೆಗಳಲ್ಲಿ ಇತ್ತೀಚೆಗೆ ತುಂಬ ಜನಪ್ರಿಯವಾಗುತ್ತಿರುವುದು ಆಂಡ್ರೋಯಿಡ್. ಇದು ಸ್ಮಾರ್ಟ್‌ಫೋನ್. ಅಂದರೆ ವಿಳಾಸ ಪುಸ್ತಕ, ಇಮೈಲ್, ಅಂತರಜಾಲ ವೀಕ್ಷಣೆ, ದಿನಚರಿ, ಇತ್ಯಾದಿ ಎಲ್ಲ ಸವಲತ್ತುಗಳಿವೆ. ಈ ಫೋನಿನಲ್ಲಿರುವ ವಿಳಾಸಗಳನ್ನು ಮತ್ತು ನಿಮ್ಮ ಕಾರ್ಯಕ್ರಮ ವೇಳಾಪಟ್ಟಿಯನ್ನು ನಿಮ್ಮ ಗಣಕಕ್ಕೆ ಪ್ರತಿ ಮಾಡಿಕೊಂಡರೆ ಒಳ್ಳೆಯದಲ್ಲವೇ? ಸಾಮಾನ್ಯವಾಗಿ ಗಣಕದಲ್ಲಿ ಇದನ್ನೆಲ್ಲ ಇಟ್ಟುಕೊಳ್ಳುವ ತಂತ್ರಾಂಶ ಮೈಕ್ರೋಸಾಫ್ಟ್ ಔಟ್‌ಲುಕ್. ಈ ಔಟ್‌ಲುಕ್‌ನಲ್ಲೂ ನೀವು ವಿಳಾಸ ಸಂಗ್ರಹಿಸಿಟ್ಟುಕೊಳ್ಳಬಹುದು. ಔಟ್‌ಲುಕ್‌ನಿಂದ ಆಂಡ್ರೋಯಿಡ್ ಫೋನಿಗೆ ಮತ್ತು ಫೋನಿನಿಂದ ಗಣಕಕ್ಕೆ ಮಾಹಿತಿಗಳನ್ನು ವರ್ಗಾಯಿಸಲು ಅನುವು ಮಾಡಿಕೊಡುವ ಉಚಿತ ತಂತ್ರಾಂಶ ಬೇಕಿದ್ದರೆ ನೀವು ಭೆಟಿ ನೀಡಬೇಕಾದ ಜಾಲತಾಣ - www.android-sync.com.
e - ಸುದ್ದಿ
ಒಸಾಮ ಸತ್ತಿದ್ದು ಮೊದಲು ಟ್ವಿಟ್ಟರ್‌ನಲ್ಲಿ
ಟ್ವಿಟ್ಟರ್ ಇತ್ತೀಚೆಗೆ ತುಂಬ ಪ್ರಖ್ಯಾತವಾಗುತ್ತಿದೆ. ಹಲವು ಪ್ರಮುಖ ಸುದ್ದಿಗಳು ಟ್ವಿಟ್ಟರ್ ಮೂಲಕ ಜಗತ್ತಿಗೆ ಪ್ರಕಾಶನಗೊಳ್ಳುತ್ತಿವೆ. ಒಸಾಮ ಬಿನ್ ಲಾಡೆನ್ ಮರಣ ಈ ಪಟ್ಟಿಗೆ ಹೊಸ ಸೇರ್ಪಡೆ. ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಲಾಡೆನ್ ಮೇಲೆ ನಡುರಾತ್ರಿಯಲ್ಲಿ ಧಾಳಿ ನಡೆಯುತ್ತಿದ್ದಾಗ ಪಕ್ಕದಲ್ಲೇ ವಾಸಿಸುತ್ತಿದ್ದ ಸೋಯೆಬ್ ಅಥರ್ ಎಂಬ ತಂತ್ರಾಂಶ ತಜ್ಞರು ತನ್ನ ಮನೆಯ ಪಕ್ಕದಲ್ಲಿ ನಡೆಯುತ್ತಿರುವುದನ್ನು ಟ್ವೀಟ್ ಮಾಡುತ್ತಿದ್ದರು. ರಾತ್ರಿ ೧ ಘಂಟೆಗೆ ಅವರು ಟ್ವೀಟ್ ಮಾಡಿದ್ದರು - “ರಾತ್ರಿ ಒಂದು ಘಂಟೆಗೆ ಅಬ್ಬೊಟ್ಟಾಬಾದ್‌ನಲ್ಲಿ ಹೆಲಿಕಾಫ್ಟರ್ ಹಾರಾಡುತ್ತಿದೆ. ಇದು ಒಂದು ಅಪರೂಪದ ಘಟನೆ”. ಅದರ ನಂತರ ಅವರು ಸುಮಾರು ಟ್ವೀಟ್ ಮಾಡಿದ್ದರು “ದೊಡ್ಡ ಸ್ಫೋಟ, ಕಿಟಿಕಿಗಳೆಲ್ಲ ಅಲ್ಲಾಡುತ್ತಿವೆ”, “ಒಂದು ಹೆಲಿಕಾಫ್ಟರ್ ಪತನ”, ಇತ್ಯಾದಿ. ಅವರು ತಮಗೆ ಅರಿವಿಲ್ಲದೇ ಬಿನ್ ಲಾಡೆನ್ ಮೇಲಿನ ಧಾಳಿಯ ವೀಕ್ಷಕ ವಿವರಣೆ ನೀಡಿದ್ದರು. ಇದರಿಂದಾಗಿ ಅವರು ಈಗ ಅಂತರಜಾಲದಲ್ಲಿ ಒಬ್ಬ ಖ್ಯಾತನಾಮರಾಗಿದ್ದಾರೆ. ೩೩ ವರ್ಷದ ಅವರಿಗೆ ಟ್ವಿಟ್ಟರ್ ಮೂಲಕ ಮದುವೆಗೆ ಆಹ್ವಾನವೂ ಬಂದಿದೆ! ಅಂದ ಹಾಗೆ ಲಾಡೆನ್ ಸತ್ತ ಸುದ್ದಿಯನ್ನು ಜಗತ್ತಿಗೆ ಮೊತ್ತಮೊದಲು ತಿಳಿಸಿದ್ದು ಅಮೆರಿಕದ ರಿಪಬ್ಲಿಕನ್ ಪಕ್ಷದ ಡೆನ್ನಿಸ್ ರೋಸ್ ಎಂಬವರು. ಅವರು “ಬಿನ್ ಲಾಡೆನ್ ಸತ್ತ. ದೇವರು ಅಮೆರಿಕಾಕ್ಕೆ ದಯಪಾಲಿಸಲಿ” ಎಂದು ಟ್ವೀಟ್ ಮಾಡಿದ್ದರು.
e- ಪದ
ಪಿಂಗ್ ಅರ್ಥಾತ್ ಪಿಎನ್‌ಜಿ (PNG (pronounced ping as in ping-pong); for Portable Network Graphics) - ಅಂತರಜಾಲ ಮತ್ತು ಗಣಕಗಳಲ್ಲಿ ಚಿತ್ರಗಳನ್ನು ತೋರಿಸಲು ಬಳಸುವ ಇನ್ನೊಂದು ಫೈಲ್ ವಿಧಾನ. ಇದು ಜಿಫ್‌ಗಿಂತ (GIF) ಉತ್ತಮ. ಆದರೆ ಫೈಲ್ ಗಾತ್ರವೂ ಜಿಫ್‌ಗಿಂತ ದೊಡ್ಡದು. ಈ ವಿಧಾನದಲ್ಲಿ ಚಿತ್ರಸಂಚಲನೆ (ಅನಿಮೇಶನ್) ಮಾಡಲು ಆಗುವುದಿಲ್ಲ.
e - ಸಲಹೆ
ನಾಗರಾಜರಾವ್ ಜವಳಿ ಅವರ ಪ್ರಶ್ನೆ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಪುಸ್ತಕಗಳನ್ನು ವಿಂಡೋಸ್‌ನಲ್ಲಿ ಡೌನ್‌ಲೋಡ್ ಮಾಡಲಿಕ್ಕೆ ಸಹಾಯಮಾಡುವ ಯಾವುದಾದರೂ ಉಚಿತ ತಂತ್ರಾಂಶವನ್ನು ದಯವಿಟ್ಟು ತಿಳಿಸುವಿರಾ?
ಉ: ನೀವು DLI Downloader ಎಂಬ ತಂತ್ರಾಂಶವನ್ನು ಬಳಸಬಹುದು. ಇದು bit.ly/mkPTJf ಜಾಲತಾಣದಲ್ಲಿ ಲಭ್ಯ.
ಕಂಪ್ಯೂತರ್ಲೆ
ಇಮೈಲ್‌ಗೆ ಉತ್ತರಿಸದಿದ್ದರೇನು ಫಲ?
ಕಮೆಂಟ್‌ಗೆ ಪ್ರತಿ ಕಮೆಂಟ್ ಹಾಕದಿದ್ದರೇನು ಫಲ?
ಪೋಕಿಗೆ ಪ್ರತಿ ಪೋಕು ಮಾಡದಿದ್ದರೇನು ಫಲ?
ಟ್ವೀಟ್‌ಗೆ ಪ್ರತಿ ಟ್ವೀಟ್ ಮಾಡದಿದ್ದರೇನು ಫಲ?
ಮೆಸೇಜ್‌ಗೂ ಉತ್ತರಿಸದಿರೆ ಏನು ಫಲ ಗಣಕಜ್ಞ

MPNG ಅಂತ ಒಂದು modified PNG format ಇದೆ.. ಅದರಲ್ಲಿ animation ಮಾಡಬಹುದು
ಪ್ರತ್ಯುತ್ತರಅಳಿಸಿಪ್ರಿಯ ಪವನಜರಿಗೆ,
ಪ್ರತ್ಯುತ್ತರಅಳಿಸಿನಮಸ್ಕಾರಗಳು.
ನನ್ನ ಪ್ರಶ್ನೆಗೆ ಉತ್ತರಿಸಿ ತುಂಬಾ ಉಪಕಾರ ಮಾಡಿದ್ದೀರಿ. ತುಂಬಾ ಧನ್ಯವಾದಗಳು.