ಅಂತರಜಾಲಾಡಿ
ಕೋಪಿಷ್ಠ ಹಕ್ಕಿಗಳು
ಆಪಲ್ ಐಫೋನ್ ಮತ್ತು ಆಂಡ್ರೋಯಿಡ್ ಫೋನ್‌ಗಳಲ್ಲಿ ತುಂಬ ಜನಪ್ರಿಯವಾದ ಆಟ Angry Birds. ಇದು ಈಗ ಮೊಬೈಲ್ ತಂತ್ರಾಂಶ ಮಾರುಕಟ್ಟೆಯಲ್ಲಿ ಮಾರಾಟದ ದಾಖಲೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಿಮ್ಮಲ್ಲಿ ಐಫೋನ್ ಅಥವಾ ಆಂಡ್ರೋಯಿಡ್ ಫೋನ್ ಇದ್ದಲ್ಲಿ ಅದನ್ನು ಮಾರುಕಟ್ಟೆಯಿಂದ ಕೊಂಡುಕೊಳ್ಳಬಹುದು ಅಥವಾ ಉಚಿತ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಬರಿಯ ಆಟವಲ್ಲ. ಇದರಲ್ಲಿ ಸ್ವಲ್ಪ ವಿಜ್ಞಾನವೂ ಇದೆ. ಒಂದು ಕವಣೆಯನ್ನು ಬಳಸಿ ಅದರ ವೇಗ, ಕೋನ ಬದಲಿಸಿ, ಹಕ್ಕಿಗಳನ್ನು ಎಸೆದು ಹಂದಿಗಳನ್ನು ಕೊಲ್ಲಬೇಕು. ಇದನ್ನು ನಿಮ್ಮ ಗಣಕದಲ್ಲೇ ಆಡಬೇಕೇ? ಅದೂ ಉಚಿತವಾಗಿ? ಹಾಗಿದ್ದರೆ ನೀವು chrome.angrybirds.com ಜಾಲತಾಣಕ್ಕೆ ಭೇಟಿ ನಿಡಬೇಕು. ಇದು ಕ್ರೋಮ್ ಬ್ರೌಸರ್‌ನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೯ ಹಾಗೂ ಫೈರ್‌ಫಾಕ್ಸ್ ೪ ರಲ್ಲೂ ಕೆಲಸ ಮಾಡುತ್ತದೆ. ಆದರೆ ಕ್ರೋಮ್‌ನಷ್ಟು ಚೆನ್ನಾಗಿ ಅಲ್ಲ. ಇತ್ತೀಚೆಗೆ ಇದನ್ನು ಕ್ರೋಮ್‌ಗೆ ಸೇರಿಸಿಕೊಂಡು ಅಂತರಜಾಲ ಸಂಪರ್ಕ ಇಲ್ಲದಿದ್ದಾಗಲೂ ಆಡುವ ಸವಲತ್ತು ನೀಡಿದ್ದಾರೆ. ಎಚ್ಚರಿಕೆ. ಇದು ನಿಮ್ಮನ್ನು ಒಂದು ಚಟವಾಗಿ ಅಂಟಿಕೊಂಡುಬಿಡಬಹುದು.
ಡೌನ್‌ಲೋಡ್
ಕಡತ ರಿಪೇರಿ ಮಾಡಿ
ಗಣಕದಲ್ಲಿ ಒಂದು ಕಡತ ತಯಾರಿ ಮಾಡುತ್ತಿದ್ದೀರಿ. ಅದಕ್ಕಾಗಿ ಮೈಕ್ರೋಸಾಫ್ಟ್ ವರ್ಡ್ ಅಥವಾ ಎಕ್ಸೆಲ್ ಬಳಸುತ್ತಿದ್ದೀರಿ. ಆಗ ಇದ್ದಕ್ಕಿದ್ದಂತೆ ವಿದ್ಯುಚ್ಛಕ್ತಿ ಕೈಕೊಡುತ್ತದೆ. ನಿಮ್ಮಲ್ಲಿ ಯುಪಿಎಸ್ ಇಲ್ಲ. ಆಗ ಏನಾಗುತ್ತದೆ? ಗಣಕ ಇದ್ದಕ್ಕಿದ್ದಂತೆ ನಿಂತುಹೋಗುವುದರಿಂದ ಹೆಚ್ಚಿನಂಶ ನೀವು ಕೆಲಸ ಮಾಡುತ್ತಿದ್ದ ಕಡತ ಕೆಟ್ಟುಹೋಗುವ ಸಾದ್ಯತೆ ಇದೆ. ಆಗಾಗ ಕಡತವನ್ನು ಉಳಿಸುತ್ತಾ ಇರು ಎಂದು ಆಯ್ಕೆ ಮಾಡಿಕೊಂಡಿದ್ದಲ್ಲಿ ಸುಮಾರು ಮಾಹಿತಿ ಸಿಗುವ ಸಾಧ್ಯತೆ ಇದೆ. ಹಾಗಿಲ್ಲದಿದ್ದಲ್ಲಿ ಕಡತ ಕೆಟ್ಟಿದ್ದರೆ ಅದನ್ನು ಸರಿಮಾಡಲು ಒಂದು ತಂತ್ರಾಂಶ ಉಚಿತವಾಗಿ ಲಭ್ಯವಿದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೀವು ಭೇಟಿ ನೀಡಬೇಕಾದ ಜಾಲತಾಣ www.filerepair1.com. ವರ್ಡ್ ಮತ್ತು ಎಕ್ಸೆಲ್ ಮಾತ್ರವಲ್ಲ, ಇನ್ನೂ ಹಲವಾರು ನಮೂನೆಯ ಫೈಲ್‌ಗಳನ್ನು ಇದು ರಿಪೇರಿ ಮಾಡಬಲ್ಲುದು.
e - ಸುದ್ದಿ
ನಿಮ್ಮ ಮುಖಕ್ಕೆ ಸರಿಹೊಂದುವ ನಾಯಿ
ನಿಮ್ಮ ಮುಖಕ್ಕೆ ಸರಿಹೊಂದುವ ಹೆಣ್ಣು/ಗಂಡನ್ನು ನೋಡಿ ಮದುವೆ ಆಗುವುದು ಗೊತ್ತು ತಾನೆ? ಅದನ್ನೇ ಗಣಕ ಬಳಸಿಯೂ ಮಾಡಬಹುದು. ಅದಕ್ಕಾಗಿ ತಂತ್ರಾಂಶಗಳೂ ಇವೆ. ಹಲವು ಅಂತರಜಾಲತಾಣಗಳೂ ಇವೆ. ಅಂತಹ ಜಾಲತಾಣದಲ್ಲಿ ನಿಮ್ಮ ಫೋಟೋ ನೀಡಿದರೆ ಅದು ನಿಮ್ಮ ಮುಖಕ್ಕೆ ಸರಿಹೊಂದುವ ಬಾಳಸಂಗಾತಿಯನ್ನು ಹುಡುಕಿ ಕೊಡುತ್ತದೆ. ಅದೇನೋ ಸರಿ. ಆದರೆ ನಿಮ್ಮ ಮುಖಕ್ಕೆ ಸರಿಹೊಂದುವ ನಾಯಿ ಕೊಳ್ಳುವುದು ಗೊತ್ತೆ? ಅದಕ್ಕಾಗಿ ನೀವು www.doggelganger.co.nz ಜಾಲತಾಣಕ್ಕೆ ಭೇಟಿ ನೀಡಬೇಕು. ಆ ಜಾಲತಾಣದಲ್ಲಿ ನೀವು ನಿಮ್ಮ ಫೋಟೋ ನೀಡಬಹುದು ಅಥವಾ ನಿಮ್ಮ ಗಣಕದಲ್ಲಿ ಕ್ಯಾಮರಾ ಇದ್ದರೆ ಅದರ ಮೂಲಕ ಫೋಟೋವನ್ನು ಅದುವೇ ತೆಗೆದುಕೊಳ್ಳುತ್ತದೆ. ನಂತರ ನಿಮ್ಮ ಮುಖಕ್ಕೆ ಸರಿಹೊಂದುವ ನಾಯಿಯ ಮಾಹಿತಿ ನೀಡುತ್ತದೆ. ಆದರೆ ನಾಯಿ ಮಾತ್ರ ನ್ಯೂಝೀಲಂಡಿನಲ್ಲಿ ಸಿಗುತ್ತದೆ.
e- ಪದ
ಟೈಪೋಸ್ಕ್ವಾಟ್ಟಿಂಗ್ (Typosquatting) - ಖ್ಯಾತ ಜಾಲತಾಣಗಳ ವಿಳಾಸವನ್ನು ಬೆರಳಚ್ಚು ಮಾಡುವಾಗ ತಪ್ಪಾದರೆ ದೊರೆಯುವ ಜಾಲತಾಣ ವಿಳಾಸಗಳನ್ನು ನೋಂದಣಿ ಮಾಡಿಟ್ಟುಕೊಳ್ಳುವುದು. ಉದಾಹರಣೆಗೆ google.com ಎಲ್ಲರಿಗೂ ಗೊತ್ತು. ಕೆಲವೊಮ್ಮೆ ಅದನ್ನು ಬೆರಳಚ್ಚು ಮಾಡುವಾಗ goggle ಎಂದಾಗುತ್ತದೆ. ಇದನ್ನು ಮೊದಲೇ ಊಹಿಸಿ goggle.com ಎಂಬ ಜಾಲತಾಣವನ್ನು ನೋಂದಾಯಿಸಿಕೊಳ್ಳವುದು. ಅನಂತರ ಅದಕ್ಕೆ ಬರುವ ವೀಕ್ಷಕರನ್ನು ಬೇರೆಡೆಗೆ ಹಾದಿ ತಪ್ಪಿಸುವುದು.
e - ಸಲಹೆ
ಪ್ರ: ನನಗೆ ಗೂಗ್ಲ್ ವಿ-ಅಂಚೆ (gmail) ಯಲ್ಲಿರುವ ಪತ್ರಗಳನ್ನು ನನ್ನ ಗಣಕಕ್ಕೆ ಡೌನ್‌ಲೋಡ್ ಮಾಡಿಟ್ಟುಕೊಳ್ಳಬೇಕು ಮತ್ತು ಗಣಕದಿಂದಲೇ ಜಿಮೈಲ್ ಮೂಲಕ ವಿ-ಅಂಚೆ ಕಳುಹಿಸಬೇಕು. ಅದಕ್ಕೆ ಏನು ಮಾಡಬೇಕು?
ಉ: ನಿಮ್ಮ ಗಣಕದಲ್ಲಿ ಯಾವುದಾದರೂ ವಿ-ಅಂಚೆಯ ತಂತ್ರಾಂಶ ಇರಬೇಕು. ಉದಾ -ಮೈಕ್ರೋಸಾಫ್ಟ್ ಔಟ್‌ಲುಕ್, ವಿಂಡೋಸ್ ಲೈವ್ ಮೈಲ್, ಥಂಡರ್‌ಬರ್ಡ್, ಇತ್ಯಾದಿ. ಔಟ್‌ಲುಕ್ ತುಂಬ ಚೆನ್ನಾಗಿದೆ. ಆದರೆ ಅದು ಉಚಿತವಲ್ಲ. ವಿಂಡೋಸ್ ಲೈವ್ ಮೈಲ್ ಉಚಿತ. ಅದನ್ನು bit.ly/iJYE4G ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜಿಮೈಲ್‌ನಲ್ಲಿ POP/IMAP ಆಯ್ಕೆ ಮಾಡಿಕೊಳ್ಳಬೇಕು. ಪೂರ್ತಿ ವಿವರ ಜಿಮೈಲ್ ಜಾಲತಾಣದಲ್ಲಿದೆ.
ಕಂಪ್ಯೂತರ್ಲೆ
ಕೋಲ್ಯನ ೬ ವರ್ಷದ ಮಗಳಿಗೆ ಗಣಕದ ಡೆಸ್ಕ್‌ಟಾಪ್‌ನಲ್ಲಿ ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ ಚಿತ್ರಿಕೆ (ಐಕಾನ್) ಕಾಣಸಿಗಲಿಲ್ಲ. ಆಕೆ ಅಪ್ಪನಿಗೆ ಕೇಳಿದಳು -“ಯಾಕೆ ನನ್ನ ಕಂಪ್ಯೂಟರಿನಿಂದ ಇಂಟರ್‌ನೆಟ್ಟನ್ನು ಡಿಲೀಟ್ ಮಾಡಿದೆ?”

ಕೋಪಿಷ್ಠ ಹಕ್ಕಿಗಳ ಲಿಂಕಿನಿಂದ ಸಂತುಷ್ಟ!
ಪ್ರತ್ಯುತ್ತರಅಳಿಸಿಧನ್ಯವಾದಗಳು!
@Guru - ತಿಳಿದ ನಾನೂ ಸಂತುಷ್ಟ :)
ಪ್ರತ್ಯುತ್ತರಅಳಿಸಿ