ಅಂತರಜಾಲಾಡಿ
ನಿರುಪಯುಕ್ತ ಸಂಶೋಧನೆಗಳು
ಜನರಿಗೆ ಅತಿ ಉಪಯುಕ್ತ ಸಂಶೋಧನೆಗಳು ಮತ್ತು ಅವುಗಳಿಗಾಗಿ ಜನರು ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಳ್ಳುವುದು ಗೊತ್ತು ತಾನೆ? ಅಮೆರಿಕದಲ್ಲಿ ಎಲ್ಲ ರೀತಿಯ ಸಂಶೋಧನೆಗಳಿಗೆ ಪೇಟೆಂಟ್ ಪಡೆದಿಟ್ಟುಕೊಳ್ಳುವುದು ಹಲವರಿಗೆ ಹವ್ಯಾಸವಾಗಿದೆ. ಮುಂದೆಂದೋ ಯಾರೋ ಮಾಡಬಹುದಾದ ಸಂಶೋಧನೆಗಳ ಆಲೋಚನೆಗಳಿಗೂ ಪೇಟೆಂಟ್ ಪಡೆದಿಟ್ಟುಕೊಂಡು ಅದರಿಂದ ಮಿಲಿಯಗಟ್ಟಳೆ ಹಣ ಮಾಡಿಕೊಂಡವರೂ ಇದ್ದಾರೆ. ಅದೇನೋ ಸರಿ. ಆದರೆ ಎಲ್ಲ ಪೇಟೆಂಟ್‌ಗಳು ನಿಜವಾಗಿಯೂ ಉಪಯುಕ್ತವೇ? ಅಮೆರಿಕದಲ್ಲಿ ನೋಂದಣಿಯಾಗುವ ಸಾವಿರಾರು ಪೇಟೆಂಟ್‌ಗಳಲ್ಲಿ ಸಂಪೂರ್ಣ ನಿರುಪಯುಕ್ತ ಎನ್ನಿಸುವಂತಹವೂ ಹಲವಾರಿವೆ. ಅಂತಹ ಪೇಟೆಂಟ್‌ಗಳಿಗೆಂದೇ ಇರುವ ಜಾಲತಾಣ www.totallyabsurd.com. ಇಲ್ಲಿರುವವೆಲ್ಲ ಅಮೆರಿಕದಲ್ಲಿ ನಿಜವಾಗಿ ಪಡೆದಿಕೊಂಡಿರುವ ಪೇಟೆಂಟ್‌ಗಳಲ್ಲಿ ನಿರುಪಯುಕ್ತ ಅನ್ನಿಸುವವುಗಳ ಯಾದಿಯೇ ಆಗಿರುತ್ತದೆ. ಒಂದು ಉದಾಹರಣೆ -ನಾಯಿಗೊಂದು ಛತ್ರಿ.
ಡೌನ್‌ಲೋಡ್
ಯುಎಸ್‌ಬಿಗಾಗಿ ತಂತ್ರಾಂಶಗಳು
ಇತ್ತೀಚೆಗೆ ಯುಎಸ್‌ಬಿ ಡ್ರೈವ್‌ಗಳು ತುಂಬ ಜನಪ್ರಿಯವಾಗುತ್ತಿವೆ. ಅಂತೆಯೇ ಯುಎಸ್‌ಬಿಯಿಂದಲೇ ಚಲಾಯಿಸಬಲ್ಲ ತಂತ್ರಾಂಶಗಳೂ ಲಭ್ಯವಾಗುತ್ತಿವೆ. ಇವುಗಳ ಅನುಕೂಲವೇನೆಂದರೆ ಇವುಗಳನ್ನು ಚಲಾಯಿಸಲು ಗಣಕದಲ್ಲಿ ಇನ್‌ಸ್ಟಾಲ್ ಮಾಡಬೇಕಾಗಿಲ್ಲ. ದಿನಕ್ಕೊಂದು ಸೈಬರ್‌ಕೆಫೆಯಲ್ಲಿ ಗಣಕ ಬಳಸುವವರಿಗಂತೂ ಇವು ತುಂಬ ಉಪಯುಕ್ತ. ಉದಾಹರಣೆಗೆ ನೀವು ದೃಷ್ಟಿಶಕ್ತಿ ವಂಚಿತರು ಮತ್ತು ನಿಮಗೆ ಪರದೆಯಲ್ಲಿ ಮೂಡಿಬಂದ ಅಕ್ಷರಗಳನ್ನು ಓದುವ ತಂತ್ರಾಂಶ ಬೇಕಾಗಿರುತ್ತದೆ. ಅದನ್ನು ನೀವು ಭೇಟಿ ನೀಡುವ ಪ್ರತಿಯೊಂದು ಸೈಬರ್‌ಕೆಫೆಯಲ್ಲೂ ಇನ್‌ಸ್ಟಾಲ್ ಮಾಡಲು ಆಗುವುದಿಲ್ಲ. ಯುಎಸ್‌ಬಿಯಿಂದಲೇ ಚಲಾಯಿಸಬಲ್ಲ ಉಚಿತ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಡುವ ಜಾಲತಾಣ www.portablefreeware.com.
e - ಸುದ್ದಿ
ಸ್ಟೀವ್ ಜಾಬ್ಸ್ ಅಂತ್ಯಕ್ರಿಯೆಯಲ್ಲಿ ಪ್ರತಿಭಟನೆಯ ಘೋಷಣೆ ಐಫೋನ್ ಮೂಲಕ
ಆಪಲ್ ಕಂಪೆನಿಯ ಸ್ಥಾಪಕ ಮಾತ್ರವಲ್ಲ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಅಭೂತಪೂರ್ವವಾದ ಕ್ರಾಂತಿಯನ್ನು ಮಾಡಿದ ಸ್ಟೀವ್ ಜಾಬ್ಸ್ ಇತ್ತೀಚೆಗೆ ನಿಧನರಾದುದು ನಿಮಗೆಲ್ಲ ತಿಳಿದಿರಬಹುದು. ಅವರ ಆಪಲ್ ಕಂಪೆನಿಯ ಒಂದು ಕ್ರಾಂತಿಕಾರಕ ಉತ್ಪಾದನೆ ಐಫೋನ್. ಈಗ ಮುಖ್ಯ ವಿಷಯಕ್ಕೆ ಬರೋಣ. ಅಮೆರಿಕದಲ್ಲಿ ವೆಸ್ಟ್‌ಬೊರೊ ಎಂಬ ಚರ್ಚ್ ಇದೆ. ದೇವರು ಅಮೆರಿಕವನ್ನು ಶಿಕ್ಷಿಸುತ್ತಿದ್ದಾನೆ ಯಾಕೆಂದರೆ ಅಮೆರಿಕವು ಪಾಪವನ್ನು ಮತ್ತು ಪಾಪಿಗಳನ್ನು ಸಹಿಸುತ್ತಿದೆ ಎಂದು ಅವರು ನಂಬಿದವರು. ಇರಾಕ್ ಯುದ್ಧದಲ್ಲಿ ಮಡಿದವರ ಅಂತ್ಯಕ್ರಿಯೆಯಲ್ಲಿ ಪ್ರತಿಭಟಿಸಿ ಇವರು ಪ್ರಖ್ಯಾತಿ ಪಡೆದಿದ್ದರು. ಸ್ಟೀವ್ ಜಾಬ್ಸ್ ಅವರ ಅಂತ್ಯಕ್ರಿಯೆಯಲ್ಲೂ ಪ್ರತಿಭಟಿಸುವುದಾಗಿ ವೆಸ್ಟ್‌ಬೊರೊ ಸದಸ್ಯರು ಹೀಗೆಂದು ಘೋಷಿಸಿದ್ದರು -“ಅವರಲ್ಲಿ ಅದ್ಭುತವಾದ ಪ್ಲಾಟ್‌ಫಾರಂ ಇತ್ತು ಆದರೆ ಸ್ಟೀವ್ ಜಾಬ್ಸ್ ದೇವರನ್ನು ವೈಭವೀಕರಿಸಿರಲಿಲ್ಲ. ಆತ ಪಾಪಿ. ಆದುದರಿಂದ ವೆಸ್ಟ್‌ಬೊರೊ ಅವರ ಅಂತ್ಯಕ್ರಿಯೆಯಲ್ಲಿ ಪ್ರತಿಭಟಿಸುತ್ತದೆ”. ವೆಸ್ಟ್‌ಬೊರೊ ಸದಸ್ಯರು ತಮ್ಮ ಈ ಘೋಷಣೆಯನ್ನು ಮಾಡಿದ್ದು ಟ್ವಿಟ್ಟರ್ ಮೂಲಕ ಐಫೋನ್ ಬಳಸಿ!
e- ಪದ
ತಂತ್ರಾಂಶ (software) - ಗಣಕವನ್ನು ನಡೆಸಲು ಬೇಕಾದ ಅತಿ ಮುಖ್ಯವಾದ ಆದೇಶ, ಸೂಚನೆ, ಕ್ರಮವಿಧಿಗಳು, ಇತ್ಯಾದಿ. ಒಂದು ಸಂಗೀತ ಉಪಕರಣವನ್ನು ಯಂತ್ರಾಂಶಕ್ಕೆ (hardware) ಹೋಲಿಸಬಹುದಾದರೆ ಅದರಲ್ಲಿ ನುಡಿಸುವ ಸಂಗೀತವನ್ನು ತಂತ್ರಾಂಶಕ್ಕೆ ಹೋಲಿಸಬಹುದು. ಯಂತ್ರಾಂಶ ಕಣ್ಣಿಗೆ ಕಾಣಿಸುವಂತಹದು. ತಂತ್ರಾಂಶ ಕಣ್ಣಿಗೆ ಕಾಣಿಸಲಾರದ್ದು.
e - ಸಲಹೆ
ಜಿತೇಂದ್ರ ಪಾಟೀಲರ ಪ್ರಶ್ನೆ: ಮೈಕ್ರೋಸಾಫ್ಟ್ ಎಕ್ಸೆಲ್‌ನಲ್ಲಿ ಬಳಸುವ ಸಮೀಕರಣಗಳನ್ನು (Excel formulas) ತಿಳಿಸುವ ಜಾಲತಾಣ ಇದೆಯೇ?
ಉ: www.excelformula.net ನೋಡಿ.
ಕಂಪ್ಯೂತರ್ಲೆ
ಇನ್ನಷ್ಟು ಗಣಕ (ತ)ಗಾದೆಗಳು:
· ವೈರಸ್‌ನ್ನು ಅಳಿಸಿಹಾಕು ಅಂದರೆ ಇಡಿ ಹಾರ್ಡ್‌ಡಿಸ್ಕನ್ನೇ ಅಳಿಸಿ ಸ್ವಚ್ಛ ಮಾಡಿದನಂತೆ.
· ಮನೆ ಸ್ವಚ್ಛವಾಗಿದೆಯೆಂದರೆ ಗಣಕ ಕೆಟ್ಟು ಹೋಗಿದೆ ಎಂದು ಅರ್ಥ.
· ಗಣಕದಲ್ಲಿ ಎಷ್ಟು ಸ್ಕ್ರೂ ಇಲ್ಲವಾಗಿದೆಯೇ ಅಷ್ಟು ಸಲ ಅದನ್ನು ಬಿಚ್ಚಲಾಗಿದೆ ಎಂದು ಅರ್ಥ.

ಉಪಯುಕ್ತ ಮಾಹಿತಿಗಳನ್ನು ಕಲೆ ಹಾಕಿ ಕೊಟ್ಟಿದ್ದೀರಿ. ಇವುಗಳಿ೦ದ ತು೦ಬಾ ಜನರಿಗೆ ಉಪಯೋಗವಾಗಲಿ ಎ೦ದು ನನ್ನ ಹಾರೈಕೆ.
ಪ್ರತ್ಯುತ್ತರಅಳಿಸಿ