ಅಂತರಜಾಲಾಡಿ
ಕಡತ ಪರಿವರ್ತಿಸಿ
ಹಲವಾರು ನಮೂನೆಯ ಫೈಲ್‌ಗಳು ಎಲ್ಲರಲ್ಲೂ ಇರುವುದು ಸಹಜ. ಉದಾಹರಣೆಗೆ ಹಾಡು (mp3), ವೀಡಿಯೋ (mp4, avi, flv), ವರ್ಡ್, ಪಿಡಿಎಫ್, ಇತ್ಯಾದಿ. ಇವುಗಳನ್ನು ಒಂದು ನಮೂನೆಯಿಂದ ಇನ್ನೊಂದಕ್ಕೆ ಬದಲಾಯಿಸಬೇಕಾಗಿರುತ್ತದೆ. ನಿಮ್ಮಲ್ಲಿ ಒಂದು ವೀಡಿಯೋ ತುಣುಕು flv ರೂಪದಲ್ಲಿರುವುದಾದರೆ ಅದನ್ನು ನೋಕಿಯಾ ಮೊಬೈಲ್‌ಗೆ ವರ್ಗಾಯಿಸಬೇಕಾದರೆ ಅದು 3gp ವಿಧಾನದಲ್ಲಿರಬೇಕಾಗುತ್ತದೆ. ಹೀಗೆ ಪರಿವರ್ತಿಸಲು ಹಲವು ತಂತ್ರಾಂಶಗಳಿವೆ. ಅವುಗಳನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸದೆ ಅಂತರಜಾಲದ ಮೂಲಕವೇ ಯಾವ ಫೈಲ್ ಆಗಿರಲಿ ಅದನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತಿಸಲು ಅನುವು ಮಾಡಿಕೊಡುವ ಜಾಲತಾಣ www.zamzar.com. ಇದು ಪರಿವರ್ತಿಸಿದ ಕಡತವನ್ನು ನಿಮ್ಮ ಇಮೈಲ್‌ಗೆ ಕಳುಹಿಸಿಕೊಡುತ್ತದೆ.
ಡೌನ್‌ಲೋಡ್
ನೋಕಿಯಾಟ
ಭಾರತದಲ್ಲಿ ಸದ್ಯದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಮೊಬೈಲ್ ಫೋನ್ ನೋಕಿಯ ಕಂಪೆನಿಯದು. ಇವರ ಫೋನ್‌ಗಳಲ್ಲಿ ನೂರಾರು ಮಾದರಿಗಳಿವೆ. ಅವುಗಳಿಗೆ ವಿವಿಧ ಗುಣವೈಶಿಷ್ಟ್ಯಗಳಿವೆ ಮತ್ತು ವಿವಿಧ ಗಾತ್ರದ ಪರದೆಗಳಿವೆ. ಅಂತೆಯೇ ಇವುಗಳಿಗಾಗಿ ತಯಾರಾದ ಸಾವಿರಾರು ಆಟಗಳಿವೆ. ಈ ಆಟಗಳನ್ನು ನಿಮ್ಮ ನೋಕಿಯ ಮೊಬೈಲ್ ಫೋನ್‌ಗೆ ಅಳವಡಿಸಿಕೊಳ್ಳಬೇಕಾಗಿದೆಯೇ? ಹಾಗಿದ್ದರೆ ನೋಕಿಯ ಫೋನ್‌ಗಳಿಗಾಗಿ ತಯಾರಾದ ಆಟಗಳಿಗೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - nokiagamez.com. ಇಲ್ಲಿಗೆ ಭೇಟಿ ನೀಡಿ ಆಟಗಳನ್ನು ನಿಮ್ಮ ಗಣಕಕ್ಕೆ ಡೌನ್‌ಲೋಡ್ ಮಡಿಕೊಂಡು ನಂತರ Nokia PC Suite ಎಂಬ ತಂತ್ರಾಂಶದ ಮೂಲಕ ಫೋನ್‌ಗೆ ವರ್ಗಾಯಿಸಿ ಬಳಸಬೇಕು. ಈ ಜಾಲತಾಣದಲ್ಲಿ ಆಟಗಳಲ್ಲದೆ ಇತರೆ ಕೆಲವು ಉಪಯುಕ್ತ ತಂತ್ರಾಂಶ, ಸ್ಕ್ರೀನ್‌ಸೇವರ್ ಹಾಗೂ ಲೇಖನಗಳಿವೆ.
e - ಸುದ್ದಿ
ಮಿಥ್ಯಾ ತರಳೆಯ ನಂಬಿ...
ಇಲ್ಲದ ಹುಡುಗಿಯನ್ನು ಉಳಿಸಲು ೨ ಲಕ್ಷ ಡಾಲರು ಹಣ ಕಳೆದುಕೊಂಡವನೊಬ್ಬನ ಕಥೆ ಅಮೆರಿಕದ ಇಲಿನಾಯ್ಸ್‌ನಿಂದ ವರದಿಯಾಗಿದೆ. ಆತ ಅಂತರಜಾಲದ ಮೂಲಕ ಹುಡುಗಿಯೊಬ್ಬಳನ್ನು ಸ್ನೇಹಿತೆಯಾಗಿ ಮಾಡಿಕೊಂಡಿದ್ದ. ಆಕೆಯೊಡನೆ ಗೆಳೆತನ ಮುಂದುವರಿಯಿತು. ಎರಡು ವರ್ಷಗಳ ಕಾಲದಲ್ಲಿ ಆತ ಆಕೆಯನ್ನು ಎಷ್ಟು ನಂಬಿದ್ದನೆಂದರೆ ಆಕೆ ಕಷ್ಟದಲ್ಲಿದ್ದೇನೆಂದು ಹೇಳಿದ್ದು ನಂಬಿ ಆಗಾಗ ಹಣ ನೀಡುತ್ತಿದ್ದ. ಕೊನೆಗೊಮ್ಮೆ ಆಕೆ ನಾಪತ್ತೆಯಾದಳು. ಆಕೆಯನ್ನು ಯಾರೋ ಅಪಹರಿಸಿದ್ದಾರೆ ಎಂದು ಆತ ಪೋಲೀಸರಿಗೆ ದೂರು ನೀಡಿದ. ಪೋಲೀಸರ ಕಾರ್ಯಾಚರಣೆಯಲ್ಲಿ ಪತ್ತೆಯಾದ ವಿಷಯವೇನೆಂದರೆ ಅಂತಹ ಹುಡುಗಿ ಇರಲೇ ಇಲ್ಲ! ಅಂತರಜಾಲದಲ್ಲಿ ಭೇಟಿಯಾದವರನ್ನು ಪೂರ್ತಿಯಾಗಿ ನಂಬುವವರಿಗೆ ಇಲ್ಲಿದೆ ಒಂದು ಪಾಠ.
e- ಪದ
ಆಸ್ಕಿ (ASCII - American Standard Code for Information Interchange) - ಮಾಹಿತಿ ವಿನಿಮಯಕ್ಕಾಗಿ ಅಮೇರಿಕದ ಶಿಷ್ಟ ಸಂಕೇತ. ೮ ಬಿಟ್‌ಗಳನ್ನು ಬಳಸಿ ಮಾಹಿತಿಯನ್ನು ಶೇಖರಿಸಿಡಲು ಪ್ರಪಂಚಾದ್ಯಂತ ಎಲ್ಲ ಗಣಕಗಳೂ ಇಂಗ್ಲೀಷ್ ಭಾಷೆಯ ಎಲ್ಲ ಅಕ್ಷರ, ಅಂಕೆ, ಬರೆವಣಿಗೆಯ ಚಿಹ್ನೆ, ಇತ್ಯಾದಿಗಳಿಗೆ ನಿರ್ದಿಷ್ಟ ಸಂಕೇತ ಬಳಸುತ್ತಾರೆ. ಇದೇ ಆಸ್ಕಿ. ಎಲ್ಲರೂ ಒಂದೇ ಸಂಕೇತ ಬಳಸುವುದರಿಂದ ಮಾಹಿತಿ ವಿನಿಮಯದಲ್ಲಿ ಅಡಚಣೆಯುಂಟಾಗುವುದಿಲ್ಲ. ಇದೊಂದು ಮಾನಕ (standard) ಆಗಿದೆ. ಈ ವಿಧಾನದಲ್ಲಿ ಭಾರತೀಯ ಭಾಷೆಗಳಿಗೆ ಜಾಗವಿಲ್ಲ. ಆದುದರಿಂದ ಈಗ ೧೬ ಬಿಟ್ ಬಳಕೆಯ ಯುನಿಕೋಡ್ ಹೆಚ್ಚಾಗಿ ಮಾನಕವಾಗಿ ಬಳಕೆಯಾಗುತ್ತಿದೆ.
e - ಸಲಹೆ
ವಿಜೇತ ಗೌಡರ ಪ್ರಶ್ನೆ: ನನಗೆ Samsung SGH D780 PC Suite ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: bit.ly/hayLRV ಜಾಲತಾಣಕ್ಕೆ ಭೇಟಿ ನೀಡಿ.
ಕಂಪ್ಯೂತರ್ಲೆ
ಗೂಗ್ಲ್‌ನವರು ನಿಘಂಟು ಸವಲತ್ತನ್ನು www.google.com/dictionary ಜಾಲತಾಣದಲ್ಲಿ ನೀಡಿದ್ದಾರೆ. ಇದರಲ್ಲಿ ಇಂಗ್ಲಿಷ್ ಮತ್ತು ಕನ್ನಡ ಮಧ್ಯೆ ಕೆಲವು ಪದಗಳ ಅರ್ಥ ಹುಡುಕಿದಾಗ ದೊರಕಿದ್ದು:
ಕಂದ = bulb
ಸಾರು = announce
ಅನ್ನ = bread
ಊಟ = package holiday (tour)
ಕಂದ = bulb
ಪ್ರತ್ಯುತ್ತರಅಳಿಸಿಸಾರು = announce
ಇವೆರಡು ಒಂದರ್ಥದಲ್ಲಿ ಪರವಾಗಿಲ್ಲ..
ಅನ್ನ = bread
ಊಟ = package holiday (tour)
ಇವೆರಡನ್ನೂ ಅರಗಿಸಿಕೊಳ್ಳುವುದು ಕಷ್ಟ..
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ ಸರ್...
ಇವೆರಡನ್ನೂ ಅರಗಿಸಿಕೊಳ್ಳುವುದು ಕಷ್ಟ.. :)
ಪ್ರತ್ಯುತ್ತರಅಳಿಸಿ