ಬುಧವಾರ, ಮೇ 25, 2011

ಗಣಕಿಂಡಿ - ೧೦೫ (ಮೇ ೨೩, ೨೦೧೧)

ಅಂತರಜಾಲಾಡಿ

ಕೃತಕ ಕ್ಯಾಮರ

ಡಿಜಿಟಲ್ ಕ್ಯಾಮರಾಗಳು ಈಗ ಸರ್ವೇಸಾಮಾನ್ಯವಾಗಿವೆ. ಅವುಗಳಲ್ಲೂ ಹಲವು ನಮೂನೆಗಳಿವೆ. ಪರಿಣತರು ಬಳಸುವುದು ಎಸ್‌ಎಲ್‌ಆರ್ (SLR = Single Lens Reflect) ಕ್ಯಾಮರಾಗಳು. ಈ ಕ್ಯಾಮರಾಗಳ ಪ್ರಮುಖ ಸೌಲಭ್ಯ ಎಂದರೆ ಹಲವು ನಮೂನೆಯ ಲೆನ್ಸ್‌ಗಳನ್ನು (ಮಸೂರ) ಜೋಡಿಸಬಹುದು. ಈಗೀಗ ಇಂತಹ ಕ್ಯಾಮರಾಗಳ ಬೆಲೆ ೨೦ ಸಾವಿರ ರೂ.ಗಳಿಂದ ಪ್ರಾರಂಭವಾಗುತ್ತವೆ. ಅಂದರೆ ಸಾಮಾನ್ಯ ಮಂದಿಯ ಕೈಗೆಟುಕಬಲ್ಲವು. ಈ ಕ್ಯಾಮರಾಗಳನ್ನು ಬಳಸಲು ಪರಿಣತಿ ಬೇಕು. ಅವುಗಳಲ್ಲಿ ಇರುವ ಶಟ್ಟರ್ ವೇಗ, ಅಪೆರ್ಚರ್ ಅಗಲ, ಐಎಸ್‌ಓ ಸಂಖ್ಯೆ ಇತ್ಯಾದಿಗಳನ್ನು ಕಲಿತುಕೊಳ್ಳಬೇಕು. ಒಂದು ಘಟನೆಯನ್ನು ಚಿತ್ರೀಕರಿಸಿದಾಗ ಅದು ಬೇರೆ ಬೇರೆ ಆಯ್ಕೆಗಳಲ್ಲಿ ಹೇಗೆ ಮೂಡಿಬರಹುದು ಎಂಬ ಮಾಹಿತಿ ತಿಳಿದಿರಬೇಕು. ಇದನ್ನು ಕೃತಕ ಕ್ಯಾಮರಾ ಮೂಲಕ ಕಲಿಸುವ ಜಾಲತಾಣ camerasim.com.

ಡೌನ್‌ಲೋಡ್

ಗಣಕದಲ್ಲಿ ಪ್ರಯೋಗಶಾಲೆ

ಶಾಲಾಕಾಲೇಜು ದಿನಗಳಲ್ಲಿ ಪ್ರಯೋಗಶಾಲೆಯಲ್ಲಿ ಪ್ರಯೋಗ ನಡೆಸಿದ್ದು ನೆನಪಿದೆಯಾ? ಈಗಲೂ ನೀವು ವಿದ್ಯಾರ್ಥಿ ಅಥವಾ ಶಿಕ್ಷಕರಾಗಿದ್ದರೆ ಪ್ರಯೋಗಶಾಲೆಗೆ ಭೇಟಿ ನೀಡಲೇ ಬೇಕು. ನಿಮಗೆ ಬೇಕಾದ ಎಲ್ಲ ಉಪಕರಣಗಳು ನಿಮ್ಮ ಪ್ರಯೋಗಶಾಲೆಯಲ್ಲಿ ಇಲ್ಲದಿದ್ದರೆ ಏನು ಮಾಡುತ್ತೀರಿ? ಕೆಲವು ಪ್ರಯೋಗಗಳನ್ನಂತೂ ಕೇವಲ ಊಹಿಸಿಕೊಳ್ಳಬೇಕಷ್ಟೆ. ಆದರೆ ಇಂದಿನ ಗಣಕಯುಗದಲ್ಲಿ ಪರಿಸ್ಥಿತಿ ಹಾಗಿಲ್ಲ. ಪ್ರಯೋಗಶಾಲೆಯಲ್ಲಿ ಉಪಕರಣಗಳಿಲ್ಲದಿರಲಿ, ಅಥವಾ ಪ್ರಯೋಗ ಮಾಡಿ ನೋಡಲು ಅಸಾಧ್ಯವಾದ ಪ್ರಯೋಗವಿರಲಿ, ಇವುಗಳನ್ನೆಲ್ಲ ಗಣಕದಲ್ಲೇ ಕೃತಕವಾಗಿ ನಿರ್ಮಿಸಿದ ಪರಿಸರದಲ್ಲಿ ಮಾಡಿ ನೋಡಬಹದು (simulation). ಅದರಿಂದ ಕಲಿಯಬಹುದು. ಇದಕ್ಕಾಗಿ ದುಬಾರಿ ತಂತ್ರಾಂಶಗಳು ಹಲವಾರಿವೆ. ಕೆಲವು ಉಚಿತವಾಗಿಯೂ ಲಭ್ಯವಿವೆ. ಕೊಲೊರಾಡೋ ವಿಶ್ವವಿದ್ಯಾಲಯದವರು ಇಂತಹ ಹಲವು ಪ್ರಯೋಗಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇವು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಖಗೋಳಶಾಸ್ತ್ರ -ಇತ್ಯಾದಿ. ಇವುಗಳನ್ನು ಪ್ರತ್ಯೇಕವಾಗಿ ಒಂದೊಂದಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ಎಲ್ಲವನ್ನೂ ಒಟ್ಟಿಗೆ ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದರೆ bit.ly/j6T2SH ಜಾಲತಾಣಕ್ಕೆ ಭೇಟಿ ನೀಡಿ.

e - ಸುದ್ದಿ

ನಂಗಿಷ್ಟವೆಂಬ ಮಗು

ಫೇಸ್‌ಬುಕ್ ಬಳಸುವವರಿಗೆ ಅದರಲ್ಲಿರುವ ಲೈಕ್ (Like) ಎಂಬ ಬಟನ್ ಪರಿಚಯವಿರಬಹುದು. ಯಾರಾದರೂ ಏನಾದರೂ ಸಂದೇಶ (ಇದಕ್ಕೆ ಪೋಸ್ಟಿಂಗ್ ಎನ್ನುತ್ತಾರೆ) ಸೇರಿಸಿದ್ದರೆ ಅದು ನಮಗಿಷ್ಟ ಎಂದು ಸೂಚಿಸಲು ಈ ಗುಂಡಿ ಮೇಲೆ ಕ್ಲಿಕ್ ಮಾಡಬೇಕು. ಈ ಫೇಸ್‌ಬುಕ್ ಜನಪ್ರಿಯತೆ ಎಷ್ಟಿದೆಯೆಂದರೆ ಈಜಿಪ್ಟ್‌ನಲ್ಲಿ ಒಬ್ಬರು ತಮ್ಮ ಮಗುವಿಗೆ ಫೇಸ್‌ಬುಕ್ ಎಂದೇ ಹೆಸರಿಟ್ಟಿದ್ದರು. ಈಗ ಇಸ್ರೇಲಿನಿಂದ ಅದಕ್ಕೂ ಮೀರಿದ ಸುದ್ದಿ ಬಂದಿದೆ. ಅಲ್ಲೊಂದು ದಂಪತಿ ತಮ್ಮ ಮಗುವಿಗೆ “ಲೈಕ್” ಎಂದು ಹೆಸರಿಟ್ಟಿದ್ದಾರೆ. ಮಗು ದೊಡ್ಡವಳಾದ ಮೇಲೆ ಎಲ್ಲರೂ ಅವಳನ್ನು ಲೈಕ್ ಎಂದು ಕರೆಯುವುದು ಎಷ್ಟು ವಿಚಿತ್ರ ಅನ್ನಿಸಬಹುದಲ್ಲವೇ?
 
e- ಪದ

ಅಂಕೀಕರಿಸು, ಅಂಕೀಕರಣ (digitise, digitisation) - ಪಾರಂಪರಿಕವಾಗಿರುವ ಮಾಹಿತಿಯನ್ನು ಗಣಕದ ಮಾಹಿತಿಯಾಗಿ ಪರಿವರ್ತಿಸುವುದು. ಉದಾಹರಣೆಗೆ ಮುದ್ರಿತ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (OCR) ಮೂಲಕ ಪಠ್ಯವಾಗಿ ಪರಿವರ್ತಿಸುವುದು. ಇದು ಕನ್ನಡದಲ್ಲಿ ಇನ್ನೂ ಬಳಕೆಗೆ ಬಂದಿಲ್ಲ. ಮುದ್ರಿತ ಭೂಪಟಗಳನ್ನು ಸ್ಕ್ಯಾನ್ ಮಾಡಿ ಅಂಕೀಕರಣ ಮಾಡುವುದು ಇನ್ನೊಂದು ಉದಾಹರಣೆ.

e - ಸಲಹೆ

ಸುಕೇಶ ಅವರ ಪ್ರಶ್ನೆ: ಬರಹ ಫಾಂಟ್‌ನಿಂದ ನುಡಿ ಫಾಂಟ್‌ಗೆ ಬದಲಾಯಿಸುವ ತಂತ್ರಾಂಶ ಇದೆಯೇ?
ಉ: ಬರಹ ಮತ್ತು ನುಡಿ ಎರಡೂ ಒಂದೇ ಸಂಕೇತೀಕರಣವನ್ನು ಬಳಸುತ್ತವೆ. ಅಂದರೆ “ಅ” ಎಂಬ ಅಕ್ಷರಭಾಗದ (ಗ್ಲಿಫ್) ಸಂಕೇತ ಎರಡರಲ್ಲೂ ಒಂದೇ ಅಗಿರುತ್ತದೆ. ನೀವು ವರ್ಡ್ ಬಳಸುವವರಾದರೆ ಸುಮ್ಮನೆ ಎಲ್ಲವನ್ನೂ ಆಯ್ಕೆ ಮಾಡಿಕೊಂಡು ಬರಹ ಫಾಂಟ್‌ನಿಂದ ನುಡಿ ಫಾಂಟ್‌ಗೆ ಬದಲಾಯಿಸಿಕೊಳ್ಳಿ.

ಕಂಪ್ಯೂತರ್ಲೆ

ಫೇಸ್‌ಬುಕ್ ಅನ್ನು ಕನ್ನಡೀಕರಿಸಿದಾಗ ಅದರ “ಲೈಕ್” ಬಟನ್‌ಗೆ ಕನ್ನಡದಲ್ಲಿ “ನನಗಿಷ್ಟ” ಎಂಬ ಗುಂಡಿ ಇದೆ ಎಂದಿಟ್ಟುಕೊಳ್ಳಿ (ನೀವು ಫೇಸ್‌ಬುಕ್‌ನಲ್ಲಿ ನಿಮ್ಮ ಭಾಷೆಯನ್ನು ಕನ್ನಡ ಎಂದು ಆಯ್ಕೆ ಮಾಡಿಕೊಂಡರೂ ಆ ಬಟನ್ ಸದ್ಯಕ್ಕೆ ಇಂಗ್ಲೀಶಿನಲ್ಲಿಯೇ ಇದೆ). ಇಸ್ರೇಲ್ ದಂಪತಿಗಂತೆ ಇಲ್ಲೂ ಒಬ್ಬರು ತಮ್ಮ ಮಗಳಿಗೆ “ನನಗಿಷ್ಟ” ಎಂಬ ಹೆಸರಿಟ್ಟರೆ ಎಲ್ಲರೂ ಆಕೆಯನ್ನು ನನಗಿಷ್ಟ ಎಂದು ಕರೆದರೆ ಹೇಗಿರುತ್ತದೆ?

13 ಕಾಮೆಂಟ್‌ಗಳು:

  1. ಕಂಪ್ಯೂತರ್ಲೆಗೊಂದು ತರ್ಲೆ

    ಲೈಕ್ ಅಂದ್ರೆ ಇಷ್ಟ ಅಂತ, ನನಗಿಷ್ಟ ಅಲ್ವಲ್ಲಾ!:)

    ಪ್ರತ್ಯುತ್ತರಅಳಿಸಿ
  2. ಕನ್ನಡದಲ್ಲಿ OCR ತಂತ್ರಜ್ಞಾನದ ಸಂಬಂಧಿತ ಸಂಶೋಧನೆ ನಡೆದಿದೆ
    ಎಂದು ಕೇಳಿದ ನೆನಪು. ಈ ಕುರಿತು ನಿಮ್ಮಲ್ಲಿ ಮಾಹಿತಿ ಇದ್ದರೆ ತಿಳಿಸುತ್ತೀರಾ ?
    ಧನ್ಯವಾದ.

    ಪ್ರತ್ಯುತ್ತರಅಳಿಸಿ
  3. @Pavankumar - ಎಲ್ಲೋ ಅಲ್ಪಸ್ವಲ್ಪ ನಡೆದಿದೆ. ಭಾರತೀಯ ವಿಜ್ಞಾನ ಮಂದಿರ (IISc) ಯಲ್ಲಿ ಏನೋ ಸ್ವಲ್ಪ ಕೆಲಸ ನಡೆದಿತ್ತು. ನಾನು ಅದರ beta version ನೋಡಿದ್ದೆ. ಅದು ಒಬ್ಬ ವಿದ್ಯಾರ್ಥಿ ತನ್ನ MPhil or PhD ಡಿಗ್ರಿಗೋಸ್ಕರ ಮಾಡಿದ್ದು. ಆತ ಡಿಗ್ರಿ ಮುಗಿಸಿ ಹೋದ. ಅದರ ಕತೆ ಅಲ್ಲಿಗೆ ಮುಗಿಯಿತು. ಅದನ್ನು ಮುಂದುವರೆಸಿದಂತೆ ಕಾಣುತ್ತಿಲ್ಲ. ಆ guide ಅದನ್ನು ಮುಂದುವರೆಸುವ ಬದಲು ನಂತರದ ವಿದ್ಯಾರ್ಥಿಗೆ ತೆಲುಗು, ಅದರ ನಂತರದ ವಿದ್ಯಾರ್ಥಿಗೆ ತಮಿಳು, ಹೀಗೆ OCR ಮಾಡಿಸಿ ಡಿಗ್ರಿ ಮಾಡಿಸಿದ್ದಾರೆ. ಅವರಿಗೆ ಜನರಿಗೆ ಉಪಯುಕ್ತವಾಗುವಂತೆ ಕೆಲಸಗಳನ್ನು logical conclusionಗೆ ತೆಗೆದುಕೊಂಡು ಹೋಗುವ ಆಸಕ್ತಿ ಇಲ್ಲ. ಅವರಿಗೆ publication, degree, seminar ಆದರೆ ಸಾಕು. ತೆರಿಗೆದಾರರಿಗೆ ಉತ್ತರದಾಯಿತ್ವ ಇದ್ದರೆ ತಾನೆ?

    ಪ್ರತ್ಯುತ್ತರಅಳಿಸಿ
  4. dear sir, nam computer start iddaga 15 min enu work madade, enadru download ge haakidaaga, cd haaki film noduvaga, mouse touch maadade 15 mins bitre off aagi taane on agutte. en problem anta tilastira

    ಪ್ರತ್ಯುತ್ತರಅಳಿಸಿ
  5. sir neevu tilisida PhET software annu download madikondiddene,adre adu install aguttilla.idakke karanavenu tiliyuttilla.dayavittu tilisuvira?

    ಪ್ರತ್ಯುತ್ತರಅಳಿಸಿ
  6. @Vijay - ಈಗ ಫೇಸ್‌ಬುಕ್‌ನಲ್ಲಿ ನೀವು ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡರೆ Like ಎಂಬುದರ ಬದಲಿಗೆ "ಮೆಚ್ಚು" ಎಂದು ಬರುತ್ತದೆ.

    ಪ್ರತ್ಯುತ್ತರಅಳಿಸಿ
  7. specification of my computer -windows xp professional,sp 2,pentium dual core,2.99 ghz processor.
    i've downloaded PhET installer.but when i click on it ,it does'nt open.i've also tried open and run as options.sorry for late.please give suggesion.

    ಪ್ರತ್ಯುತ್ತರಅಳಿಸಿ
  8. @Anonymous - What error message are you getting? Was your download complete? It is almost 143MB file.

    ಪ್ರತ್ಯುತ್ತರಅಳಿಸಿ
  9. it is not showing any error message,the download is complete but it is 87 mb.

    ಪ್ರತ್ಯುತ್ತರಅಳಿಸಿ
  10. i have successfully downloaded and installed phet simulations but it is not opening it is showing "This XML file does not appear to have any style information associated with it. The document tree is shown below".what is the problem?

    ಪ್ರತ್ಯುತ್ತರಅಳಿಸಿ
  11. @Anonymous - Are you using any downloader? It must have downloaded the page containing the link rather than the huge file itself. Disable the downloader and try again.

    ಪ್ರತ್ಯುತ್ತರಅಳಿಸಿ