ಅಂತರಜಾಲಾಡಿ
ಆತ್ಮಹತ್ಯೆ ಬೇಡ
ಖಿನ್ನತೆ ಒಂದು ಬಹುಸಾಮಾನ್ಯ ಖಾಯಿಲೆ. ಇದು ಹೆಚ್ಚಾಗಿ ಹಲವು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೂ ಒಮ್ಮೆಯಾದರೂ ಬಂದೇ ಬರುತ್ತದೆ. ಕೆಲವರಿಗೆ ಇಂತಹ ಸಂದರ್ಭದಲ್ಲಿ ಒತ್ತಡ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡೇ ಬಿಡುತ್ತಾರೆ. ಇಂತಹವರಿಗೆ ಆಪ್ತಸಲಹೆ ಅತಿ ಮುಖ್ಯ. ಅತ್ಮೀಯರಲ್ಲಿ ಹೇಳಿಕೊಳ್ಳಲಾಗುವುದಿಲ್ಲ. ಅದಕ್ಕಾಗಿಯೇ ಸಹಾಯವಾಣಿ ಇದೆ. ಅಂತರಜಾಲತಾಣವೂ ಇದೆ. ಅಂತಹ ಒಂದು ಜಾಲತಾಣ www.aasra.info. ನಿಮ್ಮ ಪರಿಚಯದವರು ಯಾರಾದರೂ ನಿಮ್ಮಲ್ಲಿ ಆಗಾಗ “ಈ ಜೀವನ ಸಾಕಾಗಿದೆ. ಸಾಯೋಣ ಅನ್ನಿಸುತ್ತಿದೆ” ಎಂದೆಲ್ಲ ಗಳಹುತ್ತಿದ್ದರೆ ಅವರಿಗೆ ಈ ಜಾಲತಾಣಕ್ಕೆ ಭೇಟಿ ನೀಡಲು ಸಲಹೆ ನೀಡಿ.
ಡೌನ್‌ಲೋಡ್
ಯುಎಸ್‌ಬಿ ಲೈನಕ್ಸ್
ಲೈನಕ್ಸ್ ಒಂದು ಪ್ರಮುಖ ಕಾರ್ಯಾಚರಣೆಯ ವ್ಯವಸ್ಥೆ (operating system). ಅಷ್ಟೇ ಹೇಳಿದರೆ ಸಾಲದು. ಇದು ಸಂಪೂರ್ಣ ಉಚಿತ ಮತ್ತು ಮುಕ್ತ ತಂತ್ರಾಂಶ. ಇತ್ತೀಚೆಗೆ ಇದು ತುಂಬ ಜನಪ್ರಿಯವಾಗುತ್ತಿದೆ. ಲೈನಕ್ಸ್ ಬಳಸಬೇಕಿದ್ದರೆ ಪರಿಣತರಿಂದ ಮಾತ್ರ ಸಾಧ್ಯ ಎಂಬ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ. ನಿಮ್ಮಲ್ಲಿ ಇರುವ ಗಣಕದಲ್ಲೇ ವಿಂಡೋಸ್ ಜೊತೆಗೇ ಲೈನಕ್ಸ್ ಕೂಡ ಹಾಕಿಕೊಳ್ಳಬಹುದು. ಆದರೆ ಅದಕ್ಕಾಗಿ ಹಾರ್ಡ್‌ಡಿಸ್ಕನ್ನು ವಿಭಾಗ ಮಾಡಿ ಅದರಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಮೊದಲು ಕಲಿತು ಆಮೇಲೆ ಹಾಕಿಕೊಳ್ಳೋಣ ಎನ್ನುವವರಿಗೆ ಸಿ.ಡಿ. ಅಥವಾ ಡಿ.ವಿ.ಡಿ.ಯಿಂದಲೇ ಬೂಟ್ ಮಾಡಿ ಅದರಿಂದಲೇ ಕೆಲಸ ಮಾಡುವ ಸೌಲಭ್ಯವೂ ಇದೆ. ಇನ್ನೂ ಒಂದು ಸೌಲಭ್ಯವಿದೆ. ಅದು ಯುಎಸ್‌ಬಿಯಿಂದ ಕೆಲಸ ಮಾಡುವುದು. ಇದಕ್ಕಾಗಿ LinuxLive USB Creator ಎನ್ನುವ ತಂತ್ರಾಶ www.linuxliveusb.com ಜಾಲತಾಣದಲ್ಲಿ ಲಭ್ಯವಿದೆ.
e - ಸುದ್ದಿ
ಹಾಡು ಪ್ರತಿಮಾಡಿಕೊಳ್ಳುವುದು ಕಾನೂನುಬದ್ಧವಾಗಲಿದೆ
ನೀವು ಹಣಕೊಟ್ಟು ಕೊಂಡುಕೊಂಡ ಸಿ.ಡಿ. ಅಥವಾ ಡಿ.ವಿ.ಡಿ.ಯಲ್ಲಿರುವ ಸಂಗೀತ ಅಥವಾ ಚಲನಚಿತ್ರವನ್ನು ನಿಮ್ಮೆದೇ ವೈಯಕ್ತಿಕ ಮನರಂಜನೆಯ ಉಪಕರಣಕ್ಕೆ (ಐಪಾಡ್, ಎಂಪಿ೩ ಪ್ಲೇಯರ್, ಇತ್ಯಾದಿ) ಪರಿವರ್ತಿಸಿ ವರ್ಗಾಯಿಸಿ ಬಳಸುತ್ತಿರುವಿರಿ ತಾನೆ? ಕಾನೂನು ಪ್ರಕಾರ ಇದು ಕೃತಿಚೌರ್ಯವಾಗುತ್ತದೆ ಎಂಬುದು ಎಷ್ಟು ಜನರಿಗೆ ಗೊತ್ತಿದೆ? ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಕೊನೆಗೂ ಈ ರೀತಿ ಪರಿವರ್ತಿಸಿ ಬಳಸುವುದು ಅಪರಾಧವಲ್ಲ ಎಂದು ಇಂಗ್ಲೆಂಡಿನಲ್ಲಿ ಕಾನೂನು ಮಾಡಲಾಗುತ್ತಿದೆ. ಭಾರತದಲ್ಲಿ ಇನ್ನೂ ಇದರ ಬಗ್ಗೆ ಚರ್ಚೆ ಪ್ರಾರಂಭವಾಗಿಲ್ಲ.
e- ಪದ
ವೈಯಕ್ತಿಕ ಮನರಂಜನೆಯ ಉಪಕರಣ (personal media player or portable media player (PMP) or digital audio player (DAP)) - ಡಿಜಿಟಲ್ ವಿಧಾನದಲ್ಲಿ ಹಾಡು, ಸಂಗೀತ, ಚಲನಚಿತ್ರ, ಫೋಟೋ, ಇತ್ಯಾದಿಗಳನ್ನು ಸಂಗ್ರಹಿಸಿಟ್ಟುಕೊಂಡು ಅದನ್ನು ಚಲಾಯಿಸಿ ವೀಕ್ಷಿಸಲು ಮತ್ತು ಆಲಿಸಲು ಅನುವು ಮಾಡಿಕೊಡುವ ಉಪಕರಣ. ಉದಾ -ಆಪಲ್ ಐಪಾಡ್, ಕ್ರಿಯೇಟಿವ್ ಎಂಪಿ೩ ಪ್ಲೇಯರ್, ಮೈಕ್ರೋಸಾಫ್ಟ್ ಝೂನ್, ಇತ್ಯಾದಿ.
e - ಸಲಹೆ
ಪೂರ್ವಿ ಅವರ ಪ್ರಶ್ನೆ: ನನಗೆ ಟೈಪಿಂಗ್ ವೇಗ ಹೆಚ್ಚಿಸಲು ಸಹಾಯ ಮಾಡುವ ಉಚಿತ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: ನಿಮಗೆ ಟೈಪಿಂಗ್ ಟ್ಯೂಟರ್ ತಂತ್ರಾಂಶ ಬೇಕಾಗಿದೆ. ನಿವು www.tipp10.com/en/ ಜಾಲತಾಣದಲ್ಲಿ ದೊರೆಯುವ TIPP10 ತಂತ್ರಾಂಶವನ್ನು ಬಳಸಬಹುದು.
ಕಂಪ್ಯೂತರ್ಲೆ
ಒಬ್ಬಾತ ತನ್ನ ಫೇಸ್‌ಬುಕ್ ಸ್ಥಿತಿಯಲ್ಲಿ “ನಾನು ಈ ರಾತ್ರಿ ಟೆರೇಸ್‌ನಲ್ಲಿ ಮಲಗುತ್ತೇನೆ” ಎಂದು ದಾಖಲಿಸಿದ. ಎರಡೇ ನಿಮಿಷಗಳಲ್ಲಿ ಹದಿನೈದು ಸೊಳ್ಳೆಗಳು ಅವನ ಸ್ಥಿತಿಯನ್ನು ಮೆಚ್ಚಿದ್ದವು!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ