ಅಂತರಜಾಲಾಡಿ
ಸೂರ್ಯಾತೀತಗ್ರಹ ಮಾಹಿತಿಸಂಚಯ
ಬ್ರಹ್ಮಾಂಡದಲ್ಲಿ ನಮ್ಮ ಸೂರ್ಯನಿಗೆ ಮಾತ್ರವೇ ಗ್ರಹಗಳಿವೆ ಎಂದು ನಂಬಿದ್ದ ಕಾಲವೊಂದಿತ್ತು. ಆದರೆ ಈಗ ವಿಜ್ಞಾನ ತಂತ್ರಜ್ಞಾನ ತುಂಬ ಮುಂದುವರೆದಿದೆ. ಸೂರ್ಯನ ಹೊರತಾಗಿಯೂ ವಿಶ್ವದಲ್ಲಿರುವ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ಬಹುಪಾಲು ನಕ್ಷತ್ರಗಳಿಗೆ ಸುತ್ತುತ್ತಿರುವ ಗ್ರಹಗಳಿವೆ ಎಂದು ತೀರ್ಮಾನಕ್ಕೆ ಬರಲಾಗಿದೆ. ಅಂತಹವುಗಳಲ್ಲಿ ಇದುತನಕ ೫೭೩ ಸೂರ್ಯಾತೀತ ಗ್ರಹಗಳನ್ನು (exoplantes) ಪತ್ತೆಹಚ್ಚಲಾಗಿದೆ. ಇವುಗಳನ್ನು ಪತ್ತೆಹಚ್ಚುವುದು ತುಂಬ ಕಷ್ಟದ ಕೆಲಸ. ಅದಕ್ಕಾಗಿ ಕೆಲವು ವಿಶಿಷ್ಟ ವಿಧಾನಗಳನ್ನು ಬಳಸಲಾಗುತ್ತದೆ. ಹೀಗೆ ಪತ್ತೆಹಚ್ಚಿದ ಎಲ್ಲ ಗ್ರಹಗಳ ವಿವರಗಳು exoplanet.eu ಜಾಲತಾಣದಲ್ಲಿ ಲಭ್ಯವಿವೆ. ಸೂರ್ಯಾತೀತ ಗ್ರಹಗಳ ಬಗ್ಗೆ ಎಲ್ಲ ವಿವರಗಳು ಇಲ್ಲಿ ದೊರೆಯುತ್ತವೆ. ಜೊತೆಗೆ www.exoplanetology.com ಮತ್ತು exoplanets.org ಜಾಲತಾಣಗಳಿಗೂ ಭೇಟಿ ನೀಡಿ.
ಡೌನ್‌ಲೋಡ್
ಲ್ಯಾಪ್‌ಟಾಪ್, ಫೋನ್ ಸುರಕ್ಷೆ
ಲ್ಯಾಪ್‌ಟಾಪ್ ಅಥವಾ ಫೋನ್ ಕಳವಾಗುವುದು ಸಹಜ. ಹೀಗೆ ಕಳವಾದಾಗ ಪತ್ತೆ ಹಚ್ಚಲು ಸಹಾಯ ಮಾಡುವ ತಂತ್ರಾಂಶಗಳೂ ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ Prey. ಇದು ಲ್ಯಾಪ್‌ಟಾಪ್ ಮತ್ತು ಆಂಡ್ರೋಯಿಡ್ ಫೋನ್‌ಗಳಲ್ಲಿ ಕೆಲಸ ಮಾಡುತ್ತದೆ. ಲ್ಯಾಪ್‌ಟಾಪ್‌ನಲ್ಲಿ ಇದನ್ನು ಇನ್‌ಸ್ಟಾಲ್ ಮಾಡಿ ಕೆಲವು ಆಯ್ಕೆಗಳನ್ನು ನಮೂದಿಸಬೇಕು. ಲ್ಯಾಪ್‌ಟಾಪ್ ಕಳವಾದಾಗ ಫೋನ್ ಅಥವಾ ಅಂತರಜಾಲದ ಮೂಲಕ ಈ ತಂತ್ರಾಂಶವನ್ನು ಚಾಲನೆಗೊಳಿಸಬೇಕು. ನಂತರ ಅದು ನಾವು ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ಲ್ಯಾಪ್‌ಟಾಪ್‌ನಲ್ಲಿ ಏನೇನು ನಡೆಯುತ್ತಿದೆ ಎಂದು ವರದಿ ಕಳುಹಿಸುತ್ತಿರುತ್ತದೆ. ಇದರ ಮೂಲಕ ಲ್ಯಾಪ್‌ಟಾಪ್ ಎಲ್ಲಿದೆ, ಯಾರು ಹೇಗೆ ಬಳಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಅದನ್ನು ಪೋಲೀಸರಿಗೆ ನೀಡಿ ಕಳ್ಳರನ್ನು ಹಿಡಿಯಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ preyproject.com.
e - ಸುದ್ದಿ
ತಂತ್ರಜ್ಞನಿಂದ ಕದ್ದರೆ?
ಕೆಲವು ತಿಂಗಳುಗಳ ಹಿಂದೆ ಇಂಗ್ಲೆಂಡಿನಲ್ಲಿ ಹದಿಹರೆಯದವರು ಅಂಗಡಿ ಮನೆಗಳನ್ನು ಲೂಟಿ ಮಾಡಿದ್ದು ನೆನಪಿರಬಹುದು. ಆ ಸಂದರ್ಭದಲ್ಲಿ ಒಬ್ಬ ಯುವಕ ಒಂದು ಮನೆಯಿಂದ ಲ್ಯಾಪ್‌ಟಾಪ್ ಒಂದನ್ನು ಕದ್ದ. ಆದರೆ ಆತನ ದುರದೃಷ್ಟಕ್ಕೆ ಆತ ಕದ್ದಿದ್ದು ಒಬ್ಬ ತಂತ್ರಾಂಶ ಸುರಕ್ಷಾ ಪರಿಣತನದಾಗಿತ್ತು. ಆತ ತನ್ನ ಲ್ಯಾಪ್‌ಟಾಪ್‌ನಲ್ಲಿ Prey ಎಂಬ ತಂತ್ರಾಂಶವನ್ನು ಅಳವಡಿಸಿದ್ದ. ಕಳ್ಳ ತಾನು ಕದ್ದ ಲ್ಯಾಪ್‌ಟಾಪ್‌ನಲ್ಲಿ ಏನೇನು ಮಾಡುತ್ತಿದ್ದಾನೆ ಎಂಬುದನ್ನು ಆ ತಂತ್ರಾಂಶ ಇಮೈಲ್ ಮಾಡತೊಡಗಿತು. ಎರಡು ದಿನಗಳ ನಂತರ ಕಳ್ಳ ತನ್ನ ಫೇಸ್‌ಬುಕ್ ಖಾತೆಗೆ ಲಾಗಿನ್ ಆದ. ಅಲ್ಲಿಂದ ಆತನ ಸಂಪೂರ್ಣ ವಿವರ ಪಡೆದು ಪೋಲೀಸರಿಗೆ ನೀಡಿ ಆತನನ್ನು ಬಂಧಿಸಲಾಯಿತು.
e- ಪದ
ಮರುಟ್ವೀಟ್ (retweet) - ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟ್ಟರಿನಲ್ಲಿ ಒಬ್ಬರು ದಾಖಲಿಸಿದ ಟ್ವೀಟ್ ಅನ್ನು ಇನ್ನೊಬ್ಬರು ಪುನರಾವರ್ತಿಸುವುದು. ಒಬ್ಬರ ಟ್ವೀಟ್ ಎಷ್ಟು ಜನಪ್ರಿಯವಾಗಿದೆ ಎಂಬುದಕ್ಕೆ ಎಷ್ಟು ಜನರು ಅದನ್ನು ಮರುಟ್ವೀಟ್ ಮಾಡಿದ್ದಾರೆ ಎಂಬುದೂ ಒಂದು ಅಳತೆಗೋಲಾಗಿದೆ. ಇತ್ತೀಚೆಗೆ ಆಕ್ಸ್‌ಫರ್ಡ್ ನಿಘಂಟು ಈ ಪದವನ್ನು ತನ್ನ ನಿಘಂಟಿನಲ್ಲಿ ಅಧಿಕೃತವಾಗಿ ಸೇರಿಸಿದೆ.
e - ಸಲಹೆ
ವೀರು ಅವರ ಪ್ರಶ್ನೆ: C ಪ್ರೋಗ್ರಾಮ್ಮಿಂಗ್ ಕಲಿಯಲು ಉಚಿತ ಟ್ಯುಟೋರಿಯಲ್ ಜಾಲತಾಣ ಯಾವುದಾರೂ ಇದೆಯೇ?
ಉ: ಹಲವಾರಿವೆ. ಒಂದು ಉದಾಹರಣೆ - www.tutorials4u.com/c/
ಕಂಪ್ಯೂತರ್ಲೆ
iMac, iPhone, iPod, iTab, ಇತ್ಯಾದಿಗಳನ್ನು ತಯಾರಿಸುವ ಆಪಲ್ ಕಂಪೆನಿಯ ಸಿಇಓ ಆಗಿದ್ದ ಸ್ಟೀವ್ ಜಾಬ್ಸ್ ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ಇತ್ತರು. ಅವರ ರಾಜೀನಾಮೆಯಲ್ಲಿದ್ದುದು ಒಂದೇ ಪದ -“iResign”

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ