ಅಂತರಜಾಲಾಡಿ
ಏರೋಇಂಡಿಯ
ಪ್ರತಿವರ್ಷ ಬೆಂಗಳೂರಿನಲ್ಲಿ ಏರೋಇಂಡಿಯ ಪ್ರದರ್ಶನ ಜರುಗುತ್ತದೆ. ಇದು ಕೇವಲ ಭಾರತ ಮಾತ್ರವಲ್ಲ ಏಶಿಯಾಕ್ಕೇ ಅತಿ ದೊಡ್ಡ ವೈಮಾನಿಕ ಪ್ರದರ್ಶನ. ಇದರಲ್ಲಿ ವಿವಿಧ ವಿಮಾನಗಳ ಪ್ರದರ್ಶನ, ಅವುಗಳ ಹಾರಾಟ, ಈ ಕ್ಷೇತ್ರದಲ್ಲಿರುವ ವಿವಿಧ ಕಂಪೆನಿಗಳ ಸ್ಟಾಲ್‌ಗಳು ಇವೆಲ್ಲ ಇರುತ್ತವೆ. ಈ ವರ್ಷ ಈ ಕಾರ್ಯಕ್ರಮ ಫೆಬ್ರವರಿ ತಿಂಗಳ ೯ರಿಂದ ೧೩ರ ತನಕ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಾಲತಾಣ www.aeroindia.in. ಈ ಜಾಲತಾಣದಲ್ಲಿ ಕಾರ್ಯಕ್ರಮದ ವಿವರ ತಿಳಿಯಬಹುದಲ್ಲದೆ ಪ್ರದರ್ಶನ ನೋಡಲು ನೋಂದಾಯಿಸಿಕೊಳ್ಳಲೂಬಹುದು. ಎಲ್ಲೆಲ್ಲ ಪ್ರದರ್ಶನಕ್ಕೆ ಟಿಕೇಟು ದೊರೆಯುತ್ತದೆ ಎಂಬ ವಿವರವೂ ಈ ಜಾಲತಾಣದಲ್ಲಿದೆ.
ಡೌನ್‌ಲೋಡ್
ವೀಡಿಯೋ ಹೊರತೆಗೆಯಿರಿ
ಯುಟ್ಯೂಬ್‌ನಂತೆ ಹಲವು ಜಾಲತಾಣಗಳಲ್ಲಿ ವಿಡಿಯೋ ತುಣುಕುಗಳು ಇರುವುದನ್ನು ಗಮನಿಸಿರಬಹುದು. ಅವುಗಳನ್ನು ಪ್ಲೇ ಮಾಡಿ ನೋಡಿಯೂ ಇರಬಹುದು. ಈ ವೀಡಿಯೋ ಒಮ್ಮೆ ಪ್ಲೇ ಮಾಡಿದ ನಂತರ ಎಲ್ಲಿಗೆ ಹೋಗುತ್ತದೆ? ಅದನ್ನು ಇನ್ನೊಮ್ಮೆ ಪ್ಲೇ ಮಾಡಬೇಕಾದರೆ ಅಥವಾ ಶಾಶ್ವತವಾಗಿ ನಿಮ್ಮ ಗಣಕದಲ್ಲಿ ಸಂಗ್ರಹಿಸಿಡಬೇಕಾದರೆ ಏನು ಮಾಡಬೇಕು? ವೀಡಿಯೋ ಪ್ಲೇ ಮಾಡುವಾಗ ಮಾತ್ರವಲ್ಲ ಯಾವುದೇ ಜಾಲತಾಣ ವೀಕ್ಷಿಸುವಾಗ ಗಣಕದ ತಾತ್ಕಾಲಿಕ ಸಂಗ್ರಹ ಜಾಲದಲ್ಲಿ ವೀಡಿಯೋ, ಚಿತ್ರ, ಪಠ್ಯಗಳೆಲ್ಲ ಸಂಗ್ರಹವಾಗಿರುತ್ತವೆ. ಈ ಜಾಗ ಭರ್ತಿಯಾದಾಗ ಅವೆಲ್ಲವು ಅಳಿಸಲ್ಪಡುತ್ತವೆ. ಈ ಜಾಗದಿಂದ ವೀಡಿಯೋವನ್ನು ಪ್ರತಿ ಮಾಡಿಕೊಳ್ಳಲು ಹಾಗೂ ಪ್ಲೇ ಮಾಡಲು ಅನುವು ಮಾಡಿಕೊಡುವ ತಂತ್ರಾಂಶ VideoCacheView. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/gqy6sD.
e - ಸುದ್ದಿ
ಹಣದ ವಾಸನೆ
ಕಿಸೆಯಲ್ಲಿ ಗರಿಗರಿಯಾದ ನೋಟುಗಳಿದ್ದರೆ ಮನಸ್ಸಿಗೆ ಏನೋ ಸಂತೃಪ್ತಿ ತಾನೆ? ಈ ಗರಿಗರಿ ನೋಟುಗಳಿಗೆ ಅದರದ್ದೇ ಆದ ವಾಸನೆ ಇರುವುದನ್ನು ಗಮನಿಸಿರಬಹುದು. ಹಣವಿಲ್ಲದೆ ಕೇವಲ ವಾಸನೆ ಬರುವಂತಿದ್ದರೆ? ಹೌದು. ಇದನ್ನು ಮೈಕ್ರೋಸಾಫ್ಟ್ ಕಂಪೆನಿಯ ಉಪಾಧ್ಯಕ್ಷರಾದ ಪಾಟ್ರಿಕ್ ಮ್ಯಾಕ್‌ಕಾರ್ತಿ ಮಾಡಿ ತೋರಿಸಿದ್ದಾರೆ. ಅವರು ಅಮೆರಿಕದ ನೋಟುಗಳ ಪರಿಮಳ ಬೀರುವ ಪರ್ಫ್ಯೂಮ್ ತಯಾರಿಸಿದ್ದಾರೆ. ಈ ಸುವಾಸನಾದ್ರವ್ಯವನ್ನು ಬಟ್ಟೆ ಮೇಲೆ ಸಿಂಪಡಿಸಿದರೆ ಗರಿಗರಿಯಾದ ಹೊಸ ನೋಟುಗಳ ವಾಸನೆ ಬರುತ್ತದೆ. ಹೆಂಗಸರಿಗೆ ಮತ್ತು ಗಂಡಸರಿಗೆ ಎಂಬ ಎರಡು ಪರಿಮಳಗಳಲ್ಲಿ ಇವು ಈಗಾಗಲೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ಭಾರತೀಯ ಆವೃತ್ತಿ ಅಂದರೆ ನಮ್ಮ ನೋಟುಗಳ ವಾಸನೆ ಬೀರುವವು ಯಾವಾಗ ಬರುತ್ತವೆ ಎಂದು ಅವರು ಹೇಳಿಲ್ಲ.
e- ಪದ
ಇಂಟರ್‌ನೆಟ್ ಪ್ರೋಟೋಕಾಲ್ (Internet Protocol - IP) - ಗಣಕಜಾಲದಲ್ಲಿ ಮಾಹಿತಿಯ ಸಂವಹನಕ್ಕೆ ಬಳಸುವ ಸಾರ್ವತ್ರಿಕವಾಗಿ ಒಪ್ಪಿಗೆಯಾದ ವಿಧಾನಕ್ಕೆ ಪ್ರೋಟೋಕೋಲ್ ಎಂದು ಹೆಸರು. ಅಂತರಜಾಲದಲ್ಲಿ ಗಣಕದಿಂದ ಗಣಕಕ್ಕೆ ಪ್ರವಹಿಸುವ ಮಾಹಿತಿಯು ಇಂಟರ್‌ನೆಟ್ ಪ್ರೋಟೋಕೋಲ್‌ನ್ನು ಬಳಸುತ್ತದೆ. ಅಂತರಜಾಲಕ್ಕೆ ಸೇರ್ಪಡೆಯಾದ ಪ್ರತಿಯೊಂದು ಗಣಕಕ್ಕೂ ಒಂದು ಪ್ರತ್ಯೇಕವಾದ ವಿಳಾಸವಿರುತ್ತದೆ. ಇದನ್ನು IP address ಎಂದು ಕರೆಯುತ್ತಾರೆ. ಗಣಕದಿಂದ ಗಣಕಕ್ಕೆ ಅಂತರಜಾಲದ ಮೂಲಕ ಮಾಹಿತಿ ಕಳುಹಿಸಿದಾಗ (ವಿ-ಪತ್ರ, ಡೌನ್‌ಲೋಡ್, ಜಾಲತಾಣಪುಟ, ಇತ್ಯಾದಿ) ಆ ಮಾಹಿತಿಯು ಚಿಕ್ಕ ಚಿಕ್ಕ ಪ್ಯಾಕೆಟ್‌ಗಳಾಗಿ ಕಳುಹಿಸಲ್ಪಡುತ್ತದೆ. ಪ್ರತಿ ಪ್ಯಾಕೆಟ್ ಮೇಲೂ ಅದು ಹೊರಟ ಗಣಕದ ವಿಳಾಸ, ತಲುಪಬೇಕಾದ ಗಣಕದ ವಿಳಾಸ ಇರುತ್ತದೆ. ಎಲ್ಲ ಪ್ಯಾಕೆಟ್‌ಗಳು ಒಂದೇ ದಾರಿಯ ಮೂಲಕ ಹರಿದು ಬರುತ್ತವೆ ಮತ್ತು ಮೂಲ ಸರಣಿ/ಸರದಿಯಲ್ಲಿ ಬರುತ್ತವೆ ಎಂಬ ಖಾತ್ರಿಯೇನಿಲ್ಲ. ಕೊನೆಗೊಮ್ಮೆ ಎಲ್ಲ ಪ್ಯಾಕೆಟ್‌ಗಳು ಒಟ್ಟು ಸೇರಿ ಮೂಲ ಮಾಹಿತಿಯ ರೂಪ ಧರಿಸುತ್ತವೆ. ಈ ರೀತಿ ಬೇರೆ ಬೇರೆ ಸಮಯದಲ್ಲಿ ಬಂದು ಸೇರಿದ ಪ್ಯಾಕೆಟ್‌ಗಳನ್ನು ಮೂಲ ರೂಪಕ್ಕೆ ಒಟ್ಟು ಸೇರಿಸುವ ಕೆಲಸವನ್ನು ಇನ್ನೊಂದು ಪ್ರೋಟೋಕೋಲ್, Transmission Control Protocol (TCP), ಮಾಡುತ್ತದೆ. ಇದಕ್ಕೆ TCP/IP ಎಂಬ ಹೆಸರೂ ಇದೆ.
e - ಸಲಹೆ
ಮೇಘ ಅವರ ಪ್ರಶ್ನೆ: ನನ್ನ ಗಣಕದ ಮದರ್‌ಬೋರ್ಡ್‌ನ ಸಿ.ಡಿ. ಎಲ್ಲೋ ಕಳೆದುಹೋಗಿದೆ. ಅದರ ಡ್ರೈವರ್‌ಗಳನ್ನು ಇನ್ನೊಮ್ಮೆ ಇನ್‌ಸ್ಟಾಲ್ ಮಾಡಬೇಕಾಗಿದೆ. ಅವು ಎಲ್ಲಿ ಸಿಗುತ್ತವೆ?
ಉ: ನಿಮ್ಮ ಮದರ್‌ಬೋರ್ಡ್ ಯಾವ ಕಂಪೆನಿಯದು, ಯಾವ ಆವೃತ್ತಿ, ಯಾವ ವರ್ಷ ತಯಾರಾದುದು, ಇತ್ಯಾದಿ ಮಾಹಿತಿ ಇದ್ದರೆ ಆ ಕಂಪೆನಿಯ ಜಾಲತಾಣದಲ್ಲಿ ಹುಡುಕಿದರೆ ಸಿಗಬಹುದು. ಜೊತೆಗೆ www.driverskit.com/MotherBoard.html ಜಾಲತಾಣದಲ್ಲೂ ಪ್ರಯತ್ನಿಸಿ ನೋಡಬಹುದು.
ಕಂಪ್ಯೂತರ್ಲೆ
ಇನ್ನಷ್ಟು ಟ್ವಿಟ್ಟರ್ ಫೇಸ್‌ಬುಕ್ (ತ)ಗಾದೆಗಳು
· ಸಾವಿರ ಟ್ವಿಟ್ಟರ್ ಹಿಂಬಾಲಕರು ಮೊದಲು ಒಬ್ಬ ಹಿಂಬಾಲಕನಿಂದ ಪ್ರಾರಂಭವಾಗುತ್ತದೆ
· ದಶಸಹಸ್ರ ಟ್ವೀಟ್‌ಗಳು ಮೊದಲು ಒಂದು ಟ್ವೀಟ್‌ನಿಂದ ಆರಂಭವಾಗುತ್ತದೆ.
· ಫೇಸ್‌ಬುಕ್‌ಗೆ ಬಂದವನು ಟ್ವಿಟ್ಟರ್‌ಗೆ ಬರಲೇಬೇಕು
· ಟ್ವಿಟ್ಟರ್‌ನಲ್ಲಿ ಕೆಡಿಸಿಕೊಂಡ ಹೆಸರನ್ನು ಫೇಸ್‌ಬುಕ್‌ನಲ್ಲಿ ಸರಿಪಡಿಸಿಕೊಳ್ಳಲಾಗುವುದಿಲ್ಲ

ಈ ಸಂಚಿಕೆಯ ಕಂಪ್ಯೂತರ್ಲೆಯಲ್ಲಿ ಬಳಸಿದ "ಸಾವಿರ ಟ್ವಿಟ್ಟರ್ ಹಿಂಬಾಲಕರು ಮೊದಲು ಒಬ್ಬ ಹಿಂಬಾಲಕನಿಂದ ಪ್ರಾರಂಭವಾಗುತ್ತದೆ" ಎಂಬ (ತ)ಗಾದೆಯನ್ನು ಮೂಲತಃ ಬಳಸಿದವರು ಶ್ರೀನಿಧಿ ಹಂದೆ. ಅವರಿಗೆ ಆಭಾರಿ. ಈ ಹಿಂದೆಯೂ ಅವರು ಟ್ವೀಟ್ ಮಾಡಿದ್ದನ್ನು ಗಣಕಿಂಡಿಯ ಕಂಪ್ಯೂತರ್ಲೆಯಲ್ಲಿ ಬಳಸಿದ್ದೇನೆ.
ಪ್ರತ್ಯುತ್ತರಅಳಿಸಿ-ಪವನಜ
ವಿಡಿಯೋ ಸಂಗ್ರಹಿಸಲು ಒದಗಿಸಿದ ತಂತ್ರಾಂಶ ತುಂಬ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿವಿಡಿಯೋ ಎಡಿಟ್ ಮಾಡಬಹುದಾದಂಥ ಯಾವುದಾದರೂ ಉಚಿತ ತಂತ್ರಾಂಶ ಲಭ್ಯವಿದ್ದರೆ ದಯವಿಟ್ಟು ತಿಳಿಸಿ.
@Narayan Bhat - ಧನ್ಯವಾದಗಳು. ವೀಡಿಯೋ ಎಡಿಟಿಂಗ್ ತಂತ್ರಾಂಶಗಳು ಹಲವಾರಿವೆ. ಒಂದೆರಡು ಉಚಿತ ತಂತ್ರಾಂಶಗಳನ್ನು ಪರಿಶೀಲಿಸುತ್ತಿದ್ದೇನೆ. ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.
ಪ್ರತ್ಯುತ್ತರಅಳಿಸಿ-ಪವನಜ
ವೀಡಿಯೋ ಎಡಿಟಿ೦ಗ್ ತ೦ತ್ರದ ನಿರೀಕ್ಷೆಯಲ್ಲಿ..
ಪ್ರತ್ಯುತ್ತರಅಳಿಸಿ