ಅಂತರಜಾಲಾಡಿ
ಹಕ್ಕಿ ನೋಡಿದಿರಾ?
ಸಾವಿರಾರು ಕಿಲೋಮೀಟರ್ ದೂರದಿಂದ ಹಕ್ಕಿಗಳು ವಲಸೆ ಬರುವುದು ಗೊತ್ತಿರಬಹುದು. ಮೈಸೂರಿನ ಪಕ್ಕದ ರಂಗನತಿಟ್ಟು ಇಂತಹ ಹಕ್ಕಿಗಳಿಗೆ ಖ್ಯಾತವಾಗಿದೆ. ಇದೇ ರೀತಿ ಇನ್ನೂ ಹಲವಾರು ಸ್ಥಳಗಳಲ್ಲಿ ವಲಸೆಬಂದ ಹಕ್ಕಿಗಳನ್ನು ಗಮನಿಸಬಹುದು. ಕೆಲವೊಮ್ಮೆ ಅಷ್ಟೇನೂ ಪ್ರಚಲಿತವಲ್ಲದ ಜಾಗದಲ್ಲೂ ವಲಸೆಬಂದ ಹಕ್ಕಿಗಳನ್ನು ನೋಡಬಹುದು. ಈ ವರ್ಷ ಕಂಡುಬಂದ ಹಕ್ಕಿ ಪ್ರಭೇದ ಇನ್ನೊಂದು ವರ್ಷ ಕಂಡುಬರಬೇಕೆಂದೇನೂ ಇಲ್ಲ. ಹೀಗೆ ಕಂಡುಬಂದ ಹಕ್ಕಿಗಳನ್ನು ವರದಿ ಮಾಡಿ ಅವುಗಳ ಬಗ್ಗೆ ಮಾಹಿತಿಸಂಚಯ ಮಾಡಲೆಂದೇ ಒಂದು ಜಾಲತಾಣವಿದೆ. ಅದರ ವಿಳಾಸ - www.migrantwatch.in. ಈ ಜಾಲತಾಣದಲ್ಲಿ ನೋಂದಾಯಿಸಿಕೊಂಡು ನೀವು ಗಮನಿಸಿದ ವಲಸೆಹಕ್ಕಿಗಳ ಬಗ್ಗೆ ಮಾಹಿತಿ ದಾಖಲಿಸಬಹುದು.
ಡೌನ್‌ಲೋಡ್
ಫೋಟೋದಿಂದ ಕಲಾಚಿತ್ರಕ್ಕೆ
ಫೋಟೋ ನೋಡಿಕೊಂಡು ಅದರಂತೆಯೇ ಇರುವ ಕಲಾಚಿತ್ರ ರಚಿಸುವ ಕಲಾವಿದರನ್ನು ಕಂಡಿರಬಹುದು. ಅಂತಹವರ ಕೈಯಿಂದ ನಿಮ್ಮ ಅಥವಾ ನಿಮ್ಮ ಆಪ್ತರ ಚಿತ್ರಗಳನ್ನು ಬರೆಸಿರಲೂ ಬಹುದು. ಗಣಕವನ್ನು ಬಳಸಿ ಇಂತಹ ಚಿತ್ರ ತಯಾರಿಸುವಂತಿದ್ದರೆ ಒಳ್ಳೆಯದು ಅನ್ನಿಸಿದೆಯೇ? ನೀವು ಗ್ರಾಫಿಕ್ಸ್ ತಂತ್ರಾಂಶ ಪರಿಣತರಾದರೆ ಈ ಕೆಲಸವನ್ನು ನೀವೇ ಮಾಡಬಹುದು. ಆದರೆ ಅಂತಹ ಯಾವ ವಿದ್ಯೆಯೂ ನಿಮಗೆ ಗೊತ್ತಿಲ್ಲದಿದ್ದಲ್ಲಿ ಫೋಟೋದಿಂದ ಕಲಾಚಿತ್ರವನ್ನು ತಯಾರಿಸಲೆಂದೇ ಉಚಿತ ತಂತ್ರಾಂಶವೊಂದಿದೆ. ಅದರ ಹೆಸರು FotoSketcher. ಇದನ್ನು ಬಳಸಿ ಫೋಟೋವನ್ನು ಹಲವು ನಮೂನೆಯಲ್ಲಿ ಕಲಾಚಿತ್ರವನ್ನಾಗಿಸಬಹುದು. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - www.fotosketcher.com.
e - ಸುದ್ದಿ
ಬೆಂಗಳೂರ್‌ಡ್ ಆಗಿಲ್ಲ
ಅಮೇರಿಕದಲ್ಲಿ ಒಂದು ಪದ ಬಳಕೆಗೆ ಬಂದಿದೆ. ಅದುವೇ ಬೆಂಗಳೂರ್‌ಡ್ (Banglored). ಅಮೆರಿಕದಿಂದ ಮಾಹಿತಿ ತಂತ್ರಜ್ಞಾನದ ಕೆಲಸಗಳು ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ವರ್ಗಾವಣೆಯಾಗಿ ಅಲ್ಲಿ ನಿರುದ್ಯೋಗದ ಸಮಸ್ಯೆ ಸೃಷ್ಠಿಯಾಗಿದೆ ಎಂಬುದನ್ನು ಸೂಚಿಸಲು ಇದನ್ನು ಬಳಸುತ್ತಾರೆ. ನಾನು ಬೆಂಗಳೂರ್‌ಡ್ ಆದೆ ಎಂದರೆ ನನ್ನ ಕಂಪೆನಿ ನಾನು ಮಾಡುತ್ತಿದ್ದ ಕೆಲಸವನ್ನು ಬೆಂಗಳೂರಿಗೆ ವರ್ಗಾಯಿಸಿದೆ ಹಾಗೂ ಅದರಿಂದಾಗಿ ನಾನು ಕೆಲಸ ಕಳಕೊಂಡೆ ಎಂದು ಅರ್ಥ. ಆದರೆ ಇತ್ತೀಚೆಗೆ ಬಂದ ವರದಿ ಇದನ್ನು ಸುಳ್ಳಾಗಿಸಿದೆ. ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯ ನಿರುದ್ಯೋಗವು ಶೇಕಡ ೪.೭ರಿಂದ ೩.೮ಕ್ಕೆ ಇಳಿದಿದೆ. ಇದೇ ಸಮಯದಲ್ಲಿ ಅಮೆರಿಕದಲ್ಲಿ ನಿರುದ್ಯೋಗವು ಶೇಕಡ ೮.೯ರಿಂದ ೯.೧ಕ್ಕೆ ಏರಿದೆ.
e- ಪದ
ದತ್ತಸಂಚಯ (database) - ಗಣಕದಲ್ಲಿ ಕ್ರಮಬದ್ಧವಾಗಿ ಜೋಡಿಸಿದ ದತ್ತಾಂಶಗಳ (ಮಾಹಿತಿ ತುಣುಕು) ಗುಚ್ಛ. ಈ ದತ್ತಗಳನ್ನು ಹಲವು ವಿಧಗಳಲ್ಲಿ ಜೋಡಿಸಿಡಲಾಗುತ್ತದೆ. ದತ್ತಸಂಚಯಗಳಿಗೆ ಉದಾಹರಣೆಗಳು - ಗ್ರಂಥಾಲಯದಲ್ಲಿಯ ಪುಸ್ತಕಗಳ ವಿವರಗಳು, ಕಂಪೆನಿಯಲ್ಲಿರುವ ನೌಕರರ ಮಾಹಿತಿಗಳು, ಬಸ್ ವೇಳಾಪಟ್ಟಿ -ಇತ್ಯಾದಿ. ಗಣಕ ಬಳಸಿ ನಡೆಸುವ ಬಹುಪಾಲು ಕೆಲಸಗಳು ದತ್ತಸಂಚಯಗಳನ್ನು ಬಳಸಿಯೇ ಆಗುತ್ತವೆ.
e - ಸಲಹೆ
ಶ್ರೀಹರ್ಷ ಅವರ ಪ್ರಶ್ನೆ: ನಾನು ಪ್ರೌಢ ಶಾಲಾ ಶಿಕ್ಷಕ. ನನಗೆ ಹತ್ತನೆಯ ತರಗತಿಯ ಮಾದರಿ ಮತ್ತು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು ಬೇಕು. ಆವು ಅಂತರಜಾಲದಲ್ಲಿ ದೊರೆಯುತ್ತವೆಯೇ?
ಉ: ಕರ್ನಾಟಕ ಸರಕಾರದ ಪ್ರೌಢ ಶಿಕ್ಷಣ ಇಲಾಖೆಯವರ ಜಾಲತಾಣದಲ್ಲಿದೆ. ಜಾಲತಾಣಸೂಚಿ - bit.ly/pu5cUW
ಕಂಪ್ಯೂತರ್ಲೆ
ದಿನಕ್ಕೊಂದು ಆಪಲ್ ದೂರವಿಡುವುದು ವೈದ್ಯರನ್ನು - ಇದು ಹಳೆಯ ಗಾದೆ.
ದಿನಕ್ಕೊಂದು ಆಪಲ್ ಉತ್ಪನ್ನ ದಿವಾಳಿಗೆ ದಾರಿ - ಇದು ಇಂದಿನ ಗಾದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ